ಟ್ರಿನಿಡಾಡ್ ಮತ್ತು ಟೊಬೆಗೊ
ಟ್ರಿನಿಡಾಡ್ ಮತ್ತು ಟೊಬೆಗೋ ದಕ್ಷಿಣ ಕೆರಿಬ್ಬಿಯನ್‍ನಲ್ಲಿರುವ ಒಂದು ದ್ವೀಪಸಮೂಹ ರಾಷ್ಟ್ರ. ಇದು ದಕ್ಷಿಣ ಅಮೇರಿಕ ಖಂಡದ ಈಶಾನ್ಯದಲ್ಲಿದೆ. ಒಟ್ಟು ೫,೧೨೮ ಚ.ಕಿ.ಮೀ. ವಿಸ್ತೀರ್ಣ ಹೊಂದಿರುವ ಈ ದ್ವೀಪಸಮೂಹವು ಟ್ರಿನಿಡಾಡ್ ಹಾಗೂ ಟೊಬೆಗೋ ಎಂಬ ಎರಡು ಹಿರಿಯ ದ್ವೀಪಗಳು ಮತ್ತು ಇತರೆ ೨೧ ಕಿರಿಯ ದ್ವೀಪಗಳನ್ನು ಒಳಗೊಂಡಿದೆ.
ಧ್ಯೇಯ: "Together we aspire, together we achieve" | |
ರಾಷ್ಟ್ರಗೀತೆ: Forged From The Love of Liberty | |
![]() Location of ಟ್ರಿನಿಡಾಡ್ ಮತ್ತು ಟೊಬೆಗೊ | |
ರಾಜಧಾನಿ | ಪೋರ್ಟ್ ಆಫ್ ಸ್ಪೇನ್ |
ಅತಿ ದೊಡ್ಡ ನಗರ | ಸಾನ್ ಫೆರ್ನಾಂಡೊ |
ಅಧಿಕೃತ ಭಾಷೆ(ಗಳು) | ಆಂಗ್ಲ ಭಾಷೆ |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಜಾರ್ಜ್ ಮ್ಯಾಕ್ಸ್‍ವೆಲ್ ರಿಚರ್ಡ್ಸ್ |
- ಪ್ರಧಾನ ಮಂತ್ರಿ | ಪ್ಯಾಟ್ರಿಕ್ ಮ್ಯಾನಿಂಗ್ |
ಸ್ವಾತಂತ್ರ್ಯ | |
- ಯುನೈಟೆಡ್ ಕಿಂಗ್‍ಡಮ್ನಿಂದ | ಆಗಸ್ಟ್ ೩೧ ೧೯೬೨ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 5,128 ಚದರ ಕಿಮಿ ; (೧೭೨ನೇ) |
1,979 ಚದರ ಮೈಲಿ | |
- ನೀರು (%) | negligible |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 1,305,000 (152nd) |
- ಸಾಂದ್ರತೆ | 207.8 /ಚದರ ಕಿಮಿ ; (47th) 538.6 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $18.352 billion (113th) |
- ತಲಾ | $19,700 (46th) |
ಮಾನವ ಅಭಿವೃದ್ಧಿ ಸೂಚಿಕ (2004) |
0.809 (57th) – ಉತ್ತಮ |
ಕರೆನ್ಸಿ | ಟ್ರಿನಿಡಾಡ್ ಮತ್ತು ಟೊಬೆಗೊ ಡಾಲರ್ (TTD ) |
ಸಮಯ ವಲಯ | (UTC-4) |
- ಬೇಸಿಗೆ (DST) | (UTCn/a) |
ಅಂತರ್ಜಾಲ TLD | .tt |
ದೂರವಾಣಿ ಕೋಡ್ | +1-868 |
೭೦೦೦ ಸಾವಿರ ವರ್ಷಗಳ ಹಿಂದೆ ಅಮೆರಿಂಡಿಯನ್ನರು ಇಲ್ಲಿ ವಾಸಿಸತೊಡಗಿದರು. ನಂತರ ೧೪೯೮ರಲ್ಲಿ ಯುರೋಪಿನವರು ಇಲ್ಲಿಗೆ ತಲುಪಿದ ಸಮಯದಲ್ಲಿ ಅರಕವಾನ್ ಮತ್ತು ಕರಿಬಾನ್ ಭಾಷಿಕರು ತಳವೂರಿದ್ದರು. ಗುಲಾಮಗಿರಿ ಮತ್ತು ಜೀತವ್ಯವಸ್ಥೆ ವ್ಯಾಪಕವಾಗಿ ಆಚರಣೆಯಲ್ಲಿದ್ದುದರಿಂದ ಈ ರಾಷ್ಟ್ರವು ಇಂದು ಮಿಶ್ರಜನಾಂಗೀಯ ನಾಡಾಗಿದೆ. ಮುಖ್ಯವಾಗಿ ಯುರೋಪಿನವರು , ಆಫ್ರಿಕಾದವರು , ಚೀನೀಯರು ಹಾಗೂ ಭಾರತೀಯರು ಕಂಡುಬರುತ್ತಾರೆ. ಟ್ರಿನಿಡಾಡ್ ಮತ್ತು ಟೊಬೆಗೋ ೧೯೬೨ರಲ್ಲಿ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆದು ಮುಂದೆ ೧೯೭೬ ರಲ್ಲಿ ಗಣರಾಜ್ಯವಾಯಿತು. ಎರಡು ಸದನಗಳನ್ನು ಹೊಂದಿರುವ ಸಾಂಸದೀಯ ವ್ಯವಸ್ಥೆಯನ್ನು ಈ ರಾಷ್ಟ್ರವು ಅಳವಡಿಸಿಕೊಂಡಿದೆ. ದೇಶದ ಮುಖ್ಯಸ್ಥರು ರಾಷ್ಟ್ರಾಧ್ಯಕ್ಷರು ಹಾಗೂ ಪ್ರಧಾನಿಯು ಸರ್ಕಾರದ ಮುಖ್ಯಸ್ಥರಾಗಿರುವರು.
ನಾಡಿನ ಒಟ್ಟು ಜನಸಂಖ್ಯೆಯ ೩೯% ಮಂದಿ ಆಫ್ರಿಕಾ ಮೂಲದವರು ಮತ್ತು ೪೦% ಭಾರತೀಯ ಮೂಲದವರಾಗಿದ್ದಾರೆ. ಈ ಜನತೆಯ ಪೂರ್ವಿಕರನ್ನು ಇಲ್ಲಿನ ಕಬ್ಬಿನಗದ್ದೆಗಳಲ್ಲಿ ದುಡಿಯಲು ಜೀತದಾಳುಗಳನ್ನಾಗಿ ೧೯ನೇ ಶತಮಾನದಲ್ಲಿ ಆಂಗ್ಲರು ಕರೆದೊಯ್ದಿದ್ದರು. ಪೋರ್ಟ್ ಆಫ್ ಸ್ಪೆಯ್ನ್ ಈ ರಾಷ್ಟ್ರದ ರಾಜಧಾನಿ. ಹಿಂದೂ , ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮಗಳು ಇಲ್ಲಿ ಆಚರಣೆಯಲ್ಲಿವೆ. ಹಿಂದಿ ಮತ್ತು ಇಂಗ್ಲಿಷ್(ಅಧಿಕೃತ ಭಾಷೆ) ಇಲ್ಲಿಯ ಪ್ರಮುಖ ಭಾಷೆಗಳು. ರಾಷ್ಟ್ರದ ಒಟ್ಟು ಜನಸಂಖ್ಯೆ ಸುಮಾರು ೧೩ ಲಕ್ಷ.