ಸಚಿನ್ ತೆಂಡೂಲ್ಕರ್

ಸಚಿನ್ ರಮೇಶ್ ತೆಂಡೂಲ್ಕರ್ (ಜನನ: ೨೪-ಏಪ್ರಿಲ್-೧೯೭೩) ಭಾರತದ ಕ್ರಿಕೆಟ್ ಆಟಗಾರ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ವಿಸ್ಡನ್ ಪತ್ರಿಕೆ ಇವರನ್ನು ಸರ್ ಡಾನ್ ಬ್ರಾಡ್ಮನ್ ನಂತರ ವಿಶ್ವದ ಅತಿ ಶ್ರೇಷ್ಠ ಆಟಗಾರರೆಂದು ಹೆಸರಿಸಿತ್ತು.

ಸಚಿನ್ ತೆಂಡೂಲ್ಕರ್

ಚಿತ್ರ:Flag of africa he is a veeeeery good player.svg [[ ಕ್ರಿಕೆಟ್ ತಂಡ|]]
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರು ಸಚಿನ್ ರಮೇಶ್ ತೆಂಡೂಲ್ಕರ್
ಅಡ್ಡಹೆಸರು ಲಿಟ್ಟಲ್ ಮಾಸ್ಟರ್, ತೆಂಡ್ಲ್ಯಾ,, ಮಾಸ್ಟರ್ ಬ್ಲಾಸ್ಟರ್,
ಹುಟ್ಟು ಏಪ್ರಿಲ್ ೨೪ ೧೯೭೩
ಮುಂಬಯಿ, ಭಾರತ
ಎತ್ತರ
ಎತ್ತರ
ಪಾತ್ರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್
ಬ್ಯಾಟಿಂಗ್ ಶೈಲಿ ಬಲಗೈ
ಬೌಲಿಂಗ್ ಶೈಲಿ ಬಲಗೈ ಲೆಗ್-ಬ್ರೇಕ್/ಆಫ್-ಬ್ರೇಕ್/ಮಧ್ಯಮ
ಅಂತರರಾಷ್ಟ್ರೀಯ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap ೧೭೧) ನವೆಂಬರ್ ೧೫-೨೦ ೧೯೮೯: v ಪಾಕಿಸ್ತಾನ, ಕರಾಚಿ.
ಕೊನೆಯ ಟೆಸ್ಟ್ ಪಂದ್ಯ ನವೆಂಬರ್ ೧೪-೧೬ ೨೦೧೩: v ವೆಸ್ಟ್ ಇಂಡೀಸ್, ಮುಂಬಯಿ
ODI ಪಾದಾರ್ಪಣೆ (cap ೭೪) ಡಿಸೆಂಬರ್ ೧೮ ೧೯೮೯: v ಪಾಕಿಸ್ತಾನ, ಗುಜ್ರಾನ್ವಾಲಾ
ಕೊನೆಯ ODI ಪಂದ್ಯ ಮಾರ್ಚ್ ೧೮ ೨೦೧೨: v ಪಾಕಿಸ್ತಾನ, ಢಾಕಾ
ODI ಅಂಗಿಯ ಸಂಖ್ಯೆ ೧೦
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
೧೯೮೮–೨೦೧೩ ಮುಂಬಯಿ
೧೯೯೨ ಯಾರ್ಕ್‍ಷೈರ್
೨೦೦೮-೨೦೧೩ ಮುಂಬಯಿ ಇಂಡಿಯನ್ಸ್
ಏಷ್ಯಾ ೧೧
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ಏ.ದಿ.ಪಪ್ರ.ದ.ಕ್ರಿಪಟ್ಟಿ ಎ
ಪಂದ್ಯಗಳು ೨೦೦ ೪೬೩ ೩೧೦ ೫೫೧
ಒಟ್ಟು ರನ್ನುಗಳು ೧೫,೯೨೧ ೧೮.೪೩೬ ೨೫.೩೯೬ ೨೧,೯೯೯
ಬ್ಯಾಟಿಂಗ್ ಸರಾಸರಿ ೫೩.೭೮ ೪೪.೮೩ ೫೭.೯೨ ೪೫.೫೪
೧೦೦/೫೦ ೫೧/೬೮ ೪೯/೯೬ ೮೧/೧೧೬ ೬೦/೧೧೪
ಅತೀ ಹೆಚ್ಚು ರನ್ನುಗಳು ೨೪೮* ೨೦೦* ೨೪೮* ೨೦೦*
ಬೌಲ್ ಮಾಡಿದ ಚೆಂಡುಗಳು ೪೨೪೦ ೮.೦೫೪ ೭,೫೬೯ ೧೦,೨೩೦
ವಿಕೇಟುಗಳು ೪೬ ೧೫೪ ೭೧ ೨೦೧
ಬೌಲಿಂಗ್ ಸರಾಸರಿ ೫೪.೧೭ ೪೪.೪೮ 62.15 ೪೨.೧೪
೫ ವಿಕೆಟುಗಳು ಇನ್ನಿಂಗ್ಸಿನಲ್ಲಿ 0 0
೧೦ ವಿಕೆಟುಗಳು ಪಂದ್ಯದಲ್ಲಿ 0 0
ಶ್ರೇಷ್ಠ ಬೌಲಿಂಗ್ ೩/೧೦ ೫/೩೨ ೩/೧೦ ೫/೩೨
ಕ್ಯಾಚುಗಳು /ಸ್ಟಂಪಿಂಗ್‍ಗಳು ೧೧೫/– ೧೪೦/– ೧೮೬/– ೧೭೫/–

ದಿನಾಂಕ ೨೮ ನವೆಂಬರ್, ೨೦೧೩ ವರೆಗೆ.
ಮೂಲ: Cricinfo

ಕ್ರಿಕೆಟ್ ಬಗೆಗಿನ ಪ್ರೀತಿ

ಬಾಲಕನಾಗಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯ ತೋರಿದ ಬಲಗೈ ಬ್ಯಾಟ್ಸ ಮನ್ ಸಚಿನ್, ಮುಂಬಯಿ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ನಂತರ, ತಮ್ಮ ಹದಿನಾರನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ೧೯೮೯ರಲ್ಲಿ ಟೆಸ್ಟ್ ಪಂದ್ಯ ಆಡುವುದರ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್‍ ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರರಾದರು. ಒಂದು ದಿನದ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಬ್ಯಾಟ್ ಮಾಡುವ ಸಚಿನ್, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೆ ಕ್ರಮಾಂಕ ದಲ್ಲಿ ಆಡುವುದು ಸಾಮಾನ್ಯ. ಅವಶ್ಯವೆನಿಸಿದಾಗ, ನಿಧಾನ ವೇಗದ ಬೌಲಿಂಗ್ ಕೂಡ ಮಾಡುವುದುಂಟು. ೧೬ ನವಂಬರ್ ೨೦೧೩ರಂದು, ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಿದ ದಿನ, ಭಾರತ ಸರ್ಕಾರವು ಅವರಿಗೆ ಸರ್ವೋಚ್ಚ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಘೋಷಿಸಿತು. [1] ಇದನ್ನು ಅವರು ತಮ್ಮ ತಾಯಿಗೆ ಅರ್ಪಿಸಿದರು. [2]

ವಿಶ್ವ ದಾಖಲೆಗಳು

  1. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು.
  2. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು
  3. ಅತಿ ಹೆಚ್ಚು ಟೆಸ್ಟ್ ಪಂದ್ಯಗಳು
  4. ಅತಿ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು
  5. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ರನ್ನುಗಳು
  6. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು
  7. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗಳು
  8. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೨೦೦ ರನ್ ಹೊಡೆದ ಮೊದಲ ಆಟಗಾರ
  9. ವಿಶ್ವಕಪ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ನುಗಳು
  10. ಟೆಸ್ಟ್ ಪಂದ್ಯಗಳಲ್ಲಿ ೫೦ ಶತಕಗಳಿಸಿದ ವೊದಲನೆ ಆಟಗಾರ

ಇತರೆ ಮಾಹಿತಿ

  • ಮೂರನೆ ಅಂಪೈರ್ ನಿರ್ಣಯದಿಂದ ರನ್‍ಔಟ್ ಆದ ಮೊದಲ ಆಟಗಾರ.
  • ಯಾರ್ಕ್‍ಶೈರ್ ತಂಡದ ಪರವಾಗಿ ಮೊದಲ ಬಾರಿಗೆ ಆಡಿದ ಬೇರೆ ದೇಶದ ಆಟಗಾರ

ನಿವೃತ್ತಿ

  • ಡಿಸೆಂಬರ್ ೨೩,೨೦೧೨ ರಂದು ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು.
  • ನವೆಂಬರ್ ೧೬,೨೦೧೩ ರಂದು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು.

ಪ್ರಶಸ್ತಿ, ಗೌರವ

  1. ಭಾರತರತ್ನ
  2. ಪದ್ಮವಿಭೂಷಣ ಪ್ರಶಸ್ತಿ
  3. ಪದ್ಮಶ್ರೀ ಪ್ರಶಸ್ತಿ
  4. ರಾಜೀವ್ ಗಾಂಧಿ ಖೇಲ್ ರತ್ನ

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

  1. http://timesofindia.indiatimes.com/india/President-awards-Bharat-Ratna-to-Sachin-Tendulkar/articleshow/25887414.cms
  2. http://sports.ndtv.com/cricket/sachin/news/217031-sachin-tendulkar-to-be-given-bharat-ratna-prime-ministers-office
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.