ಶ್ರೀ ಚಾಮರಾಜೇಂದ್ರ ಮೃಗಾಲಯ
ಮೈಸೂರು ಮೃಗಾಲಯ ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯ ಮೈಸೂರು ಅರಮನೆ ಸಮೀಪವಿದೆ. ೨೪೫ ಎಕ್ಕರೆಯಷ್ಟು ಇರುವ ಈ ಮೃಗಾಲಯ ದಕ್ಷಿಣ ಭಾರತದ ಪ್ರಾಚೀನ ಪ್ರಸಿದ್ದ ಮೃಗಾಲಯಗಳಲ್ಲಿ ಒಂದು. ವಿವಿಧ ಸೀಮೆ, ವಿವಿಧ ಪಂಗಡ ಪ್ರಾಣಿ - ಪಕ್ಷಿ, ಸರೀಸೃಪಗಳನ್ನು ಇಲ್ಲಿ ಕಾಣಬಹುದು. ಮೈಸೂರು ಆಕರ್ಷಣೆ ಸ್ಥಳಗಳಲ್ಲಿ ಈ ಮೃಗಾಲಯ ಸಹ ಒಂದು. ೧೮೯೨ ರಾಜವಂಶದ ಆಶ್ರಯದಲ್ಲಿ ಸ್ಥಾಪಿತವಾದ ಕಾರಣ, ವಿಶ್ವದ ಪ್ರಾಚೀನ ಪ್ರಸಿದ್ದ ಮೃಗಾಲಯಗಳ ಪಟ್ಟಿಯಲ್ಲೂ ಸಹ ಇದು ಸೇರುತ್ತದೆ. ಕೇವಲ ಪ್ರವೇಶ ಶುಲ್ಕದ ಆಧಾರದ ಮೇಲೆ ನಡೆಯುತ್ತಿದ್ದ ಈ ಮೃಗಾಲಯ ಸಂಸ್ಥೆ ೨೦೦೦ರಲ್ಲಿ ಪ್ರಾಣಿ ಪ್ರಿಯರಿಂದ ದತ್ತು ಸ್ವೀಕಾರವನ್ನು ಪ್ರಾರಂಭಿಸಿದ್ದು, ಅಭಿವೃದ್ದಿಯ ಹಂತ ಹೊಂದಿದೆ. ಮೈಸೂರು ಮೃಗಾಲಯ ಮೊದಲು ೧೦.೯ ಎಕರೆ ಪ್ರದೇಶದಲ್ಲಿ ಪ್ರಾರಂಭಗೊಂಡು ೧೯೦೭ರಲ್ಲಿ ಮಾತ್ತೊಂದು ೬.೨೨ ಎಕರೆ ಪ್ರದೇಶ ಸೇರ್ಪದೆಗೊಂಡಿತು. ಮುಂದೆ ೪೫ ಎಕರೆ ಪ್ರದೇಶಕ್ಕೆ ವ್ಯಾಪಿಸಿತು. ಆ ನಂತರ ಡಾ.ಎಂ.ಹೆಚ್.ಮರಿಗೌಡರ ಪ್ರಯತ್ನದಿಂದ ಮುಂದೆ ೮೦.೧೩ ಎಕರೆ ಪ್ರದೇಶ ವ್ಯಾಪಿಸಿತು. ಕರ್ನಾಟಕ ಸರ್ಕರದವು ಕಾರಂಜಿ ಕೆರೆಯ ೭೭.೦೨ ಎಕರೆ ಪ್ರದೇಶವು ೧೯೭೬ರಲ್ಲಿ ಸೇರ್ಪಡೆ ಗೊಳಿಸಿದರು.[1]
ಮೈಸೂರು ಮೃಗಾಲಯ | |
---|---|
ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ | |
ಬಗೆ | ಮೃಗಾಲಯ |
ಸ್ಥಳ | ಮೈಸೂರು, ಭಾರತ |
ನಿರ್ದೇಶಾಂಕಗಳು | 12.3008°N 76.6677°E |
ವಿಸ್ತರಣೆ | 157 ಎಕರೆ + 113 ಎಕರೆ |
Created | 1892 |
ಜಾಲತಾಣ | www |