ಪರಮಾಣು ಶಸ್ತ್ರಾಸ್ತ್ರ

'ಬೈಜಿಕ ಬಾಂಬ್': ಇದರಲ್ಲಿ ಎರಡು ಬಗೆಯ ಬಾಂಬುಗಳಿವೆ. ಒಂದು ಅಣುಬಾಂಬು ಹಾಗೂ ಇನ್ನೊಂದು ಜಲಜನಕ ಬಾಂಬು.ಈ ಬಾಂಬುಗಳು ವಿನಾಶಕಾರಿಯಾದ ಅಗಾಧ ಪ್ರಮಾಣದ ಒತ್ತಡ, ಆಘಾತ, ಉಷ್ಣತೆ ಮತ್ತು ವಿಕಿರಣವನ್ನು ಉಂಟುಮಾಡುತ್ತವೆ. ಇವುಗಳು ಸಾಂಪ್ರದಾಯಿಕವಾದ ಸಿಡಿತಲೆ(ಬಾಂಬು)ಗಳಿಗಿಂತ ಸಾವಿರಾರು ಪಟ್ಟು ಅಧಿಕ ಹಾನಿಯನ್ನು ಎಸಗುತ್ತವೆ. ಎರಡನೆ ವಿಶ್ವಯುದ್ಧ ದಲ್ಲಿ ಪ್ರಥಮವಾಗಿ ಅಣು ಬಾಂಬನ್ನು ಜಪಾನ್ ದೇಶದ ಹಿರೋಶಿಮಾ ಹಾಗೂ ನಾಗಸಾಕಿ ನಗರಗಳ ಮೇಲೆ ಅಮೆರಿಕ ದೇಶಪ್ರಯೋಗಿಸಿತು.

ನಾಗಸಾಕಿ ಮೇಲೆ ಅಮೆರಿಕ ಸುರಿಸಿದ ಅಣುಬಾಂಬಿನಿಂದಾದ ಅಣಬೆಯಾಕಾರದ ಮೋಡ

ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದ

  • ಅಣ್ವಸ್ತ್ರದಿಂದ ಭವಿಷ್ಯದಲ್ಲಿ ಮಾನವ ಕುಲಕ್ಕೆ ಆಗಬಹುದಾದ ಅಪಾಯ ಕುರಿತು ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕಾಗಿ ವಿಶ್ವಸಂಸ್ಥೆ ೧೯೬೩ ರಿಂದಲೂ ಪ್ರಯತ್ನಿಸುತ್ತಿದೆ. ಅದರ ಫಲವಾಗಿ ಬಹುಮಟ್ಟಿನ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಬಹಳಷ್ಟು ರಾಷ್ಟ್ರಗಳು ಬರಲು ಒಪ್ಪಿವೆ.

೧೨೨ ರಾಷ್ಟ್ರಗಳ ಸಮ್ಮತಿ

  • ಜಾಗತಿಕವಾಗಿ ಅಣ್ವಸ್ತ್ರಗಳನ್ನು ನಿಷೇಧಿಸುವ ಮಹತ್ವದ ಒಪ್ಪಂದವನ್ನು ವಿಶ್ವಸಂಸ್ಥೆ ಅಂಗೀಕರಿಸಿದೆ. ಆದರೆ, ಭಾರತ, ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಒಂಬತ್ತು ದೇಶಗಳು ಈ ಒಪ್ಪಂದದಿಂದ ಹೊರಗುಳಿದಿವೆ. ಕಾನೂನುಬದ್ಧವಾಗಿ ಅಣ್ವಸ್ತ್ರಗಳನ್ನು ನಿಷೇಧಿಸುವ ಈ ಒಪ್ಪಂದದ ಪರವಾಗಿ 122 ರಾಷ್ಟ್ರಗಳು ಚಲಾಯಿಸಿವೆ. ನೆದರ್ಲೆಂಡ್ಸ್ ಒಪ್ಪಂದದ ವಿರುದ್ಧವಾಗಿ ಮತ­ಚಲಾಯಿಸಿದೆ. ಸಿಂಗಪುರ ಒಪ್ಪಂದವನ್ನು ತಿರಸ್ಕರಿಸಿದೆ. ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಉತ್ತರ ಕೊರಿಯಾ ಮತ್ತು ಇಸ್ರೇಲ್ ಒಪ್ಪಂದದಿಂದ ಹೊರಗುಳಿದ ಇತರ ದೇಶಗಳು.

ಭವಿಷ್ಯದ ಭರವಸೆಗಳಿಗೆ ಸ್ಪಂದನೆ=

  • ವಿಶ್ವಸಂಸ್ಥೆಯಲ್ಲಿ ದಿ.೮--೭-೨೦೧೭ ರಂದು ಸೇರಿದ ಸಭೆಯಲ್ಲಿ, ‘ನಾವು ಈ ಒಪ್ಪಂದದ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಜನಾಂಗದ ಭರವಸೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂಬ ಅಂಶ ನಮ್ಮನ್ನು ಭಾವುಕಗೊಳಿಸಿದೆ’ ಎಂದು ಕೋಸ್ಟಾರಿಕಾ ರಾಯಭಾರಿ ಮತ್ತು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಲ್ಯಾನೆ ವ್ಹೈಟ್ ಗೊಮೇಜ್ ಸಂಭ್ರಮ ವ್ಯಕ್ತಪಡಿಸಿದರು. ಒಪ್ಪಂದಕ್ಕೆ ತೋರಿದ ಉತ್ಸಾಹವು ಅಣ್ವಸ್ತ್ರ ಆತಂಕದ ಕುರಿತ ಕಳಕಳಿಯನ್ನು ತೋರುತ್ತದೆ. ಅಣ್ವಸ್ತ್ರ ರಹಿತ ಜಗತ್ತಿನ ಸಮಾನ ನಿರೀಕ್ಷೆಗಳನ್ನು ಪೂರೈಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಂಟೋನಿಯೊ ಗುಟೆರೆಸ್ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.[1]

ನೋಡಿ

ಉಲ್ಲೇಖ

  1. ಜಾಗತಿಕ ಅಣ್ವಸ್ತ್ರ ನಿಷೇಧ ಒಪ್ಪಂದಕ್ಕೆ ಒಪ್ಪದ ಭಾರತ;ಪಿಟಿಐ; 9 Jul, 2017
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.