ದೃಷ್ಟದ್ಯುಮ್ನ

ದೃಷ್ಟದ್ಯುಮ್ನ ನು ಮಹಾಭಾರತ ಮಹಾಕಾವ್ಯದಲ್ಲಿ ದ್ರುಪದ ರಾಜನ ಮಗ ದ್ರೌಪದಿ ಮತ್ತು ಶಿಖಂಡಿಯ ಸೋದರ. ಪಾಂಡವರ ಸೇನಾಪತಿಯಾಗಿದ್ದುಕೊಂಡು ಅವನು ದ್ರೋಣನನ್ನು ಕೊಂದನು .

ಜಾವಾ ಗೊಂಬೆಯಾಟದಲ್ಲಿ ದೃಷ್ಟದ್ಯುಮ್ನ

ಇನ್ನಷ್ಟು ವಿವರ

ಪಾಂಚಾಲ ದೇಶದ ಅರಸು ದ್ರುಪದನು ದ್ರೋಣನಿಂದಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ದ್ರೋಣನನ್ನು ಕೊಲ್ಲುವಂಥ ಮಗನನ್ನು ಬಯಸಿ ಪುತ್ರಕಾಮೇಷ್ಟಿ ಯಾಗ ಮಾಡಿ ಇವನನ್ನು ಮಗನನ್ನಾಗಿ ಪಡೆದನು. ದ್ರೌಪದಿಯೊಂದಿಗೆ ದೃಷ್ಟದ್ಯುಮ್ನನು ಯಾಗದ ಅಗ್ನಿಯಿಂದ ವಿದ್ಯಾವಂತ , ಬಲಶಾಲಿ ಹಾಗೂ ಸಶಸ್ತ್ರ ಯುವಕನಾಗಿಯೇ ಹೊರ ಬಂದನು. ಅವನು ದ್ರೋಣನನ್ನು ಕೊಲ್ಲಲೆಂದೇ ಹುಟ್ಟಿದವನಾದರೂ ಅವನನ್ನು ದ್ರೋಣನು ಶಿಷ್ಯನಾಗಿ ಅಂಗೀಕರಿಸಿ ಶಸ್ತ್ರಾಸ್ತ್ರವಿದ್ಯೆಯನ್ನು ಹೇಳಿ ಕೊಟ್ಟನು.

ದ್ರೌಪದಿಯು ಸ್ವಯಂವರದಲ್ಲಿ ಅರ್ಜುನನನ್ನು ವರಿಸಿ ಪಾಂಡವರನ್ನು ಮದುವೆಯಾದಳು.

ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದಲ್ಲಿ ದೃಷ್ಟದ್ಯುಮ್ನನು ಪಾಂಡವರ ಸೇನಾಪತಿಯಾದನು . ದ್ರೋಣನು ಅನೇಕ ಪಾಂಡವವೀರರನ್ನು ಕೊಲ್ಲುತ್ತಿರುವಾಗ ದ್ರೋಣನು ಶಸ್ತ್ರ ಹಿಡಿದಿರುವಾಗ ಅವನನ್ನು ಸೋಲಿಸಲು ಅಸಾಧ್ಯವೆಂದರಿತ ಕೃಷ್ಣನು ಉಪಾಯವೊಂದನ್ನು ಮಾಡಿ ಯುಧಿಷ್ಠಿರನ ಮೂಲಕ ಅಶ್ವತ್ಥಾಮನು ಸತ್ತ ಸಂಗತಿಯನ್ನು ಹೇಳಲು ತಿಳಿಸಿದನು. ಸುಳ್ಳನ್ನು ಆಡದ ಧರ್ಮರಾಯನು ಹಿಂಜರಿದಾಗ ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು ಭೀಮನಿಂದ ಕೊಲ್ಲಿಸಿ ಅಶ್ವತ್ಥಾಮ ಸತ್ತ ಬಗ್ಗೆ ಗುಲ್ಲೆಬ್ಬಿಸಿದನು. ದ್ರೋಣನು ಖಚಿತಪಡಿಸಿಕೊಳ್ಳಲು ಯುಧಿಷ್ಠಿರನನ್ನು ಅವಲಂಬಿಸಿದಾಗ ಯುಧಿಷ್ಟಿರನು ಅಶ್ವತ್ಥಾಮ ಸತ್ತದ್ದನ್ನು ಖಚಿತಪಡಿಸುತ್ತ , ಸತ್ತಿದ್ದು ಮನುಷ್ಯನೋ ಆನೆಯೋ ಎಂದು ಸಂಶಯಿಸಿದಾಗ ಅದು ದ್ರೋಣನಿಗೆ ಕೇಳದ ಹಾಗೆ ಕಪಟಿಯಾದ ಕೃಷ್ಣನು ಶಂಖವನ್ನು ಊದಿದನು. ಅರೆಸುದ್ದಿಯನ್ನು ಸತ್ಯವಂತನಾದ ಯುಧಿಷ್ಟಿರನಿಂದ ಕೇಳಿ ದ್ರೋಣನು ತನ್ನ ಮಗನೇ ಸತ್ತನೆಂದು ತಿಳಿದು ಶೋಕದಿಂದ ಶಸ್ತ್ರವನು ತ್ಯಾಗ ಮಾಡಿದ ಸಂದರ್ಭದಲ್ಲಿ ದೃಷ್ಟದ್ಯುಮ್ನನು ಅವನನ್ನು ಕೊಂದು ಬಿಟ್ಟನು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.