ಮಂದಾಕಿನಿ ಪುರೋಹಿತ

ಡಾ|ಮಂದಾಕಿನಿ ಪುರೋಹಿತ ಇವರು ೧೯೫೮ ಜುಲೈ ೨೦ರಂದು ಧಾರವಾಡದಲ್ಲಿ ಜನಿಸಿದರು. ಇವರ ತಾಯಿ ವನಜಾಕ್ಷಿ ; ತಂದೆ ಅನಂತರಾವ್.

ಶಿಕ್ಷಣ

ಮಂದಾಕಿನಿಯವರ ಪ್ರಾಥಮಿಕ ಶಿಕ್ಷಣ ನಾಲ್ಕನೆಯ ತರಗತಿಯವರೆಗೆ ಧಾರವಾಡದಲ್ಲಿಯೆ ನಡೆಯಿತು. ಬಳಿಕ ಏಳನೆಯ ತರಗತಿಯವರೆಗೆ ಇವರು ತಮ್ಮ ಮೂಲ ಊರಾದ ಕುಮಾರವ್ಯಾಸನ ಕೋಳಿವಾಡದಲ್ಲಿ ಶಿಕ್ಷಣ ಪಡೆದರು. ಮಾಧ್ಯಮಿಕ ಶಿಕ್ಷಣ ಧಾರವಾಡದ ಕೆ.ಇ. ಬೋರ್ಡ್ಸ ಮಾಧ್ಯಮಿಕ ಶಾಲೆಯಲ್ಲಿ ಹಾಗು ಪದವಿ ವಿದ್ಯಾಭ್ಯಾಸ ಜೆ.ಎಸ್.ಎಸ್. ಕಾಲೇಜಿನಲ್ಲಿ ಜರುಗಿದವು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಹಾಗು ೧೯೮೬ರಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ೧೯೮೭ರಲ್ಲಿ ಶಾಸನಶಾಸ್ತ್ರದಲ್ಲಿ ಡಿಪ್ಲೋಮಾವನ್ನು ಪ್ರಥಮಸ್ಥಾನದೊಂದಿಗೆ ಪಡೆದರು.

ವೃತ್ತಿ

ಡಾ|ಮಂದಾಕಿನಿ ಪುರೋಹಿತ ಇವರು ಧಾರವಾಡದ ಶ್ರೀ ಸತ್ಯ ಸಾಯಿಬಾಬಾ ಗೃಹವಿಜ್ಞಾನ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಸಾಹಿತ್ಯ

  • ಚಂದ್ರಕ್ಕನ ಹಾಡುಗಳು (ಸಂಪ್ರದಾಯದ ಹಾಡುಗಳು)
  • ಮಂದಾರ (ವರದರಾಜ ಹುಯಿಲಗೋಳರ ಅಭಿನಂದನ ಗ್ರಂಥದ ಸಹಸಂಪಾದನೆ)
  • ಎಂ.ಕೆ.ಇಂದಿರಾ ಸಮಗ್ರ ಅಧ್ಯಯನ
  • ಸಾಹಿತ್ಯ ಬಿಲ್ವ (ವಿಮರ್ಶೆ)
  • ಇಂಚರ (ಪಂಡಿತ ವೆಂಕಟೇಶ ಗೋಡಖಿಂಡಿಯವರ ಜೀವನ)
  • ತುಳುನಾಡಿನಲ್ಲಿ ಜಾನಪದ ಅಧ್ಯಯನ

ಪ್ರಶಸ್ತಿ

  • ಬೆಂಗಳೂರಿನ ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.