ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗವು (ಯುನೆಸ್ಕೋ) ೧೬ ನವಂಬರ್ ೧೯೪೫ರಂದು ಸ್ಥಾಪಿಸಲಾದ ವಿಶ್ವಸಂಸ್ಥೆಯ ಒಂದು ವಿಶಿಷ್ಟವಾದ ಸಂಸ್ಥೆ. ವಿಶ್ವಸಂಸ್ಥೆಯ ಸ್ಥಾಪನಶಾಸನದಲ್ಲಿ ಸೂಚಿಸಲಾದ ನ್ಯಾಯ, ನ್ಯಾಯ ಪರಿಪಾಲನೆ, ಮತ್ತು ಮಾನವ ಹಕ್ಕುಗಳು ಹಾಗೂ ಮೂಲಭೂತ ಸ್ವಾತಂತ್ರ್ಯಗಳಿಗಾಗಿ ವಿಶ್ವವ್ಯಾಪಿ ಗೌರವವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶಿಕ್ಷಣ, ವಿಜ್ಞಾನ, ಮತ್ತು ಸಂಸ್ಕೃತಿಯ ಮೂಲಕ ಅಂತರರಾಷ್ಟ್ರೀಯ ಸಹಯೋಗಕ್ಕೆ ಪ್ರೋತ್ಸಾಹ ನೀಡಿ ಶಾಂತಿ ಮತ್ತು ಭದ್ರತೆಗೆ ನೆರವಾಗುವುದು ಅದರ ಅಧಿಕೃತ ಉದ್ದೇಶವಾಗಿದೆ. ಅದು ರಾಷ್ಟ್ರಗಳ ಒಕ್ಕೂಟಬೌದ್ಧಿಕ ಸಹಕಾರದ ಅಂತರರಾಷ್ಟ್ರೀಯ ಆಯೋಗದ ಉತ್ತರಾಧಿಕಾರಿಯಾಗಿದೆ. ಇದರ ಕೇಂದ್ರ ಕಚೇರಿ ಫ್ರಾನ್ಸ್ ನ ಪ್ಯಾರಿಸ್ ನಲ್ಲಿದೆ.ಇದು ವಿಶ್ವದ ಆದ್ಯಂತ ವಿಡ್ಜ್ಯನ್,ಶಿಕ್ಷಣ, ಸಂಸ್ಕೃತಿ ಮುಂತಾದವುಗಳನ್ನು ಪ್ರೋತ್ಸಾಹಿಸಲು ಉದ್ದೇಶಿಸಿರುವ ಪ್ರಾವೀಣ್ಯತೆಯ ಹಾಗೂ ಪರಿಸರ ವಿಡ್ಜ್ವನ್ ದ ಬಗ್ಗೆ ಇದು ಕರ್ಯೋನ್ಮುಖವಾಗುತ್ತದೆ. ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಜ್ಞಾನ ಪ್ರಸಾರದ ನಿಟ್ಟಿನಲ್ಲಿ ಇದು ಸರ್ಕಾರಗಳಿಗೆ ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಾಹಯ ನೀಡುತ್ತದೆ. UNIEF-(United Nations Educational Scientific and Culture Organisation)

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.