ಸರೋವರ
ಪ್ರಮಾಣದ ಜಲಸಮೂಹಗಳಿಗೆ ಸರೋವರ ಎನ್ನುತ್ತಾರೆ. ಪ್ರಪಂಚದ ಬಹುಪಾಲು ಸರೋವರಗಳು ಸಿಹಿ ನೀರನ್ನು ಹೊಂದಿರುವವು. ಭೂಮಿಯ ಉತ್ತರ ಗೋಳಾರ್ಧದಲ್ಲಿ, ಅದರಲ್ಲೂ ಉತ್ತರ ಅಕ್ಷಾಂಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಅತ್ಯಂತ ದೊಡ್ಡ ಸರೋವರಗಳು ಒಳಪ್ರದೇಶದ ಸಮುದ್ರಗಳೆಂದೂ ಕರೆಯಲ್ಪಡುತ್ತವೆ. ಶೇಕಡ ೬೦ಕ್ಕೂ ಹೆಚ್ಚು ಸರೋವರಗಳನ್ನು ಕೆನಡದಲ್ಲಿ ಕಾಣಬಹುದು. ಫಿನ್‌ಲ್ಯಾಡ್ ಸಾವಿರ ಸರೋವರಗಳ ಭೂಮಿಯೆಂದು ಕರೆಯಲ್ಪಟ್ಟಿದೆ. ಸರೋವರದ ನೀರು ನದಿಗಳು ಹರಿದಂತೆ ಹರಿಯುವುದಿಲ್ಲ.

ಅರ್ಜೆಂಟೀನ ಲೇಕ್
.jpg)
ಅಮೇರಿಕಾ ದೇಶದ ಆರೆಗಾನ್ ರಾಜ್ಯದಲ್ಲಿನ ಬಿಲ್ಲಿ ಚಿನೂಕ್ ಸರೋವರ
ಭೂಪ್ರದೇಶದಿಂದ ಆವೃತವಾಗಿರುವ
ಮಾನವರು ವಿದ್ಯುಚ್ಛಕ್ತಿ ಉತ್ಪಾದನೆಗೆ, ಕುಡಿಯುವ ನೀರಿಗೆ, ಕೈಗಾರಿಕೆಗೆ ಮತ್ತಿತರ ಉಪಯೋಗಗಳಿಗೆ ಹಲವು ಸರೋವರಗಳನ್ನು ಕೃತಕವಾಗಿ ಕೂಡ ನಿರ್ಮಿಸಿದ್ದಾರೆ.
ಪ್ರಮುಖ ಸರೋವರಗಳು
- ಪ್ರಪಂಚದ ಅತ್ಯಂತ ದೊಡ್ಡ ಸರೋವರ ಕ್ಯಾಸ್ಪಿಯನ್ ಸಮುದ್ರ.
- ಸೈಬೀರಿಯಾದ ಬೈಕಲ್ ಸರೋವರ ಪ್ರಪಂಚದ ಅತ್ಯಂತ ಆಳದ ಮತ್ತು ಅತ್ಯಂತ ಹೆಚ್ಚು ಜಲಸಮೂಹವನ್ನು ಹೊಂದಿರುವ ಸರೋವರ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.