ಮಧ್ವಾಚಾರ್ಯ

ಶ್ರೀ ಮಧ್ವಾಚಾರ್ಯರು (೧೨೩೮-೧೩೧೭) ದ್ವೈತಮತದ ಸ್ಥಾಪಕರು ಮತ್ತು ತತ್ವಜ್ಙಾನಿಗಳು.

ಹುಟ್ಟಿದ ದಿನಾಂಕ :೧೨೩೮-೧೩೧೭
ಹುಟ್ಟಿದೂರು : ಪಾಜಕ, ಉಡುಪಿ
ತಂದೆ:ಮಧ್ಯಗೇಹ ಭಟ್ಟ
ತಾಯಿ:ವೇದವತಿ
ಗುರು:ಅಚ್ಯತ ಪ್ರೇಕ್ಷ (ಅಚ್ಯುತಪ್ರಜ್ಞ)
ಹೆಸರುಗಳು:

(೧) ವಾಸುದೇವ, ತಂದೆ ತಾಯಿ ಇಟ್ಟ ಹೆಸರು
(೨) ಶ್ರೀ ಮಧ್ವಾಚಾರ್ಯರು,
ಸನ್ಯಾಸ ಪಡೆದನಂತರದ ಹೆಸರು
(೩) ಪೂರ್ಣಪ್ರಜ್ಞ,
ಪರಿಪೂರ್ಣನಾದ ಬ್ರಹ್ಮನನ್ನು ತಿಳಿದವನು
(ಅಚ್ಯುತಪ್ರಜ್ಞರು ಸನ್ಯಾಸ ದೀಕ್ಷೆ ಕೊಟ್ಟ ನಂತರ ಇಟ್ಟ ಹೆಸರು)
(೪) ಆನಂದತೀರ್ಥ,
ಆನಂದವುಂಟಮಾಡುವ ಉಪದೇಶಗಳನ್ನು ಮಾಡುವವರು
(ಅಚ್ಯುತಪ್ರಜ್ಞರು ಪಟ್ಟಾಭಿಷೇಕದ ನಂತರ ಇಟ್ಟ ಹೆಸರು)

ಹಿಂದಿನ ಅವತಾರಗಳು
(ನಂಬಿಕೆಯಂತೆ):

(೧) ಹನುಮ
(೨) ಭೀಮ

ಪ್ರಚಾರ

ಭಾರತದಲ್ಲೆಡೆ ದ್ವೈತಮತವನ್ನು ಪ್ರಚಾರಿಸಿದರು. ಎರಡು ಬಾರಿ ಬದರಿ ಯಾತ್ರೆ ಮಾಡಿ ವೇದವ್ಯಾಸ ರೂಪಿಯಾದ ಪರಮಾತ್ಮನನ್ನು ಕಂಡು,ಪರಮಾತ್ಮನಿಂದ ವೇದಗಳನ್ನು ಕಲಿತು ಉಡುಪಿಗೆ ಹಿಂದಿರುಗಿದರು. ಮಧ್ವಾಚಾರ್ಯರು ಒಂಬತ್ತು ಜನರಿಗೆ ಸನ್ಯಾಸಿ ದೀಕ್ಷೆಯನ್ನು ನೀಡಿದರು, ವೃಷ್ಣ ಮಠದಲ್ಲಿ ಶ್ರೀ ವೃಷ್ಣನ ವಿಗ್ರಹವನ್ನು ಸ್ಥಾಪಿಸಿದರು. ಶ್ರೀ ವೃಷ್ಣನು ತನ್ನ ಮಾವನ ಮನೆಯಾದ ಸಮುದ್ರ ದಿಂದ ಅಚಾರ್ಯರಿಗಾಗಿ ಗೊಪಿಯ ಉಂಡೇಯೊಳಗೆ ಕೂತು ದೊರಕಿದನು

ಕೃತಿಗಳು

ಶ್ರೀ ಮಧ್ವಾಚಾರ್ಯರು ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಅವರ ಗ್ರಂಥಗಳನ್ನು ಸರ್ವಮೂಲಗ್ರಂಥಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಇಂದು ಉಪಲಬ್ಧವಾದವುಗಳು ಹೀಗಿವೆ:

  • ಗೀತಾಭಾಷ್ಯ
  • ಗೀತಾತಾತ್ಪರ್ಯ
  • ಬ್ರಹ್ಮಸೂತ್ರ ಭಾಷ್ಯ
  • ಅನುವ್ಯಾಖ್ಯಾನ
  • ನ್ಯಾಯವಿವರಣ
  • ಅಣುಭಾಷ್ಯ
  • ದಶೋಪನಿಷದ್ಭಾಷ್ಯಗಳು
  • ಮಹಾಭಾರತತಾತ್ಪರ್ಯನಿರ್ಣಯ
  • ಯಮಕಭಾರತ
  • ದಶ ಪ್ರಕರಣಗಳು
  • ತಂತ್ರಸಾರ ಸಂಗ್ರಹ
  • ದ್ವಾದಶ ಸ್ತೋತ್ರ
  • ಕೃಷ್ಣಾಮೃತಮಹಾರ್ಣವ
  • ಸದಾಚಾರ ಸ್ಮೃತಿ
  • ಜಯಂತೀ ನಿರ್ಣಯ
  • ಪ್ರಣವ ಕಲ್ಪ
  • ನ್ಯಾಸಪದ್ಧತಿ
  • ತಿಥಿನಿರ್ಣಯ
  • ಕಂದುಕಸ್ತುತಿ

ಶಿಷ್ಯರು

ಶ್ರೀ ಮಧ್ವಾಚಾರ್ಯರ ಶಿಷ್ಯವರ್ಗ ಅಪಾರವಾದುದಾಗಿತ್ತು. ಅವರಲ್ಲಿ ಪ್ರಮುಖರಾದ ಕೆಲವರನ್ನು ಹೀಗೆ ಗುರುತಿಸಬಹುದು

ಈ ಲೇಖನಗಳನ್ನೂ ನೋಡಿ



ಹೊರಗಿನ ಸಂಪರ್ಕಗಳು

ಉಲ್ಲೇಖ

  1. ಭಾರತೀಯ ತತ್ವಶಾಸ್ತ್ರ ಪರಿಚಯ :-By ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ.
  2. Madhvacharya
  3. http://yousigma.com/biographies/Sri%20Madhvacharya.html ಮಧ್ವಾಚಾರ್ಯ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.