ಅಬ್ರಹಮ್ ಲಿಂಕನ್

ಅಬ್ರಹಾಮ್ ಲಿಂಕನ್ ಅಮೇರಿಕಾದ ಅಧ್ಯಕ್ಷರಾಗಿದ್ದವರು. ಇವರು ಅಮೇರಿಕಾದ ಅಭಿವೃದ್ದಿಗಾಗಿ ಹೋರಾಡಿ ಬ್ಯಾಂಕ್, ಕಾಲುವೆ, ರೈಲ್ಮಾರ್ಗ ಹಾಗು ಕಾರ್ಖಾನೆಗಳ ನಿರ್ಮಾಣವನ್ನು ಪ್ರೋತ್ಸಾಹಿಸಿದರು.

ಅಬ್ರಹಮ್ ಲಿಂಕನ್


ಅಧಿಕಾರದ ಅವಧಿ
ಮಾರ್ಚ್ ೪, ೧೮೬೧  ಏಪ್ರಿಲ್ ೧೫, ೧೮೬೫
ಉಪ ರಾಷ್ಟ್ರಪತಿ   ಹ್ಯಾನಿಬಾಲ್ ಹ್ಯಾಮ್ಲಿನ್
(೧೮೬೧-೧೮೬೫)
ಆಂಡ್ಯ್ರೂ ಜಾನ್ಸನ್
(೧೮೬೫)
ಪೂರ್ವಾಧಿಕಾರಿ ಜೇಮ್ಸ್ ಬುಕಾನನ್
ಉತ್ತರಾಧಿಕಾರಿ ಆಂಡ್ರ್ಯೂ ಜಾಕ್ಸನ್

ಜನನ 12 ಫೆಬ್ರುವರಿ 1809
ಹಾರ್ಡಿನ್ ಕೌಂಟಿ, ಕೆಂಟಕಿ
ಮರಣ ಏಪ್ರಿಲ್ 15, 1865(1865-04-15) (ವಯಸ್ಸು 56)
ವಾಷಿಂಗ್ಟನ್ ಡಿ.ಸಿ.
ರಾಜಕೀಯ ಪಕ್ಷ ವಿಗ್ (೧೮೩೨-೧೮೫೪), ರಿಪಬ್ಲಿಕನ್ (೧೮೫೪-೧೮೬೪), ನ್ಯಾಷನಲ್ ಯೂನಿಯನ್ (೧೮೬೪-೧೮೬೫)
ಜೀವನಸಂಗಾತಿ ಮೇರಿ ಟಾಡ್ ಲಿಂಕನ್
ಧರ್ಮ See: Abraham Lincoln and religion
ಹಸ್ತಾಕ್ಷರ

ಸಂಸ್ಥಾನದ ಏಕೀಕರಣ

ವಿವಿಧ ಉದ್ಯೋಗ

  • ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಲಿಂಕನ್ ಇಲಿಯೊನಿಸ್ ರಾಜ್ಯದಲ್ಲಿ ಸ್ವಶಿಕ್ಷಿತ ವಕೀಲರಾಗಿ, ೧೮೩೦ರಲ್ಲಿ ರಾಜ್ಯ ಶಾಸಕರಾಗಿ, ೧೮೪೦ರಲ್ಲಿ ಕಾಂಗ್ರೆಸ್ಸ್ ಪಕ್ಷದ ಸದಸ್ಯರಾಗಿದ್ದರು. ಇವರು ಅಮೇರಿಕಾದ ಅಭಿವೃದ್ದಿಗಾಗಿ ಹೋರಾಡಿ ಬ್ಯಾಂಕ್, ಕಾಲುವೆ, ರೈಲ್ಮಾರ್ಗ ಹಾಗು ಕಾರ್ಖಾನೆಗಳ ನಿರ್ಮಾಣವನ್ನು ಪ್ರೋತ್ಸಾಹಿಸಿದರು. ೧೮೪೬ರಲ್ಲಿ ಮೆಕ್ಸಿಕೋ ವಿರುದ್ಧ ಯುದ್ಧ ನಡೆಸಲು ವಿರೋಧಿಸಿದರು. ೧೮೫೮ರಲ್ಲಿ ಗುಲಾಮಗಿರಿಯನ್ನು ತೆಗೆದುಹಾಕಬೇಕೆಂದು ಸರಣಿ ವಾದಗಳನ್ನು ನಡೆಸಿ ಅಮೇರಿಕ ಸೆನೇಟ್ ಸೀಟಿಗೆ ಸ್ಟೀಫನ್.ಎ.ಡೌಗ್ಲಾಸ್ ವಿರುದ್ಧ ಸೋತರು. ಅದೇ ೧೮೬೦ರಲ್ಲಿ ಅವರು ಎದುರು ರಾಷ್ತ್ರಪತಿ ಚುನಾವಣೆಯಲ್ಲಿ ಗೆದ್ದರು.
  • ಈ ಸಮಯಕ್ಕಾಗಲೆ ಯು.ಎಸ್ ದೇಶದ ಉತ್ತರ ಹಾಗು ದಕ್ಷಿಣ ಭಾಗಗಳು ಬೇರೆ ಆಗಿದ್ದವು. ಇದನ್ನು ಒಂದು ಮಾಡಿ ಅಮೇರಿಕದ ಅಂತಃಕಲಹವನ್ನು ನಿಲ್ಲಿಸಬೇಕೆಂಬ ಆಸೆಯಿಂದ ೧೮೬೩ರಲ್ಲಿ ಎಮಾಂಸಿಪೇಶನ್ ಪ್ರೊಕ್ಲಮೇಷನ್, ಇದಕ್ಕೆ ರುಜು ಹಾಕಿದರು. ಇದು ಯು.ಎಸ್ ಸೈನ್ಯ ಗುಲಾಮರನ್ನು ಕಾಪಾಡಿ, ಗಡಿ ರಾಜ್ಯಗಳು ಗುಲಾಮರನ್ನು ಇಟ್ಟುಕೊಳ್ಳಬಾರದೆಂದು ಘೋಶಿಸಿತು. ಇದರಿಂದ ಸ್ವಲ್ಪ ಮಟ್ಟಿಗೆ ಯುದ್ಧ ಸಮಾಧಾನಿಸಿತು.

ಗುಲಾಮಗಿರಿಯ ಅಂತ್ಯ

  • ೧೮೬೪ನ ರಾಷ್ಟ್ರಪತಿ ಚುನಾವಣೆಯಲ್ಲು ಗೆದ್ದು ಎರಡನೇ ಬಾರಿಗೆ ರಾಷ್ಟ್ರಪತಿಯಾದರು. ಇವರು ೧೮೬೩ರಲ್ಲಿ ಗೆಟ್ಟಿಸ್ಬರ್ಗ್ ಅಡ್ರೆಸ್ನಲ್ಲಿ ಮಾಡಿದ ಭಾಷಣ ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಸಮಾನ ಹಕ್ಕುಗಳು, ಸ್ವಾತಂತ್ರ್ಯ, ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿದಿದೆ. ಆದರೆ ದಕ್ಷಿಣ-ಉತ್ತರ ಸೈನಿಕರು ಪ್ರತಿದಿನ ಸಾಯುತ್ತಿದ್ದರು. ಅಂತಃಕಲಹ ನಿಲ್ಲಲೇ ಇಲ್ಲ. ಆಗ ಲಿಂಕನ್ ಮುಂತಾದ ರಿಪಬ್ಲಿಕನ್ ನಾಯಕರು ೧೮೬೫ರಲ್ಲಿ ಅಮೇರಿಕಾದ ಸಂವಿಧಾನಕ್ಕೆ ೧೩ನೇ ತಿದ್ದುಪಡಿ ತಂದರು. ಇದು ಗುಲಾಮಗಿರಿಯ ಅಂತ್ಯವಾಯಿತು[1].[2]

[3] ಇದರಿಂದ

ವಿವರ

ಅಬ್ರಹಾಮ್ ಲಿಂಕನ್ ರ ಧೃಡತೆ

  • ಲಿಂಕನ್ ಅಧ್ಯಕ್ಷರಾಗುತ್ತಿದ್ದಂತೆ, ಆ ಮುಂಚೆ ಮೂದಲಿಸುತ್ತಿದ್ದ ಅನೇಕ ಪತ್ರಿಕೆಗಳು ಹೊಗಳಿಕೆಯ ತೋರಣ ಕಟ್ಟಿದವು. ಆದರೆ ಅವರ ಶರೀರ ಸೌಂದರ್ಯದ ಬಗ್ಗೆ ಅಪಹಾಸ್ಯ ಮಾಡುವುದನ್ನು ಬಿಟ್ಟುಕೊಡಲಿಲ್ಲ. ಆರು ಅಡಿ ಎತ್ತರದ ಸೊರಗಿದ ದೇಹ, ನೀಳ ತೋಳು, ಗುಳಿಬಿದ್ದ ಕಣ್ಣುಗಳು, ಉದ್ದನೆಯ ಮೂಗು, ಸುಕ್ಕುಗಟ್ಟಿದ ಚರ್ಮ, ಫ್ರೆಂಚ್ ಗಡ್ಡ ಅಪಹಾಸ್ಯಕ್ಕೆ ವಸ್ತುವಾಗುತ್ತಿತ್ತು.
  • ಸಾಮಾಜಿಕವಾಗಿ ವೈಫಲ್ಯ ಹೊಂದಿದ, ಉಡುಪುಗಳ ಬಗ್ಗೆ ಕಾಳಜಿ ತೋರದ, ಸೌಂದರ್ಯ ಪ್ರಜ್ಞೆಯಿರದ ಅಧ್ಯಕ್ಷರೊಂದಿಗೆ ವಾಷಿಂಗ್ಟನ್ ನಗರದ ಪ್ರಥಮ ದರ್ಜೆ ಪ್ರಜೆಗಳು ಹೇಗೆ ಒಡನಾಡುತ್ತಾರೋ ಎಂದು ಪತ್ರಿಕೆಗಳು ಬರೆದಿದ್ದವು. ಈ ಎಲ್ಲಾ ಅಪಹಾಸ್ಯ, ಕೊಂಕುನುಡಿಗಳ ನಡುವೆ ಜನರ ಮನಸ್ಸಿನಲ್ಲಿ ಲಿಂಕನ್ ಬೆಳೆದದ್ದು ಅವರು ಕೈಗೊಂಡ ಕ್ರಮಗಳಿಂದ.
  • ಅದಾಗಲೇ ಅಭಿವೃದ್ಧಿ ಪರ ಚಿಂತನೆಗಳನ್ನು ಸಾದರಪಡಿಸಿದ್ದ ಲಿಂಕನ್, ಸೇತುವೆ, ಹೆದ್ದಾರಿಗಳ ನಿರ್ಮಾಣ, ಬ್ಯಾಂಕಿಂಗ್ ವ್ಯವಸ್ಥೆಗೆ ಉತ್ತೇಜನ ನೀಡುವ ಮೂಲಕ ಜನಮನ ಗೆದ್ದಿದ್ದರು. ಆರಂಭದಿಂದಲೂ ನೈತಿಕ ನೆಲೆಗಟ್ಟಿನಲ್ಲಿ ಗುಲಾಮಗಿರಿಯನ್ನು ವಿರೋಧಿಸುತ್ತಾ ಬಂದಿದ್ದ ಲಿಂಕನ್, ಆ ಬಗ್ಗೆ ಸ್ಪಷ್ಟ ರಾಜಕೀಯ ನಿಲುವು ತಳೆಯುವ ಜರೂರಿತ್ತು.
  • 1961ರ ಫೆಬ್ರುವರಿ 22ರಂದು, ಜಾರ್ಜ್ ವಾಷಿಂಗ್ಟನ್ ಹುಟ್ಟುಹಬ್ಬದ ದಿನ ಮಾತನಾಡಿದ್ದ ಲಿಂಕನ್ ‘ನಾನು ಪ್ರಾಣಾರ್ಪಣೆಗೆ ಸಿದ್ಧನಾಗುತ್ತೇನೆಯೇ ಹೊರತು, ವ್ಯಕ್ತಿ ಸ್ವಾತಂತ್ರ್ಯದ ಪರವಾದ ನನ್ನ ಚಿಂತನೆಗಳನ್ನು ಬಿಟ್ಟುಕೊಡುವುದಿಲ್ಲ’ ಎಂದಿದ್ದರು.

ಲಿಂಕನ್ ಅವರ ಈ ಧೋರಣೆಯಿಂದ ಕಳವಳಗೊಂಡ ದಕ್ಷಿಣದ ಏಳು ರಾಜ್ಯಗಳು, ಅಮೆರಿಕ ಸಂಯುಕ್ತ ಒಕ್ಕೂಟದಿಂದ ಹೊರಬಂದು ಪ್ರತ್ಯೇಕ ಒಕ್ಕೂಟ ರಚಿಸಿಕೊಳ್ಳುವ ಘೋಷಣೆ ಮಾಡಿದವು.

  • ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಅಂತರ್ಯುದ್ಧ ಪ್ರಾರಂಭವಾಯಿತು. ಅದು ಅಮೆರಿಕ ಎದುರಿಸಿದ ಸಂಕಷ್ಟದ ದಿನಗಳು. ಏಳರ ಜೊತೆಗೆ ಮತ್ತೂ ನಾಲ್ಕು ರಾಜ್ಯಗಳು ಸೇರಿ ಪ್ರತ್ಯೇಕತೆಯ ಕೂಗು ಗಟ್ಟಿಯಾಯಿತು. ಅಮೆರಿಕದ ವಿಭಜನೆಯನ್ನು ತಪ್ಪಿಸಿ ರಾಷ್ಟ್ರದ ಏಕತೆಯನ್ನು ಪುನರ್ ಸ್ಥಾಪಿಸುವ ಹೊಣೆಗಾರಿಕೆ ಲಿಂಕನ್ ಮೇಲಿತ್ತು.
  • ಅಧಿಕಾರದ ಆರಂಭದ ದಿನಗಳಲ್ಲಿ ಗುಲಾಮಗಿರಿ ಇದ್ದ ಪ್ರಾಂತ್ಯಗಳಲ್ಲಿ ಅದನ್ನು ಮುಂದುವರಿಯಲು ಬಿಟ್ಟು, ಇತರ ಪ್ರಾಂತ್ಯಗಳಿಗೆ ಹರಡದಂತೆ ನೋಡಿಕೊಳ್ಳುವ ನಿಲುವನ್ನು ಲಿಂಕನ್ ತಳೆದಿದ್ದರಾದರೂ, 1863ರ ಹೊತ್ತಿಗೆ, ಅಂತರ್ಯುದ್ಧದ ರಣತಂತ್ರದ ಭಾಗವಾಗಿ, ಗುಲಾಮಗಿರಿಯನ್ನು ಸಂಪೂರ್ಣವಾಗಿ ಅಳಿಸಿಹಾಕುವ ಐತಿಹಾಸಿಕ ‘ಗುಲಾಮಗಿರಿ ವಿಮೋಚನಾ ಮಸೂದೆ’ಯನ್ನು ಸಂಸತ್ತಿನಲ್ಲಿ ಮಂಡಿಸಿದರು.
  • ಮಸೂದೆ ಜಾರಿಗೆ ಅಗತ್ಯವಿದ್ದ, ಎರಡೂ ಸಂಸದೀಯ ಮನೆಗಳ ಒಪ್ಪಿಗೆ ದೊರೆಯದಿದ್ದಾಗ, ಲಿಂಕನ್ ‘ನಾನು ಅಮೆರಿಕದ ಅಧ್ಯಕ್ಷ. ಸಂವಿಧಾನದ ಅನ್ವಯ ಪರಮಾಧಿಕಾರವಿದೆ. ಗುಲಾಮಗಿರಿ ಅಂತ್ಯಗೊಳಿಸುವ ಈ ಮಸೂದೆ ಅಸಂಖ್ಯ ಗುಲಾಮರ ಭವಿಷ್ಯವನ್ನಷ್ಟೇ ಅಲ್ಲ, ಮುಂದಿನ ಪೀಳಿಗೆಯ ಭವಿಷ್ಯವನ್ನೂ ನಿರ್ಧರಿಸುತ್ತದೆ. ಈ ಮಸೂದೆ ಎಲ್ಲರ ಸಹಮತದಿಂದ ಅಂಗೀಕಾರವಾಯಿತು ಎಂದು ಇತಿಹಾಸ ನೆನಪಿಟ್ಟುಕೊಳ್ಳಲಿ ಎಂಬ ಇಚ್ಛೆ ನನ್ನದು.
  • ನೀವೆಲ್ಲರೂ ಸಹಮತದಿಂದ ಇದನ್ನು ಅನುಮೋದಿಸುತ್ತೀರಿ ಎಂದು ನಂಬಿದ್ದೇನೆ’ ಎಂಬ ಮಹತ್ವದ ಭಾಷಣ ಮಾಡಿದರು. ಸದನ ತಲೆದೂಗಿತು. ಲಿಂಕನ್ ಅವರ ಈ ದಿಟ್ಟ ನಿಲುವಿನಿಂದ ಗುಲಾಮಗಿರಿ ಅಂತ್ಯವಾಯಿತು. ನಾಲ್ಕು ವರ್ಷಗಳು ನಡೆದ ಅಂತರ್ಯುದ್ಧದ ಪರಿಣಾಮ ಸುಮಾರು ಆರು ಲಕ್ಷ ಸೈನಿಕರು ಪ್ರಾಣತೆತ್ತರು.
  • ಸುಮಾರು 40 ಲಕ್ಷ ಮಂದಿ ಗುಲಾಮಗಿರಿಯಿಂದ ಮುಕ್ತರಾದರು. ಅವರೆಲ್ಲರ ಪ್ರೀತಿ ಲಿಂಕನ್ ಪಾಲಾಯಿತು. ಜೊತೆಗೆ ಕೆಲವರ ದ್ವೇಷವನ್ನೂ ಲಿಂಕನ್ ಕಟ್ಟಿಕೊಂಡರು. ಅನಗತ್ಯ ಯುದ್ಧಕ್ಕೆ ಕಾರಣನಾದ ಅಧ್ಯಕ್ಷ ಎಂಬ ಅಪವಾದವೂ ಅಂಟಿಕೊಂಡಿತು.

ಅಂತ್ಯ

  • 1865, ಏಪ್ರಿಲ್ 14ರ ಸಂಜೆ ನಾಟಕ ನೋಡಲು ತೆರಳಿದ್ದ ಲಿಂಕನ್ ತಲೆಗೆ ಹಿಂಬದಿಯಿಂದ ಗುಂಡು ಹೊಡೆಯಲಾಯಿತು. ಮರುದಿನ ಲಿಂಕನ್ ಬದುಕಿಗೆ ತೆರೆಬಿತ್ತು. ಅಂತಃಕಲಹ ಮುಗಿಯಿತು. ದಕ್ಷಿಣದ ಸೈನ್ಯ ಅಂತಃಕಲಹವನ್ನು ವಶಮಾಡಿಕೊಂಡ ಆರೇ ದಿನಕ್ಕೆ ರಾಷ್ಟ್ರಪತಿ ಲಿಂಕನ್ರನ್ನು ಜಾನ್ ವಿಲ್ಕೆಸ್ ಬೂತ್ ಗುಂಡಿಟ್ಟು ಸಾಯಿಸಿದನು. ಇಂದಿಗೂ ಜನರೂ ಲಿಂಕನ್ರನ್ನು ಯು.ಎಸ್.ಎ ಕಂಡ ಅತ್ಯಂತ ಮಹಾನ್ ರಾಷ್ಟ್ರಪತಿಗಳಲ್ಲಿ ಒಬ್ಬರು ಎಂದು ಪರಿಗಣಿಸಿದ್ದಾರೆ.
  • ಏಪ್ರಿಲ್ 21, 1865; ಲಿಂಕನ್ ಪಾರ್ಥಿವ ಶರೀರವನ್ನು ಇರಿಸಿಕೊಂಡ ವಿಶೇಷ ರೈಲು ವಾಷಿಂಗ್ಟನ್‌ನಿಂದ ಹೊರಟಿತು. ನಾಲ್ಕು ವರ್ಷಗಳ ಹಿಂದೆ ಭಾವಿ ಅಧ್ಯಕ್ಷರನ್ನು ಕರೆತಂದ ಮಾರ್ಗದಲ್ಲೇ ಸುಮಾರು 20 ದಿನ ಸಂಚರಿಸಿದ ಉಗಿಬಂಡಿ ಇಲ್ಲಿನಾಯ್ ತಲುಪಿತು. ಮೊದಲು ಕೈಬೀಸುತ್ತಾ, ಹರ್ಷೋದ್ಗಾರಗಳೊಂದಿಗೆ ತಮ್ಮ ನಾಯಕನನ್ನು ಕಳುಹಿಸಿಕೊಟ್ಟಿದ್ದ ಜನ, ಸಂಕಟದಲ್ಲಿ ಬಿಕ್ಕಳಿಸುತ್ತಾ ನಿಂತಿದ್ದರು.
  • ‘ವಿದ್ಯಾರ್ಹತೆ, ಮೈಕಟ್ಟು, ನಾಜೂಕುಗಳಷ್ಟೇ ನಾಯಕತ್ವವನ್ನು ಅಳೆಯುವ ಮಾನದಂಡಗಳಲ್ಲ. ಜನರ ಹಿತಕ್ಕಾಗಿ ಕಠಿಣ ನಿರ್ಧಾರಗಳನ್ನು ತಳೆಯಬಲ್ಲವನು ಮಾತ್ರ ಮಹಾನ್ ನಾಯಕನಾಗುತ್ತಾನೆ. ಇತಿಹಾಸದಲ್ಲಿ ಕಾಯಂ ಸ್ಥಾನ ಪಡೆಯುತ್ತಾನೆ’ ಎಂದು ಲಂಡನ್ ಟೈಮ್ಸ್ ಬರೆಯಿತು. ಉಗಿಬಂಡಿಯ ಈ ಎರಡು ಪಯಣಗಳ ನಡುವೆ ಲಿಂಕನ್ ಜನಪ್ರಿಯತೆ ಉತ್ತುಂಗಕ್ಕೇರಿತು. ತೀರಿಕೊಂಡು ಇದೀಗ ನೂರೈವತ್ತು ವರ್ಷಗಳಾದರೂ ದಂತಕತೆಯಾಗಿ ಬೆಳೆಯುತ್ತಲೇ ಇರುವ ಲಿಂಕನ್ ಎತ್ತರವನ್ನು ಅಳೆಯಲು ಸಾದ್ಯವಿಲ್ಲ.[4]

[5]

ನೋಡಿ

  • ಚರಿತ್ರೆಯ ಪುಟಗಳಲ್ಲಿ ಲಿಂಕನ್ ಚಿರಾಯು:ಸುಧೀಂದ್ರ ಬುಧ್ಯ;24 Apr 2015

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.