ಸಂಸ್ಕೃತ ಸಾಹಿತ್ಯ

ಸಂಸ್ಕೃತದಲ್ಲಿನ ಸಾಹಿತ್ಯವು ವೇದಗಳೊಂದಿಗೆ ಆರಂಭವಾಗುತ್ತದೆ, ಮತ್ತು ಕಬ್ಬಿಣ ಯುಗದ ಭಾರತಸಂಸ್ಕೃತ ಮಹಾಕಾವ್ಯಗಳೊಂದಿಗೆ ಮುಂದುವರಿಯುತ್ತದೆ; ಶಾಸ್ತ್ರೀಯ ಸಂಸ್ಕೃತ ಸಾಹಿತ್ಯದ ಸುವರ್ಣ ಯುಗವು ಪ್ರಾಚೀನಕಾಲದ ಉತ್ತರಾರ್ಧದ ಕಾಲಮಾನದ್ದಾಗಿದೆ (ಸರಿಸುಮಾರು ಕ್ರಿ.ಪೂ. ೧ನೆಯ ಶತಮಾನದಿಂದ ಕ್ರಿ.ಶ. ೮ನೆಯ ಶತಮಾನ). ಸಾಹಿತ್ಯಕ ನಿರ್ಮಾಣವು ಕ್ರಿ.ಶ ೧೧೦೦ ನಂತರ ಕ್ಷೀಣಿಸುವ ಮೊದಲು ೧೧ನೆಯ ಶತಮಾನದಲ್ಲಿ ತಡವಾದ ಅರಳುವಿಕೆ ಕಂಡಿತು. (೨೦೦೨ರಿಂದ) "ಅಖಿಲ ಭಾರತ ಸಂಸ್ಕೃತ ಉತ್ಸವ"ದಂತಹ ಸಂದರ್ಭಗಳು ರಚನಾ ಸ್ಪರ್ಧೆಗಳನ್ನು ನಡೆಸುವುದರೊಂದಿಗೆ ಪುನರುಜ್ಜೀವನಕ್ಕೆ ಸಮಕಾಲೀನ ಪ್ರಯತ್ನಗಳು ನಡೆದಿವೆ.

ದೇವಿ ಮಾಹಾತ್ಮ್ಯದ ಅತ್ಯಂತ ಹಳೆಯ ಉಳಿದುಕೊಂಡಿರುವ ಹಸ್ತಪ್ರತಿ, ೧೧ನೇ ಶತಮಾನ.

ಪ್ರಾಚೀನ ಸಂಸ್ಕೃತ ಸಾಹಿತ್ಯದ ಪಕ್ಷಿನೋಟ

ಭಾರತದ ಪ್ರಾಚೀನ ಸಂಸ್ಕೃತ ಸಾಹಿತ್ಯ
ವೇದಗಳು(ಶ್ರುತಿಗಳು):ಋಗ್ವೇದಯಜುರ್ವೇದಸಾಮವೇದಅಥರ್ವವೇದವೇದ ವಿಭಾಗ>1.ಸಂಹಿತೆಗಳು((ಶ್ರುತಿಗಳು)2.ಬ್ರಾಹ್ಮಣಗಳು3.ಅರಣ್ಯಕಗಳು> <(ಉಪನಿಷತ್ತುಗಳು)
ಉಪವೇದಗಳು1.ಆಯುರ್ವೇದ2.ಧನುರ್ವೇದ3.ಗಾಂಧರ್ವ ವೇದ4.ಅರ್ಥ ವೇದ....
ವೇದಾಂಗಗಳು1.ವ್ಯಾಕರಣ2.ಜ್ಯೋತಿಷ್ಯ3.ನಿರುಕ್ತ4.ಶಿಕ್ಷಾ5.ಛಂದಸ್ಸು6.ಕಲ್ಪ ಸೂತ್ರ..
ಸ್ಮೃತಿಗಳು:ಮನುಸ್ಮೃತಿನಾರದ ಸ್ಮೃತಿಪರಾಶರ ಸ್ಮೃತಿ.....
ದರ್ಶನಶಾಸ್ತ್ರ:1.ಪೂರ್ವಮೀಮಾಂಸ2.ನ್ಯಾಯ3.ವೈಶೇಷಿಕ4.ಸಾಂಖ್ಯ5.ಯೋಗ6.ಉತ್ತರ ಮೀಮಾಂಸ[ಬ್ರಹ್ಮ ಸೂತ್ರ].
ಪುರಾಣಗಳು

(18ಪುರಾಣಗಳು)

1.ಬ್ರಹ್ಮ ಪುರಾಣ 2.ಪದ್ಮ ಪುರಾಣ

3.ಭಾಗವತ 4.ವಿಷ್ಣು ಪುರಾಣ

5.ಭಾಗವತ [ದೇವೀ] 6.ನಾರದೀಯ

7.ಮಾರ್ಕಾಂಡೇಯ, 8.ಅಗ್ನಿ ಪುರಾಣ

9.ಭವಿಷ್ಯತ್ 10.ಬ್ರಹ್ಮ ವೈವರ್ತ

11. ಲಿಂಗ ಪುರಾಣ 12.ವರಾಹ ಪುರಾಣ

13. ಸ್ಕಾಂದ ಪುರಾಣ 14.ವಾಮನ ಪುರಾಣ

15.ಕೂರ್ಮ ಪುರಾಣ. 16. ಮತ್ಸ್ಯ ಪುರಾಣ

17. ಗರುಡ ಪುರಾಣ. 18.ಬ್ರಹ್ಮಾಂಡ ಪುರಾಣ

ಉಪ ಪುರಾಣಗಳು.1.ಸನತ್ಕುಮಾರ ಪುರಾಣ

2.ನಂದಿಪುರಾಣ

3.ಶಿವಧರ್ಮಪುರಾಣ

4.ದುರ್ವಾಸಪುರಾಣ

5.ನಾರದೀಯಪುರಾಣ

6.ಕಪಿಲಪುರಾಣ

7.ಮಾನವಪುರಾಣ

8.ಉಶನಃಪುರಾಣ

9.ಬ್ರಹ್ಮಾಂಡಪುರಾಣ

10.ವಾರುಣಪುರಾಣ

11.ಕಾಳೀಪುರಾಣ

12.ವಾಪಿಷ್ಠಲೈಂಗಪುರಾಣ

13.ಸಾಂಬಪುರಾಣ

14.ಸೌರಪುರಾಣ

15.ಪರಾಶರಪುರಾಣ

16.ಮರೀಚಿಪುರಾಣ

17.ಭಾರ್ಗವಪುರಾಣ

18.ನಾರಸಿಂಹಪುರಾಣ(2ನೆಯದು)

ಇತಿಹಾಸಗಳು:ರಾಮಾಯಣಮಹಾಭಾರತ(ಗೀತೆ).....
ಇತರೆ ಕೃತಿಗಳು:ದಾರ್ಶನಿಕರ ಕೃತಿಗಳುಯೋಗಿಗಳಕೃತಿಗಳುಭಕ್ತರ ಕೃತಿಗಳುಸೂತ್ರಗಳುಇತ್ಯಾದಿ..

[1] [2]

ನೋಡಿ

ಉಲ್ಲೇಖ

  1. ಪುರಾಣ ಭಾರತ ಕೋಶ, ಜನಪ್ರಿಯ ಪುಸ್ತಕ ಮಾಲೆ, ಕರ್ನಾಟಕ ಸರ್ಕಾರ, ಕನ್ನಡ ಪ್ರಾಧಿಕಾರ ಬೆಂಗಳೂರು,(ಯಜ್ಞನಾರಾಯಣ ಉಡುಪ-ಸಂಗ್ರಹಕಾರರು.)
  2. Radhavallabh Tripathi, ed. (1992), Ṣoḍaśī: An Anthology of Contemporary Sanskrit Poets
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.