ವ್ಯಾಸ ದೇಶಪಾಂಡೆ

ವ್ಯಾಸ ದೇಶಪಾಂಡೆ ಇವರು ೧೯೪೯ ಅಕ್ಟೋಬರ ೧ ರಂದು ನವಲಗುಂದದಲ್ಲಿ ಜನಿಸಿದರು. ತಂದೆ ಎಲ್.ಎಮ್.ದೇಶಪಾಂಡೆ ಪೋಲೀಸ್ ಅಧೀಕ್ಷಕರು. ತಾಯಿ ಊರ್ಮಿಳಾ ಸಾಹಿತ್ಯ ಓದುವದರಲ್ಲಿ ಹಾಗು ರಚಿಸುವದರಲ್ಲಿ ಆಸಕ್ತರು. ಇವರ ಪತ್ನಿ ಶ್ರೀಮತಿ ಅರುಂಧತಿಯವರು ಸಹ ಲೇಖಕಿಯಾಗಿ ಹೆಸರು ಪಡೆದಿದ್ದಾರೆ.

ವ್ಯಾಸ ದೇಶಪಾಂಡೆಯವರು ಧಾರವಾಡಜನತಾ ಶಿಕ್ಷಣ ಸಮಿತಿಗುಬ್ಬಿ ವಿಜ್ಞಾನ ಕಾಲೇಜಿನಿಂದ ಬಿ.ಎಸ್.ಸಿ ಪದವಿ ಪಡೆದ ಬಳಿಕ ಕರ್ನಾಟಕ ಸರಕಾರದ ಆಡಳಿತಾತ್ಮಕ ಸೇವೆಯಲ್ಲಿ ಸೇರಿಕೊಂಡರು. ಈ ನಡುವೆ ಇವರು ಬರೆದ ಮುಂದೇನ ಸಖಿ ನಾಟಕವು ಅಕ್ಷರ ಪ್ರಕಾಶನಸಾಕ್ಷಿ ನಿಯತಕಾಲಿಕದಲ್ಲಿ ಪ್ರಕಟವಾಯಿತು. ಈ ನಾಟಕವನ್ನು ಕನ್ನಡದ ಪ್ರಾತಿನಿಧಿಕ ನಾಟಕಗಳ ಸಂಕಲನದಲ್ಲಿ ಸೇರಿಸಲಾಗಿದೆ. ಬಿ.ವಿ.ಕಾರಂತರು ಈ ನಾಟಕವನ್ನು ಮುಂಬಯಿಯಲ್ಲಿ ಪ್ರಯೋಗಿಸಿದ್ದಾರೆ. ವ್ಯಾಸ ದೇಶಪಾಂಡೆಯವರು ರಚಿಸಿದ ಇನ್ನೂ ಕೆಲವು ನಾಟಕಗಳು ಕಲಾವಿಲಾಸಿಗಳಿಂದ ರಂಗದ ಮೇಲೆ ಪ್ರದರ್ಶಿತವಾಗಿವೆ.

ನಾಟಕಗಳು

  • ಮುಂದೇನ ಸಖಿ ಮುಂದೇನ
  • ಯಾರಿಗೂ ಹೇಳೋಣು ಬ್ಯಾಡಾ
  • ಮಂಡೋದರಿ ರಾವಣಾಯಣ
  • ಇವ ನಮ್ಮವ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.