ಅರ್ನೆಸ್ಟ್ ರುದರ್‍ಫೋರ್ಡ್
ಅರ್ನೆಸ್ಟ್ ರುದರ್‌ಫೋರ್ಡ್ ರವರು (೩೦ ಆಗಸ್ಟ್ ೧೮೭೧ - ೧೯ ಅಕ್ಟೋಬರ್ ೧೯೩೭) ಪರಮಾಣು ಭೌತಶಾಸ್ತ್ರದ ಪಿತಾಮಹನೆಂದು ಹೆಸರುವಾಸಿಯಾದವರು.ಇವರು ಪರಮಾಣುವಿನ ಮೂಲಸ್ವರೂಪವನ್ನು ನಿರೂಪಿಸಿದವರಲ್ಲಿ ಮೊದಲಿಗರು.
ಅರ್ನೆಸ್ಟ್ ರುದರ್‍ಫೋರ್ಡ್ | |
---|---|
![]() ಅರ್ನೆಸ್ಟ್ ರುದರ್ಫೋರ್ಡ್ | |
ಜನನ | ಅಗಸ್ಟ್ 30, 1871 ಬ್ರೈಟ್‌ವಾಟರ್, ನ್ಯೂಜಿಲ್ಯಾಂಡ್ |
ಮರಣ | October 19, 1937 ಕೆಂಬ್ರಿಡ್ಜ್, ಇಂಗ್ಲೆಂಡ್ |
ವಾಸ | ಇಂಗ್ಲೆಂಡ್, ಕೆನಡ |
ರಾಷ್ಟ್ರೀಯತೆ | ನ್ಯೂಜಿಲ್ಯಾಂಡ್ |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರಜ್ಞ |
ಸಂಸ್ಥೆಗಳು | ಮ್ಯಾಕ್ ಗಿಲ್ ವಿಶ್ವವಿದ್ಯಾಲಯ,ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ |
ಅಭ್ಯಸಿಸಿದ ಸಂಸ್ಥೆ | ಕ್ಯಾಂಟರ್ಬರಿ ವಿಶ್ವವಿದ್ಯಾಲಯ, ಕೆಂಬ್ರಿಡ್ಜ್ ವಿಶ್ವವಿದ್ಯಾಲಯ |
ಡಾಕ್ಟರೆಟ್ ಸಲಹೆಗಾರರು | ಜೆ.ಜೆ.ಥಾಮ್ಸನ್ |
ಡಾಕ್ಟರೆಟ್ ವಿದ್ಯಾರ್ಥಿಗಳು | ನೀಲ್ಸ್ ಬೋಹ್ರ್,ಜೇಮ್ಸ್ ಚಾಡ್ವಿಕ್ |
ಪ್ರಸಿದ್ಧಿಗೆ ಕಾರಣ | ಪರಮಾಣು ಭೌತಶಾಸ್ತ್ರದ ಪಿತಾಮಹ,ರುದರ್‌ಫೋರ್ಡ್ ಮಾದರಿ,ರುದರ್‌ಫೋರ್ಡ್ ಚದುರುವಿಕೆ,ಪ್ರೊಟಾನ್ ನ ಕಂಡುಹಿಡಿಯುವಿಕೆ |
ಗಮನಾರ್ಹ ಪ್ರಶಸ್ತಿಗಳು | ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ-೧೯೦೮ |
ಜೀವನ ಚರಿತ್ರೆ
ಅರ್ನೆಸ್ಟ್ ರುದರ್ ಫೋರ್ಡ್ ನ್ಯೂಜಿಲ್ಯಾಂಡಿನ ಪ್ರಖ್ಯಾತ ವಿಜ್ಞಾನಿ. ಇವರು ೧೮೭೧ ರ ಆಗಸ್ಟ್ ೩ ೦ ರಂದು ಜನಿಸಿದರು. ರುದರ್‌ಫೋರ್ಡ್‌ರವರು ನ್ಯೂಜಿಲ್ಯಾಂಡ್ನ ನೆಲ್ಸನ್ ಎಂಬ ಊರಿನಲ್ಲಿ ಜನಿಸಿದರು.ಮಾಂಟ್ರಿಯಲ್,ಕೆಂಬ್ರಿಡ್ಜ್,ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡಿದರು.೧೯೦೩ರಲ್ಲಿ ಫೆಲೋ ಅಫ್ ರಾಯಲ್ ಸೊಸೈಟಿ ಆಗಿ ಆಯ್ಕೆಯಾದರು.೧೯೦೮ರಲ್ಲಿ ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದರು.[1] ಚಿಕ್ಕಂದಿನಿಂದಲೂ ಇವರಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯಿತ್ತು. ಇವರು ವಿಕಿರಣ ವಸ್ತುಗಳು ಮೂರು ವಿಭಿನ್ನ ಕಿರಣಗಳನ್ನು ಹೊರಚಿಮ್ಮಿಸುತ್ತವೆ, ಈ ಕಿರಣಗಳಲ್ಲಿ ಕೆಲವು ಆಲ್ಫಾ ಕಿರಣಗಳಿದ್ದು ಇನ್ನು ಕೆಲವು ಬೀಟಾ ಕಿರಣಗಳು ಎಂದು ರುದರ್ ಫೋರ್ಡ್ ಕರೆದರು. ಆಲ್ಫಾ ಕಿರಣಗಳ ನೆರವಿನಿಂದ ಪರಮಾಣುವನ್ನು ಅಭ್ಯಾಸ ಮಾಡಿ ಅದರ ಬಹಳಷ್ಟು ದ್ರವ್ಯರಾಶಿಯಲ್ಲಿ ನ್ಯೂಕ್ಲಿಯಸ್ ಇರುತ್ತೆಂದು ಕಂಡು ಹಿಡಿದರು.[2]
ಸಾಧನೆಗಳು
ರುದರ್ ಫೋರ್ಡ್ ೧೯೦೮ ರಲ್ಲಿ ವಿಕಿರಣ ವಸ್ತುಗಳ ಕುರಿತು ನಡೆಸಿದ ಅಧ್ಯಯನಕ್ಕಾಗಿ ರಸಾಯನ ಶಾಸ್ತ್ರದ ನೋಬಲ್ ಪ್ರಶಸ್ತಿಯನ್ನು ಪಡೆದರು. ಇವರು ಪರಮಾಣುಗಳು ಸ್ಥಿರವಾಗಿರಬೇಕಿಲ್ಲ, ಅವು ವಿಭಜನೆ ಹೊಂದಬಹುದು ಎಂಬುದನ್ನು ತಮ್ಮ ಅನೇಕ ಪ್ರಯೋಗಗಳ ಮೂಲಕ ತಿಳಿಸಿಕೊಟ್ಟರು. ಇವರು ೧೯೨೫ ರಿಂದ ೧೯೩೦ ರ ವರೆಗೆ ರುದರ್ ಫೋರ್ಡ್ ರಾಯಲ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ೧೯೩೧ರಲ್ಲಿ ಇವರಿಗೆ ನೆಲ್ಸನ್ ಆಫ್ ಬ್ಯಾರನ್ ಪದವಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಗಳು
- ೧೯೦೮ ರಲ್ಲಿ ನೋಬೆಲ್ ಪ್ರಶಸ್ತಿ.
- ೧೯೩೧ ರಲ್ಲಿ ಬ್ಯಾರನ್ ರುದರ್‌ಫೋರ್ಡ್ ಆಫ್ ನೆಲ್ಸನ್ ಪ್ರಶಸ್ತಿ.