ಗುವಾಹಾಟಿ

ಗುವಾಹಟಿ (ಅಸ್ಸಾಮಿ:গুৱাহাটী) ಪೂರ್ವ ಭಾರತದಲ್ಲಿರುವ ಒಂದು ಪ್ರಮುಖ ನಗರ ಹಾಗು ಈಶಾನ್ಯ ಪ್ರದೇಶದ ಹೆಬ್ಬಾಗಿಲು ಎಂದೇ ಪ್ರಸಿದ್ದಿ. ಇದು ಆ ಪ್ರದೇಶದ ಅತ್ಯಂತ ದೊಡ್ಡ ನಗರ ಕೂಡ ಆಗಿದೆ. ಅಸ್ಸಾಂ ರಾಜ್ಯದ ರಾಜಧಾನಿಯಾಗಿರುವ ದಿಸ್ಪುರ್ ಈ ನಗರದಲ್ಲಿ ಸ್ಥಿತವಾಗಿದೆ.. ಬ್ರಹಪುತ್ರ ನದಿಯು ಗುವಾಹಟಿಯನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ. ಅದೆಂದರೆ ಉತ್ತರ ಗುವಾಹಟಿ ಅಥವಾ ದುರ್ಜಯ ಮತ್ತು ದಕ್ಷಿಣ ಗುವಾಹಟಿ. ಉತ್ತರ ಗುವಾಹಟಿಯು ದೇಶದ ಪ್ರಮುಖ ಶಕ್ತಿಪೀಠವಾದ ಕಾಮಾಕ್ಯ ದೇವಾಲಯ, ಉಮಾಶಂಕರ ದೇವಾಲಯಗಳಿಂದ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡರೆ, ದಕ್ಷಿಣ ಗುವಾಹಟಿಯು ವಾಣಿಜ್ಯಿಕ ಕೇಂದ್ರವಾಗಿದೆ. ಶ್ರೀಮಂತ ಸರ್ಕಾರ ಕಲಾಕ್ಷೇತ್ರ, ಆಸ್ಸಾಂ ರಾಜ್ಯ ವಸ್ತು ಸಂಗ್ರಹಾಲಯ, ಅಸ್ಸಾಂ ತಾರಾಲಯ ಇವು ಗುವಾಹಟಿಯ ಪ್ರಮುಖ ಆಕರ್ಷಣೆಗಳು.

ಗುವಾಹಟಿ
ಗುವಾಹಟಿ ನಗರದ ಪಕ್ಷಿನೋಟ
A view of the city

ಗುವಾಹಟಿ
ರಾಜ್ಯ
 - ಜಿಲ್ಲೆ
ಅಸ್ಸಾಂ
 - ಕಾಮರೂಪ
ನಿರ್ದೇಶಾಂಕಗಳು 26.17° N 91.77° E
ವಿಸ್ತಾರ
 - ಎತ್ತರ
216 km²
 - 55 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
808021
 - 3935/ಚದರ ಕಿ.ಮಿ.
ಮೇಯರ್ ಮೃಗೇನ್ ಸರನೀಯಾ
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 781xxx
 - +(91)361
 - AS-01
ಅಂತರ್ಜಾಲ ತಾಣ: www.guwahatimunicipalcorporation.com

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.