ಹೆಸರು ಕಾಳು ದೋಸೆ

ಹೆಸರು ಕಾಳು ದೋಸೆ, ಅಥವಾ ಪೆಸರಟ್ಟು ದೋಸೆಯನ್ನು ಹೋಲುವ ಒಂದು ಕ್ರೇಪ್‍ನಂತಹ ಬ್ರೆಡ್. ಅದನ್ನು ಹೆಸರು ಕಾಳಿನ ಹಿಟ್ಟಿನಿಂದ ತಯಾರಿಸಲಾಗುತ್ತದೆ ಆದರೆ ದೋಸೆಗೆ ಭಿನ್ನವಾಗಿ, ಅದು ಉದ್ದಿನ ಬೇಳೆಯನ್ನು ಹೊಂದಿರುವುದಿಲ್ಲ. ಇದನ್ನು ನಾಷ್ಟದಲ್ಲಿ ಮತ್ತು ಒಂದು ಲಘು ಆಹಾರವಾಗಿ ತಿನ್ನಲಾಗುತ್ತದೆ ಮತ್ತು ಭಾರತದ ಆಂಧ್ರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಜನಪ್ರಿಯವಾಗಿದೆ. ಅದನ್ನು ವಿಶಿಷ್ಟವಾಗಿ ಶುಂಠಿ ಅಥವಾ ಹುಣಸೆ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಈರುಳ್ಳಿಯನ್ನು ಈ ತಿನಿಸಿನ ವಿಭಿನ್ನ ವಿಧಗಳಲ್ಲಿ ಬಳಸಲಾಗುತ್ತದೆ. ಹೆಸರು ಕಾಳನ್ನು ನೀರಿನಲ್ಲಿ ಕನಿಷ್ಟಪಕ್ಷ ೪ ಗಂಟೆ ನೆನೆಸಿಡಬೇಕು. ನಂತರ, ನೆಂದ ಕಾಳನ್ನು ಮಿಕ್ಸರ್ ಜಾರ್‍ನಲ್ಲಿ ಹಸಿರು ಮೆಣಸಿನಕಾಯಿ, ಶುಂಠಿ, ಸ್ವಲ್ಪ ಉಪ್ಪಿನ ಜೊತೆಗೆ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟನ್ನು ಸ್ವಲ್ಪ ಕಾಲ ಬಿಡಬೇಕು. ನಂತರ ಬಿಸಿ ಬಾಣಲೆ ಮೇಲೆ ಸ್ವಲ್ಪ ಹಿಟ್ಟನ್ನು ಹಾಕಿ, ಹರಡಿ, ಬೇಯಿಸಬೇಕು. ಬಾಣಲೆಯನ್ನು ಬಿಟ್ಟುಕೊಂಡ ನಂತರ ಪೆಸರಟ್ಟನ್ನು ತೆಗೆಯಬೇಕು ಮತ್ತು ಚಟ್ನಿಯೊಂದಿಗೆ ಬಡಿಸಬೇಕು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.