ಎನ್.ಕೆ.ಕುಲಕರ್ಣಿ
ಎನ್.ಕೆ , ಎಂದೇ ಸುಪ್ರಸಿದ್ಧರಾದ ಎ.ಕೆ.ಕುಲಕರ್ಣಿಯವರು, ೧೯೧೩ ಅಗಸ್ಟ ೨೯ರಂದು ಗದುಗಿನಲ್ಲಿ ಜನಿಸಿದರು. ಗದುಗಿನಲ್ಲಿ ಆರಂಭದ ಶಿಕ್ಷಣ ಪೂರೈಸಿದ 'ಎನ್ಕೆ' ೧೯೩೬ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಏ.(ಕನ್ನಡ ಆನರ್ಸ್) ಪದವಿಯನ್ನು ಹಾಗು ವಿದ್ಯಾರಣ್ಯ ಪಾರಿತೋಷಕವನ್ನು ಪಡೆದರು. ೧೯೩೮ರಲ್ಲಿ ಕನ್ನಡ ಹಾಗು ಸಂಸ್ಕೃತದಲ್ಲಿ ಎಮ್.ಏ. ಪದವಿಯನ್ನು ಪಡೆದರು. ೧೯೪೦ ರಲ್ಲಿ ಬಿ.ಟಿ. ಪದವಿ ಪಡೆದು ಧಾರವಾಡದ ಕೆ.ಇ.ಬೋರ್ಡ್ಸ ಹೈಸ್ಕೂಲದಲ್ಲಿ ಶಿಕ್ಷಕ ವೃತ್ತಿಯನ್ನು ಕೈಗೊಂಡರು. ೧೯೪೩ ರಿಂದ ೧೯೪೬ ರವರೆಗೆ ಕನ್ನಡ ಸಂಶೋಧನ ಸಂಸ್ಥೆಯಲ್ಲಿ ಕುಮಾರವ್ಯಾಸನ ಕುರಿತು ಸಂಶೋಧನೆ ಮಾಡಿ ಪ್ರಬಂಧರಚನೆ ಮಾಡಿದರು. ೧೯೪೬ ಸಪ್ಟಂಬರ ೧ ರಂದು ಎನ್.ಕೆ.ಕುಲಕರ್ಣಿಯವರು ಮುಂಬಯಿಯ ಆಲ್ ಇಂಡಿಯಾ ರೇಡಿಯೊ ದಲ್ಲಿ ಅನೌನ್ಸರ್ ಮತ್ತು ಸ್ಟಾಫ್ ಆರ್ಟಿಸ್ಟ್ ಎಂದು ಕೆಲಸಕ್ಕೆ ಸೇರಿಕೊಂಡರು. ೧೯೭೧ ರಲ್ಲಿ ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮ ನಿರ್ವಾಹಕರಾಗಿ ನಿವೃತ್ತರಾದರು.
ಎನ್.ಕೆ.ಕುಲಕರ್ಣಿ | |
---|---|
ಜನನ | ಕುಲಕರ್ಣಿ ಎನ್.ಕೆ.ಕುಲಕರ್ಣಿಯವರು ೧೯೧೩ ಅಗಸ್ಟ ೨೯ರಂದು ಗದುಗಿನಲ್ಲಿ ಜನಿಸಿದರು. |
ರಾಷ್ಟ್ರೀಯತೆ | ಭಾರತೀಯ |
Other names | ೧೯೮೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೫೫ ರಲ್ಲಿ 'ಮಂದಿರ ಪ್ರವೇಶ' ನಾಟಕಕ್ಕೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಪುರಸ್ಕಾರ ೨೦೦೪ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ |
ವಿದ್ಯಾಭ್ಯಾಸ | ಗದುಗಿನಲ್ಲಿ ಆರಂಭದ ಶಿಕ್ಷಣ ಪೂರೈಸಿದ 'ಎನ್ಕೆ' ೧೯೩೬ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ.(ಕನ್ನಡ ಆನರ್ಸ್) ಪದವಿಯನ್ನು ಹಾಗು ವಿದ್ಯಾರಣ್ಯ ಪಾರಿತೋಷಕವನ್ನು ಪಡೆದರು.೧೯೩೮ರಲ್ಲಿ ಕನ್ನಡ ಹಾಗು ಸಂಸ್ಕೃತದಲ್ಲಿ ಎಂ.ಎ. ಪದವಿಯನ್ನು ಪಡೆದರು. ೧೯೪೦ ರಲ್ಲಿ ಬಿ.ಟಿ. ಪದವಿ |
ವೃತ್ತಿ | ಧಾರವಾಡದ ಕೆ.ಇ.ಬೋರ್ಡ್ಸ ಹೈಸ್ಕೂಲದಲ್ಲಿ ಶಿಕ್ಷಕ ವೃತ್ತಿಯನ್ನು ಕೈಗೊಂಡರು.೧೯೪೬ ಸಪ್ಟಂಬರ ೧ ರಂದು ಮುಂಬಯಿಯ ಆಲ್ ಇಂಡಿಯಾ ರೇಡಿಯೊ ದಲ್ಲಿ ಅನೌನ್ಸರ್ ಮತ್ತು ಸ್ಟಾಫ್ ಆರ್ಟಿಸ್ಟ್ ಎಂದು ಕೆಲಸಕ್ಕೆ ಸೇರಿಕೊಂಡರು. ೧೯೭೧ ರಲ್ಲಿ ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮ ನಿರ್ವಾಹಕರಾಗಿ ನಿವೃತ್ತರಾದರು. |
Known for | ೧೯೪೩ ರಿಂದ ೧೯೪೬ ರವರೆಗೆ ಕನ್ನಡ ಸಂಶೋಧನ ಸಂಸ್ಥೆಯಲ್ಲಿ ಕುಮಾರವ್ಯಾಸನ ಕುರಿತು ಸಂಶೋಧನೆ ಮಾಡಿ ಪ್ರಬಂಧರಚನೆ ಮಾಡಿದರು. |
ಎನ್ಕೆ ಸಾಹಿತ್ಯ
ಕಾದಂಬರಿ
- ಸಾವಿನ ಉಡಿಯಲ್ಲಿ
- ಎರಡನೆಯ ಸಂಬಂಧ
- ವೈನಿ
- ಕಲೋಪಜೀವಿ
- ಗೌರಿ ಶಂಕರ
- ಮೂರು ತಲೆಮಾರು
- ಲಲಿತಾ
- ವಲ್ಲಿ
- ವಿಧುರ ವೈರಾಗ್ಯ
- ಧಾರವಾಡದ ದತ್ತು ಮಾಸ್ತರ
ಏಕಾಂಕ ಸಂಗ್ರಹಗಳು
- ಇಲೆಕ್ಷನ್
- ನಡುಮನೆಯಲ್ಲಿ
- ಬೆಳ್ಳಿಯ ಹಬ್ಬ
- ಎನ್ಕೆ ಏಕಾಂಕಗಳು
- ಅಧಃಪಾತ
- ಕಾವ್ಯದ ಕಾರಖಾನೆ
- ಬುಶ್‍ಕೋಟು
- ಠಕ್ಕ ಠಕ್ಕಿ
- ಏಕಾಂಕ ಮಾಲಿಕೆ
- ಕಾಲಾಯ ತಸ್ಮೈ ನಮಃ
- ಪ್ರಾಣ ತುಂಬದ ಪಾತ್ರ
- 'ಎನ್ಕೆ' ಏಕಪಾತ್ರ ದ್ವಿಪಾತ್ರಗಳು
- ಸೇತು
- ಪತಿಯಲ್ಲಿ ಪರಮ ವೈರಿ
ನಾಟಕಗಳು
- ಮಂದಿರ ಪ್ರವೇಶ
- ವಿದ್ಯಾ
- ಹಸ್ತಾಂತರ
- ಕರೇ ಹೆಂಡತಿ ಆದರೆ ಖರೇ ಹೆಂಡತಿ
ಹರಟೆ
- ಮುಂಗಾಲ ಪುಟಿಗೆ
- ತ್ರಿಶೂಲಗಳು (ವಿವಿಧ ಲೇಖಕರು)
- ಎನ್ಕೆ ಬರಹಗಳು
- ಮೋಡಕಾ ಬಾಜಾರ
- ಎನ್ಕೆ ಲಲಿತ ಪ್ರಬಂಧಗಳು
ವಿಮರ್ಶೆ
- ಸಾಹಿತ್ಯವಾಹಿನಿ
- ಕುಮಾರವ್ಯಾಸ ಮತ್ತು ಕೃಷ್ಣಕಥೆ
- ಕುಮಾರವ್ಯಾಸ ಭಾರತ (ಗದ್ಯಸಾರ)
- ಕುಮಾರವ್ಯಾಸ ಕೋಶ
- ಗದುಗಿನ ಗಂಡುಕವಿ ಕುಮಾರವ್ಯಾಸ
- ಕನ್ನಡ ವ್ಯಾಸಭಾರತ
- ಕುಮಾರವ್ಯಾಸನ ಕೃಷ್ಣ
- ಕನ್ನಡದಲ್ಲಿ ಮಹಾಭಾರತಗಳು ಮತ್ತು ಇತರ ವಿಮರ್ಶಾ ಪ್ರಬಂಧಗಳು
ಜೀವನ ಪರಿಚಯ
- ಲೋಕೂರ ನಾರಾಯಣರಾಯರು
- ಗರೂಡ ಸದಾಶಿವರಾಯರು
- ವಾಮನರಾವ ಮಾಸ್ತರ
- ಬಂಕಿಮಚಂದ್ರರು
- ಗಾನರತ್ನ ಗುಳೇದಗುಡ್ಡ ಗಂಗೂಬಾಯಿ
- ಖಾನ್‍ಸಾಹೇಬ ಅಬ್ದುಲ್ ಕರೀಂಖಾನ್
- ಸಂಗೀತಪುಂಗವ ಸವಾಯಿ ಗಂಧರ್ವ
- ಹುಕ್ಕೇರಿ ಮಾಸ್ತರ
- ಸಾವಿರದ ವರಕವಿ ಬೇಂದ್ರೆ
- ಸಿ.ಸಿ.ಹುಲಕೋಟಿ
- ಶ್ರೀರಂಗರೊಡನೆ ಐವತ್ತು ವರ್ಷ
- ಮಡಿವಾಳೇಶ್ವರ ತುರಮುರಿ
- ಶ್ರೀರಂಗ
- ಸ.ಸ.ಮಾಳವಾಡ
- ನನ್ನ ಬದುಕಿನ ಹಾಡು (ಗಂಗೂಬಾಯಿ ಹಾನಗಲ್‍ರನ್ನು ಕುರಿತು ನಿರೂಪಣೆ)
ಇತರ ಸಾಹಿತ್ಯ
- ಬಾನುಲಿ ಬರವಣಿಗೆ
- ನಾ.ದ.ಸಂವಾದ
- ಕೃಷ್ಣಾ ನದಿ
- ಭಾರತೀಯ ಧರ್ಮಪರಂಪರೆ ಮತ್ತು ಭಗವಾನ್ ಶ್ರೀ ಅರವಿಂದರ ದರ್ಶನ
- ಶ್ರೀ ಅರವಿಂದರ ಕಲ್ಪನೆಯ ಸಮಗ್ರ ಶಿಕ್ಷಣ
- ವಿನಾಯಕ ಮಹಾದರ್ಶನ
- ಎನ್ಕೇನ ಪ್ರಕಾರೇಣ
- ಕನ್ನಡ ಮಹಾಭಾರತಗಳು ಮತ್ತು ಇತರ ಸಾಹಿತ್ಯ ಪ್ರಬಂಧಗಳು
- ನಾನಿಯ ನೆನಹುಗಳು
ಪುರಸ್ಕಾರ
- ೧೯೮೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ೧೯೫೫ರಲ್ಲಿ 'ಮಂದಿರ ಪ್ರವೇಶ' ನಾಟಕಕ್ಕೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಪುರಸ್ಕಾರ
- ೨೦೦೪ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ