ಹಂಸ

ಹಂಸಗಳು ಸಿಗ್ನಸ್ ಪಂಗಡದಲ್ಲಿನ ಅನಾಟಿಡೈ ಕುಟುಂಬಪಕ್ಷಿಗಳು. ಹಂಸಗಳ ನಿಕಟ ಸಂಬಂಧಿಕರು ಹೆಬ್ಬಾತುಗಳು ಮತ್ತು ಬಾತುಕೋಳಿಗಳನ್ನು ಒಳಗೊಂಡಿವೆ. ಹಂಸಗಳು ಸಾಮಾನ್ಯವಾಗಿ ಜೀವನದುದ್ದಕ್ಕೂ ಕೂಡಿರುತ್ತವೆ, ಆದರೆ ಕೆಲವೊಮ್ಮೆ ವಿಚ್ಛೇದನವಾಗುತ್ತದೆ, ವಿಶೇಷವಾಗಿ ಗೂಡುಕಟ್ಟುವಿಕೆ ವೈಫಲ್ಯದ ನಂತರ, ಮತ್ತು ಸಂಗಾತಿ ಸತ್ತರೆ, ಉಳಿದ ಹಂಸ ಬೇರೆಯದರ ಜೊತೆಗೂಡುತ್ತದೆ. ಪ್ರತಿ ಗುಂಪಿನಲ್ಲಿ ಮೊಟ್ಟೆಗಳ ಸಂಖ್ಯೆ ಮೂರರಿಂದ ಎಂಟರವರೆಗಿರುತ್ತದೆ.

ಹಂಸದ ಅತಿ ದೊಡ್ಡ ಪ್ರಜಾತಿ ೧.೫ ಮೀ. ಕಿಂತ ಹೆಚ್ಚು ಉದ್ದವಿರಬಹುದು ಮತ್ತು ೧೫ ಕೆಜಿಗಿಂತ ಹೆಚ್ಚು ತೂಗಬಹುದು. ಅವುಗಳ ರೆಕ್ಕೆ ಹರಹು ೩.೧ ಮೀ ಗಿಂತ ಹೆಚ್ಚಿರಬಹುದು. ನಿಕಟವಾಗಿ ಸಂಬಂಧಿಸಿದ ಹೆಬ್ಬಾತುಗಳಿಗೆ ಹೋಲಿಸಿದರೆ, ಅವು ಹೆಚ್ಚು ದೊಡ್ಡದಾಗಿದ್ದು ಪ್ರಮಾಣಾನುಗತವಾಗಿ ಹೆಚ್ಚು ದೊಡ್ಡ ಪಾದಗಳು ಮತ್ತು ಕತ್ತುಗಳನ್ನು ಹೊಂದಿರುತ್ತವೆ. ವಯಸ್ಕ ಹಂಸಗಳು ಕಣ್ಣುಗಳು ಮತ್ತು ಕೊಕ್ಕಿನ ನಡುವೆ ಗರಿಯಿರದ ಚರ್ಮದ ಪಟ್ಟಿಯನ್ನು ಹೊಂದಿರುತ್ತವೆ. ಸ್ತ್ರೀ ಮತ್ತು ಪುರುಷ ಜಾತಿಗಳು ತುಪ್ಪುಳದಲ್ಲಿ ಸಮಾನವಾಗಿರುತ್ತವೆ, ಆದರೆ, ಪುರುಷ ಹಂಸಗಳು ಸ್ತ್ರೀ ಹಂಸಗಳಿಗಿಂತ ಸಾಮಾನ್ಯವಾಗಿ ಹೆಚ್ಚು ದೊಡ್ಡ ಮತ್ತು ಹೆಚ್ಚು ಭಾರವಾಗಿರುತ್ತವೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.