ಹೂವಿನಹಡಗಲಿ

ಹೂವಿನ ಹಡಗಲಿ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಬಳ್ಳಾರಿ ಇಂದ ಸುಮಾರು ೧೩೫ ಕಿ.ಮೀ. ದೂರದಲ್ಲಿದೆ. ಈ ಊರು ಮಲ್ಲಿಗೆ ಹೂವಿಗೆ ಪ್ರಸಿದ್ಧ.

ಈ ಊರಿನ ಹೆಸರಿನ ಮೂಲದ ಬಗೆಗೆ ಹಲವು ಕಥೆಗಳಿವೆ.

  • ಹಿಂದೆ ವಿಜಯನಗರ ರಾಜರ ಕಾಲದಲ್ಲಿ ಮಲ್ಲಿಗೆ ಹೂವುಗಳನ್ನು ದೋಣಿಯಲ್ಲಿ ತುಂಬಿ ವಿಜಯನಗರದ ಶ್ರೀ ವಿರುಪಾಕ್ಷ ದೇವರ ಪೂಜೆಗೆ ಪ್ರತಿನಿತ್ಯ ಈ ಊರಿನಿಂದ ತುಂಗಭದ್ರಾ ನದಿ ಮೂಲಕ ಕಳಿಸಿಕೊಡಲಾಗುತಿತ್ತು. ಈ "ಹೂವಿನ ಹಡಗು" ಇಂದ "ಹೂವಿನ ಹಡಗಲಿ" ಎಂಬ ಹೆಸರು ಬಂತು ಎನ್ನುವ ಮಾತು ಇದೆ.
  • ಈ ಊರಿಗೆ ಹೂವಿನ ಹಡಗಲಿ ಎಂದು ಹೆಸರು ಬರಲು ಈ ಊರಿನಿಂದ ಹಂಪೆಗೆ ಹೂ ಕಾರಣ ಅಲ್ಲ. ಹಂಪಿ ವಿಜಯನಗರ ನಗರ ಸಾಮ್ರಾಜ್ಯ ಸ್ಥಾಪನೆಯಾದ ಸುಮಾರು ೩೦೦ ವರ್ಷಗಳ ಮೊದಲೇ ಈ ಊರಿಗೆ ಊವಿನ ಹಡಗಲಿ (ಪೂವಿನ ಪಡಂಗಿಲೆ) ಎಂದು ಕಲ್ಯಾಣಿ ಚಾಲುಕ್ಯ ದೊರೆ ಆರನೆ ವಿಕ್ರಮಾದಿತ್ಯನ ಕಾಲದ ಕೇಶವ ಲ್ಮತ್ತು ಕಲ್ಲೇಶ್ವರ ದೇವಸ್ಥಾನದ ಶಾಸನಗಳಲ್ಲಿ ದಾಖಲಾಗಿದೆ.

ಹೂವಿನ ಹಡಗಲಿ ತಾಲೂಕಿನಲ್ಲಿ ಹಿರೇ ಹಡಗಲಿ ಎಂಬ ಗ್ರಾಮದಲ್ಲಿ ಐತಿಹಾಸಿಕ ಕಲ್ಲೆಶ್ವರ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಜಕ್ಕಣಚಾರಿ ಕೆತ್ತಿದನೆಂದು ಹೇಳುತ್ತಾರೆ, ಈ ದೇವಸ್ಥಾನದಲ್ಲಿ ಶಾತವಾಹನರ ಮೂಲ ಯಾವುದೆಂದು ತಿಳಿಸುತ್ತದೆ. ಶಾತವಾಹನರ ಮೂಲ ಕನ್ನಡ ಎಂಬುದನ್ನು ಇದು ತಿಳಿಸುತ್ತದೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.