ಎಮ್.ಎಸ್.ಸ್ವಾಮಿನಾಥನ್
ಎಮ್.ಎಸ್.ಸ್ವಾಮಿನಾಥನ್ (ಜನನ ೭ ಆಗಸ್ಟ್ ೧೯೨೫) ಪ್ರಖ್ಯಾತ ತಳಿಶಾಸ್ತ್ರಜ್ಞ. ಭಾರತದಲ್ಲಿ ಹತ್ತಿ ಮತ್ತು ಭತ್ತದ ಕೃಷಿಯಲ್ಲಿ ಕ್ರಾಂತಿಯನ್ನು ತಂದವರು. ಇವರನ್ನು ಭಾರತದ ಹಸಿರುಕ್ರಾಂತಿಯ ಪಿತಾಮಹ ಎಂದು ಪರಿಗಣಿಸುತ್ತಾರೆ. ಇವರು ಸುಸ್ಥಿರ ಕೃಷಿ, ಸುಸ್ಥಿರ ಆಹಾರ ಭದ್ರತೆ ಮತ್ತು ಜೀವವೈವಿಧ್ಯತೆಯಿಂದ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬಹುದು ಎಂದು ನಂಬಿದವರು. ಇದನ್ನು ಇವರು "ನಿತ್ಯಹರಿದ್ವರ್ಣ ಕ್ರಾಂತಿ" ಎಂದು ಕರೆಯುತ್ತಾರೆ. ಇವರಿಗೆ ೧೯೮೯ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆಯಿತು.
ಎಮ್.ಎಸ್.ಸ್ವಾಮಿನಾಥನ್ | |
---|---|
೧೦೦ ನೆಯ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನಲ್ಲಿ ಡಾ. ಎಮ್.ಎಸ್.ಸ್ವಾಮಿನಾಥನ್. | |
ಜನನ | ಕುಂಭಕೋಣಮ್, ಮದ್ರಾಸ್ ಅಧಿಪತ್ಯ, ಬ್ರಿಟಿಷ್ ಭಾರತ (ಇಂದಿನ ತಮಿಳು ನಾಡು, ಭಾರತ) |
ವಾಸಸ್ಥಳ | ಚೆನ್ನೈ,ತಮಿಳು ನಾಡು |
ರಾಷ್ಟ್ರೀಯತೆ | ಭಾರತ |
ಕಾರ್ಯಕ್ಷೇತ್ರ | ಕೃಷಿ ವಿಜ್ಞಾನ |
ಸಂಸ್ಥೆಗಳು | ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ |
ಅಭ್ಯಸಿಸಿದ ವಿದ್ಯಾಪೀಠ | ಮಹಾರಾಜಾಸ್ ಕಾಲೇಜ್ ತಮಿಳುನಾಡು ಕೃಷಿ ವಿಶ್ವವಿದ್ಯಾಲಯ ಕೇಂಬ್ರಿಜ್ ವಿಶ್ವವಿದ್ಯಾಲಯ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯ |
ಪ್ರಸಿದ್ಧಿಗೆ ಕಾರಣ | ಭಾರತದಲ್ಲಿನ ಗೋಧಿಯ ಉನ್ನತ ಇಳುವರಿಯ ಪ್ರಬೇಧಗಳು |
ಪ್ರಭಾವಗಳು | ನಾರ್ಮನ್ ಬೋರ್ಲಾಗ್ |
ಗಮನಾರ್ಹ ಪ್ರಶಸ್ತಿಗಳು | ಪದ್ಮ ಶ್ರೀ (೧೯೬೭) ಪದ್ಮ ಭೂಷಣ (೧೯೭೨) ಪದ್ಮ ವಿಭೂಷಣ (೧೯೮೯) ವಿಶ್ವ ಆಹಾರ ಪ್ರಶಸ್ತಿ (1987) |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.