ಮೈಕ್ರೋಸಾಫ್ಟ್ ವಿಂಡೋಸ್


ಮೈಕ್ರೊಸಾಫ್ಟ್ ವಿಂಡೋಸ್ (Microsoft Windows) ಮೈಕ್ರೋಸಾಫ್ಟ್ ಕೃತ ಹಲವು ಕಾರ್ಯಕಾರಿ ವ್ಯವಸ್ಥೆಗಳ ಸರಮಾಲೆ. ಇದರಲ್ಲಿ ಮೊದಲಿಗ,೧೯೮೫ರಲ್ಲಿ ಬಳಕೆಗೆ ತಂದ "windows" ವ್ಯವಸ್ಥೆ. ಅಂದು "windows" MS-DOSಗೆ ವಿಂಡೋಸ್ ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) - ಗಣಕದ ಕಾರ್ಯವನ್ನು ನಿಯಂತ್ರಿಸುವ, ಸಮ್ಮೇಳಿಸುವ ತಂತ್ರಾಂಶ). ಇದು ಮೈಕ್ರೋಸಾಫ್ಟ್ ಕಂಪೆನಿಯ ತಂತ್ರಾಂಶಗಳಲ್ಲೊಂದು. ೧೯೮೫ ರಲ್ಲಿ ಮೊದಲ ಬಾರಿಗೆ ಈ ತಂತ್ರಾಂಶ ಬಿಡುಗಡೆಯಾಯಿತು. ಅಲ್ಲಿಂದೀಚೆಗೆ ಅನೇಕ ಆವೃತ್ತಿಗಳು ಬಿಡುಗಡೆಗೊಂಡಿವೆ. ಎಲ್ಲಕ್ಕಿಂತ ಇತ್ತೀಚಿನ 'ಆವೃತ್ತಿಗೆ ವಿಂಡೋಸ್ ೮' ಎಂದು ಹೆಸರು.

ವಿಂಡೋಸ್ ೭ ಡೆಸ್ಕ್-ಟಾಪ್

thumb | right | 250px | ವಿಂಡೋಸ್ ೧೦ ರ ಆವೃತ್ತಿ

Microsoft Windows
The Current Windows Logo (Introduced in 2012)
ಡೆವಲಪರ್ಗಳುMicrosoft
ಪ್ರೋಗ್ರಾಮಿಂಗ್ ಭಾಷೆAssembly, C, C++[1]
ಆಪರೇಟಿಂಗ್ ಸಿಸ್ಟಮ್ ಕುಟುಂಬWindows 9x, Windows CE and Windows NT
ಕೆಲಸದ ಸ್ಥಾನPublicly released
ಮೂಲ ಮಾದರಿClosed / Shared source
ಆರಂಭಿಕ ಬಿಡುಗಡೆನವೆಂಬರ್ 20, 1985 (1985-11-20), as Windows 1.0
ಮಾರುಕಟ್ಟೆ ಗುರಿPersonal computing
ಭಾಷೆಗಳಲ್ಲಿ ಲಭ್ಯMultilingual (137 languages)[2]
ನವೀಕರಣ ವಿಧಾನWindows Update, Windows Anytime Upgrade
ಪ್ಲಾಟ್‌ಫಾರ್ಮ್ARM, IA-32, Itanium, x86-64
ಕರ್ನಲ್ ಪ್ರಕಾರ
  • Windows NT family: Hybrid
  • Windows 9x and earlier: Monolithic (MS-DOS)
ಪ್ರಾಥಮಿಕ ಯೂಸರ್ ಇಂಟರ್ಫೆಸ್Windows Shell
ಲೈಸೆನ್ಸ್Proprietary commercial software
ಅಧಿಕೃತ ಜಾಲತಾಣwindows.microsoft.com

ವಿಂಡೋಸ್ ನ ವಿವಿಧ ಆವೃತ್ತಿಗಳು ಹೀಗಿವೆ:

  • ವಿಂಡೋಸ್ ೩.೧
  • ವಿಂಡೋಸ್ ೯೫
  • ವಿಂಡೋಸ್ ೯೮
  • ವಿಂಡೋಸ್ ೯೮-೨ನೇ ಆವೃತ್ತಿ
  • ವಿಂಡೋಸ್ ಮಿಲೇನಿಯಮ್
  • ವಿಂಡೋಸ್ ೨೦೦೦
  • ವಿಂಡೋಸ್ ಎಕ್ಸ್ ಪಿ
  • ವಿಂಡೋಸ್ ವಿಸ್ತಾ
  • ವಿಂಡೋಸ್ ೭
  • ವಿಂಡೋಸ್ ೮

ವಿಂಡೋಸ್‌ನಲ್ಲಿ ಕನ್ನಡ

ವಿಂಡೋಸ್‌ನ ಎಕ್ಸ್‌ಪಿ ಆವೃತ್ತಿಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಲಾಯಿತು. ವಿಂಡೋಸ್‌ನಲ್ಲಿ ಕನ್ನಡವನ್ನು ಯುನಿಕೋಡ್ ಸಂಕೇತೀಕರಣದ ಮೂಲಕ ಅಳವಡಿಸಲಾಗಿದೆ. ಪ್ರಾರಂಭದ ಆವೃತ್ತಿಯಲ್ಲಿ ಅಂದರೆ ವಿಂಡೋಸ್‌ ಎಕ್ಸ್‌ಪಿಯಲ್ಲಿ ಕನ್ನಡದ ಅಳವಡಿಕೆ ಮಾಡಿದಾಗ ಕೆಲವು ನ್ಯೂನತೆಗಳಿದ್ದವು. ಅದರಲ್ಲಿ ಕನ್ನಡಕ್ಕಾಗಿ ಬಳಸಿದ ತುಂಗ ಹೆಸರಿನ ಫಾಂಟ್‌ನಲ್ಲಿ ಕೆಲವು ಅಕ್ಷರಗಳು ತಪ್ಪಾಗಿ ಮೂಡಿಬರುತ್ತಿದ್ದವು. ಕನ್ನಡದ ಅಕಾರಾದಿ ವಿಂಗಡಣೆಯಲ್ಲೂ ತಪ್ಪುಗಳಿದ್ದವು. ಈ ಎಲ್ಲ ತಪ್ಪುಗಳನ್ನು ಮುಂದಿನ ಆವೃತ್ತಿಗಳಲ್ಲಿ ಸರಿಪಡಿಸಲಾಗಿದೆ.

ಉಲ್ಲೇಖಗಳು

ನೋಡಿ

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.