ಹಿರಣ್ಯ ಕಶಿಪು
ಹಿರಣ್ಯ ಕಶಿಪು ಹಿರಣ್ಯಾಕ್ಷನ ಅಣ್ಣ. ಪ್ರಹ್ಲಾದನ ತಂದೆ, ಕಯಾದುವಿ ಪತಿ. ಸಾಮಾನ್ಯ ಅರ್ಥದಲ್ಲಿ ಹಿರಣ್ಯ ಎಂದರೆ ಚಿನ್ನ, ಕಶಿಪು ಎಂದರೆ ಮೆದುಶಯ್ಯೆ.

Narasimha slays Hiranyakashipu, as Prahlada watches
_LACMA_M.82.42.8_(1_of_5).jpg)
Narasimha kills Hiranyakashipu, as Prahlada and his mother bow before Lord Narasimha
Vishnu as Narasimha kills Hiranyakashipu, stone sculpture from Halebidu, Karnataka
ಹಿರಣ್ಯಕಶಿಪುವಿನ ತಪಸ್ಸು
- ಹಿರಣ್ಯ ಕಶಿಪು ಬೌತಿಕ ಜ್ಞಾನದ ಬಲದಿಂದ ಮತ್ತು ಅಜ್ಞಾನದಿಂದ ಮರಣವನ್ನೇ ಜಯಿಸಲು ಹೊರಟು ಘೋರ ತಪಸ್ಸಿಗೆ ತೊಡಗಿದ. ಅವನ ಘೋರ ತಪ್ಪಸ್ಸಿಗೆ, ಅದ್ಬುತ ಶಕ್ತಿಗೆ, ಎಲ್ಲಾ ಗ್ರಹಗಳು ಜನರು ನಡುಗಿ ಹೋದರು. ಅವನು ಸೃಷ್ಟಿಕರ್ತನಾದ ಬ್ರಹ್ಮದೇವನನ್ನು ಭೂಮಿಗಿಳಿದು ಬರುವಂತೆ ಮಾಡಿದ. ನಂತರ ನನಗೆ ಸಾವಿಲ್ಲದ ಅಮರತ್ವದ ವರವನ್ನು ನೀಡಬೇಕೆಂದು ಬ್ರಹ್ಮನನ್ನು ಕೇಳಿಕೊಂಡ.
- ಆಗ ಬ್ರಹ್ಮನು ಸಕಲ ಗ್ರಹಗಳ ಬೌತಿಕ ಸೃಷ್ಟಿಕರ್ತನಾದ ಸ್ವತ; ತಾನೇ ಅಮರನಾಗಿಲ್ಲದಿರುವಾಗ ತಾನು ಅಂತಹ ವರವನ್ನು ನೀಡಲು ಸಾದ್ಯವಿಲ್ಲ ಎಂದನು.ಭಗವದ್ಗೀತೆ (೮-೧೭) ರಲ್ಲಿ ಬ್ರಹ್ಮನು ಬಹು ದೀರ್ಘ ಕಾಲ ಜೀವಿಸುವವನಾದರು ಅವನು ಮರಣ ಹೊಂದದಿರುವುದಿಲ್ಲ ಎಂಬುವುದು ದೃಡಪಟ್ಟಿದೆ.
- ಹೊನ್ನು ಮತ್ತು ಹೆಣ್ಣು ಇದರ ಆಸಕ್ತಿಯಲ್ಲಿ ಮತ್ತು ಅದನ್ನು ಭೋಗಿಸಲು ಅಮರತ್ವ ವರವನ್ನು ಕೇಳಿದ,. ಬ್ರಹ್ಮನು ಕೊಡದಿದ್ದಾಗ ನನಗೆ ಮನುಷ್ಯನಿಂದ, ಪ್ರಾಣಿಗಳಿಂದ, ದೇವತೆಗಳಿಂದ, ಭೂ, ಜಲ, ವಾಯು ಮತ್ತು ಯಾವುದೇ ಆಯುಧಗಳಿಂದಲೂ ಮರಣ ಸಂಭವಿಸದಂತೆ ವರವನ್ನು ಪಡೆದನು. ಇದರಿಂದ ನನಗೆ ಮರಣ ಇಲ್ಲವೆಂದು ಮೂರ್ಖನಂತೆ ಯೋಚಿಸಿದನು.
- ಕೊನೆಗೆ ಭಗವಂತನು ಅರ್ಧ ಮಾನವ ಅರ್ಧ ಸಿಂಹ ಹೀಗೆ ನರಸಿಂಹ ಅವತಾರದಲ್ಲಿ ಕೊಲ್ಲಲ್ಪಟ್ಟನು.ಅವನು ಕಲ್ಪನಾತೀತವಾದ ಅದ್ಭುತ ವ್ಯಕ್ತಿಯ ತೊಡೆಯಲ್ಲಿ ನಖಗಳಿಂದ(ಉಗುರು) ಕೊಲ್ಲಲ್ಪಟ್ಟನು. ಆದರಿಂದ ದೇವರು ಕೊಟ್ಟಷ್ಟು ಆಯುಷ್ಯದಲ್ಲಿ ಮನುಷ್ಯನು ಆತ್ಮಜ್ಞಾನವನ್ನು ಪಡೆದು ಸಮಾಜದಲ್ಲಿ ಜ್ಞಾನಿಯಾಗಿ ಬದುಕಬೇಕು.ಇದು ಒಂದು ಪುರಾಣವಾಯಿತು. ಸತ್ಯ ಹಿರಣ್ಯ ಒಬ್ಬ ದಾನವ ವಂಶಕ್ಕೆ ಸೇರಿದವ. ಧರ್ಮಕ್ಕೂ ಅಧರ್ಮಕ್ಕೂ ನಡೆದ ಸಂಘರ್ಷವೇ ಇಂದು ಪುರಾಣವಾಗಿದೆ.
Footnotes
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.