ಜೈ ರಾಮ್ ಠಾಕೂರ್

ಜೈ ರಾಮ್ ಠಾಕೂರ್ (ಜನನ 6 ಜನವರಿ 1965)[1]  ಒರ್ವ ರಾಜಕಾರಣಿ , ಹಿಮಾಚಲ ಪ್ರದೇಶದ 13 ನೇ ಮತ್ತು ಪ್ರಸ್ತುತ ಮುಖ್ಯಮಂತ್ರಿ.  ಅವರು 1998 ರಿಂದ ಹಿಮಾಚಲ ಪ್ರದೇಶ ಶಾಸನ ಸಭೆ ಶಾಸಕರಾಗಿದ್ದಾರೆ ಮತ್ತು ಹಿಂದೆ ಹಿಮಾಚಲ ಪ್ರದೇಶದ ಬಿಜೆಪಿ ಸರಕಾರದಲ್ಲಿ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 2009-2012ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಅವರು ಮಂಡಿಯ ಸೆರಾಜ್ನಿಂದ ಹಿಮಾಚಲ ಪ್ರದೇಶ ಅಸೆಂಬ್ಲಿಗೆ ಚುನಾಯಿತರಾಗುತ್ತಾರೆ. [2]

ಜೈ ರಾಮ್ ಠಾಕೂರ್
ಚಿತ್ರ:File:Jai Ram Thakur in a Wedding.jpg

ಪ್ರಸಕ್ತ
ಅಧಿಕಾರ ಪ್ರಾರಂಭ 
27 ಡಿಸೆಂಬರ್ 2017
ಪೂರ್ವಾಧಿಕಾರಿ ವಿಭದ್ರ ಸಿಂಗ್

ಜನನ ಜನನ 6 ಜನವರಿ 1965
ಮಂಡಿ, ಹಿಮಾಚಲ ಪ್ರದೇಶ, ಭಾರತ
ಪ್ರತಿನಿಧಿತ ಕ್ಷೇತ್ರ ಸೆರಾಜ್
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಜೀವನಸಂಗಾತಿ ಡಾ. ಸಾಧನಾ ಠಾಕೂರ್
ಜೈ ರಾಮ್ ಠಾಕೂರ್

ಆರಂಭಿಕ ಜೀವನ ಮತ್ತು ಶಿಕ್ಷಣ

ಮಂಡಿಯ ಥುನಾಗ್ ಪ್ರದೇಶದ ತಂಡಿ ಗ್ರಾಮದಲ್ಲಿ ಬಡ ರಜಪೂತ ಕೃಷಿ ಕುಟುಂಬದಲ್ಲಿ ಠಾಕೂರ್  ಜನಿಸಿದರು.  [3] [4] ಠಾಕೂರ್ ತಮ್ಮ ಶಾಲಾ ಶಿಕ್ಷಣವನ್ನು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ ಬಾಗ್ಸಾಡ್ನಿಂದ ಮಾಡಿ ನಂತರ ಬಿ.ಎ.  ಅನ್ನು ಮಂಡಿಯ ವಲ್ಲಭ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದರು. ಅವರು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದ ಎಂ.ಎ. ಪದವಿ ಪಡೆದರು.

ಕುಟುಂಬ

ಠಾಕೂರ್ ಎಬಿವಿಪಿ ಸಹೋದ್ಯೋಗಿ ಸಾಧನಾ ಅವರನ್ನು ವಿವಾಹವಾದರು. [5]  ಸಾಧನ ಒರ್ವ ಕನ್ನಡತಿ.ಇವರ ಚಿಕ್ಕವಯಸ್ಸಿನಲ್ಲಿಯೆ ಅವರ ಕುಟುಂಬ ಶಿವಮೊಗ್ಗದಿಂದ ಜೈಪುರಕ್ಕೆ ಬಂದು ನೆಲೆಸಿದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.ಇಬ್ಬರು ಪುತ್ರಿಯರು ಹಿಮಾಚಲ ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಉಲ್ಲೇಖಗಳು

  1. "Personal Information-Himachal Pradesh Vidhan Sabha". Retrieved 24 December 2017.
  2. "Who is Jairam Thakur – front runner for Himachal Pradesh CM post after Prem Kumar Dhumal's shock defeat". The Financial Express (in ಇಂಗ್ಲಿಷ್). 2017-12-19. Retrieved 2017-12-23.
  3. "Jai Ram Thakur, the Next Chief Minister of Himachal Pradesh". Retrieved 24 December 2017.
  4. "Jai Ram Thakur: The rise and rise of Himachal Pradesh's new CM-elect in BJP". The Financial Express (in ಇಂಗ್ಲಿಷ್). 2017-12-19. Retrieved 2017-12-24.
  5. "Himachal Pradesh CM Jai Ram Thakur married Karnataka girl".
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.