ಹಬಲ್ ದೂರದರ್ಶಕ
ಹಬಲ್ ದೂರದರ್ಶಕ ಭೂಮಿಯ ಸುತ್ತ ಬಾಹ್ಯಾಕಾಶದಲ್ಲಿ ಸುತ್ತುತ್ತಿರುವ ಒಂದು ದೂರದರ್ಶಕ. ಬಾಹ್ಯಾಕಾಶದಲ್ಲಿರುವುದರಿಂದ ಈ ದೂರದರ್ಶಕವು ಭೂಮಿಯ ವಾಯುಮಂಡಲದ ಹೊರಗಿರುವುದರಿಂದ ಬ್ರಹ್ಮಾಂಡದ ದೂರ ಪ್ರದೇಶಗಳಿಂದ ಬರುವ ದುರ್ಬಲ ಬೆಳಕನ್ನು ಕೂಡ ಪತ್ತೆ ಹಚ್ಚಬಲ್ಲದು. ೧೯೯೦ರಲ್ಲಿ ಅಂತರಿಕ್ಷದಲ್ಲಿ ಸ್ಥಾಪನೆಗೊಂಡ ನಂತರದಿಂದಲೂ ಇದು ಖಗೋಳವಿಜ್ಞಾನಕ್ಕೆ ಬ್ರಹ್ಮಾಂಡದ ಬಗ್ಗೆ ಅತ್ಯಮೂಲ್ಯ ಮಾಹಿತಿಗಳನ್ನು ನೀಡುತ್ತಾ ಬಂದಿದೆ.

ಪರಿಚಯ
ಹಬಲ್ ದೂರದರ್ಶಕವು ಬಾಹ್ಯಾಕಾಶದಲ್ಲಿರುವುದು.ಇದು ಹೆಸರಾಂತ ಖಗೋಲ ಶಾಸ್ತ್ರಜ್ಞ ಎಡ್ವಿನ` ಹಬಲ್`ನಗೌರವಾರ್ಥ ಅವನ ಹೆಸರನ್ನಿಟ್ಟಿದೆ. 7.9 ಅಡಿ ವ್ಯಾಸದ ದೊಡ್ಡ ಮಸೂರವನ್ನು ಹೊಂದಿದೆ.ವಾಯು ಮಾಲಿನ್ಯ -ವಾತಾವರಣದ ಅಡೆ-ತದೆ ಇಲ್ಲದ ಶುದ್ಧಸ್ಪಷ್ಟ ಚಿತ್ರ ತೆಗೆದು ಭೂಮಿಗೆ ರವಾನಿಸುವುದು.- The Hubble Space Telescope (HST) is a space telescope that was launched into low Earth orbit in 1990 and remains in operation. With a 2.4-meter (7.9 ft) mirror, Hubble's four main instruments observe in the near ultraviolet, visible, and near infrared spectra. The telescope is named after the astronomer Edwin Hubble.(ಇಂಗ್ಲಿಷ್ ತಾಣ). .
ಹಬಲ್ ದೂರದರ್ಶಕವು ಬಾಹ್ಯಾಕಾಶದಲ್ಲಿರುವ ಕಾರಣ, ಭೂಮಿ ಮೇಲಿನ ದೂರದರ್ಶಕಗಳಿಗೆ ಹೋಲಿಸಿದರೆ, ಗಮನಾರ್ಹವಾದ ವೀಕ್ಷಣಾ ಅನುಕೂಲತೆಗಳನ್ನು ಹೊಂದಿದೆ - ಚಿತ್ರಗಳನ್ನು ಮಬ್ಬುಗೊಳಿಸಲು ಯಾವುದೇ ವಾಯುಮಂಡಲವಿಲ್ಲದಿರುವುದು, ಗಾಳಿಯಿಂದ ಚದುರಿಸಲ್ಪಟ್ಟ ಹಿನ್ನೆಲೆ ಬೆಳಕು ಇಲ್ಲದಿರುವುದು, ಇತ್ಯಾದಿ. ಇವಲ್ಲದೆ, ಓಜೋನ್ ಪದರದ ಕಾರಣ, ಭೂಮಿಯಿಂದ ಮಾಡಿದ ವೀಕ್ಷಣೆಗಳಲ್ಲಿ ಅತಿನೇರಳೆ ಕಿರಣಗಳನ್ನು ವೀಕ್ಷಿಸಲಾಗುವುದಿಲ್ಲ. ಆದರೆ ಹಬಲ್ ದರ್ಶಕವು ಅತಿನೇರಳೆ ಕಿರಣಗಳನ್ನು ಸಹ ಕಾಣಬಲ್ಲದು. ಇದು ಮೊಟ್ಟ ಮೊದಲ ಬಾಹ್ಯಾಕಾಶ ದೂರದರ್ಶಕವಲ್ಲವಾದರೂ, ೧೯೯೦ರಲ್ಲಿ ಇದರ ಉಡಾವಣೆಯ ನಂತರ ಇದು ಖಗೋಳಶಾಸ್ತ್ರದ ಇತಿಹಾಸದಲ್ಲಿ ಒಂದು ಮುಖ್ಯ ಉಪಕರಣವಾಗಿ ಕಾರ್ಯ ನಿರ್ವಹಿಸಿದೆ.
ಹಬಲ್ ದೂರದರ್ಶಕದ ನಿರ್ಮಾಣ ಮತ್ತು ಉಡಾವಣೆಗಳು ಹಲವು ಹಣಕಾಸು ಸಮಸ್ಯೆಗಳಿಗೆ ಮತ್ತು ತಡಗಳಿಗೆ ಒಳಪಟ್ಟಿದ್ದವು. ಹಾಗೂ, ೧೯೯೦ರಲ್ಲಿ ಉಡಾವಣೆಯ ಸ್ವಲ್ಪವೇ ನಂತರ ಅದರ ಮುಖ್ಯ ಕನ್ನಡಿಯು ಗೋಳೀಯ ವಿಪಥನ ದೋಷದಿಂದ ಕೂಡಿದ್ದು ಗಮನಕ್ಕೆ ಬಂದಿತು. ಅದರ ನಿರ್ಮಾಣ ಕಾಲದಲ್ಲಿ ದೋಷಪೂರಿತ ಗುಣ ನಿಯಂತ್ರಣದಿಂದ ಆದ ಈ ತಪ್ಪಿನಿಂದ ದೂರದರ್ಶಕವು ಬಹಳ ಅದಕ್ಷವಾಯಿತು. ಆದರೆ, ೧೯೯೩ರ ದುರಸ್ತಿ ಯಾತ್ರೆಯ ಬಳಿಕ ದೂರದರ್ಶಕವು ತನ್ನ ನಿರೀಕ್ಷಿತ ದಕ್ಷತೆಯನ್ನು ತಲುಪಿ, ಖಗೋಳಶಾಸ್ತ್ರದಲ್ಲಿ ಒಂದು ಪ್ರಮುಖ ಸಂಶೋಧನಾ ಉಪಕರಣವಾಯಿತು.
400 ದಶಲಕ್ಷ ಜ್ಯೋತಿರ್ವರ್ಷ ದೂರದ ಗ್ಯಾಲಕ್ಸಿ ಚಿತ್ರ ಸೆರೆ ಹಿಡಿದ ‘ಹಬಲ್’
- ಏಜೆನ್ಸಿಸ್;4 Mar, 2017
- ಪ್ರತಿ ಸಕೆಂಡ್‌ಗೆ 8 ಕಿ.ಮೀ. ವೇಗ, ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯ ಪರಿಭ್ರಮಣೆ ನಡೆಸುತ್ತಿರುವ ಹಬಲ್ ಬಾಹ್ಯಾಕಾಶ ದೂರದರ್ಶಕವು ದಟ್ಟ ಗ್ಯಾಲಕ್ಸಿಯ ಚಿತ್ರವನ್ನು ಸೆರೆ ಹಿಡಿದಿದೆ.
ಹಬಲ್ ಬಗೆಗೆ ಒಂದಿಷ್ಟು ಮಾಹಿತಿ
- ಪ್ರತಿ ಸಕೆಂಡ್‌ಗೆ 8 ಕಿ.ಮೀ. ವೇಗ, ಪ್ರತಿ 97 ನಿಮಿಷಗಳಿಗೊಮ್ಮೆ ಭೂಮಿಯ ಪರಿಭ್ರಮಣೆ
- ಹನ್ನೆರಡು ಟನ್ ತೂಕ, ಹನ್ನೆರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಬಾಹ್ಯಾಕಾಶ ದೂರದರ್ಶಕ
- ಖಗೋಳ ವಿಜ್ಞಾನಿ ‘ಎಡ್ವಿನ್ ಹಬಲ್’ (1889–1953) ಅವರ ಗೌರವಾರ್ಥ ಸಾಧನಕ್ಕೆ ಹೆಸರು
- 1990ರ ಏಪ್ರಿಲ್ 24 ರಂದು ಸ್ಪೇಸ್ ಶಟಲ್ ‘ಡಿಸ್ಕವರಿ’ ಮೂಲಕ ನೆಲದಿಂದ 560 ಕಿ.ಮೀ. ಎತ್ತರದಲ್ಲಿ ಭೂ ಸುತ್ತಲಿನ ಕಕ್ಷೆಗೆ
ನೋಡಿ
- ಶೆಂಝೌ–11 (ಚೀನಾದ ಬಾಹ್ಯಾಕಾಶ ನೌಕೆ)
- ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಎಲ್ಲಕ್ಕಿಂತ ದೊಡ್ಡದು
- ದೂರದರ್ಶಕ
- ಬ್ರಹ್ಮಾಂಡ