ಶತಮಾನ

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದಲ್ಲಿ ಈಗ ೨೧ನೇ ಶತಮಾನ ನಡೆಯುತ್ತಿದೆ. ಈ ಶತಮಾನವು ೨೦೦೧ನೇ ವರ್ಷದಲ್ಲಿ ಪ್ರಾರಂಭವಾಗಿದ್ದು, ೨೧೦೦ನೇ ವರ್ಷಕ್ಕೆ ಕೊನೆಗೊಳ್ಳುತ್ತದೆ. ಅದೇ ರೀತಿ ಇಪ್ಪತ್ತನೆಯ ಶತಮಾನವು ೧೯೦೧ರಲ್ಲಿ ಪ್ರಾರಂಭಗೊಂಡು, ೨೦೦೦ರಲ್ಲಿ ಕೊನೆಗೊಂಡಿತು.

ಶತಮಾನ - ನೂರು ವರ್ಷಗಳ ಅವಧಿಗೆ ಶತಮಾನ ಎನ್ನಲಾಗುತ್ತದೆ.

ಹತ್ತು ಶತಮಾನಗಳ ಅವಧಿಗೆ "ಸಾವಿರ ವರ್ಷಾವಧಿ" ಅಥವಾ "ಸಹಸ್ರ ವರ್ಷಾವಧಿ" (ಮಿಲ್ಲೇನ್ನಿಯಂ) ಎನ್ನುವರು.

ಇತರ ಕ್ಯಾಲೆಂಡರ್ ವ್ಯವಸ್ಥೆಗಳಲ್ಲಿ ಕಾಲದ ಘಟಕಗಳು

ಗ್ರೆಗೋರಿಯನ್ ಕ್ಯಾಲೆಂಡರ್ ಜೊತೆಗೆ ಜುಲಿಯನ್ ಕ್ಯಾಲಂಡರ್, ಅಜ್ಟೆಕ್ ಕ್ಯಾಲೆಂಡರ್ ಮತ್ತು ಹಿಂದೂ ಕ್ಯಾಲೆಂಡರ್'ಗಳೂ ಇಡೀ ವರ್ಷದ ಆವೃತ್ತಿಯ ಕಾಲಾವಧಿಯನ್ನು ರೇಖಿಸಲು ಬಳಸಲಾಗುತ್ತದೆ; ನಿರ್ದಿಷ್ಟವಾಗಿ, ಹಿಂದೂ ಕ್ಯಾಲೆಂಡರ್, ಅದರ ವರ್ಷಗಳನ್ನು ೬೦ ಗುಂಪುಗಳಾಗಿ ವಿಂಗಡಿಸಿದರೆ.., ಅಜ್ಟೆಕ್ ಕ್ಯಾಲೆಂಡರ್ ವರ್ಷಗಳನ್ನು ೫೨ ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ಪರಿಗಣಿಸಲಾಗಿದೆ.

ಇವನ್ನೂ ನೋಡಿ

  • ಇಪ್ಪತ್ತೊಂದನೆಯ ಶತಮಾನದ ವರ್ಷಗಳಲ್ಲಿನ ವಿದ್ಯಮಾನಗಳ ಲೇಖನಗಳು
  • ಇಪ್ಪತ್ತನೆಯ ಶತಮಾನದ ವರ್ಷಗಳಲ್ಲಿನ ವಿದ್ಯಮಾನಗಳ ಲೇಖನಗಳು
  • ಹತ್ತೊಂಬತ್ತನೆಯ ಶತಮಾನದ ವರ್ಷಗಳಲ್ಲಿನ ವಿದ್ಯಮಾನಗಳ ಲೇಖನಗಳು
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.