ನ್ಯಾಯಾಲಯ

ನ್ಯಾಯಾಲಯವು ಕಾನೂನು ನಿಯಮದ ಅನುಗುಣವಾಗಿ ಕಕ್ಷಿಗಳ ನಡುವೆ ಕಾನೂನು ವಿವಾದಗಳನ್ನು ನಿರ್ಣಯ ಮಾಡುವ ಮತ್ತು ನಾಗರೀಕ, ಕ್ರಿಮಿನಲ್, ಹಾಗೂ ಆಡಳಿತಾತ್ಮಕ ವಿಷಯಗಳಲ್ಲಿ ನ್ಯಾಯ ನಿರ್ವಹಣೆ ನಡೆಸುವ ಅಧಿಕಾರವಿರುವ ಒಂದು ತೀರ್ಪುಜಗಲಿ, ಹಲವುವೇಳೆ ಒಂದು ಸರ್ಕಾರಿ ಸಂಸ್ಥೆ.[1] ಸಾಮಾನ್ಯ ಕಾನೂನು ಮತ್ತು ನಾಗರೀಕ ಕಾನೂನು ಎರಡರದ್ದೂ ಕಾನೂನು ವ್ಯವಸ್ಥೆಗಳಲ್ಲಿ, ನ್ಯಾಯಾಲಯಗಳು ವಿವಾದ ಪರಿಹಾರಗಳಿಗೆ ಕೇಂದ್ರ ಸಾಧನಗಳಾಗಿವೆ, ಮತ್ತು ಎಲ್ಲ ವ್ಯಕ್ತಿಗಳು ನ್ಯಾಯಾಲಯದ ಮುಂದೆ ತಮ್ಮ ಬೇಡಿಕೆಗಳನ್ನು ತರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸಾಮಾನ್ಯವಾಗಿ ತಿಳಿಯಲಾಗಿದೆ. ಅದೇರೀತಿ, ಅಪರಾಧದಿಂದ ಆರೋಪಿತರ ಹಕ್ಕುಗಳು ನ್ಯಾಯಾಲಯದ ಮುಂದೆ ಪ್ರತಿವಾದ ಹೂಡುವ ಹಕ್ಕನ್ನು ಒಳಗೊಂಡಿವೆ.

ನ್ಯಾಯಾಲಯ

ಕಾನೂನನ್ನು ಅರ್ಥೈಸುವ ಮತ್ತು ಅನ್ವಯಿಸುವ ನ್ಯಾಯಾಲಯಗಳ ವ್ಯವಸ್ಥೆಯನ್ನು ಒಟ್ಟಾರೆಯಾಗಿ ನ್ಯಾಯಾಂಗ ಎಂದು ಕರೆಯಲಾಗುತ್ತದೆ. ನ್ಯಾಯಾಲಯವು ಸೇರುವ ಸ್ಥಳವನ್ನು ವಿಚಾರಣಾ ಸ್ಥಳವೆಂದು ಕರೆಯಲಾಗುತ್ತದೆ. ನ್ಯಾಯಾಲಯದ ವಿಚಾರಣೆ ನಡೆಯುವ ಕೋಣೆಯನ್ನು ನ್ಯಾಯಾಲಯ ಕೋಣೆ ಎಂದು ಮತ್ತು ಕಟ್ಟಡವನ್ನು ನ್ಯಾಯದ ಮನೆ ಎಂದು ಕರೆಯಲಾಗುತ್ತದೆ; ನ್ಯಾಯಾಲಯ ಸೌಲಭ್ಯಗಳು ಗ್ರಾಮೀಣ ಸಮುದಾಯಗಳಲ್ಲಿ ಸರಳ ಮತ್ತು ಬಹಳ ಚಿಕ್ಕ ಕೋಣೆಗಳಿಂದ ಹಿಡಿದು ನಗರಗಳಲ್ಲಿನ ದೊಡ್ಡ ಕಟ್ಟಡಗಳವೆರೆಗೆ ಇರುತ್ತವೆ.

ನ್ಯಾಯಾಲಯಕ್ಕೆ ನೀಡಲಾದ ಪ್ರಾಯೋಗಿಕ ಅಧಿಕಾರವನ್ನು ಅದರ ಕಾನೂನು ವ್ಯಾಪ್ತಿ ಎಂದು ಕರೆಯಲಾಗುತ್ತದೆ – ಅಂದರೆ ಅದಕ್ಕೆ ಕೇಳಲಾದ ನಿರ್ದಿಷ್ಟ ಬಗೆಯ ಪ್ರಶ್ನೆಗಳು ಅಥವಾ ಅಹವಾಲುಗಳನ್ನು ನಿರ್ಣಯಿಸುವ ನ್ಯಾಯಾಲಯದ ಅಧಿಕಾರ. ಒಂದು ನ್ಯಾಯಾಲಯವು ಕನಿಷ್ಠ ಮೂರು ಕಕ್ಷಿಗಳನ್ನು ಒಳಗೊಂಡಿರುತ್ತದೆ: ಅನ್ಯಾಯವಾಗಿದೆ ಎಂದು ದೂರುವ ವಾದಿ; ಅದಕ್ಕೆ ಪರಿಹಾರ ಕೊಡಲು ಕರೆಯಲ್ಪಡುವ ಪ್ರತಿವಾದಿ, ಮತ್ತು ವಾಸ್ತವಾಂಶದ ಸತ್ಯವನ್ನು ಪರೀಕ್ಷಿಸುವ, ಆ ವಾಸ್ತವಾಂಶಕ್ಕೆ ಉದ್ಭವಿಸುವ ಕಾನೂನನ್ನು ನಿರ್ಧರಿಸುವ, ಮತ್ತು ಅನ್ಯಾಯವಾಗಿದೆ ಎಂದು ಸಾಬೀತುಗೊಂಡರೆ, ಖಚಿತಪಡಿಸಿಕೊಳ್ಳುವ, ಮತ್ತು ನ್ಯಾಯಾಧಿಕಾರಿಗಳಿಂದ ಒಂದು ಕಾನೂನು ಪರಿಹಾರ ಅನ್ವಯಿಸುವ ನ್ಯಾಯಿಕ ಅಧಿಕಾರ. ಉನ್ನತ ನ್ಯಾಯಾಲಯಗಳಲ್ಲಿ ಬ್ಯಾರಿಸ್ಟರ್‍ಗಳು, ಸಹಾಯಕರಾಗಿ ಅಟಾರ್ನಿಗಳನ್ನು ಹೊಂದಿರುವುದೂ ಸಾಮಾನ್ಯವಾಗಿದೆ. ಆದರೆ ಹಲವುವೇಳೆ, ನ್ಯಾಯಾಲಯಗಳು ಹೆಚ್ಚುವರಿ ಬ್ಯಾರಿಸ್ಟರ್‍ಗಳು, ದಂಡಾಧಿಕಾರಿಗಳು, ವರದಿಗಾರರು, ಮತ್ತು ಬಹುಶಃ ತೀರ್ಪುಗಾರರನ್ನು ಹೊಂದಿರುತ್ತವೆ.

ಉಲ್ಲೇಖಗಳು

  1. Walker, David (1980). The Oxford companion to law. Oxford: Oxford University Press. p. 301. ISBN 0-19-866110-X.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.