ಕ್ರಿಸ್ಟೊಫರ್ ಕೊಲಂಬಸ್

ಕ್ರಿಸ್ಟೊಫರ್ ಕೊಲಂಬಸ್ (ಸು. ೧೪೫೧ — ಮೇ ೨೦, ೧೫೦೬) ಒಬ್ಬ ನಾವಿಕ. ಈತನ ಅಟ್ಲಾಂಟಿಕ್ ಮಹಾಸಾಗರದ ಯಾನಗಳು ಆಧುನಿಕ ಯುರೋಪ್, ಅಮೇರಿಕ ಖಂಡಗಳನ್ನು ವಸಾಹತುಗಳಾಗಿ ಮಾಡಿಕೊಳ್ಳಲು ನೆರವಾಯಿತು.

ಕ್ರಿಸ್ಟೊಫರ್ ಕೊಲಂಬಸ್
ಕೊಲಂಬಸ್‌ನ ಮರಣೋತ್ತರ ಭಾವಚಿತ್ರ Sebastiano del Piombo. .[1]
ಜನನ೨೨ ಅಗಸ್ಟ್ ಮತ್ತು ೩೧ ಅಕ್ಟೋಬರ್ ೧೪೫೧ ರ ನಡುವೆ
ಗೆನೋವ, Republic of Genoa, ಈಗಿನ ಇಟೆಲಿ
ನಿಧನ20 ಮೇ 1506(1506-05-20) (ವಯಸ್ಸು 54)
ವಲ್ಲ್ಲಾಡೋಲಿಡ್, Crown of Castile, ಈಗಿನ ಸ್ಪೇನ್
ರಾಷ್ಟ್ರೀಯತೆGenoese
Other namesItalian: Cristoforo Colombo
Catalan: Cristòfor Colom
Spanish: Cristóbal Colón
Portuguese: Cristóvão Colombo
Latin: Christophorus Columbus
Genoese: Christoffa Corombo
ವೃತ್ತಿಸಾಗರ ಅನ್ವೇಷಕ for the Crown of Castile
TitleAdmiral of the Ocean Sea; Viceroy and Governor of the Indies
ಸಂಗಾತಿ(ಗಳು)ಫಿಲಿಪ ಮೋನಿಜ್ ಪೆರೆಸ್ಟೇಲೊ (c. ೧೪೫೫-೮೫)
Partner(s)Beatriz Enríquez de Arana (c. 1485–1506)
ಮಕ್ಕಳುDiego
Fernando
RelativesGiovanni Pellegrino, Giacomo and Bartholomew Columbus (brothers)
Signature




ಕ್ರಿಸ್ಟೊಫರ್ ಕೊಲಂಬಸ್

ವೈಯುಕ್ತಿಕ ಬದುಕು

ಕೊಲಂಬಸ್ ಸುಮಾರು 1451ರಲ್ಲಿ ಜಿನೋವಾ ನಗರದಲ್ಲಿ ಜನಿಸಿದ. ತಂದೆ ವೃತ್ತಿಯಿಂದ ನೇಕಾರ. ಕೊಲಂಬಸನಿಗಾದರೋ ಎಳತನದಿಂದಲೂ ಸಮುದ್ರಯಾನದ ಕಡೆಗೆ ಒಲವು.

೧೪೯೨ ಮತ್ತು ೧೫೦೩ ರ ನಡುವೆ ಅವನು ಸ್ಪೇನ್ ಮತ್ತು ಅಮೇರಿಕಾ ನಡುವೆ ನಾಲ್ಕು ಪ್ರಯಾಣಗಳನ್ನು ಮಾಡಿದನು.

೧೫೦೪ ರ ಹೊತ್ತಿಗೆ ನಿರಂತರ ಯಾನಗಳಿಂದ ಅವನ ದೇಹ ಸೋತುಹೋಗಿತ್ತು. ರಾಜಕೀಯದಿಂದ ಮನಸ್ಸು ವಿರಕ್ತವಾಗಿತ್ತು. ರಾಜದಂಪತಿಗಳಿಂದ ತನಗೆ ದೊರಕಬೇಕಾದ ಗೌರವ ಮತ್ತು ಗೌರವಧನಗಳನ್ನು ಪಡೆಯುವ ಪ್ರಯತ್ನದಲ್ಲಿ ತೊಡಗಿದ್ದು ಕೆಲಕಾಲಾನಂತರ ತನ್ನ ಇಬ್ಬರು ಮಕ್ಕಳ ಎದುರಿನಲ್ಲಿ ಕೊಲಂಬಸ್ ಅಸುನೀಗಿದ.

ಕೊಲಂಬಸ್ ವಲ್ಲಾಡೋಲಿಡ್ ಎಂಬಲ್ಲಿ 30-3-1506ರಂದು ಮೃತನಾದ. ಅವನ ಮೂಳೆಗಳನ್ನು ಸೆವಿಲ್, ಸ್ಯಾಂಟೊಡೋಮಿಂಗೊ ಮತ್ತು ಹವಾನ ನಗರಗಳಿಗೆ ಕೊಂಡೊಯ್ದರು. ತರುವಾಯ 1902ರಲ್ಲಿ ಸೆವಿಲ್‍ನಲ್ಲಿ ಸಮಾಧಿ ಮಂದಿರವನ್ನು ನಿರ್ಮಿಸಿ ಅಲ್ಲಿ ಅವನ ಮೂಳೆಗಳನ್ನು ಹೂಳಿಟ್ಟರು.

ಕೊಲಂಬಸನಿಗೆ ಇಬ್ಬರು ಮಕ್ಕಳು. ಮೊದಲ ಹೆಂಡತಿ ಫಿಲಿಪ್ಪ ಮೋನೀಜ್ ಎಂಬಾಕೆಯ ಮಗ ಡಿಯಾಗೊ. ಮೋನಿಜ್ 1485ರಲ್ಲಿ ಸತ್ತಳಾಗಿ 1486ರಲ್ಲಿ ಕೊಲಂಬಸ್ ಬೀಟ್ರಿಸ್ ಎನ್‍ರಿಕ್ ಎಂಬಾಕೆಯನ್ನು ಮದುವೆಯಾದ. ಅವಳ ಮಗ ಫರ್ಡಿನೆಂಡ್.

ಕೊಲಂಬಸನ ಅನ್ವೇಷಣೆಯ ಮಹತ್ವವು ಅವನ ಮರಣಾನಂತರ ಎಲ್ಲರ ತಿಳಿವಳಿಕೆಗೆ ಬರತೊಡಗಿತು. ಕ್ರಮೇಣ ಐರೋಪ್ಯ ಜನ ಯಾನ ಮಾಡಿ ಉತ್ತರ ಅಮೆರಿಕಗಳಲ್ಲಿ ಹೊಸ ಹೊಸ ವಸಾಹತುಗಳನ್ನು ರೂಢಿಸತೊಡಗಿದರು. ಇಂದಿಗೂ ಸಂಯುಕ್ತ ಸಂಸ್ಥಾನದ 40 ರಾಜ್ಯಗಳಲ್ಲಿ ಪ್ಯೂಯರ್ಟೊ ರಿಕೋನಲ್ಲಿ ಕೊಲಂಬಸ್ ಮೊದಲಬಾರಿ ಹೊಸ ನೆಲಮುಟ್ಟಿದ ದಿನವನ್ನು (ಅಕ್ಟೋಬರ್ 12, 1492) ರಾಷ್ಟ್ರೀಯ ಹಬ್ಬವೆಂದು ಪರಿಗಣಿಸಲಾಗಿದೆ.

ವ್ಯಕ್ತಿತ್ವ

ಕೊಲಂಬಸನ ನೈಜ ವ್ಯಕ್ತಿತ್ವವನ್ನು ತೋರಿಸುವ ಯಾವ ಚಿತ್ರಗಳೂ ಉಳಿದುಬಂದಿಲ್ಲ. ಆತನ ನಿಲುವು ಮಧ್ಯಮ ಎತ್ತರಕ್ಕಿಂತ ಸ್ವಲ್ಪ ಹೆಚ್ಚು ಇತ್ತು. ಮುಖಚರ್ಯೆ ನೀಳವಾಗಿದ್ದು ಮೋಹಕವಾಗಿತ್ತು. ಮೂಗು ನೀಳವಾಗಿ ಹದ್ದಿನ ಕೊಕ್ಕಿನಂತೆ ಬಾಗಿತ್ತು. ಕಣ್ಣುಗಳು ಶುಭ್ರವೂ ನೀಲವೂ ಆಗಿದ್ದುವು. ಅವುಗಳ ಸುತ್ತ ಸ್ವಲ್ಪ ಕೆಂಪುಛಾಯೆ ಇತ್ತು. ತಲೆಗೂದಲು ಮತ್ತು ಗಡ್ಡ ಯೌವನದಲ್ಲಿ ಚಿನ್ನದಂತಿದ್ದರೂ ಬಹುಬೇಗ ಬೆಳ್ಳಗಾಗಿದ್ದವು. -ಇದು ಆತನನ್ನು ಕಂಡವರು ಮಾಡಿರುವ ವರ್ಣನೆ.


ಕೋಲಂಬಸ್ ನಿಂದ ಅಮೇರಿಕದ ಶೋಧ

1476ರಲ್ಲಿ ಯಾವುದೋ ಒಂದು ವ್ಯಾಪಾರಿ ನೌಕೆಯನ್ನೇರಿ ಕೊಲಂಬಸ್ ಲಿಸ್ಬನ್ನಿಗೆ ಬಂದ. ಅಲ್ಲಿ ತನ್ನ ಸಹೋದರನೊಂದಿಗೆ ಕೂಡಿ ಭೂಪಟ, ಜಲಪಟಗಳ ರಚನೆಯಲ್ಲಿ ತಲ್ಲೀನನಾದ. ಪೋರ್ಚುಗಲ್ಲಿನ ಸ್ಯಾಗ್ರೇಸ್ ಎಂಬ ಸಣ್ಣ ಗ್ರಾಮದಲ್ಲಿ ಪ್ರಿನ್ಸ್ ಹೆನ್ರಿ ದಿ ನ್ಯಾವಿಗೇಟರ್ ಸ್ಥಾಪಿಸಿದ ನೌಕಾಶಾಲೆಯನ್ನು ನೋಡಿಬಂದ. ನಡುವೆ ಐಸ್ಲೆಂಡಿನವರೆಗೂ ಯಾನ ಮಾಡಿ ಬಂದ ಈತನಿಗೆ ಪೋರ್ಚುಗೀಸ್ ಜನರ ಯಾನೋತ್ಸಾಹ ಅಮಿತ ಸ್ಫೂರ್ತಿಯನ್ನು ಕೊಟ್ಟಿತು. ಪಶ್ಚಿಮದಿಂದ ಪ್ರಯಾಣಮಾಡಿ ಭಾರತಕ್ಕೊಂದು ಹೊಸ ಹಾದಿಯನ್ನು ಕಂಡುಹಿಡಿಯುವ ವಿಷಯವನ್ನು ಆತ ಪೋರ್ಚುಗಲ್ಲಿನ ದೊರೆ ಎರಡನೆಯ ಜಾನನ ಮುಂದಿಟ್ಟ. (1484). ಒಂದು ವರ್ಷದ ಮೇಲೆ, ತನ್ನ ಬಿನ್ನಪ ಅಂಗೀಕೃತವಾಗಲಿಲ್ಲವೆಂಬ ವಿಷಯವನ್ನು ತಿಳಿದು ಮರುಗಿದ. ಇಂಗ್ಲೆಂಡ್, ಫ್ರಾನ್ಸ್ ದೇಶಗಳ ರಾಜರಿಂದಲೂ ಈತನಿಗೆ ಯಾವ ಸಹಾಯ ದೊರೆಯಲಿಲ್ಲ. ಅನಂತರ ಸ್ಪೇನ್ ದೇಶಕ್ಕೆ ಹೋಗಿ ತನ್ನ ಯೋಜನೆಯನ್ನು ರಾಜದಂಪತಿಗಳಾದ ಫರ್ಡಿನೆಂಡ್ ಮತ್ತು ಇಸಾಬೆಲರಿಗೆ ವಿವರಿಸಿ ಅವರ ಕೃಪೆ ಬೇಡಿದ. ಅಲ್ಲೂ ಕೂಡಲೆ ನೆರವು ದೊರೆಯುವ ಸೂಚನೆ ಕಾಣಲಿಲ್ಲ. ಅಂತೂ ಕೊನೆಗೆ ಸ್ಪೇನಿನ ಶ್ರೀಮಂತನೊಬ್ಬನ ಮಧ್ಯಸ್ಥಿಕೆಯ ಫಲವಾಗಿ ರಾಜದಂಪತಿಗಳು ಕೊಲಂಬಸನಿಗೆ ಬೇಕಾದ ಸಹಾಯ ಸೌಕರ್ಯಗಳನ್ನೆಲ್ಲ ಒದಗಿಸುವುದಾಗಿ ಆಶ್ವಾಸನೆ ನೀಡಿದರು.

ಸ್ಪೇನ್ ದೇಶದ ಉದಾರ ಆಶ್ರಯದಿಂದ ಸಾಂತ ಮೆರಿಯ, ಪಿಂಟ ಮತ್ತು ನಿನಾ ಎಂಬ ಮೂರು ಹಡಗುಗಳನ್ನು ಸಜ್ಜುಗೊಳಿಸಿಕೊಂಡ ಕೊಲಂಬಸ್ ಸುಮಾರು 90 ಮಂದಿ ಸಂಗಡಿಗರೊಡನೆ 1492ನೆಯ ಇಸವಿ ಆಗಸ್ಟ್ 3 ರಂದು ಪಾಲೋಸ್ ರೇವು ಪಟ್ಟಣದಿಂದ ಹೊರಟು ಮಾರ್ಗಮಧ್ಯೆ ಕ್ಯಾನರಿ ದ್ವೀಪಗಳಲ್ಲಿ ತನ್ನ ಹಡಗು ಪರಿವಾರಕ್ಕೆ ಬೇಕಾದ ಆವಶ್ಯಕತೆಗಳನ್ನು ಪೂರೈಸಿಕೊಂಡು ನೇರವಾಗಿ ತನ್ನ ಯಾನವನ್ನು ಪಶ್ಚಿಮದತ್ತ ಮುಂದುವರಿಸಿದ. ಅಂದಿಗೆ ಅಟ್ಲಾಂಟಿಕ್ ಸಾಗರದ ಗೊತ್ತು ಗುರಿಗಳನ್ನು ಯಾರೂ ಕಂಡಿರಲಿಲ್ಲ. ಮೊತ್ತಮೊದಲ ಬಾರಿಗೆ, ಜಲಪಟದ ಸಹಾಯವಿಲ್ಲದೆ, ಹೊಸ ನೀರಿನಲ್ಲಿ ಪ್ರಯಾಣ ಮಾಡಿದ ಕೊಲಂಬಸನ ಧೈರ್ಯ, ಜಾಣ್ಮೆ ಮೆಚ್ಚತಕ್ಕವೆ. ನೆಲವನ್ನಿನ್ನು ಕಾಣಲಾರೆವು ಎಂದು ದುಃಖಿಸಿ ಕಂಗಾಲಾದ ನಾವಿಕರಿಗೆ ಕೊನೆಗೊಮ್ಮೆ ನೆಲದ ದರ್ಶನವಾಯಿತು. ಕೊಲಂಬಸ್ ಸ್ಯಾನ್ ಸಾಲ್ವಡಾಲ್ ದ್ವೀಪವನ್ನು ತಲಪಿ ಅಲ್ಲಿ ಆದಿವಾಸಿಗಳನ್ನೂ ಅವರು ಸೇದುತ್ತಿದ್ದ ಚುಟ್ಟಗಳನ್ನೂ ಕಂಡು ವಿಸ್ಮಿತನಾದ.

ತಾನು ಗುರುತಿಸಿದ ನೆಲ ಅಮೆರಿಕ ಎಂಬ ಪ್ರಜ್ಞೆ ಕೊಲಂಬಸನಿಗೆ ಇರಲಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಅಂದಿಗೆ ಯೂರೋಪಿಗೂ ಏಷ್ಯಾಕ್ಕೂ ಸಂಪರ್ಕವಿದ್ದುದು ಪೂರ್ವದ ಭೂಮಾರ್ಗಗಳಿಂದ ಮಾತ್ರ. ಸಾಂಬಾರ ಪದಾರ್ಥಗಳು, ಶ್ರೀಗಂಧ, ಏಲಕ್ಕಿ, ಮೊದಲಾದವುಗಳ ವ್ಯಾಪಾರವೆಲ್ಲ ಬಹುಪಾಲು ಈ ಮಾರ್ಗಗಳಿಂದಲೇ ನಡೆಯುತ್ತಿದ್ದುವಲ್ಲದೆ ಇವೆಲ್ಲ ಅರಬರ ಕೈಲಿದ್ದುವು. ಆದ್ದರಿಂದ ಪೂರ್ವರಾಷ್ಟ್ರಗಳಿಗೆ ಅದರಲ್ಲೂ ಭಾರತಕ್ಕೆ ಹೊಸದೊಂದು ಮಾರ್ಗವನ್ನು ಕಂಡುಹಿಡಿಯುವುದರ ಕಡೆ ಯೂರೋಪಿನ ಸಾಹಸಿಗಳ ಗಮನ ಹರಿದಿತ್ತು. ಭೂಮಿ ಗುಂಡಾಗಿರುವುದರಿಂದ ಅಟ್ಲಾಂಟಿಕ್ ಸಾಗರದಲ್ಲಿ ನೇರವಾಗಿ ಪಶ್ಚಿಮಕ್ಕೆ ಪ್ರಯಾಣ ಮಾಡಿದಲ್ಲಿ ಏಷ್ಯಾದ ತೀರ ಪ್ರದೇಶವನ್ನು ಮುಟ್ಟಬಹುದೆಂಬ ನಂಬಿಕೆಯಿಂದ ಕೊಲಂಬಸ್ ಯಾನ ಮಾಡಿದ. ಆದ್ದರಿಂದಲೇ ತಾನು ಕಂಡ ದ್ವೀಪಗಳನ್ನು ಇಂಡೀಸ್ ಎಂದೂ ಅಲ್ಲಿನ ಜನರನ್ನು ಇಂಡಿಯನರೆಂದೂ ಕರೆದ. ತಾನು ನಿರ್ವಹಿಸಿದ ನಾಲ್ಕು ಯಾನಗಳಲ್ಲಿ ಈತ ವೆಸ್ಟ್ ಇಂಡೀಸ್ ಗುಂಪಿನ ಹಲವಾರು ದ್ವೀಪಗಳನ್ನು ಕಂಡುಹಿಡಿದನಲ್ಲದೆ, ಟ್ರಿನಿಡ್ಯಾಡ್ ಮತ್ತು ಮಧ್ಯ ಅಮೆರಿಕಗಳಲ್ಲಿ ಕಾಲಿಟ್ಟಿದ್ದ. ಆದರೂ ಟ್ರಿನಿಡ್ಯಾಡಿನ ಆಚೆ ದಕ್ಷಿಣ ಅಮೆರಿಕ, ಮಧ್ಯಅಮೆರಿಕದ ಉತ್ತರದಲ್ಲಿ ಉತ್ತರ ಅಮೆರಿಕ ಖಂಡಗಳು ಇವೆಯೆಂಬ ಅಂಶ ಈತನಿಗೆ ತಿಳಿಯದಾಯಿತು. ಭಾರತಕ್ಕೆ ಜಲಮಾರ್ಗವೊಂದನ್ನು ಕಂಡುಹಿಡಿಯುವ ತನ್ನ ಪ್ರಯತ್ನ ಸಫಲವಾಗಲಿಲ್ಲವಲ್ಲ ಎಂಬ ಕೊರಗು ಇವನಿಗೆ ಕೊನೆಯವರೆಗೂ ಇತ್ತು.

ನಂತರದ ಪ್ರಯಾಣಗಳು

1493ರಲ್ಲಿ ಎರಡನೆಯ ಬಾರಿ ಪ್ರಯಾಣ ಮಾಡಿದ ಕೊಲಂಬಸ್ ಪ್ಯುರ್ಟೊರಿಕೊ, ವರ್ಜಿನ್ ದ್ವೀಪ, ಜಮೇಕಗಳನ್ನು ಗುರುತಿಸಿದ. ಮೂರನೆಯ ಪ್ರಯಾಣದಲ್ಲಿ (1498) ವೆನಿಜ್ವೇಲವನ್ನು ಮುಟ್ಟಿದ. ನಾಲ್ಕನೆಯ ಪ್ರಯಾಣದಲ್ಲಿ (1502) ಹಾಂಡುರಾಸ್ ಅನ್ನು ತಲಪಿದ. ಎರಡು ವರ್ಷಗಳ ಅನಂತರ 1504ರಲ್ಲಿ ಸ್ಪೇನಿಗೆ ಹಿಂತಿರುಗಿದ.


ಕೊಲಂಬಸ್ ನಿಗೆ ದಕ್ಕದ ಅಮೇರಿಕಾ ಶೋಧನೆಯ ಖ್ಯಾತಿ

ಇಷ್ಟಿದ್ದರೂ ಕೊಲಂಬಸನ ಹೆಸರು ಅಮೆರಿಕ ಖಂಡಗಳಿಗೆ ಅಂಟದಿರುವುದು ಸೋಜಿಗದ ಸಂಗತಿಯೇ ಆಗಿದೆ. ಇದಕ್ಕೆ ಇರಬಹುದಾದ ಕಾರಣ ಒಂದೆ. ಕೊಲಂಬಸನ ಸಮಕಾಲೀನನಾದ ಇನ್ನೊಬ್ಬ ಸಾಹಸಿ ಅಮೇರೀಗೋ ವೆಸ್ಪೂಟ್ಚೀ (1454-1512) ಎಂಬಾತ ನಾಲ್ಕು ಬಾರಿ ಅಟ್ಲಾಂಟಿಕ್ ಸಾಗರದಲ್ಲಿ ಯಾನ ಮಾಡಿದನಲ್ಲದೆ 1499ರಲ್ಲಿ ದಕ್ಷಿಣ ಅಮೆರಿಕಾದ ಅಮೆಜಾನ್ ಮುಖಭೂಮಿಯನ್ನು ತಲುಪಿದ. ಅಷ್ಟು ಹೊತ್ತಿಗಾಗಲೆ ಕೊಲಂಬಸನ ಮೂರು ಯಾನಗಳು ಮುಗಿದಿದ್ದುವು. ಆ ಕಾಲಕ್ಕೆ ಭೂಪಟಗಳನ್ನು ತಯಾರಿಸುತ್ತಿದ್ದವರು ವೆಸ್ಪೂಟ್ಚೀಯ ಹೆಸರನ್ನು ಸ್ಥಿರಗೊಳಿಸಲು ಹೊಸಖಂಡಗಳಿಗೆ ಅಮೆರಿಕ ಎಂಬ ನಾಮಕರಣ ಮಾಡಿದರಾಗಿ ಅದೇ ಹೆಸರು ಉಳಿದುಹೋಯಿತು.



ಉಲ್ಲೇಖಗಳು

  1. Portraits of Christopher Columbus - COLUMBUS MONUMENTS PAGES. Vanderkrogt.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.