ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ ಭಾರತದ ಶ್ರೇಷ್ಟ ವೃತ್ತಿಪರ ಟೆನ್ನಿಸ್ ಆಟಗಾರ್ತಿ. ಇದುವರೆಗೆ ಟೆನ್ನಿಸ್ ಆಟದಲ್ಲಿ ಅತಿ ಹೆಚ್ಚಿನ ಕ್ರಮಾಂಕ ಪಡೆದ ಭಾರತೀಯ ಮಹಿಳೆ . ಭಾರತದ ಹೈದರಾಬಾದ್ ನಗರದವರಾದ ಸಾನಿಯಾ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಕಳೆದೆರೆಡು ವರ್ಷಗಳಿಂದ ೧೧ ಡಬಲ್ ಟ್ರೋಫಿಗಳನ್ನು ಗೆದ್ದಿದ್ದಾರೆ . ಅವರ ಸದ್ಯದ ವಿಶ್ವಕ್ರಮಾಂಕ ನಂ ೧. ಸಿಂಗಲ್ಸ್ ನಲ್ಲಿ ಇಲ್ಲಿಯವರೆಗೆ ತಲುಪಿದ ಗರಿಷ್ಟ ಕ್ರಮಾಂಕ ೨೭.[2]
![]() | |
ಪೂರ್ಣ ಹೆಸರು | ಸಾನಿಯಾ ಮಿರ್ಜಾ |
---|---|
ದೇಶ | ![]() |
ವಾಸಸ್ಥಳ | ಹೈದರಾಬಾದ್, ತೆಲಂಗಾಣ, ಭಾರತ. |
ಜನನ | ಮುಂಬಯಿ, ಮಹಾರಾಷ್ಟ್ರ, ಭಾರತ | 15 November 1986
ಎತ್ತರ | 1.73 m (5 ft 8 in) |
ವೃತ್ತಿನಿರತ ಆಟಗಾರನಾಗಿದ್ದು | ೩ ಫೆಬ್ರವರಿ ೨೦೦೩ |
ಆಟಗಳು | ಬಲಗೈ (two-handed backhand) |
ಕಾಲೇಜು | ಸೆಂಟ್ ಮೇರಿಸ್ ಕಾಲೇಜು, ಹೈದರಾಬಾದ್ |
ಪ್ರಶಸ್ತಿಯ ಮೊತ್ತ | ಯುಎಸ್ $೪,೭೪೦,೭೯೨[1] |
ಸಿಂಗಲ್ಸ್ | |
ವೃತ್ತಿಜೀವನ ದಾಖಲೆ | ೨೭೧–೧೬೧ |
ವೃತ್ತಿಜೀವನ ಪ್ರಶಸ್ತಿಗಳು | 1 WTA, 14 ITF |
ಉನ್ನತ ಶ್ರೇಣಿ | ನಂ. ೨೭ (೨೭ ಆಗಸ್ಟ್ ೨೦೦೭) |
ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಫಲಿತಾಂಶಗಳು | |
ಆಸ್ಟ್ರೇಲಿಯನ್ ಒಪನ್ | ೩ನೇ ಸುತ್ತು (೨೦೦೫, ೨೦೦೮) |
ಫ್ರೇಂಚ್ ಒಪನ್ | ೨ನೇ ಸುತ್ತು (೨೦೦೭, ೨೦೧೧) |
ವಿಂಬಲ್ಡನ್ | ೨ನೇ ಸುತ್ತು (೨೦೦೫, ೨೦೦೭, ೨೦೦೮, ೨೦೦೯) |
ಯುಎಸ್ ಒಪನ್ | ೪ನೇ ಸುತ್ತು (೨೦೦೫) |
ಇತರೆ ಪಂದ್ಯಾವಳಿಗಳು | |
ಒಲಂಪಿಕ್ ಗೇಮ್ಸ್ | ೧ನೇ ಸುತ್ತು (೨೦೦೮) |
ಡಬಲ್ಸ್ | |
ವೃತ್ತಿಜೀವನ ದಾಖಲೆ | ೩೭೧–೧೭೯ |
ವೃತ್ತಿಜೀವನ ಪ್ರಶಸ್ತಿಗಳು | ೨೭ ಡಬ್ಲೂಟಿಎ, ೪ ಐಟಿಎಫ್ |
ಉನ್ನತ ಶ್ರೇಣಿ | ನಂ. ೧ (೨೪ ಜುಲೈ ೨೦೧೫) |
ಸದ್ಯದ ಶ್ರೇಣಿ | ನಂ. ೧ (೨೪ ಜುಲೈ ೨೦೧೫) |
ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಫಲಿತಾಂಶಗಳು | |
ಆಸ್ಟ್ರೇಲಿಯನ್ ಒಪನ್ | ಸೆಮಿ ಫೈನಲ್ಸ್ (೨೦೧೨) |
ಫ್ರೇಂಚ್ ಒಪನ್ | ಫೈನಲ್ (೨೦೧೧) |
ವಿಂಬಲ್ಡನ್ | ಸೆ.ಫೈ (೨೦೧೧) |
ಯುಎಸ್ ಒಪನ್ | ಸೆಮಿ.ಫೈ (೨೦೧೩, ೨೦೧೪) |
ಇತರೆ ಡಬಲ್ಸ್ ಪಂದ್ಯಾವಳಿಗಳು | |
ಡಬ್ಲೂಟಿಎ ವಿಶ್ವ ಟೂರ್ ಪಂದ್ಯಾವಳಿಗಳು | ಗೆಲುವು (೨೦೧೪) |
ಒಲಂಪಿಕ್ ಗೇಮ್ಸ್ | ೨ನೇ ಸುತ್ತು (೨೦೦೮) |
ಮಿಕ್ಸಡ್ ಡಬಲ್ಸ್ | |
ವೃತ್ತಿಜೀವನ ಪ್ರಶಸ್ತಿಗಳು | ೩ |
ಗ್ರ್ಯಾಂಡ್ ಸ್ಲ್ಯಾಮ್ ಮಿಶ್ರ ಡಬಲ್ಸ್ ಫಲಿತಾಂಶಗಳು | |
ಆಸ್ಟ್ರೇಲಿಯನ್ ಒಪನ್ | ಗೆಲುವು (೨೦೦೯) |
ಫ್ರೇಂಚ್ ಒಪನ್ | ಗೆಲುವು (೨೦೧೨) |
ವಿಂಬಲ್ಡನ್ | ಕ್ವಾ.ಫೈ (೨೦೧೧, ೨೦೧೩) |
ಯುಎಸ್ ಒಪನ್ | ಗೆಲುವು (೨೦೧೪) |
ಇತರೆ ಮಿಶ್ರ ಡಬಲ್ಸ್ ಫಲಿತಾಂಶಗಳು | |
ಒಲಂಪಿಕ್ ಗೇಮ್ಸ್ | ಕ್ವಾರ್ಟರ್ ಫೈನಲ್ಸ್ (೨೦೧೨) |
ಕೊನೆಯ ಬದಲಾವಣೆ: ೨೪ ಜುಲೈ ೨೦೧೫. |
ಪದಕ ದಾಖಲೆ | ||
---|---|---|
Women's Tennis | ||
Representing ![]() | ||
Afro-Asian Games | ||
![]() | 2003 Hyderabad | Women's Singles |
![]() | 2003 Hyderabad | Women's Doubles |
![]() | 2003 Hyderabad | Mixed Doubles |
![]() | 2003 Hyderabad | Women's Team |
Asian Games | ||
![]() | 2002 Busan | Mixed Doubles |
![]() | 2006 Doha | Mixed Doubles |
![]() | 2006 Doha | Women's Singles |
![]() | 2006 Doha | Women's Team |
![]() | 2010 Guangzhou | Mixed Doubles |
![]() | 2010 Guangzhou | Women's Singles |
![]() | 2014 Incheon | Women's Doubles |
![]() | 2014 Incheon | Mixed Doubles |
Commonwealth Games | ||
![]() | 2010 Delhi | Women's Singles |
![]() | 2010 Delhi | Women's Doubles |

ಜೀವನ
ಸಾನಿಯಾ ಮಿರ್ಜಾರವರ ಜನ್ಮ ನವೆಂಬರ್ ೧೫ ೧೯೮೬ರಲ್ಲಿ ಮುಂಬಯಿ ನಗರದಲ್ಲಾಯಿತು. ತಂದೆಯವರಾದ ಇಮಾಂ ಮಿರ್ಜಾರವರ ಮಾರ್ಗದರ್ಶನದಲ್ಲಿ ಆರನೆ ವರ್ಷದ ಎಳೆ ವಯಸ್ಸಿನಲ್ಲಿಯೆ ಸಾನಿಯ ಟೆನ್ನಿಸ್ ತರಬೇತಿ ಆರಂಭಿಸಿದರು. ೨೦೦೩ರ ಜೂನಿಯರ್ ವಿಂಬಲ್ಡನ್ ಡಬಲ್ಸ್ ಪಂದ್ಯಾವಳಿಯನ್ನು ಗೆದ್ದ ಸಾನಿಯ, ಜೂನಿಯರ್ ವಿಂಬಲ್ಡನ್ ಮುಕ್ತ ಟೆನ್ನಿಸ್ ಪಂದ್ಯಾವಳಿ ಗೆದ್ದ ಅತ್ಯಂತ ಕಿರಿಯ ಭಾರತೀಯ ಕ್ರೀಡಾ ಪಟು ಮತ್ತು ಪ್ರಥಮ ಮಹಿಳಾ ಪಟುವಾದರು. ೨೦೦೩ರಲ್ಲಿಯೆ ತಮ್ಮ ೧೬ನೆ ವಯಸ್ಸಿನಲ್ಲಿ ಸಾನಿಯ ವೃತ್ತಿಪರ ಟೆನ್ನಿಸ್ ರಂಗಕ್ಕೆ ಪದಾರ್ಪಣೆ ಮಾಡಿದರು. ೨೦೦೫ನೆ ಆಸ್ಟ್ರೇಲಿಯಾ ಮುಕ್ತ ಟೆನ್ನಿಸ್ ಪಂದ್ಯಾವಳಿಯ ಮೂರನೆ ಸುತ್ತು ಮತ್ತು ೨೦೦೫ನೆ ಅಮೇರಿಕಾ ಮುಕ್ತ ಟೆನ್ನಿಸ್ ಪಂದ್ಯಾವಳಿಯ ನಾಲ್ಕನೆ ಸುತ್ತಿಗೆ ತಲುಪಿದ ಸಾನಿಯ ಯಾವುದೆ ಗ್ರ್ಯಾಂಡ್‌ಸ್ಲ್ಯಾಮ್ ಪಂದ್ಯದಲ್ಲಿ ಆ ಸುತ್ತಿನವರೆಗೆ ತಲುಪಿದ ಮೊದಲ ಹಾಗು ಎಕೈಕ ಭಾರತೀಯ ಮಹಿಳೆಯಾದರು. ೫ ಅಡಿ ೭ಇಂಚು ಎತ್ತರದ ಬಲಗೈ ಆಟಗಾರ್ತಿಯಾದ ಸಾನಿಯಾ ತಮ್ಮ ಉನ್ನತ ಸಾಧನೆಗಳಿಂದಾಗಿ ಭಾರತದೆಲ್ಲಡೆ ಅಭಿಮಾನಿಗಳನ್ನು ಹೊಂದಿದ್ದಾರೆ. ವಿಶ್ವಮಟ್ಟದಲ್ಲಿ ಇವರು ನೀಡಿರುವ ಉನ್ನತ ಪ್ರದರ್ಶನಕ್ಕಾಗಿ ಭಾರತ ಸರ್ಕಾರವು ೨೦೦೪ನೆ ವರ್ಷದ ಅರ್ಜುನ ಪ್ರಶಸ್ತಿಯನ್ನು ಇವರಿಗಿತ್ತು ಸನ್ಮಾನಿಸಿದೆ.
ಸಾಧನೆಗಳು
- ೨೦೦೫ ಅಮೇರಿಕಾ ಮುಕ್ತ ಟೆನ್ನಿಸ್ ಪಂದ್ಯಾವಳಿಯ ನಾಲ್ಕನೆ ಸುತ್ತಿಗೆ ಪ್ರವೇಶಿಸಿ ಯಾವುದೆ ಗ್ರ್ಯಾಂಡ್‌ಸ್ಲ್ಯಾಮ್ ಪಂದ್ಯದಲ್ಲಿ ನಾಲ್ಕನೆ ಸುತ್ತು ತಲುಪಿದ ಮೊದಲ ಹಾಗು ಎಕೈಕ ಭಾರತೀಯ ಮಹಿಳೆಯಾದರು (ಮೂರನೆ ಸುತ್ತಿನಲ್ಲಿ ಫ್ರಾಂಸ್‌ನ ಮೆರಿಯಾನ್ ಬಾರ್ಟೋಲಿಯವರನ್ನು ೭-೬, ೬-೪ ರಿಂದ ಸೊಲಿಸಿದರು ಮತ್ತು ನಾಲ್ಕನೆ ಸುತ್ತಿನಲ್ಲಿ ರಷ್ಯಾದ ಮರಿಯಾ ಶರಪೊವಾರಿಂದ ೬-೨, ೬-೧ ರಿಂದ ಪರಭಾವಗೊಂಡರು)
- ೨೦೦೫ ಫಾರೆಸ್ಟ್ ಹಿಲ್ಸ್ ವುಮನ್ಸ್ ಕ್ಲಾಸಿಕ್ ಟೆನ್ನಿಸ್ ಪಂದ್ಯಾವಳಿಯ ಫೈನಲ್ಸ್‌ನ್ನು ಪ್ರವೇಶಿಸಿದರು (ಫೈನಲ್ಸ್‌ನಲ್ಲಿ ಚೆಕ್ ರಿಪಬ್ಲಿಕ್‌ನ ಲೂಸಿ ಸಫರೊವರಿಂದ ೩-೬, ೭-೫, ೬-೪ರಿಂದ ಸೋಲುಕಂಡರು )
- ೨೦೦೫ ಆಕ್ಯುರಾ ಕ್ಲಾಸಿಕ್ ಪಂದ್ಯಾವಳಿಯಲ್ಲಿ ಮೂರನೆ ಸುತ್ತಿಗೆ ಪ್ರವೇಶಿಸಿದರು. (ಎರಡನೆ ಸುತ್ತಿನಲ್ಲಿ ಎಂಟನೆ ಕ್ರಮಾಂಕದ ರಷ್ಯಾದ ನಾಡಿಯ ಪೆಟ್ರೊವರನ್ನು ೬-೨, ೬-೧ ರಿಂದ ಸೊಲಿಸಿದರು ಮತ್ತು ಮೂರನೆ ಸುತ್ತಿನಲ್ಲಿ ಜಪಾನಿನ ಅಕಿಕೊ ಮೊರಗಾಮಿಯಿಂದ ೬-೨, ೬-೧ ರಿಂದ ಪರಭಾವಗೊಂಡರು). ಎಂಟನೆ ಕ್ರಮಾಂಕದ ನಾಡಿಯ ಪೆಟ್ರೊವರನ್ನು ಸೊಲಿಸಿದ ಕಾರಣ ಮೊದಲ ಬಾರಿ ಮೇಲಿನ ೫೦ನೆ ಕ್ರಮಾಂಕದ ಆಟಗಾರ್ತಿಯರ ಪಟ್ಟಿ ಸೇರಿದರು.
- ೨೦೦೫ ದುಬೈ ಮುಕ್ತ ಪಂದ್ಯಾವಳಿಯಲ್ಲಿ ಎರಡನೆ ಸುತ್ತಿನಲ್ಲಿ ೨೦೦೪ರ ಅಮೇರಿಕಾ ಮುಕ್ತ ಟೆನ್ನಿಸ್ ಪಂದ್ಯಾವಳಿಯ ವಿಜೇತೆಯಾದ ರಷ್ಯಾದ ಸ್ವೆತ್ಲಾನಾ ಕುಜ್ನೆಟ್ಸೊವರನ್ನು ೬-೪, ೬-೨ ರಿಂದ ಸೋಲಿಸಿ ಕ್ವಾಟರ್ ಫೈನಲ್ಸ್ ತಲುಪಿದರು (ಕ್ವಾಟರ್ ಫೈನಲ್ಸ್‌ನಲ್ಲಿ ಜೆಲೆನಾ ಜಾನ್ಕೊವಿಚ್‌ರಿಂದ ೬-೨, ೬-೨ ರಿಂದ ಸೋಲು ಕಂಡರು )
- ೨೦೦೫ ಹೈದರಾಬಾದ್ ಮುಕ್ತ ಟೆನ್ನಿಸ್ ಪಂದ್ಯಾವಳಿಯಲ್ಲಿ ಉಕ್ರೇನ್ ದೇಶದ ಅಲ್ಯೋನಾ ಬೊಂಡರೆಂಕೊರವರನ್ನು ೬-೪, ೫-೭, ೬-೩ ರಿಂದ ಫೈನಲ್ಸ್‌ನಲ್ಲಿ ಸೋಲಿಸಿ ಡಬ್ಲ್ಯುಟಿಎ ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು.
- ೨೦೦೫ ಆಸ್ಟೇಲಿಯಾ ಮುಕ್ತ ಟೆನ್ನಿಸ್ ಪಂದ್ಯಾವಳಿಯ ಮೂರನೆ ಸುತ್ತಿಗೆ ಪ್ರವೇಶಿಸಿ ಯಾವುದೆ ಗ್ರ್ಯಾಂಡ್‌ಸ್ಲ್ಯಾಮ್ ಪಂದ್ಯದಲ್ಲಿ ಮೂರನೆ ಸುತ್ತು ತಲುಪಿದ ಮೊದಲ ಹಾಗು ಎಕೈಕ ಭಾರತೀಯ ಮಹಿಳೆಯಾದರು (ಮೂರನೆ ಸುತ್ತಿನಲ್ಲಿ ಅಮೇರಿಕಾದ ಸರೀನಾ ವಿಲಿಯಮ್ಸ್‌ರಿಂದ ೬-೨, ೬-೧ ರಿಂದ ಪರಭಾವಗೊಂಡರು)
- ೨೦೦೪ ಹೈದರಾಬಾದ್ ಮುಕ್ತ ಡಬಲ್ಸ್ ಪಂದ್ಯಾವಳಿಯನ್ನು ಲೈಜೆಲ್ ಹ್ಯುಬೆರ್ ಜೊತೆ ಸೇರಿ ಗೆದ್ದು ಭಾರತದ ಅತ್ಯಂತ ಕಿರಿಯ ಡಬ್ಲ್ಯುಟಿಎ ಅಥವಾ ಎಟಿಪಿ ಟೂರ್ ಪಂದ್ಯಾವಳಿ ವಿಜೇತೆಯಾದರು ಮತ್ತು ಡಬ್ಲ್ಯುಟಿಎ ಟೂರ್ ಪಂದ್ಯಾವಳಿ ಗೆದ್ದ ಪ್ರಥಮ ಮಹಿಳೆಯಾದರು.
- ೨೦೦೩ ಜೂನಿಯರ್ ವಿಂಬಲ್ಡನ್ ಡಬಲ್ಸ್ ಪಂದ್ಯಾವಳಿಯನ್ನು ಅಲೀಸಾ ಕ್ಲೇಯ್ಬಾನೊವ ಜೊತೆಯಲ್ಲಿ ಗೆದ್ದು ಜೂನಿಯರ್ ವಿಂಬಲ್ಡನ್ ಮುಕ್ತ ಟೆನ್ನಿಸ್ ಪಂದ್ಯಾವಳಿ ಗೆದ್ದ ಅತ್ಯಂತ ಕಿರಿಯ ಭಾರತೀಯ ಆಟಗಾರ್ತಿ ಮತ್ತು ಪ್ರಥಮ ಮಹಿಳಾ ಪಟುವಾದರು
ಸಾನಿಯಾ ಮತ್ತು ಬೆಥನಿಗೆ ಅಪಿಯಾ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿ ಪ್ರಶಸ್ತಿ
- ದಿ.16-1-2015: ಸಾನಿಯಾ ಮಿರ್ಜಾ ಮತ್ತು ಬೆಥನಿ ಮಟೆಕ್ ಜೋಡಿ ಸಿಡ್ನಿಯಲ್ಲಿ ನಡೆದ ಅಪಿಯಾ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.
- ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತ– ಅಮೆರಿಕದ ಜೋಡಿ 6–3, 6–3 ರಲ್ಲಿ ಅಮೆರಿಕದ ಅಬಿಗೈಲ್ ಸ್ಪಿಯರ್ಸ್ ಹಾಗೂ ರಕ್ವೆಲ್ ಜೋನ್ಸ್ ವಿರುದ್ಧ ಗೆಲುವು ಪಡೆಯಿತು.
- ಸಾನಿಯಾ ಮತ್ತು ಬೆಥನಿ ಜತೆಯಾಗಿ ಪಡೆದ ಐದನೇ ಡಬ್ಲ್ಯುಟಿಎ ಪ್ರಶಸ್ತಿ ಇದಾಗಿದೆ. ಈ ಗೆಲುವು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಗೆ ಮುನ್ನ ಸಾನಿಯಾಗೆ ಅಗತ್ಯವಿದ್ದ ಆತ್ಮವಿಶ್ವಾಸವನ್ನು ನೀಡಿದೆ..[prajavani(ಪಿಟಿಐ)17/1/2015]
ವಿವಾದ
ಸಾನಿಯ ೨೦೦೫ರ ನವೆಂಬರ್‌ನಲ್ಲಿ ಸುರಕ್ಷಿತ ವಿವಾಹ ಪೂರ್ವ ಲೈಂಗಿಕ ಸಂಬಂಧದ ಬಗ್ಗೆ ಕೊಟ್ಟ ಹೇಳಿಕೆ ವಿವಾದವನ್ನು ಮಾಡಿತು. ಹಲವಾರು ಕಡೆ ಆಕೆಯ ಹೇಳಿಕೆಯ ತೀವ್ರ ಖಂಡನೆ ನೆಡಯಿತು ಮತ್ತು ಕೆಲವು ಕಡೆ ಆಕೆಯ ಪ್ರತಿಕ್ಕೃತಿ ದಹನ ಕೂಡ ನೆಡಯಿತು. ತಾನು ವಿವಾಹ ಪೂರ್ವ ಲೈಂಗಿಕ ಸಂಬಂಧವನ್ನು ಪುರಸ್ಕರಿಸಿಲ್ಲ ಎಂದು ಸಾನಿಯ ಮತ್ತೊಂದು ಹೇಳಿಕೆಯನ್ನು ನೀಡಿದರೂ ಕೂಡ ವಿವಾದ ಅವರ ಬೆನ್ನು ಬಿಡಲಿಲ್ಲ. ಹಲವಾರು ಮುಸಲ್ಮಾನ ಸಂಪ್ರದಾಯವಾದಿಗಳು ಸಾನಿಯ ಟೆನ್ನಿಸ್ ಆಡುವಾಗ ಧರಿಸುವ ಪೋಷಾಕಿನ ಬಗ್ಗೆ ಕೂಡ ಆಕ್ಷೇಪವೆತ್ತಿದ್ದಾರೆ. ಆದರೆ ವಿಚಾರವಾದಿಗಳು ಆಕೆಯನ್ನು ಎರಡು ವಿಚಾರದಲ್ಲಿ ಸಮರ್ಥಿಸಿದರು.
ಡಬ್ಲ್ಯುಟಿಎ ರ್‍ಯಾಂಕಿಂಗ್ 2015-16
ಭಾರತದ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ವಿಭಾಗದ ರ್‍ಯಾಂಕಿಂಗ್ ೧೧-೧-೨೦೧೬ / 11-1-2016 ರಂದು ಬಿಡುಗಡೆಯಾದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದು ವರಿದಿದ್ದಾರೆ. ಸೋಮ ವಾರ ಬಿಡುಗಡೆಯಾದ ಡಬ್ಲ್ಯುಟಿಎ ರ್‍ಯಾಂಕಿಂಗ್ ಪಟ್ಟಿಯಲ್ಲಿ 11,395 ಪಾಯಿಂಟ್ಸ್ ಹೊಂದಿದ್ದಾರೆ. ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಎರಡನೇ ಸ್ಥಾನದಲ್ಲಿದ್ದಾರೆ.ಮಾರ್ಟಿ ನಾ 11,355 ಪಾಯಿಂಟ್ಸ್ ಗಳಿಸಿದ್ದಾರೆ. ಇವರಿಬ್ಬರೂ ಸೇರಿ ಒಟ್ಟು 26 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ೨೦೧೬ ರ ಆರಂಭದಲ್ಲಿ ಅವರು ಬ್ರಿಸ್ಟೆನ್‌ನಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು.[3]
ಡಬ್ಲ್ಯುಟಿಎ ಅಪಿಯಾ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿ2016
ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಡಬ್ಲ್ಯುಟಿಎ ಅಪಿಯಾ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಭಾರತ ಮತ್ತು ಸ್ವಿಸ್ ಜೋಡಿ ಜತೆಯಾಗಿ ಆಡಲು ಶುರುಮಾಡಿದ ಬಳಿಕ ಗೆದ್ದ 11ನೇ ಪ್ರಶಸ್ತಿ ಇದಾಗಿದೆ. ಡಬಲ್ಸ್ ವಿಭಾಗದಲ್ಲಿ ಗುರುವಾರವಷ್ಟೇ ಸತತ 29ನೇ ಪಂದ್ಯ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದ ಸಾನಿಯಾ ಮತ್ತು ಮಾರ್ಟಿನಾ ಈ ಟೂರ್ನಿಯ ಫೈನಲ್ ನಲ್ಲೂ ಜಯ ಪಡೆದು ಒಟ್ಟು ಪಂದ್ಯದ ಜಯದ ಸಂಖ್ಯೆಯನ್ನು 30ಕ್ಕೆ ಹೆಚ್ಚಿಸಿ ಕೊಂಡರು. ಫೈನಲ್ ಹೋರಾಟದಲ್ಲಿ ಸಾನಿಯಾ ಮತ್ತು ಮಾರ್ಟಿನಾ ಹಿಂಗಿಸ್ 1–6, 7–5, 10–5ರಲ್ಲಿ ಕ್ಯಾರೋಲಿನಾ ಗ್ರೇಸಿಯಾ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಚ್ ಅವರನ್ನು ಸೋಲಿಸಿದರು.[4]
ಪದ್ಮವಿಭೂಷಣ ಪ್ರಶಸ್ತಿ ೨೦೧೬
- ೨೦೧೬ ರ ಕೇಂದ್ರ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿಯು ಟೆನ್ನಿಸ್` ಆಟಗಾರಳಾದ ಸಾನಿಯಾ ಮಿರ್ಜಾ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಲಭಿಸಿದೆ.೨೫-೧-೨೦೧೬ ರಂದು ಘೋಷಣೆ ಮಾಡಿದ್ದು ದಿ..೨೬-೧-೨೦೧೬ ರಂದು ಪ್ರದಾನ ಮಾಡಲಾಗುವುದು.[5][6]
ಠಿಸ್ ಇಸ್ ಅ ತೆಸ್ತ್ ಸೆನ್ತ್ತೆನ್ಚೆ
ಗ್ರ್ಯಾಂಡ್‌ಸ್ಲಾಮ್ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ 2016
ಮೆಲ್ಬರ್ನ್`ನಲ್ಲಿ ನೆಡೆದ ಗ್ರ್ಯಾಂಡ್‌ಸ್ಲಾಮ್ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಶುಕ್ರವಾರ 29-1-2016ರಂದು ಪ್ರಶಸ್ತಿ ಗೆದ್ದುಕೊಂಡಿತು.ಈ ಪಂದ್ಯ ಬೆಳಿಗ್ಗೆ ಒಂದು ಗಂಟೆ 45 ನಿಮಿಷ ನಡೆದ ಹೋರಾಟದಲ್ಲಿ ವಿಶ್ವದ ಅಗ್ರಗಣ್ಯ ಜೋಡಿಯಾದ ಸಾನಿಯಾ ಮತ್ತು ಹಿಂಗಿಸ್, ಏಳನೇ ಶ್ರೇಯಾಂಕದ ಜೆಕ್ ಗಣರಾಜ್ಯದ ಆ್ಯಂಡ್ರಿಯಾ ಹ್ಲಾವಕ್ಚೋವಾ ಮತ್ತು ಲೂಸಿಯಾ ರ್ಯಾಡಿಕಾ ಜೋಡಿಯ ವಿರುದ್ಧ 7–6(1), 6–3(2) ನೇರ ಸೆಟ್`ಗಳಲ್ಲಿ ಗೆಲುವು ಸಾಧಿಸಿದರು.[7]
ಉಲ್ಲೇಖಗಳು
- "Sania Mirza". Women's Tennis Association. Retrieved 24 July 2015.
- ಸಾನಿಯಾರ ಬಗ್ಗೆ wtatennis.com ನಲ್ಲಿರುವ ಅಧಿಕೃತ ಮಾಹಿತಿ
- http://timesofindia.indiatimes.com/india/Padma-Awards-2016-Prominent-awardees/articleshow/50723510.cms
- http://india.gov.in/67th-republic-day-awards-and-medals
- http://www.deccanherald.com/content/525839/sania-martina-win-aussie-open.html
ಬಾಹ್ಯ ಸಂಪರ್ಕಗಳು
![]() |
ವಿಕಿಮೀಡಿಯ ಕಣಜದಲ್ಲಿ Sania Mirza ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- ಸಾನಿಯಾ ಮಿರ್ಜಾ at the International Tennis Federation