ವಿಕಿಪೀಡಿಯಕ್ಕೆ ಸ್ವಾಗತ!

ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ

ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೨೨,೦೮೮ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ.


ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)
ಸೋಮನಾಥಪುರದಲ್ಲಿ ಹೊಯ್ಸಳ ಶಿಲ್ಪಕಲೆ

ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ (ಆಡಳಿತ: ೧೦೪೭-೧೦೯೮). ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ. ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ. ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ.

« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »

ಮುಂದಿನ ಸಂಚಿಕೆಯನ್ನು ಆಯ್ಕೆ ಮಾಡಿ...

ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

    ಪುಷ್ಯಭೂತಿ ರಾಜವಂಶದ ಗರಿಷ್ಠ ವಿಸ್ತಾರ, ಹರ್ಷನ ಕಾಲದಲ್ಲಿ
    • ಸನ್ನತಿ ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಭೀಮಾ ನದಿಯ ದಡದಲ್ಲಿದೆ . ಇದು ಚಂದ್ರಲಾ ಪರಮೇಶ್ವರಿ ದೇವಸ್ಥಾನ ಮತ್ತು ೧೯೮೬ ರಲ್ಲಿ ಭಾರತದ ಪುರಾತತ್ತ್ವ ಶಾಸ್ತ್ರ ಸಮೀಕ್ಷೆಯಿಂದ ಉತ್ಖನನವಾಗಿದೆ
    • ಪುಷ್ಯಭೂತಿ ರಾಜವಂಶ (ವರ್ಧನ ರಾಜವಂಶ) ಉತ್ತರ ಭಾರತದ ಭಾಗಗಳನ್ನು ೬ನೇ ಮತ್ತು ೭ನೇ ಶತಮಾನದ ಅವಧಿಯಲ್ಲಿ ಆಳಿತು. ಈ ರಾಜವಂಶವು ತನ್ನ ಉತ್ತುಂಗವನ್ನು ಅದರ ಕೊನೆಯ ಅರಸ ಹರ್ಷವರ್ಧನನ ಅಧೀನದಲ್ಲಿ ತಲುಪಿತು
    • ಆರ್ದ್ರಕಾರಿ ಚರ್ಮದ ಬಾಹ್ಯ ಪದರಗಳನ್ನು ಹೆಚ್ಚು ಮೃದು ಮತ್ತು ಹೆಚ್ಚು ನಮ್ಯ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ರಾಸಾಯನಿಕ ಕಾರಕಗಳ ಸಂಕೀರ್ಣ ಮಿಶ್ರಣಗಳು.
    • ಬಸವ ಪುರಾಣ ೧೩ ನೇ ಶತಮಾನದ ತೆಲುಗು ಮಹಾಕಾವ್ಯದ ಕವಿತೆಯಾಗಿದೆ.ಇದನ್ನು ಪಾಲ್ಕುರಿಕಿ ಸೋಮನಾಥ ಬರೆದಿದ್ದಾರೆ .ಕವಿತೆಯು, ತತ್ವಜ್ಞಾನಿ ಮತ್ತು ಸಾಮಾಜಿಕ ಸುಧಾರಕ ಬಸವಣ್ಣ (೧೧೩೪-೧೧೯೬ ಸಿಇ) ರ ಜೀವನ ಕಥೆಯನ್ನು ವಿವರಿಸುತ್ತದೆ.
    • ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ ಎನ್ನುವುದು ಕೆಲವು ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ನೌಕರರ ಮೇಲೆ ಅಂಕುಶ ಹಾಕುವ ಭಾರತದ ಸಂಸತ್ತಿನಿಂದ ಸ್ಥಾಪಿಸಲಾದ ಕಾಯಿದೆಯಾಗಿದೆ.೧೯೬೮ ರಿಂದ ಜಾರಿಯಲ್ಲಿದೆ.

    ವಿಕಿಪೀಡಿಯ ಸಾಧಕರು

    ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಡಾ.ಕೆ.ಸೌಭಾಗ್ಯವತಿ.

    ಸೌಭಾಗ್ಯವತಿ ಅವರು ಕನ್ನಡ ವಿಕಿಪೀಡಿಯದ ೧೩ನೇ ವಾರ್ಷಿಕೋತ್ಸವದಲ್ಲಿ

    ಡಾ.ಕೆ.ಸೌಭಾಗ್ಯವತಿ

    ಇವರು ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್‌ಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಇವರು ಈ ವರೆಗೆ ವಿಕಿಸೋರ್ಸ್ ಮತ್ತು ವಿಕಿಪೀಡಿಯಗಳಲ್ಲಿ ನೂರಕ್ಕಿಂತಲೂ ಹೆಚ್ಚು ಲೇಖನಗಳ ಕೊಡುಗೆ ನೀಡಿದ್ದಾರೆ. ಕನ್ನಡ ವಿಕಿಪೀಡಿಯದಲ್ಲಿ ಸುಮಾರು ೫೦೦೦ಕ್ಕಿಂತಲೂ ಅಧಿಕ ಬಾರಿ ಸಂಪಾದಿಸಿರುತ್ತಾರೆ. ಇವರು ರಚಿಸಿದ ಪ್ರಮುಖ ಲೇಖನಗಳು ಮಂಗಳಮುಖಿ, ಐರಾವತ, ಚಾಮುಂಡೇಶ್ವರಿ ಮುಂತಾದವುಗಳು.

    ವೈಯಕ್ತಿಕ

    ಡಾ.ಕೆ.ಸೌಭಾಗ್ಯವತಿ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಚಕ್ಕೂರು ಗ್ರಾಮದವರು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾನಪದ ಎಂ.ಎ ಹಾಗು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ನಂತರ ನಾಲ್ಕು ವರ್ಷಗಳ ಕಾಲ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನ ವಿದ್ಯಾರ್ಥಿನಿಯಾಗಿ "ಮೈಸೂರು ನಗರದ ಜಾನಪದ ಆಭರಣಗಳ ಅಧ್ಯಯನ" ಎಂಬ ವಿಷಯ ಕುರಿತು ಮಹಾ ಪ್ರಬಂಧವನ್ನೂ ಬರೆದು, ಪಿ.ಎಚ್ ಡಿ ಪದವಿ ಪಡೆದಿರುತ್ತಾರೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.

    ವಿಕಿಪೀಡಿಯ ಸಾಧಕರ ಪಟ್ಟಿ


    ವಿಕಿಪೀಡಿಯ ಪರ್ಯಟನೆ
    ಕರ್ನಾಟಕ ಮತ್ತು ಕನ್ನಡ

    ಜಿಲ್ಲೆಗಳು • ತಾಲ್ಲೂಕುಗಳು • ಪ್ರಮುಖ ಸ್ಥಳಗಳು • ಇತಿಹಾಸ • ಮುಖ್ಯಮಂತ್ರಿಗಳು • ಪ್ರಸಿದ್ಧ ವ್ಯಕ್ತಿಗಳು • ಬೆಂಗಳೂರು • ಕನ್ನಡ ವ್ಯಾಕರಣ • ಕನ್ನಡ ಪತ್ರಿಕೆಗಳು

    ಭೂಗೋಳ

    ಭೂಗೋಳ • ಖಂಡಗಳು • ದೇಶಗಳು • ನಗರಗಳು • ಜಲಸಮೂಹಗಳು • ಪರ್ವತಶ್ರೇಣಿಗಳು • ಮರುಭೂಮಿಗಳು • ಭೂಗೋಳ ಶಾಸ್ತ್ರ • ಸೌರಮಂಡಲ • ಖಗೋಳಶಾಸ್ತ್ರ

    ಕಲೆ ಮತ್ತು ಸಂಸ್ಕೃತಿ

    ಸಂಸ್ಕೃತಿ • ಭಾಷೆಗಳು • ಸಾಹಿತ್ಯ • ಸಾಹಿತಿಗಳು • ಸಂಗೀತ • ಸಂಗೀತಗಾರರು • ಧರ್ಮ • ಜಾನಪದ • ಹಬ್ಬಗಳು • ಕ್ರೀಡೆ • ಪ್ರವಾಸೋದ್ಯಮ • ರಂಗಭೂಮಿ • ಚಿತ್ರರಂಗ • ಪ್ರಾಚ್ಯ ಸಂಶೋಧಕರು

    ಜನ - ಜೀವನ

    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು • ನೊಬೆಲ್ ಪ್ರಶಸ್ತಿ ಪುರಸ್ಕೃತರು • ಸ್ವಾತಂತ್ರ್ಯ ಹೋರಾಟಗಾರರು • ಭಾರತ ರತ್ನ ಪುರಸ್ಕೃತರು • ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು • ಉದ್ಯಮಿಗಳು ಉದ್ಯಮಗಳು

    ಇತಿಹಾಸ

    ಇತಿಹಾಸ • ಐತಿಹಾಸಿಕ ಸ್ಥಳಗಳು-ಸ್ಮಾರಕಗಳು • ವಿಶ್ವ ಪರಂಪರೆಯ ತಾಣಗಳು • ಭಾರತದ ಇತಿಹಾಸ • ಕಾಲ

    ವಿಜ್ಞಾನ ಮತ್ತು ತಂತ್ರಜ್ಞಾನ

    ವಿಜ್ಞಾನ • ತಂತ್ರಜ್ಞಾನ • ತಂತ್ರಜ್ಞರು • ವಿಜ್ಞಾನಿಗಳು • ಖಗೋಳಶಾಸ್ತ್ರ• ಜೀವಶಾಸ್ತ್ರ • ರಸಾಯನಶಾಸ್ತ್ರ • ಭೂಶಾಸ್ತ್ರ • ಭೌತಶಾಸ್ತ್ರ • ಗಣಿತ

    ಧರ್ಮ ಮತ್ತು ಆಧ್ಯಾತ್ಮಿಕತೆ

    ಧರ್ಮ • ಆಧ್ಯಾತ್ಮ • ಹಿಂದೂ ಧರ್ಮ • ಜೈನ ಧರ್ಮ • ಬೌದ್ಧ ಧರ್ಮ • ಇಸ್ಲಾಂ ಧರ್ಮ • ಕ್ರೈಸ್ತ ಧರ್ಮ • ಯಹೂದಿ ಧರ್ಮ • ಸಿಖ್ ಧರ್ಮ • ಧಾರ್ಮಿಕ ಗ್ರಂಥಗಳು • ಪುರಾಣ

    ಸಮಾಜ ಮತ್ತು ರಾಜಕೀಯ

    ಸಮಾಜ • ರಾಜಕೀಯ • ಶಿಕ್ಷಣ • ಭಾರತದ ರಾಷ್ಟ್ರಪತಿಗಳು • ಭಾರತದ ಪ್ರಧಾನ ಮಂತ್ರಿಗಳು • ಸಮಾಜಸೇವಕರು • ಭಯೋತ್ಪಾದನೆ

    ಕನ್ನಡ ಸಿನೆಮಾ

    ಚಲನಚಿತ್ರಗಳು • ನಿರ್ದೇಶಕರು • ನಟರು • ನಟಿಯರು • ನಿರ್ಮಾಪಕರು • ಚಿತ್ರ ಸಂಗೀತ • ಚಿತ್ರಸಾಹಿತಿಗಳು

    ಮನೋರಂಜನೆ ಮತ್ತು ಕ್ರೀಡೆ

    ಕ್ರೀಡೆ • ಕ್ರೀಡಾಪಟುಗಳು • ಕ್ರೀಡಾ ಪ್ರಶಸ್ತಿಗಳು • ಕ್ರಿಕೆಟ್ • ಟೆನ್ನಿಸ್ • ಪ್ರವಾಸ • ದೂರದರ್ಶನ

    ೦-೯ ಅಂ ಅಃ
    ವರ್ಗಗಳು


    ವಿಕಿಪೀಡಿಯ ಬಳಗದ ಇತರ ಯೋಜನೆಗಳು:
    ಮೆಟಾ-ವಿಕಿ 
    ಪ್ರಾಜೆಕ್ಟ್ ಸಂಯೋಜನೆ 
    ವಿಕಿಮೀಡಿಯ ಕಾಮನ್ಸ್ 
    ಮೀಡಿಯಾ ಕಣಜ 
    ವಿಕ್ಷನರಿ 
    ಶಬ್ದಕೋಶ 
    ವಿಕಿ ಬುಕ್ಸ್ 
    ಪುಸ್ತಕಗಳು 
    ವಿಕಿ ಸೋರ್ಸ್ 
    ಮುಕ್ತ ಸಾಹಿತ್ಯ 
    ವಿಕಿ ಕೋಟ್ 
    ಉಕ್ತಿಗಳು 
    ವಿಕಿ ನ್ಯೂಸ್
    ಸುದ್ದಿ
    ವಿಕಿ ಸ್ಪೀಷೀಸ್
    ಜೈವಿಕ ಮಾಹಿತಿ

    ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).

    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.