ಧೋಂಡೊ ನರಸಿಂಹ ಮುಳಬಾಗಲ
ಶಿಕ್ಷಣ ಹಾಗು ಉದ್ಯೋಗ
ಧಾರವಾಡದಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ಬೆಳಗಾವಿಯ ನಾರ್ಮಲ್ ಸ್ಕೂಲ್ (ಟ್ರೇನಿಂಗ ಕಾಲೇಜ) ದಲ್ಲಿ ಶಿಕ್ಷಕ ಟ್ರೇನಿಂಗ ಪಡೆದರು. ಈ ಅವಧಿಯಲ್ಲಿ ಇವರಿಗೆ ಗಂಗಾಧರ ಮಡಿವಾಳೇಶ್ವರ ತುರಮರಿಯವರು ಶಿಕ್ಷಕರಾಗಿದ್ದರು. ತರಬೇತಿಯ ನಂತರ ಇವರು ಬೆಳಗಾವಿಯಲ್ಲಿಯೆ ಕನ್ನಡ ಶಾಲಾ ಶಿಕ್ಷಕರಾದರು. ಅಲ್ಲಿಂದ ರೋಣ, ಅಣ್ಣಿಗೇರಿ, ಗದಗ ಇಲ್ಲೆಲ್ಲ ಸೇವೆ ಸಲ್ಲಿಸಿ ಧಾರವಾಡದಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ಬಂದರು. ೧೮೮೨ರಲ್ಲಿ ಧಾರವಾಡದ ಟ್ರೇನಿಂಗ ಕಾಲೇಜಿನಲ್ಲಿ ಕನ್ನಡ ಶಿಕ್ಷಕರಾದರು.
ಕರ್ನಾಟಕ ವಿದ್ಯಾವರ್ಧಕ ಸಂಘ
ಧೋಂಡೊ ನರಸಿಂಹ ಮುಳಬಾಗಲ ಇವರ ಅತ್ಯಂತ ಮಹತ್ವದ ಕನ್ನಡದ ಸೇವೆ ಎಂದರೆ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆ. ಮಾಧ್ಯಮಿಕ ಶಾಲೆಯಲ್ಲಿ ಇವರ ವಿದ್ಯಾರ್ಥಿಯಾಗಿದ್ದ ರಾ.ಹ.ದೇಶಪಾಂಡೆಯವರ ಜೊತೆಗೂಡಿ ೧೮೯೦ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದರು. ೧೮೯೬ರಲ್ಲಿ ಸಂಘದ ಮುಖಪತ್ರಿಕೆ ‘ವಾಗ್ಭೂಷಣ’ ಪ್ರಾರಂಭವಾಯಿತು. ಮುಳಬಾಗಲ ಅವರೆ ಇದಕ್ಕೆ ಆಧಾರಸ್ತಂಭರಾಗಿದ್ದರೆನ್ನಬಹುದು.
ಸಾಹಿತ್ಯ
- ವೇಣೀ ಸಂಹಾರ (೧೮೮೫)
- ಮೃಚ್ಛಕಟಿಕ (ಗದ್ಯದಲ್ಲಿ ಅನುವಾದ)(೧೮೮೯)
- ಕನ್ನಡ ಕೈಪಿಡಿ (೧,೨) (೧೮೯೦)
- ಉತ್ತರರಾಮಚರಿತ್ರೆ(೧೮೯೨)
- ನುಡಿಗಟ್ಟು(೧೮೯೨)
- ಛಂದಸ್ಸಾರ(೧೮೯೨)
- ರಾಜಶೇಖರ ವಿಲಾಸ ವೃತ್ತಿ (ಏಳನೆಯ ಆಶ್ವಾಸದ ಟೀಕೆ)(೧೮೯೨)
- ಮಾಲವಿಕಾಗ್ನಿ ಮಿತ್ರಮ್ (ಅನುವಾದ)(೧೮೯೪)
- ಹಿತೋಪದೇಶದ ಪ್ರಥಮ ಭಾಗದ ಭಾಷಾಂತರ (ವಾಗ್ಭೂಷಣ ಪತ್ರಿಕೆಯಲ್ಲಿ ಪದ್ಯಾರ್ಥ ಸಾರ)
ಧೋಂಡೊ ನರಸಿಂಹ ಮುಳಬಾಗಲ ಇವರು ೧೮೯೮ರಲ್ಲಿ ಪ್ಲೇಗ್ ಬೇನೆಯಿಂದ ಮೃತರಾದರು.