ವಿಂಬಲ್ಡನ್, ಲಂಡನ್
ವಿಂಬಲ್ಡನ್ ಇಂಗ್ಲೆಂಡ್ ನ ಲಂಡನ್‌ನ ನೈಋತ್ಯ ಪ್ರದೇಶದಲ್ಲಿರುವ ಒಂದು ಜಿಲ್ಲೆ; ಇದು ವ್ಯಾಂಡ್ಸ್ ವರ್ತ್ ನ ದಕ್ಷಿಣ ಭಾಗಕ್ಕೂ, ಕಿಂಗ್ಸ್ ಟನ್ ನ ಪೂರ್ವಭಾಗಕ್ಕೂ ಇರುವ ಪ್ರದೇಶವಾಗಿದ್ದು, ಥೇಮ್ಸ್ ನದಿಯ ದಡದಲ್ಲಿ, ಗ್ರೇಟರ್ ಲಂಡನ್ ನ ಹೊರವಲಯದಲ್ಲಿರುವ ಜಿಲ್ಲೆಯಾಗಿದೆ. ಇದು ವಿಂಬಲ್ಡನ್ ಟೆನಿಸ್ ಚಾಂಪಿಯನ್ ಷಿಪ್ ಹಾಗೂ ನ್ಯೂ ವಿಂಬಲ್ಡನ್ ಥಿಯೇಟರ್ ಗಳಿಗೆ ತವರಾಗಿದೆ; ಲಂಡನ್ ನಲ್ಲಿ ಸಾರ್ವಜನಿಕರಿಗೆಂದು ಇರುವ ಬೃಹತ್ ವಿಸ್ತೀರ್ಣವಾದ ಸಾರ್ವಜನಿಕ ಜಮೀನು ಆದ ವಿಂಬಲ್ಡನ್ ಕಾಮನ್ ಸಹ ಈ ಜಿಲ್ಲೆಯಲ್ಲಿದೆ.[1] ಇಲ್ಲಿ ಸಾರ್ವಜನಿಕರು ವಾಸಿಸುವ ಪ್ರದೇಶಗಳನ್ನು ಎರಡಾಗಿ ವಿಂಗಡಿಸಲಾಗಿದ್ದು, ಒಂದನ್ನು "ಗ್ರಾಮ(ವಿಲೇಜ್)" ಎಂದೂ, ಮತ್ತೊಂದನ್ನು "ಪಟ್ಟಣ(ಟೌನ್)" ಎಂದೂ ಕರೆಯಲಾಗುತ್ತದೆ; ಹೈ ಸ್ಟ್ರೀಟ್ (ಹೆದ್ದಾರಿ)ಯು ಮೂಲ ಮಧ್ಯಕಾಲೀನ ಯುಗದ ಗ್ರಾಮದ ಅಂಗವಾಗಿದೆ ಹಾಗೂ "ಪಟ್ಟಣ"ವು ೧೮೩೮ ರಲ್ಲಿ ರೈಲ್ವೇ ನಿಲ್ದಾಣವನ್ನು ಕಟ್ಟಿದನಂತರ ಆದ ಆಧುನಿಕ ಬೆಳವಣಿಗೆಗೆಳ ಒಂದು ಅಂಗವಾಗಿದೆ.
Wimbledon | |
![]() Wimbledon High Street |
|
![]() ![]() Wimbledon ![]() | |
OS grid reference | TQ239709 |
---|---|
London borough | Merton |
Ceremonial county | Greater London |
Region | London |
Country | England |
Sovereign state | United Kingdom |
Post town | LONDON |
Postcode district | SW19, SW20 |
Dialling code | 020 |
Police | Metropolitan |
Fire | London |
Ambulance | London |
EU Parliament | London |
UK Parliament | Wimbledon |
London Assembly | Merton and Wandsworth |
|
ವಿಂಬಲ್ಡನ್ ಕಾಮನ್ ಪ್ರದೇಶದಲ್ಲಿ ಹಿಲ್ ಫೋರ್ಟ್ (ಗಿರಿದುರ್ಗ) ಕಟ್ಟಿದಂತಹ ಕಾಲವೆಂದು ನಂಬಲಾದ ಐರನ್ ಏಜ್ (ಕಬ್ಬಿಣದ ಯುಗ)ನಿಂದಲೂ ವಿಂಬಲ್ಡನ್ ಜನ ನಿಬಿಡವಾದ ಪ್ರದೇಶವಾಗಿತ್ತೆನ್ನಲಾಗಿದೆ. ೧೦೮೭ ರಲ್ಲಿ ಡೂಮ್ಸ್ ಡೇ ಬುಕ್ (ಪ್ರಳಯದ ದಿನದ ಬಗ್ಗೆ ಬರೆದ ಪುಸ್ತಕ)ವನ್ನು ರಚಿಸಿದಾಗ ವಿಂಬಲ್ಡನ್ ಮೇನರ್ ಆಫ್ ಮಾರ್ಟ್ ಲೇಕ್ ನ ಒಂದು ಅಂಗವಾಗಿತ್ತು. ಮೇನರ್ ಆಫ್ ವಿಂಬಲ್ಡನ್ ನ ಮಾಲೀಕತ್ವವು, ಆ ಬಂಗಲೆಯ ಇತಿಯಾಸದಲ್ಲಿ, ಹಲವಾರು ಸಿರಿವಂತ ಕುಟುಂಬಗಳ ಕೈ ಬದಲಾಯಿತು; ಈ ಪ್ರದೇಶವು ಇತರ ಶ್ರೀಮಂತ ಕುಟುಂಬಗಳನ್ನೂ ಆಕರ್ಷಿಸಿತು ಮತ್ತು ಆ ಕುಟುಂಬಗಳು ಈಗಲ್ ಹೌಸ್, ವಿಂಬಲ್ಡನ್ ಹೌಸ್ ಮತ್ತು ವ್ಯಾರನ್ ಹೌಸ್ ಗಳಂತಹ ಬಂಗಲೆಗಳನ್ನು ನಿರ್ಮಿಸಿ ಇಲ್ಲಿ ವಾಸಿಸಲಾರಂಭಿಸಿದರು. ನಗರದಿಂದ ಬಂದು ನೆಲೆಸಿದ ಕುಲೀನ ಮನೆತನದವರು ಮತ್ತು ಶ್ರೀಮಂತ ವರ್ತಕರೊಡನೆ, ಏರುಪೇರಿಲ್ಲದ ಜನಸಂಖ್ಯೆಯುಳ್ಳ ಗ್ರಾಮಸ್ಥರೂ ಸೇರಿ, ಗ್ರಾಮವು ಅಭಿವೃದ್ಧಿಪಥದತ್ತ ಸಾಗಲು ಕಾರಣರಾದರು. ೧೮ ನೆಯ ಶತಮಾನದಲ್ಲಿ ಡಾಗ್ & ಫಾಕ್ಸ್ ಪಬ್ಲಿಕ್ ಹೌಸ್ ಲಂಡನ್ ನಿಂದ ಪೋರ್ಟ್ಸ್ ಮೌತ್ ಗೆ ಸಾಗುವ ಸ್ಟೇಜ್ ಕೋಚ್ ಗಾಡಿಗಳಿಗೆ ನಿಂತು-ಹೋಗುವ ತಾಣವಾಯಿತು; ನಂತರ, ೧೮೩೮ ರಲ್ಲಿ ದ ಲಂಡನ್ ಎಂಡ್ ಸೌತ್ ವೆಸ್ಟ್ರನ್ ರೈಲ್ವೇ (L&SWR) ಈ ಗ್ರಾಮದ ಆಗ್ನೇಯದಲ್ಲಿ, ವಿಂಬಲ್ಡನ್ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ, ಒಂದು ರೈಲ್ವೇ ನಿಲ್ದಾಣವನ್ನು ಸ್ಥಾಪಿಸಿತು. ಈ ನಿಲ್ದಾಣವು ಬಂದ ನಂತರ ಈ ಪುರದ ಅಭಿವೃದ್ಧಿಯು ಮೂಲ ಗ್ರಾಮದಿಂದ ದೂರಕ್ಕೆ/ವಿರುದ್ಧ ದಿಕ್ಕಿನಲ್ಲಿ ಹೆಚ್ಚಾಗಿ ಕೇಂದ್ರಿತವಾಯಿತು.
ವಿಂಬಲ್ಡನ್ ತನ್ನದೇ ಆದ ಬರೋ ಆಫ್ ವಿಂಬಲ್ಡನ್ ಅನ್ನು ಹೊಂದಿದ್ದಿತು ಹಾಗೂ ಸರ್ರೆ ಕೌಂಟಿಯ ಸುಪರ್ದಿನಲ್ಲಿಯೇ ಇದ್ದಿತು; (ಬರೋ ಎಂದರೆ ತನ್ನದೇ ಆದ ಆಡಳಿತ ವ್ಯವಸ್ಥೆ). ಆದರೆ, ೧೯೬೫ ರಲ್ಲಿ ಗ್ರೇಟರ್ ಲಂಡನ್ ನ ನಿರ್ಮಾಣದ ಅಂಗವಾಗಿ ಈ ಬರೋವನ್ನು ಲಂಡನ್ ಬರೋ ಆಫ್ ಮೆರ್ಟನ್ ನಲ್ಲಿ ವಿಲೀನಗೊಳಿಸಲಾಯಿತು. ಇದು ವಿಂಬಲ್ಡನ್ ನ ಸಂಸದೀಯ ಚುನಾವಣಾಕಣವಾಗಿದೆ ಹಾಗೂ ೨೦೦೫ ರಿಂದ ಈ ಕ್ಷೇತ್ರವನ್ನು ಕಂಸರ್ವೇಟಿವ್ ಪಕ್ಷದ ಎಂಪಿ ಆದ ಸ್ಟೀಫನ್ ಹ್ಯಾಮಂಡ್ ಪ್ರತಿನಿಧಿಸುತ್ತಿದ್ದಾರೆ.[2]
ಇತಿಹಾಸ
ಆರಂಭಿಕ ಇತಿಹಾಸ
ವಿಂಬಲ್ಡನ್ ಕಾಮನ್ ಪ್ರದೇಶದಲ್ಲಿ ಹಿಲ್ ಫೋರ್ಟ್ (ಗಿರಿದುರ್ಗ) ಕಟ್ಟಿದಂತಹ ಕಾಲವೆಂದು ನಂಬಲಾದ ಐರನ್ ಏಜ್ (ಕಬ್ಬಿಣದ ಯುಗ)ನಿಂದಲೂ ವಿಂಬಲ್ಡನ್ ಜನ ನಿಬಿಡವಾದ ಪ್ರದೇಶವಾಗಿತ್ತೆನ್ನಲಾಗಿದೆ. ವಿಂಬಲ್ಡನ್ ನ ಮೂಲ ಕೇಂದ್ರವು ಗಿರಿಯ ಶಿಖರದಲ್ಲಿ ಕಾಮನ್ ಗೆ ಸಮೀಪದಲ್ಲಿ ಇದ್ದಿತು - ಈಗ ಆ ಪ್ರದೇಶವನ್ನು "ಗ್ರಾಮ" ಎಂದು ಪ್ರಾದೇಶಿಕವಾಗಿ ಕರೆಯಲಾಗುತ್ತದೆ.
೯೬೭ ನೆಯ ಇಸವಿಯಲ್ಲಿ ಕಿಂಗ್ ಎಡ್ಗರ್ ದ ಪೀಸ್ ಫುಲ್ ರುಜು ಹಾಕಿರುವ ಒಂದು ಶಾಸನದಲ್ಲಿ ಈ ಗ್ರಾಮವನ್ನು "ವಿಂಬೆಡೌನಿಂಗ್" ಎಂದು ಉಲ್ಲೇಖಿಸಲಾಗಿದೆ. ವಿಂಬಲ್ಡನ್ ಎಂದರೆ "ವಿನ್ಮನ್ಸ್ ಹಿಲ್" (ವಿನ್ಮನ್ನರ ಬೆಟ್ಟ) ಎಂರ್ಥ; ಹಳೆಯ ಇಂಗ್ಲಿಷ್ ಪ್ರಕಾರ ಈ ಹೆಸರಿನ ಕೊನೆಯ ಭಾಗವಾದ "ಡನ್" ಎಂಬುದರ ಅರ್ಥ ಬೆಟ್ಟ ಎಂಬುದಾಗಿದೆ.[3] ಜೆ, ಕ್ಯಾರಿಯವರ 1786 ರ ಲಂಡನ್ ನ ಭೂಪಟದಲ್ಲಿ ಇದನ್ನು "ವಿಂಬಲ್ಟನ್" ಎಂದು ಉಲ್ಲೇಖಿಸಲಾಗಿದ್ದಿತು ಹಾಗೂ ಈಗಿನ ಸ್ಪೆಲ್ಲಿಂಗ್ ಬಹಳ ಇತ್ತೀಚೆಗೆ, ಎಂದರೆ 19 ನೆಯ ಶತಮಾನದ ಆದಿಯಲ್ಲಿ ಸ್ಥಾಪಿತವಾಯಿತೆಂದೆನಿಸುತ್ತದೆ; ಈ ಸ್ಪೆಲ್ಲಿಂಗ್ ಇದಕ್ಕೂ ಮುನ್ನ ಕಂಡ ಹಲವಾರು ಮಾರ್ಪಾಡುಗಳಲ್ಲಿ ಕೊನೆಯದಾಗಿದೆ.
ಪ್ರಳಯದ ದಿನದ ಬಗ್ಗೆ ಬರೆದ ಪುಸ್ತಕವನ್ನು ರಚಿಸಿದ ದಿನಗಳಲ್ಲಿ (ಸುಮಾರು 1087 ರ ಆಸುಪಾಸಿನಲ್ಲಿ) ವಿಂಬಲ್ಡನ್ ಮೇನರ್ ಆಫ್ ಮಾರ್ಟ್ ಲೇಕ್ ನ ಒಂದು ಅಂಗವಾಗಿತ್ತು ಹಾಗೂ ಇದು ದಾಖಲಾಗಿರಲಿಲ್ಲ.[4] ಇತಿಹಾಸದ ಪುಟಗಳಲ್ಲಿ ಮೇನರ್ ಆಫ್ ವಿಂಬಲ್ಡನ್ ನ ಮಾಲೀಕತ್ವವು ಹಲವಾರು ಬಾರಿ ಹಸ್ತಾಂತರಗೊಂಡಿತು. ೧೩೯೮ ರ ವರೆಗೆ ಈ ಮೇನರ್ ಚರ್ಚ್ ನ ಸುಪರ್ದಿನಲ್ಲಿದ್ದಿತು ಹಾಗೂ ಕ್ಯಾಂಟರ್ಬರಿಯ ಆರ್ಕ್ ಬಿಷಪ್ ಆದ ಥಾಮಸ್ ಅರುಂಡೇಲ್ ರಾಜರಾದ ದ್ವಿತೀಯ ರಿಚರ್ಡ್ ರ ಅವಕೃಪೆಗೆ ತುತ್ತಾದಾಗ ಅವರಿಗೆ ದೇಶಬಹಿಷ್ಕಾರ ಶಿಕ್ಷೆ ವಿಧಿಸಲಾಯಿತು. ಈ ಮೇನರ್(ಬಂಗಲೆ)ಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು ಮತ್ತು ಅಂದಿನಿಂದ ಇದು ರಾಜರಿಗೆ ಸೇರಿದ ಆಸ್ತಿಯಾಯಿತು.
ಎಂಟನೆಯ ಹೆನ್ರಿಯವರ ಆಳ್ವಿಕೆಯ ಕಾಲದವರೆಗೆ ಈ ಮೇನರ್ ರಾಜರ ಆಸ್ತಿಯಾಗಿಯೇ ಮುಂದುವರೆಯಿತು; ನಂತರ ಸ್ವಲ್ಪ ಕಾಲದವರೆಗೆ ಅದನ್ನು ಥಾಮಸ್ ಕ್ರಾಮ್ವೆಲ್ ಎಂಬ ಎಸೆಕ್ಸ್ ನ ಎರ್ಲ್ ಗರಿಗೆ ದೇಣಿಗೆಯಾಗಿ ನೀಡಲಾಯಿತು; ಕ್ರಾಮ್ವೆಲ್ ಗೆ ೧೫೪೦ ರಲ್ಲಿ ಮರಣದಂಡನೆ ವಿಧಿಸಿದ ನಂತರ ಈ ಸ್ವತ್ತನ್ನು ಮತ್ತೆ ಹಿಂದಕ್ಕೆ ಪಡೆಯಲಾಯಿತು. ನಂತರ ಈ ಮೇನರ್ ಎಂಟನೆಯ ಹೆನ್ರಿಯ ಕಡೆಯ ಪತ್ನಿ ಮತ್ತು ವಿಧವೆಯಾದ ಕ್ಯಾಥರೀನ್ ಪಾರ್ರ್ ರ ಪಾಲಾಯಿತು; ೧೫೪೮ ರಲ್ಲಿ ಪಾರ್ರ್ ನಿಧನರಾದನಂತರ ಮತ್ತೆ ಪ್ರಭುಗಳ ಪಾಲಾಯಿತು.
೧೫೫೦ ರ ದಶಕದಲ್ಲಿ ಹೆನ್ರಿಯ ಮಗಳಾದ ಮೇರಿ ಈ ಮೇನರ್ ಅನ್ನು ಕಾರ್ಡಿನಾಲ್ ರೆಜಿನಾಲ್ಡ್ ಪೋಲ್ ರಿಗೆ ದೇಣಿಗೆಯಾಗಿತ್ತರು; ೧೫೫೮ ರಲ್ಲಿ ಅವರು ಗತಿಸಿದ ನಂತರ ಮತ್ತೆ ಇದು ರಾಜಮನೆತನದ ಪಾಲಾಯಿತು. ಮೇರಿಯ ತಂಗಿ ಎಲಿಝಬೆತ್ ೧೫೭೪ ರವರೆಗೆ ಈ ಸ್ವತ್ತನ್ನು ಹೊಂದಿದ್ದರು ಹಾಗೂ ನಂತರ ಮೇನರ್ ನ ಮನೆಯನ್ನು ಮಾತ್ರ (ಸುತ್ತಲಿನ ಜಮೀನನ್ನಲ್ಲ) ಕ್ರಿಸ್ತೋಫರ್ ಹಟ್ಟನ್ ರಿಗೆ ನೀಡಿದರು ಹಾಗೂ ಹಟ್ಟನ್ ಅದನ್ನು ಅದೇ ವರ್ಷ ಸರ್ ಥಾಮಸ್ ಸೆಸಿಲ್ ಎಂಬ ಎಕ್ಸೆಟರ್ ನ ಎರ್ಲ್ ಗೆ ಮಾರಿದರು. ೧೫೮೮ ರಲ್ಲಿ ಮೇನರ್ ಗೆ ಸೇರಿದ ಜಮೀನುಗಳನ್ನೂ ಸೆಸಿಲ್ ರಿಗೆ ಮಾರಲಾಯಿತು ಮತ್ತು ಒಂದು ಹೊಸ ಗೃಹವನ್ನು ನಿರ್ಮಿಸಲಾಯಿತಲ್ಲದೆ ಕೈತೋಟವನ್ನು ಔಪಚಾರಿಕವಾದ ಎಲಿಝಬೆತನ್ ಶೈಲಿಯಲ್ಲಿ ಅಭಿವೃದ್ಧಿಗೊಳಿಸಲಾಯಿತು.
೧೭ ನೆಯ ಶತಮಾನ
ರಾಜಧಾನಿಗೆ ಸಮೀಪವಾಗಿರುವಂತಹ ವಿಂಬಲ್ಡನ್ ಇತರ ಶ್ರೀಮಂತ ಕುಟುಂಬಗಳ ಗಮನವನ್ನು ಸೆಳೆಯಲಾರಂಭಿಸಿತು ಹಾಗೂ ೧೬೧೩ ರಲ್ಲಿ ದ ವರ್ಷಿಪ್ ಫುಲ್ ಕಂಪೆನಿ ಆಫ್ ಗಿರ್ಡ್ಲರ್ಸ್ ನ ಮಾಲಿಕರೂ ಹಾಗೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕರೂ ಆದ ರಾಬರ್ಟ್ ಬೆಲ್ ಲಂಡನ್ ನಿಂದ ಸುಲಭವಾಗಿ ತಲುಪಬಹುದಾದಷ್ಟು ದೂರದಲ್ಲಿ ಈಗಲ್ ಹೌಸ್ ಎಂಬ ಮನೆಯನ್ನು ಕಟ್ಟಿಕೊಂಡರು. ಸೆಸಿಲ್ ಕುಟುಂಬವು ಮೇನರ್ ಅನ್ನು ಐವತ್ತು ವರ್ಷಗಳ ಕಾಲ ಸಂತೋಷವಾಗಿ ಅನುಭವಿಸಿ, ನಂತರ ಅದನ್ನು ೧೬೩೮ ರಲ್ಲಿ ರಾಣಿ ಹೆನ್ರಿಯೆಟ್ಟಾ ಮಾರಿಯಾರ ಸಲುವಾಗಿ ಮೊದಲನೆಯ ಚಾರ್ಲ್ಸ್ ಗೆ ವಿಕ್ರಯಿಸಿತು.
೧೬೪೯ ರಲ್ಲಿ ರಾಜರ ವಧೆಯಾದ ನಂತರ, ಈ ಮೇನರ್ ಹಲವಾರು ಸಂಸದರ ಮಾಲೀಕತ್ವಗಳಿಗೆ ತ್ವರಿತವಾಗಿ ಹಸ್ತಾಂತರಗೊಂಡಿತು; ಹಾಗೆ ಹಸ್ತಾಂತರಗೊಂಡವರ ಪೈಕಿ ಲೀಡ್ಸ್ ನ ಸಂಸತ್ ಎಂ.ಪಿ. ಆಡಮ್ ಬೇಯ್ನ್ಸ್ ಮತ್ತು ನಾಗರಿಕ ಚಳುವಳಿಯ ಜನರಲ್ ಜಾನ್ ಲಾಂಬರ್ಟ್ ಸಹ ಇದ್ದರು; ಆದರೆ, ಪ್ರಭುವಿನ ಆಳ್ವಿಕೆಯ ಪುನಃಸ್ಥಾಪನೆಯಾದಮೇಲೆ, ೧೬೬೦ ರಲ್ಲಿ, ಇದರ ಮಾಲಿಕತ್ವವು ಮತ್ತೆ ಹೆನ್ರಿಯೆಟ್ಟಾ ಮಾರಿಯಾರದಾಯಿತು(ಅವರು ಆಗ ಮೊದಲನೆಯ ಚಾರ್ಲ್ಸ್ ರ ವಿಧವೆ ಹಾಗೂ ನೈತನ ದೊರೆ ಎರಡನೆಯ ಚಾರ್ಲ್ಸ್ ರವರ ತಾಯಿಯಾಗಿದ್ದರು).
ಆ ಪತಿಯ ಆಸ್ತಿಯ ಮಾಲಿಕಳಾದ, ವಿಧವೆಯಾದ ರಾಣಿಯು ೧೬೬೧ ರಲ್ಲಿ ಈ ಮೇನರ್ ಅನ್ನು ಜಾರ್ಜ್ ಡಿಗ್ ಬೈ ಎಂಬ ಬ್ರಿಸ್ಟಱಲ್ ನ ಎರ್ಲ್ ಗೆ ಮಾರಿದರು ಹಾಗೂ ಆ ಎರ್ಲ್ ಆಧುನಿಕ ಶೈಲಿ ಮತ್ತು ವಿನ್ಯಾಸಗಳಿಗೆ ಅನುಗುಣವಾಗಿ, ಭೂರಮ್ಯತೆ, ಕೃತಕ ಗುಹೆs ಮತ್ತು ಕಾರಂಜಿಗಳನ್ನು ಹೊಂದಿರುವಂತಹ, ಸುಂದರವಾದ ಭೂರಮೆಯನ್ನು ಸೃಷ್ಟಿಸಲು ಮತ್ತು ಸಂರಕ್ಷಿಸಲು ಜಾನ್ ಎವೆಲಿನ್ ಎಂಬುವವರನ್ನು ನೇಮಿಸಿದರು. ಅವರು ೧೬೭೭ ರಲ್ಲಿ ನಿಧನರಾದನಂತರ ಈ ಮೇನರ್ ಅನ್ನು ಡ್ಯಾನ್ಬಿಯ ಎರ್ಲ್ ಹಾಗೂ ಲಾರ್ಡ್ ಹೈ ಟ್ರೆಷರರ್(ಖಜಾಂಚಿ)ಯಾದ ಥಾಮಸ್ ಓಸ್ಬಾರ್ನ್ ರಿಗೆ ಮಾರಲಾಯಿತು.

೧೭೧೨ ರಲ್ಲಿ ಓಸ್ಬಾರ್ನ್ ಕುಟುಂಬವು ಈ ಮೇನರ್ ಅನ್ನು ಸರ್ ಥಿಯೋಡೋರ್ ಜೆನ್ಸೆನ್ ರಿಗೆ ಮಾರಿತು. ದ ಸೌತ್ ಸೀ ಕಂಪನಿಯ ನಿರ್ದೇಶಕರಾದ ಜೆನ್ಸನ್ ಸೆಸಿಲ್ ಕಟ್ಟಿದ ಮೇನರ್ ಮನೆಯನ್ನು ಕೆಡವಿ ಒಂದು ಹೊಸ ಮನೆಯನ್ನು ಕಟ್ಟಲಾರಂಭಿಸಿದರು, ಆದರೆ ಅವರ ಕಂಪನಿಯು ಹಠಾತ್ತನೆ ಪತನವಾದುದರಿಂದ ಈ ಕಟ್ಟಡವನ್ನು ಪೂರ್ಣಗೊಳಿಸಲು ಆಗಲೇ ಇಲ್ಲ.
ಈ ಮೇನರ್ ನಂತರ ಸಾರಾ ಚರ್ಚಿಲ್ ರ ಮಾಲಿಕತ್ವಕ್ಕೆ ಸೇರಿತು; ಮಾರ್ಲ್ ಬರೋದ ಡಚೆಸ್ ಸಾರಾ ಚರ್ಚಿಲ್ ಜಮೀನಿನ ವಿಸ್ತಾರವನ್ನು ಹೆಚ್ಚಿಸಿಕೊಂಡರು ಮತ್ತು ಜೆನ್ಸನ್ ೧೭೩೫ ರಲ್ಲಿ ಅರ್ಧಕಟ್ಟಿದ ಮನೆಯ ಜಾಗದಲ್ಲಿ ಒಂದು ಮನೆಯನ್ನು ಕಟ್ಟಿದರು. ೧೭೪೪ ರಲ್ಲಿ ಅವರು ಗತಿಸಿದ ನಂತರ ಈ ಸವತ್ತು ಅವರ ಮೊಮ್ಮಗನಾದ ಜಾನ್ ಸ್ಪೆನ್ಸರ್ ರ ಪಾಲಾಯಿತು ಹಾಗೂ ಕ್ರಮೇಣ ಮೊದಲನೆಯ ಸ್ಪೆನ್ಸರ್ ನ ಎರ್ಲ್ ರ ಪಾಲಿಗೆ ಸಂದಿತು.
ಗ್ರಾಮದ ಬೆಳವಣಿಗೆ ಅವಿರತವಾಗಿ ಸಾಗಿತು ಹಾಗೂ ೧೮ ನೆಯ ಶತಮಾನದಲ್ಲಿ ಸ್ಟೇಜ್ ಕೋಚ್ ಸೇವೆಯನ್ನು ಡಾಗ್ & ಫಾಕ್ಸ್ ಪಬ್ಲಿಕ್ ಹೌಸ್ ನಿಂದ ಪ್ರಾರಂಭಿಸಿದ ನಂತರ ಇಂಗ್ಲೆಂಡ್ ಗೆ ಪ್ರಯಾಣ ಮಾಡುವುದು ಮಾಮೂಲಿ ವಿಷಯವಾಯಿತು; ಪೋರ್ಟ್ಸ್ ಮೌತ್ ರಸ್ತೆಯಲ್ಲಿ ಜೆರಿ ಏಬರ್ಷಾ ರಂತಹ ದರೋಡೆಕೋರರು ದಾರಿಗಡ್ಡಕಟ್ಟಿ ದೋಚುವ ಭಯವಿದ್ದರೂ, ಲಂಡನ್ ಗೆ ಹೋಗಿ, ಬರುವಂತಹುದು ನಡೆದೇ ಇತ್ತು.
೧೭೩೫ ರ ಮೇನರ್ ಮನೆಯು ೧೭೮೦ ರಲ್ಲಿ ಭಸ್ಮವಾಯಿತು ಹಾಗೂ ಅದರ ಸ್ಥಾನದಲ್ಲಿ, ೧೮೦೧ ರಲ್ಲಿ ಎರಡನೆಯ ಎರ್ಲ್ ವಿಂಬಲ್ಡನ್ ಪಾರ್ಕ್ ಹೌಸ್ ಅನ್ನು ಕಟ್ಟಿಸಿದರು. ಈ ವೇಳೆಗೆ ಆ ಮೇನರ್ ನ ಜಮೀನು ವಿಂಬಲ್ಡನ್ ಕಾಮನ್ ಅನ್ನೂ ಒಳಗೊಂಡಿತ್ತು (ಆಗ ಅದನ್ನು ಖಡ್ಗದ ಒರೆ ಎಂದು ಕರೆಯುತ್ತಿದ್ದರು) ಹಾಗೂ ಮೇನರ್ ಹೌಸ್ ನ ಸುತ್ತಲೂ, ಅದರ ಆವರಣದ ಒಳಭಾಗದಲ್ಲಿ, ಸುತ್ತುವರಿಯಲ್ಪಟ್ಟ ಪಾರ್ಕ್ ಲ್ಯಾಂಡ್ ಇದ್ದಿತು. ಆ ಪಾರ್ಕ್ ನ ವಿಸ್ತೀರ್ಣವು ಈಗಿನ ವಿಂಬಲ್ಡನ್ ಪಾರ್ಕ್ ಗೆ ಸರಿಸಮನಾಗಿತ್ತು, ಮನೆಯು ಸಂತ ಮೇರಿ ಚರ್ಚ್ ನ ಪೂರ್ವಭಾಗದಲ್ಲಿ ಇದ್ದಿತು.
ಪಾರ್ಕ್ ಸೈಡ್ ನ ದಕ್ಷಿಣದ ತುದಿಯಲ್ಲಿದ್ದ ಹಾಗೂ ಗ್ರಾಮಕ್ಕೆ ಸಮೀಪವಿದ್ದ (ಈಗಿನ ಪೀಕ್ ಕ್ರೆಸೆಂಟ್ ಹತ್ತಿರ) ಒಂದು ಪ್ರತ್ಯೇಕ ನಿವಾಸವಾದ ವಿಂಬಲ್ಡನ್ ಹೌಸ್ ೧೯೭೦ ರ ದಶಕದಲ್ಲಿ ದೇಶಬಹಿಷ್ಕಾರಗೊಂಡ ಪ್ರೆಂಚ್ ರಾಜಕೀಯ ಮುಖಂಡ ವಿಕಾಮ್ಟೆ ಡಿ ಕ್ಯಾಲೋನ್ನೆಯವರಿಗೆ ನೆಲೆಯಾಗಿದ್ದಿತು ಹಾಗೂ ನಂತರ ಲೇಖಕ ಫ್ರೆಡರಿಕ್ ಮಾರಿಯಟ್ ರ ತಾಯಿಯವರ ನಿವಾಸವಾಗಿತ್ತು. ಅವರು ಈ ಪ್ರದೇಶದ ಒಂದು ಭಾಗವೇ ಆಗಿದ್ದುದನ್ನು ಹತ್ತಿರದ ಕ್ಯಾಲೋನ್ನೆ ಮತ್ತು ಮಾರಿಯಟ್ ರಸ್ತೆಗಳು ಸೂಕ್ತವಾಗಿ ದಾಖಲಿಸುತ್ತವೆ.
ಕಾಮನ್ ನ ದಕ್ಷಿಣಕ್ಕಿರುವ ೧೮ ನೆಯ ಶತಮಾನದ ಆದಿಯಲ್ಲಿ ಕಟ್ಟಿದ ವ್ಯಾರನ್ ಹೌಸ್ (೧೮೪೧ ರಿಂದ ಇದನ್ನು ಕ್ಯಾನಿಝಾರೋ ಹೌಸ್ ಎಂದು ಕರೆಯಲಾಗುತ್ತಿದೆ) ಒಬ್ಬರ ನಂತರ ಒಬ್ಬರು ವೈಭವಯುತ ನಿವಾಸಿಗಳಿಗೆ ಸದ್ಗೃಹವಾಗಿದೆ.
೧೯ ನೆಯ ಶತಮಾನದ ಬೆಳವಣಿಗೆಗಳು

೧೯ ನೆಯ ಶತಮಾನದ ಮೊದಲ ದಶಕದಲ್ಲಿ ವಿಂಬಲ್ಡನ್ ಹೆಚ್ಚಿನ ಚಟುವಟಿಕೆಯಿಲ್ಲದೆ ಇದ್ದಿತು, ಹೆಚ್ಚೇನೂ ಏರುಪೇರಿಲ್ಲದ ಗ್ರಾಮೀಣ ಜನತೆಯು ನಗರದಿಂದ ಬಂದ ಕುಲೀನರು, ದೊರೆಮನೆತನದವರು ಮತ್ತು ಸಿರಿವಂತ ವರ್ತಕರೊಡನೆ ಶಾಂತರೀತಿಯಲ್ಲಿ ಜೀವನ ಸಾಗಿಸುತ್ತಿದ್ದರು; ಆದರೆ ಲಂಡನ್ ಎಂಡ್ ಸೌತ್ ವೆಸ್ಟ್ರನ್ ರೈಲ್ವೇ(L&SWR) ೧೮೩೮ ರಲ್ಲಿ ಆರಂಭವಾದನಂತರ ಹಾಗೂ ವಿಂಬಲ್ಡನ್ ಬೆಟ್ಟದ ತಪ್ಪಲಿನಲ್ಲಿ ಈ ಗ್ರಾಮದ ಆಗ್ನೇಯಕ್ಕೆ ಒಂದು ರೈಲ್ವೇ ನಿಲ್ದಾಣವಾದನಂತರ ನೂತನ ಏರುಪೇರುಗಳು ಉಂಟಾದವು. ಈ ನಿಲ್ದಾಣವು ಈ ಸ್ಥಳಕ್ಕೆ ಬಂದ ನಂತರ ಈ ಪುರದ ಅಭಿವೃದ್ಧಿಯು ಮೂಲ ಗ್ರಾಮದಿಂದ ದೂರಕ್ಕೆ/ವಿರುದ್ಧ ದಿಕ್ಕಿನಲ್ಲಿ ಹೆಚ್ಚಾಗಿ ಕೇಂದ್ರಿತವಾಯಿತು.
ಹಲವಾರು ವರ್ಷಗಳವರೆಗೆ ವಿಂಬಲ್ಡನ್ ಪಾರ್ಕ್ ಅನ್ನು ಸಾಮರ್ಸೆಟ್ ನ ಡ್ಯೂಕ್ ರಿಗೆ ಭೋಗ್ಯದ ಆಧಾರದ ಮೇಲೆ ನೀಡಲಾಗಿತ್ತು; ಅವರು ೧೮೨೦ ರ ದಶಕದಲ್ಲಿ ಸ್ವಲ್ಪ ಕಾಲ ಯುವಕ ಜೋಸೆಫ್ ಪ್ಯಾಕ್ಸ್ ಟನ್ ರನ್ನು ತೋಟದ ಮಾಲಿಯಾಗಿ ನೇಮಿಸಿಕೊಂಡಿದ್ದರು, ಆದರೆ, ೧೯೪೦ ರ ದಶಕದಲ್ಲಿ ಸ್ಪೆನ್ಸರ್ ಕುಟುಂಬದವರು ಇದನ್ನು ಕಟ್ಟಡ ಕಟ್ಟಲು ನಿವೇಶನವಾಗಿ ಮಾರಿಬಿಟ್ಟರು. ಒಂದಷ್ಟು ಕಾಲ ನಿವಾಸಗಳ ಅಭಿವೃದ್ಧಿಕಾರ್ಯವು ಜರುಗಿತು ಹಾಗೂ ಈ ಅವಧಿಯಲ್ಲಿ ಬೃಹತ್ತಾದ ಹಾಗೂ ಪ್ರತ್ಯೇಕವಾದ ಮನೆಗಳು ಪಾರ್ಕ್ ನ ಉತ್ತರದಿಕ್ಕಿನಲ್ಲಿ ತಲೆಯೆತ್ತಿದವು. ೧೮೬೪ ರಲ್ಲಿ ಸ್ಪೆನ್ಸರ್ ಕುಟುಂಬದವರು ಕಾಮನ್ ಅನ್ನು ಒಳಕ್ಕೆ ಸೇರಿಸಿಕೊಂಡು ಒಂದು ಮನೆ ಮತ್ತು ತೋಟಗಳಿರುವ ನೂತನ ಉದ್ಯಾನವೊಂದನ್ನು ಸೃಷ್ಟಿಸಿ, ಕಟ್ಟಡದ ಒಂದು ಭಾಗವನ್ನು ಮಾರಲು ಸಂಸತ್ತಿನ ಅನುಮತಿ[5] ಕೋರಲು ಪ್ರಯತ್ನಿಸಿದರು. ಈ ಬಗ್ಗೆ ತನಿಖೆ ನಡೆಸಿದ ಸಂಸತ್ತು ಅನುಮತಿ ನೀಡಲು ನಿರಾಕರಿಸಿತು ಹಾಗೂ ಕಾಮನ್ ನ ಮಾಲಿಕತ್ವವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮತ್ತು ಅದನ್ನು ತನ್ನ ನೈಸರ್ಗಿಕ ಸ್ಥಿತಿಯಲ್ಲಿ ಸಂರಕ್ಷಿಸಲು ಒಂದು ಸಂರಕ್ಷಣಾ ಮಂಡಲಿಯು ೧೮೭೧[6][7]ರಲ್ಲಿ ಸ್ಥಾಪಿಸಲಾಯಿತು.
ಕ್ರಾಯ್ಡನ್ ಗೆ (ವಿಂಬಲ್ಡನ್ ಮತ್ತು ಕ್ರಾಯ್ಡನ್ ರೈಲ್ವೇ ೧೮೫೫ ರಲ್ಲಿ ಆರಂಭವಾಯಿತು) ಮತ್ತು ಟೂಟಿಂಗ್ ಗೆ (ಟೂಟಿಂಗ್, ಮೆರ್ಟನ್ ಮತ್ತು ವಿಂಬಲ್ಡನ್ ರೈಲ್ವೇ ೧೮೬೮ ರಲ್ಲಿ ಆರಂಭವಾಯಿತು) ನೂತನ ರೈಲ್ವೇ ಲೈನುಗಳನ್ನು ಸ್ಥಾಪಿಸಿದುದರಿಂದ ಸಾರಿಗೆ ಸಂಪರ್ಕಗಳು ಮತ್ತಷ್ಟು ವಿಸ್ತಾರಗೊಂಡವು. ೧೮೮೯ ರಲ್ಲಿ ದ ಮೆಟ್ರೋಪಾಲಿಟನ್ ಡಿಸ್ಟ್ರಿಕ್ಡ್ ರೈಲ್ವೇ (ಈಗಿನ ಲಂಡನ್ ಅಂಡರ್ಗ್ರೌಂಡ್ ನ ಡಿಸ್ಟ್ರಿಕ್ಟ್ ಲೈನ್) ಪುಟ್ನೇಯಿಂದ ನೂತನ ಹಳಿಗಳ ಮೇಲೆ ತನ್ನ ಸೇವೆಯನ್ನು ವಿಸ್ತರಿಸಿತು.
ಶತಮಾನದ ದ್ವಿತೀಯಾರ್ಧದಲ್ಲಿ ವಿಂಬಲ್ಡನ್ ನ ಜನಸಂಖ್ಯೆಯು ಬಹಳ ಕ್ಷಿಪ್ರಗತಿಯಲ್ಲಿ ವೃದ್ಧಿಸಿತು. ೧೮೫೧ ರ ಜನಗಣತಿಯ ಪ್ರಕಾರ ಕೇವಲ ೨೭೦೦ ನಿವಾಸಿಗಳಿದ್ದ ಜನಸಂಖ್ಯೆಯು ಪ್ರತಿ ದಶಕದಲ್ಲೂ ಕನಿಷ್ಠ ೬೦ ಪ್ರತಿಶತ ಹೆಚ್ಚುತ್ತಾ ಸಾಗಿ, ೧೯೦೧ ರ ವೇಳೆಗೆ, ೫೦ ವರ್ಷಗಳ ಅವಧಿಯಲ್ಲಿ ೧೫ ಪಟ್ಟು ಹೆಚ್ಚಾಗಿತ್ತು. ಈ ಅವಧಿಯಲ್ಲಿ ಪಕ್ಕದ ಪುಟ್ನೇ, ಮೆರ್ಟನ್ ಪಾರ್ಕ್ ಮತ್ತು ರಾಯೆನ್ಸ್ ಪಾರ್ಕ್ ಗಳಿಗೆ ಪುರದ ಕೇಂದ್ರದಿಂದ ಸಾಗುತ್ತಿದ್ದ ರಸ್ತೆಗಳ ಗುಂಟ ಬೃಹತ್ ವಿಲ್ಲಾಗಳು ಮತ್ತು ತಾರ್ಸಿ ಮನೆಗಳು ನಿರ್ಮಾಣಗೊಂಡವು.
ಪುರದ ವಾಣಿಜ್ಯ ಮತ್ತು ನಾಗರಿಕ ಅಭಿವೃದ್ಧಿಯು ಸಹ ಈ ಅವಧಿಯಲ್ಲಿ ತ್ವರಿತ ಗತಿಯಲ್ಲಿ ಸಾಗಿತು. ಎಲೀಸ್ ಡಿಪಾರ್ಟ್ಮೆಂಟಲ್ ಸ್ಟೋರ್ ೧೮೭೬ ರಲ್ಲಿ ಆರಂಭಗೊಂಡಿತ್ಉ ಮತ್ತು ಮೆರ್ಟನ್ ಕಡೆಗೆ ಸಾಗುವ ಬ್ರಾಡ್ವೇಯ ಗುಮಟ ಅಂಗಡಿಗಳು ಸ್ಥಾಪಿತವಾದವು. ವಿಂಬಲ್ಡನ್ ನ ಮೊದಲ ಪೊಲೀಸ್ ಠಾಣೆ ೧೮೭೦ ರಲ್ಲಿ ವಿಕ್ಟೋರಿಯಾ ಕ್ರೆಸೆಂಟ್ ನಲ್ಲಿ ಸ್ಥಾಪನೆಯಾಯಿತು. ಸಾಂಸ್ಕೃತಿಕ ಅಭಿವೃದ್ಧಿಯ ಅಂಗವಾಗಿ ೧೮೬೦ ರ ದಶಕದ ಆದಿಯಲ್ಲಿ ಒಂದು ಲಿಟರರಿ ಇಂಸ್ಟಿಟ್ಯೂಟ್ (ಸಾಹಿತ್ಯ ಸಂಸ್ಥೆ) ಆರಂಭವಾಯಿತು ಹಾಗೂ ೧೮೮೭ ರಲ್ಲಿ ವಿಂಬಲ್ಡನ್ ಲೈಬ್ರರಿ ಅಸ್ತಿತ್ವಕ್ಕೆ ಬಂದಿತು. ಧಾರ್ಮಿಕ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಚರ್ಚುಗಳನ್ನು ನಿರ್ಮಾಣ ಮಾಡುವ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು; ೧೮೪೯ ರಲ್ಲಿ ಸಂತ ಮೇರಿಯ ಚರ್ಚ್, ೧೮೫೯ ರಲ್ಲಿ ಕ್ರೈಸ್ತ್ ಚರ್ಚ್ ಮತ್ತು ೧೮೬೨ ರಲ್ಲಿ ಟ್ರಿನಿಟಿ ಚರ್ಚ್ ಗಳು ನಿರ್ಮಾಣಗೊಂಡವು.
೧೮೯೪ ರಲ್ಲಿ ಸ್ಥಳೀಯ ಸರ್ಕಾರ ಮಸೂದೆ ೧೮೯೪ ರನ್ವಯ ಚುನಾಯಿತ ಕೌನ್ಸಿಲ್ ನ ಸಹಾಯದಿಂದ ವಿಂಬಲ್ಡನ್ ನಗರ ಜಿಲ್ಲೆಯನ್ನು ರಚಿಸುವುದರ ಮೂಲಕ ಅಲ್ಲಿಯವರೆಗೆ ಗ್ರಾಮಸ್ವರೂಪದಲ್ಲಿ ಗುರುತಿಸಲ್ಪಡುತ್ತಿದ್ದ ವಿಂಬಲ್ಡನ್ ಸಣ್ಣ ಪಟ್ಟಣದ ಸ್ವರೂಪ ಪಡೆಯಿತು.
ಆಧುನಿಕ ಇತಿಹಾಸ

೨೦ ನೆಯ ಶತಮಾನದ ಆದಿಯಲ್ಲಿಯೂ ವಿಂಬಲ್ಡನ್ ಜನಸಂಖ್ಯೆಯು ಹೆಚ್ಚುತ್ತಲೇ ಇದ್ದಿತೆಂಬ ಅಂಶವನ್ನು ೧೯೦೫ ರಲ್ಲಿ ಈ ನಗರ ಜಿಲ್ಲೆಯನ್ನು ಮುನಿಸಿಪಲ್ ಬರೋ ಆಫ್ ವಿಂಬಲ್ಡನ್ ಆಗಿ ಪರಿವರ್ತಿಸಿದ ಕಾಲದಲ್ಲಿ ಗುರುತಿಸಲಾಯಿತು; ಆ ಮುನಿಸಿಪಲ್ ಬರೋಗೆ ಒಬ್ಬ ಮೇಯರ್ ಅನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಲಾಗಿತ್ತು.
ನೂತನ ಶತಮಾನದ ಮೊದಲನೆಯ ದಶಕದ ಅಂತ್ಯದ ವೇಳೆಗೆ ಗ್ಲ್ಯಾಡ್ ಸ್ಟೋನ್ ರಸ್ತೆಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಒಂದು ವಿಂಬಲ್ಡನ್ ಸ್ಕೂಲ್ ಆಫ್ ಆರ್ಟ್ (ವಿಂಬಲ್ಡನ್ ಕಲಾಶಾಲೆ), ಒಂದು ಸಿನೆಮಾ ಮಂದಿರ ಮತ್ತು ಒಂದು ರಂಗಮಂದಿರವನ್ನು ವಿಂಬಲ್ಡನ್ ಹೊಂದಿದ್ದಿತು. ವಿಚಿತ್ರವೆಂದರೆ, ಈ ರಂಗಮಂದಿರವು ಪ್ರಾರಂಭವಾದಾಗ ರಂಗಮಂದಿರದ ಸೌಲಭ್ಯಗಳಲ್ಲಿ ಟರ್ಕಿಷ್ ಸ್ನಾನಗೃಹ ಸಹ ಸೇರಿದ್ದಿತು .
೧೯೩೧ ರಲ್ಲಿ ಈ ಕೌನ್ಸಿಲ್ ತನಗೆಂದೇ ಒಂದು ಕೆಂಪು ಇಟ್ಟಿಗೆಗಳ ಮತ್ತು ಪೋರ್ಟ್ ಲ್ಯಾಂಡ್ ಕಲ್ಲುಗಳಿಂದ ನಿರ್ಮಿತವಾದ ಪುರಸಭೆಯೊಂದನ್ನು ಕ್ವೀನ್ಸ್ ರೋಡ್ ಮತ್ತು ವಿಂಬಲ್ಡನ್ ಸೇತುವೆ ಸೇರುವ, ನಿಲ್ದಾಣದ ಪಕ್ಕದ, ಮೂಲೆ ನಿವೇಶನದಲ್ಲಿ ನಿರ್ಮಾಣ ಮಾಡಿಕೊಂಡಿತು. ಇದರ ವಿನ್ಯಾಸಕಾರರು ಬ್ರ್ಯಾಡ್ ಷಾ ಗಾಸ್ಸ್ & ಹೋಪ್.
೧೯೩೦ ರ ದಶಕದ ವೇಳೆಗೆ ವಿಂಬಲ್ಡನ್ ನಲ್ಲಿ ನಿವಾಸಗಳು ವ್ಯಾಪಕವಾದ ಸಂಖ್ಯೆಯಲ್ಲಿದ್ದು, ಗರಿಷ್ಠ ಮಟ್ಟವನ್ನು ತಲುಪಿದ್ದವು ಹಾಗೂ ಸ್ಥಳೀಯ ಅಭಿವೃದ್ಧಿಯ ಕೇಂದ್ರಬಿಂದುವು ಪಕ್ಕದ ಮಾರ್ಡೆನ್ ನತ್ತ ವರ್ಗವಾಗಿತ್ತು; ೧೯೨೬ ರಲ್ಲಿ ಭೂಮಿಯ ಅಂತರ್ಗತ ಮಾರ್ಡೆನ್ ನಿಲ್ದಾಣವು ಸ್ಥಾಪಿತವಾಗುವವರೆಗೆ ಮಾರ್ಡೆನ್ ಹಳ್ಳಿಯಾಗಿಯೇ ಉಳಿದಿದ್ದಿತು. ದಕ್ಷಿಣ ರೈಲ್ವೇಯವರು ವಿಂಬಲ್ಡನ್ ನಿಲ್ದಾಣವನ್ನು ಪೋರ್ಟ್ ಲ್ಯಾಂಡ್ ಕಲ್ಲಿನಿಂದ ಹೊರಮೈ ಆವೃತವಾಗುವಂತೆ ಮರುನಿರ್ಮಿಸಿತು; ಈ ಕಾರ್ಯವನ್ನು ಸಟ್ಟನ್ ನಿಂದ ವಿಂಬಲ್ಡನ್ ಗೆ ಆರಂಭಿಸಿದ ನೂತನ ರೈಲ್ವೇ ವಿಭಾಗದ ನಿಮಿತ್ತ ನಿರ್ಮಿಸಲಾಯಿತು. ವಿಂಬಲ್ಡನ್ ನಿಂದ ಸಟ್ಟನ್ ವರೆಗಿನ ರೈಲುಮಾರ್ಗವು ೧೯೩೦ ರಲ್ಲಿ ಕಾರ್ಯೋನ್ಮುಖವಾಯಿತು.
ಎರಡನೆಯ ಮಹಾಯುದ್ಧದ ಕಾಲದಲ್ಲಿ ವಿಂಬಲ್ಡನ್ ನ ಹಾಗೂ ಲಂಡನ್ ನ ಹಲವು ಭಾಗಗಳಲ್ಲಿದ್ದ ನಿವಾಸಗಳಿಗೆ ಆದ ಜಖಂನ ಕಾರಣ ಕಡೆಯ ಪ್ರಮುಖ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಯಿತು; ಆಗ ವಿಂಬಲ್ಡನ್ ಪಾರ್ಕ್ ನಲ್ಲಿ ವಿಸ್ತಾರವಾದ ಜಮೀನಿನಲ್ಲಿ ಕಟ್ಟಲ್ಪಟ್ಟಿದ್ದ ಹಿಂದಿನ ಕಾಲದ ಹಲವಾರು ವಿಕ್ಟೋರಿಯನ್ ಮನೆಗಳನ್ನು ಚಿಕ್ಕ ಚಿಕ್ಕ ಅಪಾರ್ಟ್ ಮೆಂಟ್ ಗಳಾಗಿ ವಿಂಗಡಿಸಲಾಯಿತು ಅಥವಾ ಸಂಪೂರ್ಣವಾಗಿ ಕೆಡವಿ ಬೇರೆ ನೂತನ ಅಪಾರ್ಟ್ ಮೆಂಟ್ ಸಮುಚ್ಚಯಗಳನ್ನು ಕಟ್ಟಲಾಯಿತು. ಯಾವುದೇ ವಿಧವಾದ ನಿರ್ಮಾಣಗಳನ್ನು ತಪ್ಪಿಸಿಕೊಂಡು ಉಳಿದಿದ್ದ ವಿಂಬಲ್ಡನ್ ಪಾರ್ಕ್ ನ ಇತರ ಭಾಗಗಳನ್ನು ಬರೋ ಕೌನ್ಸಿಲ್ ತನ್ನ ಸುಪರ್ದಿಗೆ ತೆಗೆದುಕೊಂಡು ಯುದ್ಧಕಾಲದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ಕೆಲವು ಜನರಿಗೆ ಇಲ್ಲಿ ಸ್ಥಳೀಯ ಅಧಿಕಾರದ ಮೂಲಕ ಎಸ್ಟೇಟ್ ಗಳನ್ನು ಕಟ್ಟಿಸಿಕೊಟ್ಟಿತು.
೧೯೬೫ ರಲ್ಲಿ ಲಂಡನ್ ಸರ್ಕಾರಿ ಕಾಯಿದೆ ೧೯೬೩ ರನ್ವಯ ಮುನಿಸಿಪಲ್ ಬರೋ ಆಫ್ ವಿಂಬಲ್ಡನ್, ಮೆರ್ಟನ್ ಮತ್ತು ಮಾರ್ಡೆನ್ ನಗರ ಜಿಲ್ಲೆಗಳು ಮತ್ತು ಮುನಿಸಿಪಲ್ ಬರೋ ಆಫ್ ಮಿಚಮ್ ಗಳನ್ನು ರದ್ದುಗೊಳಿಸಲಾಯಿತು ಮತ್ತು ಅವುಗಳ ಸ್ಥಾನದಲ್ಲಿ ಲಂಡನ್ ಬರೋ ಆಫ್ ಮೆರ್ಟನ್ ಅನ್ನು ಸ್ಥಾಪಿಸಲಾಯಿತು. ಪ್ರಾರಂಭದಲ್ಲಿ ಈ ನೂತನ ಬರೋದ ಆಡಳಿತ ಕವೇರಿಗಳು ವಿಂಬಲ್ಡನ್ ಪುರಸಭೆಯಲ್ಲಿದ್ದವು, ಆದರೆ ೧೯೯೦ ರ ದಶಕದ ಆದಿಯಲ್ಲಿ ಇವನ್ನು ಮಾರ್ಡೆನ್ ನಲ್ಲಿನ ಹದಿನಾಲ್ಕು ಅಂತಸ್ತಿನ ಕ್ರೌನ್ ಹೌಸ್ ಗೆ ವರ್ಗಾಯಿಸಲಾಯಿತು.
೫೪ ಪಾರ್ಕ್ ಸೈಡ್ ಗ್ರೇಟ್ ಬ್ರಿಟನ್ ನ ರಾಯಭಾರಿಯಾದ ಪ್ಯಾಪಲ್ ನಂಷಿಯೋ ರ ವಾಸಸ್ಥಾನವಾಗಿದೆ.
೧೯೭೦ ಮತ್ತು ೧೯೮೦ ರ ದಶಕಗಳಲ್ಲಿ ವಿಂಬಲ್ಡನ್ ಪಟ್ಟಣವು ಹೆಚ್ಚು ಅಭಿವೃದ್ಧಿಹೊಂದಿದ ಕೇಂದ್ರಗಳಾದ ಕಿಂಗ್ ಸ್ಟನ್ ಮತ್ತು ಸಟ್ಟನ್ ಗಳೊಡನೆ ವಾಣಿಜ್ಯಪರ ಚಟುವಟಿಕೆಗಳಲ್ಲಿ ಸ್ಪರ್ಧಿಸುವಲ್ಲಿ ಹಿಂದೆ ಬೀಳುತ್ತಿದ್ದಿತು. ಗಿರಾಕಿಗಳನ್ನು ಸೆಳೆಯಲು ಬೇಕಾದಷ್ಟು ಪ್ರಮಾಣದಲ್ಲಿ ಪದಾರ್ಥಗಳನ್ನು ಪೇರಿಸಿಡಲು ಬೇಕಾದಂತಹ ಬೃಹತ್ ಜಾಗಗಳ ಕೊರತೆಯೂ ಈ ಸಮಸ್ಯೆಯ ಒಂದು ಅಂಗವಾಗಿತ್ತು. ಹಲವಾರು ವರ್ಷಗಳು ಸಂದವು, ಕೌನ್ಸಿಲ್ ಗೆ ಈ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಮಾರ್ಗ ಕಾಣಲಿಲ್ಲ. ಕಡೆಗೆ, ನಿಲ್ದಾಣದ ಪಕ್ಕದಲ್ಲಿನ ನಿವೇಶನದಲ್ಲಿ ದ ಸೆಂಟರ್ ಕೋರ್ಟ್ ಷಾಪಿಂಗ್ ಸೆಂಟರ್ ಎಂಬ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ, ಅಭಿವೃದ್ಧಿಗೊಳಿಸುವುದರ ಮೂಲಕ ಚಿಲ್ಲರೆ ಮಾರಾಟಗಳಿಗೆ ಅಗತ್ಯವಾದ ವಿಸ್ತರಣೆಯನ್ನು ಹಮ್ಮಿಕೊಳ್ಳಲು ಸಾಧ್ಯವಾಯಿತು. ಈ ಮಳಿಗೆಗಳ ಸಂಕೀರ್ಣವು ಪುರಸಭಾ ಭವನವನ್ನೂ ತನ್ನೊಳಗೇ ಅಳವಡಿಸಿಕೊಂಡಿತು. ಹಳೆಯ ಕಟ್ಟಡಕ್ಕೆ ಹೊಂದುವಂತೆ ಒಂದು ಹೊಸ ಪೋರ್ಟಿಕೋವನ್ನು ಮೂಲ ವಿನ್ಯಾಸವನ್ನು ಐವತ್ತು ವರ್ಷಗಳ ಹಿಂದೆ ನೀಡಿದ್ದ ಜಾರ್ಜ್ ಗ್ರೆನ್ ಫೆಲ್ - ಬೇಯ್ನ್ಸ್ ರೇ ವಿನ್ಯಾಸಗೊಳಿಸಿದರು. '
ಭೂವಿವರಣೆ
ವಿಂಬಲ್ಡನ್ ಇಂಗ್ಲೆಂಡ್ ನ ಲಂಡನ್ ನ ನೈಋತ್ಯ ಪ್ರದೇಶದಲ್ಲಿರುವ ಒಂದು ಜಿಲ್ಲೆ; ಇದು ವ್ಯಾಂಡ್ಸ್ ವರ್ತ್ ನ ದಕ್ಷಿಣ ಭಾಗಕ್ಕೂ, ಕಿಂಗ್ಸ್ ಟನ್ ನ ಪೂರ್ವಭಾಗಕ್ಕೂ ಇರುವ ಪ್ರದೇಶವಾಗಿದ್ದು, ಥೇಮ್ಸ್ ನದಿಯ ದಡದಲ್ಲಿ, ಗ್ರೇಟರ್ ಲಂಡನ್ ನ ಹೊರವಲಯದಲ್ಲಿರುವ ಜಿಲ್ಲೆಯಾಗಿದೆ. ಇದುಲಂಡನ್ ನ ಕೇಂದ್ರದ 7 miles (11.3 km) ನೈಋತ್ಯಭಾಗದಲ್ಲಿ ಚಾರಿಂಗ್ ಕ್ರಾಸ್ ಅನ್ನು ಹೊಂದಿದೆ. ಈ ಪ್ರದೇಶವನ್ನು ಅನುಕೂಲಸ್ಥರು ಇರುವ ಉಪನಗರವೆಂದು ಪರಿಗಣಿಸಲಾಗಿದ್ದು ಈ ಸ್ಥಳದಲ್ಲಿ ವಿಕ್ಟೋರಿಯನ್ ಮನೆಗಳ ಜೊತೆಜೊತೆಗೇ ಆಧುನಿಕ ನಿವಾಸಗಳು ಮತ್ತು ಕಡಿಮೆ ಎತ್ತರದ ವಸತಿ ಸಮುಚ್ಚಯಗಳ ಹಿತವಾದ ಮಿಶ್ರಣವಿದೆ.[8] ಇಲ್ಲಿನ ಸಾರ್ವಜನಿಕರು ವಾಸಿಸುವ ಪ್ರದೇಶಗಳನ್ನು ಎರಡಾಗಿ ವಿಂಗಡಿಸಲಾಗಿದ್ದು, ಒಂದನ್ನು ಗ್ರಾಮ(ವಿಲೇಜ್) ಎಂದೂ, ಮತ್ತೊಂದನ್ನು ಪಟ್ಟಣ[9] (ಟೌನ್) ಎಂದೂ ಕರೆಯಲಾಗುತ್ತದೆ; ಹೈ ಸ್ಟ್ರೀಟ್ (ಹೆದ್ದಾರಿ) ಮೂಲ ಮಧ್ಯಕಾಲೀನ ಯುಗದ ಗ್ರಾಮ[10]ದ ಅಂಗವಾಗಿದೆ ಹಾಗೂ ಈಗ ಲಂಡನ್ ನ ಪ್ರಮುಖ ವಾಸಸ್ಥಳವಾಗಿ ಹೆಚ್ಚು ಬೆಲೆಬಾಳುವಂತಹುದಾಗಿದೆ;[8] "ಪಟ್ಟಣ"ವು ೧೮೩೮ ರಲ್ಲಿ ರೈಲ್ವೇ ನಿಲ್ದಾಣವನ್ನು ಕಟ್ಟಿದನಂತರ ಆದ ಆಧುನಿಕ ಬೆಳವಣಿಗೆಗೆಳ ಒಂದು ಅಂಗವಾಗಿದೆ.
ಈ ಪ್ರದೇಶವನ್ನು ಲಂಡನ್ ನ ನಕ್ಷೆಯಲ್ಲಿ ಗ್ರೇಟರ್ ಲಂಡನ್ ನ ೩೫ ಪ್ರಮುಖ ಕೇಂದ್ರಗಳಲ್ಲಿ ಒಂದೆಂದು ಗುರುತಿಸಲಾಗಿದೆ.[11]
ಇಲ್ಲಿನ ಜನಸಂಖ್ಯೆಯಲ್ಲಿ ೫೭,೦೦೦ ವಯಸ್ಕರು ಇದ್ದು, ಅದರಲ್ಲಿ ಪ್ರಮುಖಾಂಶವು ABC೧ ಸಾಮಾಜಿಕ ತಂಡಕ್ಕೆ ಸೇರಿದವರದ್ದಾಗಿದೆ.[12] ೧೯ ನೆಯ ಶತಮಾನದ ಆದಿಯಲ್ಲಿ ೧,೦೦೦ ಇದ್ದ ಜನಸಂಖ್ಯೆಯು ೧೯೧೧ ರಲ್ಲಿ ಸುಮಾರು ೫೫,೦೦೦ ವನ್ನು ತಲುಪಿತು ಹಾಗೂ ಅಂದಿನಿಂದಲೂ ಈ ಸಂಖ್ಯೆಯು ಹೆಚ್ಚಿನ ಬದಲಾವಣೆಗಳನ್ನೇನೂ ಕಂಡಿಲ್ಲ.[13]
ಆಡಳಿತ
ಪ್ರಳಯದ ದಿನದ ಬಗ್ಗೆ ಬರೆದ ಪುಸ್ತಕವನ್ನು ರಚಿಸಿದ ದಿನಗಳಲ್ಲಿ (ಸುಮಾರು ೧೦೮೭ ರ ಆಸುಪಾಸಿನಲ್ಲಿ) ವಿಂಬಲ್ಡನ್ ಮೇನರ್ ಆಫ್ ಮಾರ್ಟ್ ಲೇಕ್ ನ ಒಂದು ಅಂಗವಾಗಿತ್ತು.[4] ೧೩೨೮ ರಿಂದ ೧೫೩೬ ರವರೆಗೆ ವಿಂಬಲ್ಡನ್ ನ ಒಂದು ಮೇನರ್ ಕ್ಯಾಂಟರ್ಬರಿಯಆರ್ಕ್ ಬಿಷಪ್ ರಿಗೆ ಸೇರಿದ್ದಿತೆಂಬ ದಾಖಲೆಯಿದೆ.[14]
ವಿಂಬಲ್ಡನ್ ನ ಮೇನರ್ ನ ಮಾಲೀಕತ್ವವವು ಹಲವಾರು ಬಾರಿ ಹಸ್ತಾಂತರಗೊಂಡಿರುವುದು ಮೇನರ್ ನ ಇತಿಹಾಸದಲ್ಲಿ ದಾಖಲಾಗಿದೆ. ವಿಂಬಲ್ಡನ್ ತನ್ನದೇ ಆದ ಬರೋ ಆಫ್ ವಿಂಬಲ್ಡನ್ ಅನ್ನು ಹೊಂದಿದ್ದಿತು ಹಾಗೂ ಸರ್ರೆ ಕೌಂಟಿಯ ಸುಪರ್ದಿನಲ್ಲಿಯೇ ಇದ್ದಿತು; (ಬರೋ ಎಂದರೆ ತನ್ನದೇ ಆದ ಆಡಳಿತ ವ್ಯವಸ್ಥೆ). ಆದರೆ, ೧೯೬೫ ರಲ್ಲಿ ಗ್ರೇಟರ್ ಲಂಡನ್ ನ ನಿರ್ಮಾಣದ ಅಂಗವಾಗಿ ಈ ಬರೋವನ್ನು ಲಂಡನ್ ಬರೋ ಆಫ್ ಮೆರ್ಟನ್ ನಲ್ಲಿ ವಿಲೀನಗೊಳಿಸಲಾಯಿತು. ಇದು ವಿಂಬಲ್ಡನ್ ನ ಸಂಸದೀಯ ಚುನಾವಣಾಕಣವಾಗಿದೆ ಹಾಗೂ ೨೦೦೫ ರಿಂದ ಈ ಕ್ಷೇತ್ರವನ್ನು ಕಂಸರ್ವೇಟಿವ್ ಪಕ್ಷದ ಎಂಪಿ ಆದ ಸ್ಟೀಫನ್ ಹ್ಯಾಮಂಡ್ ಪ್ರತಿನಿಧಿಸುತ್ತಿದ್ದಾರೆ.[2]
ಆರ್ಥಿಕತೆ
ಸ್ಕ್ವೇರ್ ಎನಿಕ್ಸ್ ಯೂರೋಪ್ ತನ್ನ ಪ್ರಧಾನ ಕಚೇರಿಯನ್ನು ವಿಂಬಲ್ಡನ್ ನ ವಿಂಬಲ್ಡನ್ ಬ್ರಿಡ್ಜ್ ಹೌಸ್ ನಲ್ಲಿ ಹೊಂದಿದೆ.[15] ಈಡೋಸ್ ಇಂಟರ್ ಆಕ್ಟಿವ್ ಒಂದು ಸ್ವತಂತ್ರ ಕಂಪನಿಯಾಗಿದ್ದಾಗ ವಿಂಬಲ್ಡನ್ ಬ್ರಿಡ್ಜ್ ಹೌಸ್ ಅದರ ಪ್ರಧಾನ ಕಚೇರಿಯಾಗಿದ್ದಿತು.[16][17]
ಟೆನಿಸ್ ಚಾಂಪಿಯನ್ ಷಿಪ್ ಗಳು
೧೮೭೦ ರ ದಶಕದಲ್ಲಿ, ಬೆಟ್ಟದ ತಪ್ಪಲಿನಲ್ಲಿನ ರೈಲ್ವೇ ಲೈನ್ ಮತ್ತು ವಾರ್ಪಲ್ ರಸ್ತೆಯ ಮಧ್ಯದಲ್ಲಿನ ಜಮೀನಿನಲ್ಲಿ, ಅಖಿಲ-ಇಂಗ್ಲೆಂಡ್ ಕ್ರಾಕೆಟ್ ಕ್ಲಬ್ ತನ್ನ ವಾರ್ಷಿಕ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲು ಆರಂಭಿಸಿತ್ತು. ಆದರೆ ಕ್ರಾಕೆಟ್ ಆಟದ ಜನಪ್ರಿಯತೆಯು ತಗ್ಗುತ್ತಿದ್ದಿತು ಹಾಗೂ ಅಂದಿಗೆ ಹೊಸ ಕ್ರೀಡೆಯಾದ ಲಾನ್ ಟೆನಿಸ್ ವ್ಯಾಪಕವಾಗಿ ಜನಪ್ರಿಯವಾಗತೊಡಗಿತ್ತು; ಮೊದಲಿಗೆ ಈ ಸ್ಥಳದಲ್ಲಿ ಕೇವಲ ಒಂದು ಲಾನ್ (ಹುಲ್ಲುಭರಿತ ಭೂಮಿ)ಅನ್ನು ಟೆನಿಸ್ ಗಾಗಿ ಮೀಸಲಾಗಿರಿಸಲಾಯಿತಾದರೂ, ೧೮೭೭ ರಲ್ಲಿ ಈ ಕ್ಲಬ್ ತನ್ನ ಚೊಚ್ಚಲ ಲಾನ್ ಟೆನಿಸ್ ಚಾಂಪಿಯನ್ ಷಿಪ್ ಅನ್ನು ಅದೇ ವರ್ಷದ ಜುಲೈನಲ್ಲಿ ಏರ್ಪಡಿಸಲು ನಿರ್ಧರಿಸಿತು. ೧೯೨೨ ರ ಹೊತ್ತಿಗೆ ಟೆನಿಸ್ ಎಷ್ಟು ಜನಪ್ರಿಯವಾಯಿತೆಂದರೆ ಕ್ಲಬ್ ನ ಚಿಕ್ಕದಾದ ಕ್ರೀಡಾಂಗಣವು ಪ್ರೇಕ್ಷಕರ ಸಂಖ್ಯೆಯನ್ನು ತಾಳಲಾರದಷ್ಟು ಚಿಕ್ಕದಾಯಿತು; ಪ್ರೇಕ್ಷಕರು ತಂಡೋಪತಂಡವಾಗಿ ಬಂದು, ಈ ಕ್ರೀಡಾಂಗಣ ಬಲು ಚಿಕ್ಕದೆಂದು ತೋರಿತು. ತತ್ಕಾರಣ ಆಲ್ ಇಂಗ್ಲೆಂಡ್ ಟೆನಿಸ್ ಎಂಡ್ ಕ್ರಾಕೆಟ್ ಕ್ಲಬ್ ಎಂದು ಮರುನಾಮಕರಣಗೊಂಡಿದ್ದ ಈ ಕ್ಲಬ್ ವಿಂಬಲ್ಡನ್ ಪಾರ್ಕ್ ನ ಸಮೀಪದ ಹೊಸ ಮೈದಾನದಲ್ಲಿ ತನ್ನ ಕ್ರೀಡೆಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಯಿತು.
ವಿಂಬಲ್ಡನ್ ಇತಿಹಾಸಕಾರರಾದ ರಿಚರ್ಡ್ ಮಿಲ್ವಾರ್ಡ್ ದೊರೆ ಐದನೆಯ ಜಾರ್ಜ್ ಈ ನೂತನ ಟೆನಿಸ್ ಕೋರ್ಟ್ ಗಳನ್ನು ಉದ್ಘಾಟಿಸಿದ ರೀತಿಯನ್ನು ಹೀಗೆ ಸ್ಮರಿಸುತ್ತಾರೆ: "ಅವರು ಜಾಗಟೆಯೊಂದರ ಮೇಲೆ ಮೂರು ಬಾರಿ ಹೊಡೆದರು, ನೆಲಕ್ಕೆ ಹೊದಿಸಿದ್ದ ಟಾರ್ಪಾಲುಗಳನ್ನು ತೆಗೆಯಲಾಯಿತು, ಮೊದಲನೆಯ ಪಂದ್ಯ ಪ್ರಾರಂಭವಾಯಿತು - ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು..." ಈ ಕ್ಲಬ್ ನ ಹಳೆಯ ಕ್ರೀಡಾಂಗಣಗಳನ್ನು ವಿಂಬಲ್ಡನ್ ಪ್ರೌಢಶಾಲೆಯ ಕ್ರೀಡಾ ಮೈದಾನಗಳಾಗಿ ಬಳಸಲಾಗುತ್ತಿವೆ.
ಕ್ರೀಡೆ
ಈಗ ವಿಂಬಲ್ಡನ್ ಟೆನಿಸ್ ನ ತವರೆಂದು ಖ್ಯಾತಿ ಹೊಂದಿದ್ದರೂ, ವಿಂಬಲ್ಡನ್ ಗೆ ಖ್ಯಾತಿಯನ್ನು ತಂದ ಕ್ರೀಡೆಗಳಲ್ಲಿ ಟೆನಿಸ್ ಮೊದಲನೆಯದ್ದೇನಲ್ಲ.
- ಫುಟ್ಬಾಲ್
ವಿಂಬಲ್ಡನ್ ಮತ್ತೊಂದು ಕ್ರೀಡಾಖ್ಯಾತಿಯ ಅವಧಿಗೂ ಹೆಸರುವಾಸಿಯಾಗಿದೆ. ೧೯೭೭ ರಲ್ಲಿ ಲೀಗ್-ಹೊರತಾದ ತಂಡವಾಗಿ, ಸಣ್ಣ ಪ್ರಮಾಣದಲ್ಲಿ, ಬಹಳ ಹಿಂದೆಯೇ ಸ್ಥಾಪಿತವಾದ ವಿಂಬಲ್ಡನ್ ಫುಟ್ ಬಾಲ್ ಕ್ಲಬ್ ತ್ವರಿತವಾಗಿ ಫುಟ್ ಬಾಲ್ ಲೀಗ್ ನ ನಿಚ್ಚಣಿಕೆಯನ್ನು ಏರುತ್ತಾ ಸಾಗಿ೧೯೮೬ ರಲ್ಲಿ ರಾಷ್ಟ್ರಮಟ್ಟದ ಗರಿಷ್ಠ ವೃತ್ತಿಪರ ಲೀಗ್ ಅನ್ನು ತಲುಪಿ, ೧೯೮೮ ರಲ್ಲಿ ಲಿವರ್ ಪೂಲ್ ವಿರುದ್ಧ ಸೆಣಸಿ FA ಕಪ್ ಅನ್ನು ಗೆದ್ದುಕೊಂಡಿತು.
ಆದರೆ, ಇದಕ್ಕಿಂತಲೂ ಹೆಚ್ಚು ದೃಢವಾಗಿ ಬೇರೂರಿದ್ದ ಚೆಲೆಸಾ ಮತ್ತು ಫುಲ್ ಹ್ಯಾಮ್ ತಂಡಗಳು ಸಮೀಪವೇ ಇದ್ದುದರಿಂದಲೂ, ಹಾಗೂ ಈ ತಂಡ ಬಳಸುತ್ತಿದ್ದ ಕ್ರೀಡಾಂಗಣವು ಚಿಕ್ಕದಾಗಿದ್ದುದರಿಂದಲೂ, ಈ ಕ್ಲಬ್ ತನ್ನ ಕಟ್ಟಾ ಅಭಿಮಾನಿಗಳ ತಂಡವನ್ನು ಬೆಳೆಸಿಕೊಳ್ಳಲಾಗಲೇ ಇಲ್ಲ; ಒಂದು ಶ್ರೇಷ್ಠಮಟ್ಟದ ತಂಡಕ್ಕೆ ಅಂತಹ ಅಭಿಮಾನಿಗಳ ತಂಡ ಇರುವುದು ಅತ್ಯಗತ್ಯ. ೨೦೦೦ ದಲ್ಲಿ, ೧೪ ವರ್ಷಗಳ ನಂತರ, ಇಂಗ್ಲಿಷ್ ಫುಟ್ ಬಾಲ್ ನ ಮೊದಲ ವಿಭಾಗದಿಂದ ಈ ತಂಡವನ್ನು ಕೆಳಗಿನ ಶ್ರೇಣಿಗಳಿಗೆ ಇಳಿಸಲಾಯಿತು.
ವಿಂಬಲ್ಡನ್ ೧೯೧೨ ರಲ್ಲಿ ಪ್ಲೋ ಲೇನ್ ನಲ್ಲಿನ ಸ್ಟೇಡಿಯಮ್ ಗೆ ಸ್ಥಳಾಂತರಗೊಂಡಿತು ಹಾಗೂ ಅಲ್ಲಿ ೭೯ ವರ್ಷಗಳ ಕಾಲ ಆಟವಾಡಿತು; ನಂತರಫುಟ್ ಬಾಲ್ ಲೀಗ್ ನಲ್ಲಿ ಈ ತಂಡದ ಬೆಳವಣಿಗೆಯ ಕ್ಷಿಪ್ರತೆ ಮತ್ತು ಅಗಾಧತೆಗೆ ಆ ಕ್ರೀಡಾಂಗಣವನ್ನು ಪುನರಭಿವೃದ್ಧಿಗೊಳಿಸುವುದು ದುಃಸಾಧ್ಯವೆನ್ನುವ ಮಟ್ಟವನ್ನು ತಲುಪಿತು. ಆಗ ವಿಂಬಲ್ಡನ್ ಕ್ರಾಯ್ಡನ್ ನಲ್ಲಿರುವ ಸೆಲ್ಹರ್ಸ್ಟ್ ಪಾರ್ಕ್ ಅನ್ನು ಕ್ರಿಸ್ಟಲ್ ಪ್ಯಾಲೇಸ್ ನೊಡನೆ ಹಂಚಿಕೊಂಡು ಆಟವಾಡುವುದನ್ನು ಮುಂದುವರಿಸಿತು. ಪ್ಲೋ ಲೇನ್ ಸ್ಟೇಡಿಯಂ ಹತ್ತು ವರ್ಷಗಳ ಕಾಲ ನಿಷ್ಪ್ರಯೋಜಕವಾಗಿಯೇ ಇದ್ದಿತು ಹಾಗೂ ೨೦೦೧ ರಲ್ಲಿ ಅದನ್ನು ಕೆಡವಿಹಾಕಲಾಯಿತು. ಈ ನಿವೇಶನದಲ್ಲಿ ಈಗ ಒಂದು ವಸತಿ ಅಭಿವೃದ್ಧಿ ಸಂಸ್ಥೆಯಿದೆ.
ಮೇ ೨೦೦೨ ರಲ್ಲಿ ಎಫ್.ಎ. ಆಯೋಗವೊಂದು ವಿವಾದಾತ್ಮಕವಾದ ತೀರ್ಪೊಂದನ್ನು ನೀಡುತ್ತಾ, ಈ ಕ್ಲಬ್ ನ ಮಾಲಿಕರು ತಮ್ಮ ಕ್ಲಬ್ ಅನ್ನು ಈ ಸ್ಥಳದಿಮದ ೭೦ ಮೈಲಿ ಉತ್ತರಕ್ಕಿರುವ ಬಕಿಂಗ್ ಹ್ಯಾಂಷೈರ್ ನಲ್ಲಿರುವ ಮಿಲ್ಟನ್ ಕೀನೆಸ್ ಎಂಬ ಪಟ್ಟಣಕ್ಕೆ ಸ್ಥಳಾಂತರಿಸಿಕೊಳ್ಳಲು ಅನುಮತಿ ನೀಡಿತು. ಇದಕ್ಕೆ ಈ ಕ್ಲಬ್ ನ ಅಭಿಮಾನಿಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದು ಅಮೆರಿಕನ್ ಶೈಲಿಯ ಕ್ರೀಡಾತಂಡವೊಂದಕ್ಕೆ ಹಕ್ಕನ್ನು ನೀಡುವುದನ್ನು ಎಫ್.ಎ. ಒಪ್ಪಿದಂತಹ ಪ್ರಸಂಗವನ್ನು ಮುಂದೊಡ್ಡಿತು; ಹಿಂದೆಂದೂ ಈ ರೀತಿಯಾಗಿ ಎಫ್.ಎ. ಇಂತಹ ತೀರ್ಮಾನವನ್ನು ತೆಗೆದುಕೊಂಡಿರಲಿಲ್ಲ ಹಾಗೂ ಈ ಕ್ರಮವು ಒಂದು ಅಪವಾದದ ಪ್ರತಿನಿಧಿತ್ವವೇ ಆಯಿತು ಹಾಗೂ ಈ ತೀರ್ಮಾನವು ಜಗದಾದ್ಯಂತ ಟೀಕೆಗೊಳಗಾಯಿತು.
ಮೇ ೨೦೦೨ ರಲ್ಲಿ ದ ಫುಟ್ ಬಾಲ್ ಅಸೋಸಿಯೇಷನ್ ಈ ನಿರ್ಣಯವನ್ನು ಅಂಗೀಕರಿಸಿದ ತಕ್ಷಣ ಮಾಜಿ ವಿಂಬಲ್ಡನ್ ಫುಟ್ ಬಾಲ್ ಕ್ಲಬ್ ನ ಬೆಂಬಲಿಗರು ತಮ್ಮದೇ ಆದ ಅರೆ-ವೃತ್ತಿನಿರತ AFC ವಿಂಬಲ್ಡನ್ ಎಂಬ ಬದಲಿ ಕ್ಲಬ್ ಒಂದನ್ನು ಸ್ಥಾಪಿಸಿದರು ಹಾಗೂ ಈ ಕ್ಲಬ್ ಗಿದ್ದ ಬೆಂಬಲವು ಬೃಹತ್ ಪ್ರಮಾಣದಲ್ಲಿ ನೂತನ ಕ್ಲಬ್ ಗೆ ವರ್ಗವಾಯಿತು; ಆ ನೂತನ ಕ್ಲಬ್ ತನ್ನ ಎರಡನೆಯ ಮತ್ತು ಮೂರನೆಯ ಋತುಗಳಲ್ಲಿ ಸತತ ಬಡ್ತಿಗಳನ್ನು ಪಡೆದು ಇಸ್ಥ್ ಮಿಯನ್ ಲೀಗ್ ನ ಮೊದಲ ಮತ್ತು ಪ್ರೀಮಿಯರ್ ವಿಭಾಗಗಳಲ್ಲಿ ಭಾಗವಹಿಸಿತು. ೨೦೦೪ ರಲ್ಲಿ ಈ ಕ್ಲಬ್ ಸಂಯುಕ್ತ ದೇಶಗಳ ಲೀಗ್ ಪ್ರೀಮಿಯರ್ ಕಪ್ ಅನ್ನು ಜಯಿಸಿತು ಮತ್ತು ೨೦೦೫ ರಲ್ಲಿ ಸರ್ರೇ ಸೀನಿಯರ್ ಕಪ್ ಅನ್ನು ತನ್ನದಾಗಿಸಿಕೊಂಡು ಸತತ ಲೀಗ್ ಮತ್ತು ಕಪ್ ಡಬಲ್ ಗಳನ್ನು ಪಡೆಯುವಲ್ಲಿ ಯಶಸ್ವಿಯಾದುದಷ್ಟೇ ಅಲ್ಲದೆ, ಆ ಎರಡರಲ್ಲಿ ಒಂದು ಋತುವಿನಲ್ಲಿ ಲೀಗ್ ನಲ್ಲಿ ಅಜೇಯವಾಗಿಯೇ ಉಳಿಯಿತು. ವಿಂಬಲ್ಡನ್ ಸ್ವತಂತ್ರ ಬೆಂಬಲಿಗರ ಒಕ್ಕೂಟ(WISA)ದ ಮತ್ತೊಂದು ಶ್ರೇಷ್ಠ ಸಾಧನೆಯೆಂದರೆ ಕೇರ್ ಆಫ್ ಮೆರ್ಟನ್ ಕೌನ್ಸಿಲ್ ಗೆ ವಿಂಬಲ್ಡನ್ ಫುಟ್ ಬಾಲ್ ಕ್ಲಬ್ ನ ಪೂರ್ವಾರ್ಜಿತಗಳನ್ನು ೨೦೦೭ ರಲ್ಲಿ ಹಿಂದಕ್ಕೆ ತಂದದ್ದು. ಮಾಡ್ರನ್ ಲೈಬ್ರರಿಯಲ್ಲಿ ಈಗ ಇದರ ಖಾಯಂ ಪ್ರದರ್ಶನವಿದ್ದೇ ಇರುತ್ತದೆ. ೨೦೦೮ ಮತ್ತು ೨೦೦೯ ರಲ್ಲಿ AFC ವಿಂಬಲ್ಡನ್ ಮತ್ತೂ ಎರಡು ಬಡ್ತಿಗಳನ್ನು ಸಂಪಾದಿಸಿತು; ಕಾಂಫರೆನ್ಸ್ ಸೌತ್ ಮೂಲಕ ಕಾಂಫರೆನ್ಸ್ ನ್ಯಾಷನಲ್ ಗೆ ಈ ಕ್ಲಬ್ ಗೆ ಬಡ್ತಿ ದೊರಕಿತು. ಮೇ ೨೧, ೨೦೧೧ ರಂದು ಸಿಟಿ ಆಫ್ ಮ್ಯಾಂಚೆಸ್ಟರ್ ಸ್ಟೇಡಿಯಂನಲ್ಲಿ ಲಟ್ಟನ್ ಟೌನ್ ವಿರುದ್ಧದ ಪಂದ್ಯದಲ್ಲಿ ಪೆನಾಲ್ಟಿ ಕಿಕ್ ಮೂಲಕ (ಅದುವರೆಗೆ ಅದು ಗೋಲ್ ರಹಿತ ಡ್ರಾ ಆಗಿ, ಹೆಚ್ಚುವರಿ ಸಮಯಕ್ಕೂ ಸರಿದಿತ್ತು) ಕಾಂಫರೆನ್ಸ್ ನ್ಯಾಷನಲ್ ಪ್ಲೇ-ಆಫ್ ನಲ್ಲಿ ಜಯಗಳಿಸುವುದರ ಮೂಲಕ AFC ವಿಂಬಲ್ಡನ್ ಫುಟ್ ಬಾಲ್ ಲೀಗ್ ಗೆ ಬಡ್ತಿಯನ್ನು ಪಡೆಯಿತು.[18]
- ಬಂದೂಕು ಷೂಟಿಂಗ್
೧೮೬೦ ರ ದಶಕದಲ್ಲಿ ನೂತನವಾಗಿ ಆರಂಭವಾದ ನ್ಯಾಷನಲ್ ರೈಫಲ್ ಅಸೋಸಿಯೇಷನ್ ತನ್ನ ಮೊದಲ ಸ್ಪರ್ಧೆಯನ್ನು ವಿಂಬಲ್ಡನ್ ಕಾಮನ್ ನಲ್ಲಿ ನಡೆಸಿತು. ಈ ಒಕ್ಕೂಟ ಹಾಗೂ ಈ ವಾರ್ಷಿಕ ಸ್ಪರ್ಧೆಗಳು ತ್ವರಿತವಾಗಿ ವರ್ಧಮಾನಕ್ಕೆ ಬಂದವು ಹಾಗೂ ೧೮೭೦ ರ ದಶಕದ ಆದಿಯಲ್ಲಿ ರೈಫಲ್ ರೇಂಜ್(ಗುಂಡು ಹಾರಿಸಲು ಜಾಗ ಮತ್ತು ನಿಶಾನೆ)ಗಳನ್ನು ಕಾಮನ್ ನಲ್ಲಿ ಸ್ಥಾಪಿಸಲಾಯಿತು. ೧೮೭೮ ರಲ್ಲಿ ಈ ಸ್ಪರ್ಧೆಗಳು ಎರಡು ವಾರಗಳ ಕಾಲ ನಡೆಯುತ್ತಿದ್ದವು ಮತ್ತು ಸುಮಾರು ೨೫೦೦ ಸ್ಪರ್ಧಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು; ಈ ಜನರನ್ನು ಕಾಮನ್ ನಲ್ಲಿ ನಿರ್ಮಿಸಿದ ತಾತ್ಕಾಲಿಕ ಶಿಬಿರಗಳಲ್ಲಿ ಇರಿಸಲಾಗುತ್ತಿತ್ತು. ೧೮೮೦ ರ ದಶಕದ ವೇಳೆಗೆ ರೈಫಲ್ ಗಳ ಸಾಮರ್ಥ್ಯ ಮತ್ತು ತಲುಪುವ ದೂರವು ಬಹಳವೇ ಹೆಚ್ಚಾಗಿದ್ದಿತು ಹಾಗೂ ಜನಸಂಖ್ಯೆಯು ಹೆಚ್ಚುತ್ತಿದ್ದ ಪ್ರದೇಶಗಳಲ್ಲಿ ಷೂಟಿಂಗ್ (ಗುಂಡು ಹಾರಿಸುವುದು) ಸುರಕ್ಷಿತವಾದುದಲ್ಲವೆಂದು ಪರಿಗಣಿಸಲಾಗುತ್ತಿತ್ತು. ೧೮೮೯ ರಲ್ಲಿ ಈ ಪ್ರದೇಶದಲ್ಲಿ ಈ ಒಕ್ಕೂಟದ ಸಭೆ ಸೇರಿತು; ನಂತರ NRA ಸರ್ರೆಯಲ್ಲಿನ ಬಿಸ್ಲೇಗೆ ಸ್ಥಳಾಂತರಗೊಂಡಿತು.
- ಕುದುರೆ ಓಟದ ಸ್ಪರ್ಧೆ
೧೭೯೨ ರಲ್ಲಿ ಪೂಜ್ಯ ಡೇನಿಯಲ್ ಲೈಸನ್ಸ್ ರವರು ದ ಎನ್ವಿರಾನ್ಸ್ ಆಪ್ ಲಂಡನ್: ಬೀಯಿಂಗ್ ಎನ್ ಹಿಸ್ಟಾರಿಕಲ್ ಅಕೌಂಟ್ ಆಫ್ ದ ಟೌನ್ಸ್, ವಿಲೇಜಸ್, ಎಂಡ್ ಹ್ಯಾಮ್ಲೆಟ್ಸ್, ವಿತಿನ್ ಟ್ವೆಲ್ವ್ ಮೈಲ್ಸ್ ಆಫ್ ದಟ್ ಕ್ಯಾಪಿಟಲ್ ಎಂಬ ಪುಸ್ತಕವನ್ನು ಪ್ರಕಟಿಸಿದರು; ಅದರಲ್ಲಿ ಅವರು "ಈ ಶತಮಾನದ ಮೊದಲನೆಯ ಭಾಗದಲ್ಲಿ ಈ ಕಾಮನ್ ಪ್ರದೇಶದಲ್ಲಿ ವಾರ್ಷಿಕ ಕುದುರೆಯೋಟದ ಸ್ಪರ್ಧೆಗಳು ನಡೆಯುತ್ತಿದ್ದವು, ಗೆದ್ದವರಿಗೆ ಕಿಂಗ್ಸ್ ಪ್ಲೇಟ್ ಅನ್ನು ನೀಡಲಾಗುತ್ತಿದ್ದಿತು" ಎಂದು ಬರೆದಿದ್ದಾರೆ. ಆದರೆ ಅವರು ಇನ್ನಾವುದೇ ವಿವರಗಳನ್ನು ನೀಡಲ್ಲ ಮತ್ತು ಕುದುರೆಯೋಟದ ಸ್ಪರ್ಧೆ ಎಷ್ಟು ಯಶಸ್ವಿಯಾಗಿತ್ತು ಹಾಗೂ ಎಷ್ಟು ವರ್ಷಗಳ ಕಾಲ ನಡೆಯಿತು ಎಂಬುದರ ಬಗ್ಗೆ ಏನೂ ಬರೆದಿಲ್ಲ.
- ವಿಂಬಲ್ಡನ್ ಸ್ಟೇಡಿಯಂನಲ್ಲಿರುವ ಮೋಟರ್ಸೈಕಲ್ ಶೀಘ್ರಪಥ.
ಹಲವಾರು ವರ್ಷಗಳಿಂದ ವಿಂಬಲ್ಡನ್ ಸ್ಟೇಡಿಯಂ ಗ್ರೇಹೌಂಡ್ ರೇಸಿಂಗ್ ಹಾಗೂ ಟಾಕ್ ಕಾರ್ ರೇಸಿಂಗ್ ಮತ್ತು ಸ್ಪೀಡ್ ವೇ ಕ್ರೀಡೆಗಳಿಗೆ ಅತಿಥೇಯವಾಗಿದೆ.
ಸ್ಪೀಡ್ ವೇ ವಿಂಬಲ್ಡನ್ ಸ್ಟೇಡೊಯಂನಲ್ಲಿ ೧೯೨೮ ರಲ್ಲಿ ಶುರುವಾಯಿತು ಹಾಗೂ ಸ್ಥಳೀಯ ತಂಡವಾದ ದ "ಡಾನ್ಸ್" , ದಶಕಗಳವರೆಗೆ ಬಹಳ ಯಶಸ್ವಿ ತಂಡವಾಗಿತ್ತು.
ಈ ತಂಡವು ೧೯೨೯ ರಲ್ಲಿ ಸದರನ್ ಲೀಗ್ ನ ಸದಸ್ಯತ್ವವನ್ನು ಪಡೆದು ಆಡಲಾರಂಭಿಸಿತು ಹಾಗೂ ಎರಡನೆಯ ಮಹಾಯುದ್ಧದ ವರೆಗೆ ಕಾರ್ಯನಿರತವಾಗಿದ್ದಿತು. ೧೯೪೬ ರಲ್ಲಿ ಪಥವು ಪುನರಾರಂಭವಾಯಿತು ಹಾಗೂ ಡಾನ್ಸ್ ತಂಡವು ಹಲವಾರು ವರ್ಷಗಳ ಕಾಲ ಶ್ರೇಷ್ಠಮಟ್ಟದ ಕ್ರೀಡೆಯನ್ನು ಪ್ರದರ್ಶಿಸುತ್ತಾ ಸಾಗಿತು. ೧೯೫೦ ರ ದಶಕದಲ್ಲಿ ಈ ಪಥ(ಟ್ರ್ಯಾಕ್)ವು ವಿಶ್ವ ಚಾಂಪಿಯನ್ ಗಳಾದ ರಾನೀ ಮೂರ್ ಮತ್ತು ಬ್ಯಾರೀ ಬ್ರಿಗ್ಸ್ ರವರ ತವರಾಗಿತ್ತು.
ಡಾನ್ ತಂಡದ ಕೊನೆಯ ಋತುವಾದ ೨೦೦೫ ರಲ್ಲಿ ಈ ತಂಡವು ನ್ಯಾಷನಲ್ ಕಾಂಪೆರೆನ್ಸ್ ಲೀಗ್ ನಲ್ಲಿ ಎರಡನೆಯ ಸ್ಥಾನವನ್ನು ಪಡೆಯಿತು. ಆದರೆ, ಸ್ಪೀಡ್ ವೇ ಪ್ರೊಮೋಟರ್ಸ್ ಮತ್ತು ಗ್ರೇಹೌಂಡ್ ಅಸೋಸಿಯೇಷನ್ (ಸ್ಟೇಡಿಯಮ್ ನ ಮಾಲಿಕರು) ನಡುವೆ ನಡೆದ ಮರುನವೀಕರಣದ ಮಾತುಗಳು ವಿಫಲವಾಗಿ, GRA ಬಹಳ ದುಬಾರಿ ಬಾಡಿಗೆಯನ್ನು ಕೇಳಿದುದರ ಕಾರಣ, ಆ ವೆಚ್ಚವನ್ನು ಭರಿಸಲಾಗದೆ, ಗತ್ಯಂತರವಿಲ್ಲದೆ, ಈ ತಂಡವನ್ನು ಬರಖಾಸ್ತು ಮಾಡಲಾಯಿತು. ಗ್ರೇಹೌಂಡ್ ರೇಸಿಂಗ್ ಮತ್ತು ಸ್ಟಾಕ್ ಕಾರ್ ರೇಸಿಂಗ್ ಗಳು ಇಂದಿಗೂ ಮುಂದುವರಿದಿವೆ.
- ಓಟ
ವಿಂಬಲ್ಡನ್ ನಲ್ಲಿ ವಿಂಡ್ ಮಿಲ್ಲರ್ಸ್ ಎಂಬ ಒಂದು ಕ್ರಿಯಾತ್ಮಕ ಓಟದ ಕ್ಲಬ್ ಇದೆ. ಈ ಕ್ಲಬ್ ನಲ್ಲಿ ಕೆಲವು ಶ್ರೇಷ್ಠ ಅಥ್ಲೆಟ್ ಗಳು ಮತ್ತು ಕೆಲವು ಈಗ ತಾನೇ ಕ್ರೀಡಾಜೀವನವನ್ನು ಆರಂಭಿಸುತ್ತಿರುವ ಓಟಗಾರರಿದ್ದಾರೆ. http://www.windmilers.org.uk/
ವಿಂಬಲ್ಡನ್ ಕಾಮನ್ ಟೈಂ ಟ್ರಯಲ್ ಎಂಬುದು ವಿಂಬಲ್ಡನ್ ಕಾಮನ್ ನಲ್ಲಿ ಪ್ರತಿ ವಾರವೂ ಹಮ್ಮಿಕೊಳ್ಳುವ ಒಂದು ಓಟದ ಸ್ಪರ್ಧೆ; ಟೈಂ ಟ್ರಯಲ್ (ಸಮಯ/ಅವಧಿ ಪರೀಕ್ಷೆ) ಸಂಗ್ರಹಗಳಲ್ಲಿ (ಸ್ಪರ್ಧೆಗಳಲ್ಲಿ) ಹಮ್ಮಿಕೊಂಡಂತಹ ಎರಡನೆಯ ಓಟದ ಸ್ಪರ್ಧೆ ಇದು. ಓಟದಲ್ಲಿ ಕ್ರಮಿಸುವ ದೂರವು ೫ ಕಿಲೋಮೇಟರ್ ಗಳು ಹಾಗೂ ಪ್ರತಿ ಭಾನುವಾರ ಬೆಳಗ್ಗೆ ೯ ಗಂಟೆಗೆ ಸ್ಪರ್ಧಿಗಳು ತೆಗೆದುಕೊಳ್ಳುವ ಸಮಯವನ್ನು ಸ್ವಯಂಸೇವಕರು ಲೆಕ್ಕವಿರಿಸಿಕೊಳ್ಳುತ್ತಾರೆ.
ನೂತನ ವಿಂಬಲ್ಡನ್ ರಂಗಮಂದಿರ

ನೂತನ ವಿಂಬಲ್ಡನ್ ರಂಗಮಂದಿರವು ದ್ವಿತೀಯ ಶ್ರೇಣಿಯ ಪಟ್ಟಿಯಲ್ಲಿ ದಾಖಲಾದ ರಂಗಮಂದಿರವಾಗಿದ್ದು, ಇದು ಎಡ್ವರ್ಡಿಯನ್ ಶೈಲಿಯ ರಂಗಮಂದಿರವಾಗಿದೆ; ಇದನ್ನು ದೊಡ್ಡ ನಿವಾಸ ಹಾಗೂ ವಿಶಾಲವಾದ ಮೈದಾನಗಳಿದ್ದ ಒಂದು ನಿವೇಶನದಲ್ಲಿ ಜೆ.ಬಿ. ಮುಲ್ ಹಾಲೆಂಡ್ ರವರು ವಿಂಬಲ್ಡನ್ ರಂಗಮಂದಿರವಾಗಿ ನಿರ್ಮಿಸಿದರು.[19] ಈ ರಂಗಮಂದಿರದ ವಿನ್ಯಾಸವನ್ನು ಸೆಸಿಲ್ ಆಬ್ರೇ ಮ್ಯಾಸೀ ಮತ್ತು ರಾಯ್ ಯಂಗ್ ರವರು ಮಾಡಿದರು(ಪ್ರಾಯಶಃ ಫ್ರ್ಯಾಂಕ್ ಹೆಚ್ ಹೋನ್ಸ್ ರವರ ೧೯೦೮ ರ ವಿನ್ಯಾಸದ ಆಧಾರದ ಮೇಲೆ). ೨೬ ಡಿಸೆಂಬರ್ ೧೯೧೦ ರಂದು ಜ್ಯಾಕ್ ಎಂಡ್ ಜಿಲ್ ನ ಮೂಕಾಭಿನಯವನ್ನು ವೇದಿಕೆಗೆ ತರುವುದರ ಮೂಲಕ ಈ ರಂಗಮಂದಿರವು ಸಾರ್ವಜನಿಕರಿಗೆ ತನ್ನ ದ್ವಾರಗಳನ್ನು ತೆರೆಯಿತು.[20] ಎರಡು ಮಹಾಯುದ್ಧಗಳ ಮಧ್ಯದ ಅವಧಿಯಲ್ಲಿ ಇದು ಬಹಳ ಜನಪ್ರಿಯವಾಗಿದ್ದಿತು ಹಾಗೂ ಹಲವಾರು ಪ್ರಮುಖ ಹಾಗೂ ಜನಪ್ರಿಯ ನಟ/ನಟಿಯರು ಇಲ್ಲಿ ಅಭಿನಯ ಪ್ರದರ್ಶಿಸಿದರು. ಅವರುಗಳ ಪೈಕಿ ಕೆಲವರೆಂದರೆ ಗ್ರೇಸಿ ಫೀಲ್ಡ್ಸ್, ಸಿಬಿಲ್ ಥಾರ್ನ್ ಡೈಜ್, ಐವಾರ್ ನೊವೆಲ್ಲೋ, ಮಾರ್ಕೋವಾ ಮತ್ತು ನೊಯೆಲ್ ಕವರ್ಡ್. ಲಿಯೋನೆಲ್ ಬಾರ್ಟ್ ರ ಒಲಿವರ್! ಮತ್ತು ಹಾಫ್ ಎ ಸಿಕ್ಸ್ ಪೆನ್ಸ್ ನಾಟಕಗಳು ಟಾಮಿ ಸ್ಟೀಲ್ ರಂತಹ ನಟರನ್ನು ಹೊಂದಿದ್ದು, ೧೯೬೦ ರಲ್ಲಿ ವಿಶ್ವ ಪ್ರೀಮಿಯರ್ (ಪ್ರಥಮ ಪ್ರದರ್ಶನ)ವನ್ನು ಈ ರಂಗಂದಿರದಲ್ಲಿ ಪಡೆದು ನಂತರ ವೆಸ್ಟ್ ಎಂಡ್ ಗೆ ವರ್ಗಾವಣೆಗೊಂಡವು.
೨೦೦೪ ರಲ್ಲಿ ಅಂಬಾಸಿಡರ್ ಥಿಯೇಟರ್ ಗ್ರೂಪ್ ಈ ರಂಗಮಂದಿರವನ್ನು ಕೊಂಡಾಗ ಅದನ್ನು ಪುನರಭಿವೃದ್ಧಿಯ ತೆಕ್ಕೆಯಿಂದ ಉಳಿಸಲಾಯಿತು.[21][22] ಹಲವಾರು ಬಾರಿ ಈ ಕಟ್ಟಡಕ್ಕೆ ಮೆರಗು ನೀಡಲಾಗಿದ್ದು, ಪ್ರಮುಖವಾಗಿ ೧೯೯೧ ಮತ್ತು ೧೯೯೮ ರಲ್ಲಿ ವಿಶೇಷ ಮೆರಗನ್ನು ನೀಡಲಾಗಿದ್ದು, ಕಟ್ಟಡವು ತನ್ನ ಅಸಮರೂಪಿ ಮತ್ತು ಆಡಮಿಸ್ಕ್ (ರಾಬರ್ಟ್ ಆಡಮ್ ಶೈಲಿಯ) ಒಳಾಂಗಣ ಲಕ್ಷಣಗಳನ್ನು ಉಳಿಸಿಕೊಳ್ಳುವಲ್ಲಿ ಈ ಮೆರಗು ನೀಡುವಿಕೆ ಸಹಕಾರಿಯಾಗಿದೆ. ಬುರುಜಿನ ಮೇಲಿನ ಚಿನ್ನದ ಪ್ರತಿಮೆಯು ರೋಮ್ ನ ಸಂತೋಷದ ಪ್ರತೀಕವಾಗಿರುವ ದೇವತೆಯಾದ ಲಯೆಟಿಷಿಯಾದೇವಿಯ ಪ್ರತಿಮೆಯಾಗಿದ್ದು, ೧೯೧೦ ರಲ್ಲಿ ಇದು ಮೂಲ ಸ್ಥಾಪನೆಗಳಲ್ಲಿ ಒಂದಾಗಿದ್ದಿತು. ಲಯೆಟಿಷಿಯಾ ಕೈಯಲ್ಲಿ ಲಾರೆಲ್ ಕಿರೀಟವೊಂದಿದ್ದು ಇದು ವಿಜಯೋತ್ಸಾಹದ ಆಚರಣೆಯ ದ್ಯೋತಕವಾಗಿದೆ. ಎರಡನೆಯ ಮಹಾಯುದ್ಧದ ಕಾಲದಲ್ಲಿ ಈ ಪ್ರತಿಮೆಯು (ತನ್ನ ಹೊಳಪಿನಿಂದ) ಜರ್ಮನ್ ಬಾಂಬರ್ ಗಳಿಗೆ ದಿಕ್ಸೂಚಿಯಾಗಬಹುದು ಎಂಬ ಅಭಿಪ್ರಾಯದ ಫಲವಾಗಿ ಈ ಸ್ಥಳದಿಂದ ತೆಗೆದುಹಾಕಲಾಗಿತ್ತು ಹಾಗೂ ೧೯೯೧ ರಲ್ಲಿ ಮತ್ತೆ ಪ್ರತಿಷ್ಠಾಪಿಸಲಾಯಿತು.
ಸಾರಿಗೆ
- ವಿಂಬಲ್ಡನ್ ನಿಲ್ದಾಣ.
- ವಿಂಬಲ್ಡನ್ ಚೇಸ್ ರೈಲ್ವೇ ನಿಲ್ದಾಣ.
- ರೇನೆಸ್ ಪಾರ್ಕ್ ರೈಲ್ವೆ ನಿಲ್ದಾಣ.
- ವಿಂಬಲ್ಡನ್ ಉದ್ಯಾನವನ
- ದಕ್ಷಿಣ ವಿಂಬಲ್ಡನ್
ಸಾಹಿತ್ಯ
ಸಾಹಿತ್ಯ ಜಗತ್ತಿನಲ್ಲಿ ನಿಗೆಲ್ ವಿಲಿಯಮ್ಸ್ ಬರೆದ ಹಲವಾರು ಕಾಮಿಕ್ ಕಾದಂಬರಿಗಳ (ಉತ್ತಮವಾಗಿ ಮಾರಾಟವವಾಗುತ್ತಿರುವ ದ ವಿಂಬಲ್ಡನ್ ಪ್ರಿಸನರ್ ಮತ್ತು ದೆ ಕೇಮ್ ಫ್ರಂ SWI೯ ಸೇರಿದಂತೆ) ಪಾತ್ರಗಳು ಮತ್ತು ಸನ್ನಿವೇಶಗಳು ವಿಂಬಲ್ಡನ್ ನ ಹಿನ್ನೆಲೆಯಲ್ಲೇ ಸೃಷ್ಟಿಸಲ್ಪಟ್ಟಿವೆ; ಎಲಿಝಬೆತ್ ಬೆರೆಸ್ಫೋರ್ಡ್ ರ ವೋಂಬಲ್ಸ್ ಬಗ್ಗೆ ಬರೆದಂತಹ ಮಕ್ಕಳ ಕಥೆಗಳ ಸರಣಿಯೂ ಸಹ ಇದೇ ಹಿನ್ನೆಲೆಯನ್ನು ಹೊಂದಿದೆ.
ಹೆಚ್.ಜಿ. ವೆಲ್ಸ್ ರ ಪುಸ್ತಕವಾದ ದ ವಾರ್ ಆಫ್ ದ ವರ್ಲ್ಡ್ಸ್ ನಲ್ಲಿ ಆರೆನಯ ಮಾರ್ಷಿಯನ್ (ಮಾರ್ಸ್ ನ) ಆಕ್ರಮಣಕಾರಿ ಸಿಲಿಂಡರ್ ಧರೆಗಿಳಿದದ್ದು ವಿಂಬಲ್ಡನ್ ನಲ್ಲೇ; ಅಲ್ಲದೆ ಅವರ ಇತರ ಪುಸ್ತಕಗಳಾದ ದ ಟೈಮ್ ಮೆಷೀನ್ ಮತ್ತು ವೆನ್ ದ ಸ್ಲೀಪರ್ ವೇಕ್ಸ್ ನಲ್ಲೂ ವಿಂಬಲ್ಡನ್ ಬಗ್ಗೆ ಸಣ್ಣದಾದ ಉಲ್ಲೇಖಗಳಿವೆ.
ಪ್ರಖ್ಯಾತ ನಿವಾಸಿಗಳು
- ವೋಂಬಲ್ ಕುಟುಂಬ
- ಖಲೀದ್ ಅಬ್ದಲ್ಲಾ : ದ ಕೈಟ್ ರನ್ನರ್ ಮತ್ತು ಯುನೈಟೆಡ್ ೯೩ಗಳಲ್ಲಿ ನಟಿಸಿದ ನಟ.
- ಬಾಬ್ ಆಸ್ಟಲ್ಸ್ - ಇಂಗ್ಲೆಂಡ್ ನಲ್ಲಿ ಜನ್ಮತಾಳಿದರು ಹಾಗೂ ಉಗಾಂಡಾದ ಮಾಜಿ ಅಧ್ಯಕ್ಷರುಗಳಾಗಿದ್ದ ಮಿಲ್ಟನ್ ಒಬೋಟೆ ಮತ್ತು ಈದೀ ಅಮೀನ್ ರ ಸಹವರ್ತಿಗಳಾಗಿದ್ದರು.
- ಬೆನ್ ಬ್ಯಾರ್ನ್ಸ್ - The Chronicles of Narnia: Prince Caspianನಲ್ಲಿ ನಟಿಸಿದ ನಟ
- ಜೋಸೆಫ್ ಬಝಲ್ಗೆಟ್ - ಕಾಮಗಾರಿ ಇಂಜಿನಿಯರ್; ಅವರು ೧೯ ನೆಯ ಶತಮಾನದಲ್ಲಿ ಮಧ್ಯ ಲಂಡನ್ ನಲ್ಲಿ ನಿರ್ಮಿಸಿದ ಒಳಚರಂಡಿ ವ್ಯವಸ್ಥೆಯು ಕಾಲರಾ ಸಂಕ್ರಾಮಿಕ ರೋಗವನ್ನು ನಿರ್ಮೂಲನ ಮಾಡುವಲ್ಲಿ ಸಹಾಯಕವಾಯಿತು.
- ರೇಮಾಂಡ್ ಬ್ರಿಗ್ಸ್ - ವ್ಯಂಗ್ಯಚಿತ್ರಕಾರ
- ಜೇಮ್ಸ್ ಬ್ರನ್ಲೀಸ್ - ೧೯ ನೆಯ ಶತಮಾನದ ಇಂಜಿನಿಯರ್ ಆದ ಇವರು ಪಾರ್ಕ್ ಸೈಡ್ ನ ಅರ್ಗೈಲ್ ಲಾಡ್ಜ್ ನ ನಿವಾಸಿಯಾಗಿದ್ದರು.
- ಜೋಸೆಫೈನ್ ಬಟ್ಲರ್ - ವಿಕ್ಟೋರಿಯನ್ ಯುಗದ ಮಹಿಳಾ ಚಳುವಳಿಗಾರ್ತಿ. ಇವರ ವಾಸ ವಿಂಬಲ್ಡನ್ ಕಾಮನ್ ನ ನಾರ್ತ್ ವ್ಯೂ ಎಂಬ ೮ ನೆಯ ನಂಬರಿನ ನೀಲಿ ಪದಕ ಎಂಬ ನಿವಾಸದಲ್ಲಿ[23]
- ಜಾರ್ಜ್ ಎಡ್ವರ್ಡ್ ಕೇಟ್ಸ್ - ಮೊದಲನೆಯ ಮಹಾಯುದ್ಧದಲ್ಲಿ ವಿಕ್ಟೋರಿಯಾ ಕ್ರಾಸ್ ಪಡೆದವರು[24]
- ಕ್ಯಾನ್ನೀಝಾರೋದ ಡ್ಯೂಕ್ ಮತ್ತು ಡಚೆಸ್[25]
- ಎರ್ನ್ ಸ್ಟ್ ಹೋರಿಸ್ ಚೈನ್ - ೧೯೪೫ ರ ಔಷಧವಿಭಾಗದಲ್ಲಿ ನೊಬೆಲ್ ಪ್ರೈಝ್ ಅನ್ನು ಪೆನ್ಸಿಲಿನ್ಕಂಡುಹಿಡಿದುದಕ್ಕಾಗಿ ಜಂಟಿಯಾಗಿ ಪಡೆದರು. ೯, ನಾರ್ತ್ ವ್ಯೂ, ವಿಂಬಲ್ಡನ್ ಕಾಮನ್ ನಲ್ಲಿ ನೀಲಿ ಪದಕ[23]
- ಸಾರಾ ಚರ್ಚಿಲ್, ಮಾರ್ಲ್ ಬೊರೋದ ಡಚೆಸ್, ರಾಣಿ ಅನ್ನೆಯ ಆತ್ಮೀಯ ಗೆಳತಿ.
- ನಾರ್ಮನ್ ಕಾಬರ್ನ್ - ನಟ; ಆಸ್ಟ್ರೇಲಿಯಾದ ಸೋಪ್ ಓಪ್ರಾ ಹೋಮ್ ಎಂಡ್ ಎವೇ ಯಲ್ಲಿ ಡೊನಾಲ್ಡ್ ಫಿಷರ್ ರ ಪಾತ್ರ ವಹಿಸಿದ್ದರು.
- ವೆರ್ಮನ್ ಕಾರಿಯ - ರೇಡಿಯೋ ಪ್ರಸರಣಕಾರ
- ಅನ್ನೆಟ್ಟೆ ಕ್ರಾಸ್ ಬೈ - ಅಭಿನೇತ್ರಿ, ಒನ್ ಫುಟ್ ಇನ್ ದ ಗ್ರೇವ್ ನಲ್ಲಿ ನಟಿಸಿರುವ ವಿಕ್ಟರ್ ಮೆಲ್ ಡ್ರ್ಯೂರವರ ತೆರೆಯ ಮೇಲಿನ ಪತ್ನಿ.
- ಸ್ಟೀವ್ ಕರ್ಟಿಸ್ - ಎಂಟು ಬಾರಿ ವಿಶ್ವ ಆಫ್ ಷೋರ್ ಪವರ್ ಬೋಟ್ ರೇಸಿಂಗ್ ಚಾಂಪಿಯನ್
- ಸೀನ್ ಡೇವಿಸ್ ಫುಟ್ ಬಾಲ್ ಆಟಗಾರ, plays for ಬೋಲ್ಟನ್ ವಾಂಡರರ್ಸ್ ಅನ್ನು ಪ್ರತಿನಿಧಿಸುತ್ತಾರೆ, ಈ ಹಿಂದೆ ಫುಲ್ ಹ್ಯಾಂ, ಟಾಟೆನ್ ಹ್ಯಾಮ್ ಹಾಟ್ಸ್ ಪುರ್ & ಪೋರ್ಟ್ಸ್ ಮೌತ್ ಗಳನ್ನು ಪ್ರತಿನಿಧಿಸಿದ್ದರು.
- ಸ್ಯಾಂಡಿ ಡೆನ್ನಿ - ಗಾಯಕಿ, ಜನನ ನೆಲ್ಸನ್ ಆಸ್ಪತ್ರೆಯಲ್ಲಿ.
- ಲಾರೆನ್ಸ್ ಡೊಹೆರ್ಟಿ - ಹದಿಮೂರು ವಿಂಬಲ್ಡನ್ ಟೆನಿಸ್ ಚಾಂಪಿಯನ್ ಷಿಪ್ ಗಳು ಮತ್ತು ಎರಡು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
- ರೆಜಿನಾಲ್ಡ್ ಡೊಹೆರ್ಟಿ - ಹನ್ನೆರಡು ವಿಂಬಲ್ಡನ್ ಟೆನಿಸ್ ಚಾಂಪಿಯನ್ ಷಿಪ್ ಗಳು ಮತ್ತು ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
- ಹಗ್ ಡೌಡಿಂಗ್ -೧೯೪೦ ರ ಬ್ರಿಟನ್ ನ ಸಮರದ ಸಮಯದಲ್ಲಿ RAF ಫ್ಲೈಟ್ ಕಮಾಂಡ್ ನ ಕಮ್ಯಾಂಡರ್ ಆಗಿದ್ದರು.. ೩ ಸಂತ ಮೇರಿ ರಸ್ತೆಯಲ್ಲಿ ನೀಲಿ ಪದಕ[26]
- ಹೆನ್ರಿ ಡುಂಡಾಸ್, ವಿಸ್ಕೌಂಟ್ ಮೆಲ್ವಿಲ್ಲೆ - ಕಿರಿಯ ವಿಲಿಯಮ್ ಪಿಟ್ ರ ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಸಮರ ಇಲಾಖೆಯ ಕಾರ್ಯದರ್ಶಿ, ಕ್ಯಾನ್ನಿಝಾರೋ ಹೌಸ್ ನ ನಿವಾಸಿ[25]
- ಮಾರ್ಕ್ ಎಡ್ ಗ್ಲೇ ಸ್ಪಿತ್ - ಸಂಕಲನಕಾರ
- ಫ್ಲೋರಾ ಗೇರ್ - ಶಿಲ್ಪಿ
- ಜಾನ್ ವಿಲಿಯಮ್ ಗಾಡ್ವಾರ್ಡ್ - ಕುಂಚಕಲಾವಿದ
- ಚಾರ್ಲ್ಸ್ ಪ್ಯಾಟ್ರಿಕ್ ಗ್ರೇವ್ಸ್ - ಪತ್ರಕರ್ತ
- ರಾಬರ್ಟ್ ಗ್ರೇವ್ಸ್ - ಕವಿ
- ವಿಕ್ಟೋರಿಯಾ ಹ್ಯಾಮಿಲ್ಟನ್ - ನಟಿ
- ಜಾರ್ಜ್ ಹ್ಯಾಮಿಲ್ಟನ್ - ಗಾರ್ಡನ್, ಅಬೆರ್ಡಿನ್ ನ ನಾಲ್ಕನೆಯ ಎರ್ಲ್ (ಎರ್ಲ್ ಎಂದರೆ ಇಂಗ್ಲೆಂಡ್ ನ ಶ್ರೀಮಂತರಲ್ಲಿ ಮೂರನೆಯ ದರ್ಜೆಯವನು) - ಪ್ರಧಾನಮಂತ್ರಿಯಾಗಿ೧೮೫೨-೫೫; ಕ್ಯಾನ್ನಿಝಾರೋ ಹೌಸ್ ನ ನಿವಾಸಿ[25]
- ಇಥಿಯೋಪಿಯಾದ ಮೊದಲನೆಯ ಹೇಯ್ಲೆ ಸೆಲಸ್ಸೀ - ಇಥಿಯೋಪಿಯಾದಿಂದ ಗಡೀಪಾರು ಶಿಕ್ಷೆ ವಿಧಿಸಲ್ಪಟ್ಟಾಗ ಇಲ್ಲಿ ಬಂದು ಪಾರ್ಕ್ ಸೈಡ್ ನ ಒಂದು ಮನೆಯಲ್ಲಿ ಅತಿಥಿಯಾಗಿ ತಂಗಿದ್ದರು; ಇಟಲಿಯ ದಾಳಿಯಿಂದ ಈ ಶಿಕ್ಷೆ ಅವರಿಗೆ ವಿಧಿಸಲಾಗಿತ್ತು; ಅವರ ಪ್ರತಿಮೆಯನ್ನು ಕ್ಯಾನ್ನಿಝಾರೋ ಪಾರ್ಕ್ ನಲ್ಲಿ ನಿಲ್ಲಿಸಲಾಗಿದೆ[27].
- ಮೈಕ್ ಜಾನ್ ಓಬಿ - ಚೆಲೆಸಾ FC ರಕ್ಷಣಾತ್ಮಕ ಮಿಡ್ ಫೀಲ್ಡರ್ ಜನನ. ೧೯೮೭
- ಜಾರ್ಜೆಟ್ ಹೇಯರ್ - ಕಾದಂಬರಿಕಾರ್ತಿ, ಹುಟ್ಟಿ, ಬೆಳೆದದ್ದು ವಿಂಬಲ್ಡನ್ ನಲ್ಲಿ. ಅವರು ತಮ್ಮ ಮೊದಲ ಐದು ಕಾದಂಬರಿಗಳನ್ನು ವಿಂಬಲ್ಡನ್ ನಲ್ಲಿ ಬರೆದರು. ನಂತರದ ಕಾದಂಬರಿಯಾದ 'ಪ್ಯಾಸ್ಟೆಲ್' ವಿಂಬಲ್ಡನ್ ನಂತಹ ಪುರಪ್ರಾಂತ್ಯದ ಸುತ್ತಲೂ ಹೆಣೆದ ಕಥಾಹಂದರವನ್ನು ಹೊಂದಿದೆ.
- ಲೆಸ್ಲೀ ಹೋರೆ-ಬೆಲಿಷಾ ಹೋರೆ-ಬೆಲಿಷಾದ ಮೊದಲನೆಯ ಜಹಗೀರುದಾರ - ಅವರು ೧೯೩೪-೭ ರವರೆಗೆ ಸಾರಿಗೆ ಸಚಿವರಾಗಿದ್ದಾಗ ಡ್ರೈವಿಂಗ್ ಪರೀಕ್ಷೆಯನ್ನು ಪರಿಚಯಿಸಿದರು ಮತ್ತು ಬೆಲಿಷಾ ಬೀಕನ್ ಅನ್ನು ಸಹ ಪರಿಚಯಿಸಿದರು; ನಂತರ ೧೯೩೭–೪೦ ರವರೆಗೆ ಅವರು ಸಮರ ಇಲಾಖೆಯ ರಾಜ್ಯ ಕಾರ್ಯದರ್ಶಿಯಾಗಿದ್ದರು,
- ಜಾನ್ ಹೋಮ್ ಟೂಕ್ - ರಾಜಕಾರಣಿ. ವಿಂಬಲ್ಡನ್ ಕಾಮನ್ ನಲ್ಲಿನ ಚೆಸ್ಟರ್ ಹೌಸ್ ನ ನಿವಾಸಿ.
- ಥಾಮಸ್ ಹ್ಯೂಸ್ - ಟಾಮ್ ಬ್ರೌನ್ಸ್ ಸ್ಕೂಲ್ ಡೇಸ್ ಕೃತಿಯ ಲೇಖಕ; ಈ ಕೃತಿಯನ್ನು ವಿಂಬಲ್ಡನ್ ನಲ್ಲಿಯೇ ಬರೆಯಲಾಯಿತು
- ಜೇಮ್ಸ್ ಹಂಟ್ - ೧೯೭೬ ರ ಫಾರ್ಮುಲಾ ಒನ್ ವಿಶ್ವಚಾಂಪಿಯನ್
- ವಿನ್ನೀ ಜೋನ್ಸ್ - ಮಾಜಿ ಫುಟ್ ಬಾಲ್ ಆಟಗಾರ ಮತ್ತು ಚಲನಚಿತ್ರನಟ
- ಲಾರೆಲೀ ಕಿಂಗ್ - ನಟಿ, ಈಗ ಈ ಬಡಾವಣೆಯಲ್ಲಿಯೇ ನೆಲೆಸಿದ್ದಾರೆ.
- ಹೆಟ್ಟಿ ಕಿಂಗ್ ಪ್ರಖ್ಯಾತ ಸಂಗೀತಸಭಾ ಕಲಾವಿದ ಮತ್ತು ಪುರುಷ ಛದ್ಮವೇಷಧಾರಿ. ನವೆಂಬರ್ ೨೦೧೦ ರಲ್ಲಿ ದ ಮ್ಯೂಸಿಕ್ ಹಾಲ್ ಗಿಲ್ಡ್ ಆಫ್ ಗ್ರೇಟ್ ಬ್ರಿಟನ್ ಎಂಡ್ ಅಮೆರಿಕ ವಿಂಬಲ್ಡನ್ ನ ಪಾಮರ್ಸ್ಟನ್ ರಸ್ತೆಯಲ್ಲಿರುವ ಈಕೆಯ ಮನೆಯ ಮೇಲೆ ಒಂದು ಸ್ಮರಣಫಲಕವನ್ನು ನಿಲ್ಲಿಸಿತು.
- ಡಾನ್ ಲ್ಯಾಂಗ್ - ಬಿಲ್ ಹ್ಯಾಲೀ ಗೆ ಸರಿಸಮನಾದ ಬ್ರಿಟನ್ ನ ಗಾಯಕ; ಅವರ ತಂಡದೊಡಗೂಡಿ, ಬ್ರಿಟನ್ ನ ಮೊದಲ ಟೆಲಿವಿಷನ್ ರಾಕ್ ಎಂಡ್ ರೋಲ್ ಕಾರ್ಯಕ್ರಮವಾದ ಸಿಕ್ಸ್-ಫೈವ್ ಸ್ಪೆಷಲ್ ನ ಬೆನ್ನೆಲುಬು ಮತ್ತು ಜೀವಾಳ.
- ಗ್ಲೆನ್ ಲಿಟಲ್ - ಫುಟ್ ಬಾಲ್ ಆಟಗಾರ
- ಫ್ರೆಡೆರಿಕ್ ಮಾರಿಯಟ್, ಲೇಖಕ, ವಿಂಬಲ್ಡನ್ ಹೌಸ್ ನಲ್ಲಿ ವಾಸವಾಗಿದ್ದರು.
- ಸರ್ ಜೋಸೆಫ್ ನಾರ್ಮನ್ ಲಾಕೆಯರ್ - ಇಂಗ್ಲಿಷ್ ವಿಜ್ಞಾನಿ ಮತ್ತು ಖಗೋಳಶಾಸ್ತ್ರಜ್ಞ, ಹೀಲಿಯಮ್ ಅನ್ನು ಜಂಟಿಯಾಗಿ ಕಂಡುಹಿಡಿದ ಇಬ್ಬರಲ್ಲಿ ಒಬ್ಬರು.
- ಜಾನ್ ಲೈಡ್-ಬ್ರೌನ್ ಬ್ಯಾಂಕ್ ಆಫ್ ಇಂಗ್ಲೆಂಡ್ ನ ನಿರ್ದೇಶಕ; ಕ್ಯಾನ್ನಿಝಾರೋ ಹೌಸ್ ನ ನಿವಾಸಿ;[25] ಅವರ ಶಾಸ್ತ್ರೀಯ ಕಲಾಕೃತಿಗಳ ಸಂಗ್ರಹವನ್ನು ರಷ್ಯಾದ ಎರಡನೆಯ ಕ್ಯಾಥರೀನ್ ೧೭೮೭ ರಲ್ಲಿ ತಮ್ಮದಾಗಿಸಿಕೊಂಡರು ಹಾಗೂ ಈಗ ಆ ಕಲಾಕೃತಿಗಳು ಹಹರ್ಮಿಟೇಜ್ ವಸ್ತುಸಂಗ್ರಹಾಲಯದಲ್ಲಿವೆ.
- ಥಾಮಸ್ ರಾಲ್ಫ್ ಮೆರ್ಟನ್ - ಭೌತಶಾಸ್ತ್ರಜ್ಞ.
- ವಿಲ್ ಮೆಲ್ಲರ್ - ಹಾಲಿ ವಿಂಬಲ್ಡನ್ ನಿವಾಸಿ.
- ಮಾರ್ಕಸ್ ಮಮ್ಫೋರ್ಡ್, ಸಂಗೀತಗಾರ ಮತ್ತು ಮಮ್ ಫೋರ್ಡ್ & ಸನ್ಸ್ ಎಂಬ ಗಾಯನತಂಡದ ಮುಂದಾಳು.
- ಲಾರ್ಡ್ ಹೊರಾಷಿಯೋ ನೆಲ್ಸನ್ - ಅಡ್ಮಿರಲ್. ನೆಲ್ಸನ್ ಎಸ್ಟೇಟ್, ಮೆರ್ಟನ್ ಪ್ಲೇಸ್e, ಬ್ರಾಡ್ವೇಯ ಪೂರ್ವತುದಿಯಲ್ಲಿನ ವಿಂಬಲ್ಡನ್ ನ ಭಾಗವನ್ನೂ ಒಳಗೊಂಡಿತ್ತು,[28] ಆದರೆ ಸರಿಯಾಗಿ ನೋಡಿದರೆ ಇವರು ಪಕ್ಕದ ಪ್ಯಾರಿಷ್ ಪ್ರದೇಶದವರಾಗಿದ್ದು ಮೆರ್ಟನ್ ನ ನಿವಾಸಿಯಾಗಿದ್ದರು. t
- ಮಿಚೆಲ್ ಪೇವರ್ - ಕ್ರಾನಿಕಲ್ಸ್ ಆಫ್ ಏನ್ಷಿಯೆಂಟ್ ಡಾರ್ಕ್ ನೆಸ್ ಮತ್ತು ವುಲ್ಫ್ ಬ್ರದರ್ ಕೃತಿಗಳನ್ನು ರಚಿಸಿದವರು.
- ಅಲನ್ ಪಾರ್ಡ್ರೂ - ಫುಟ್ ಬಾಲ್ ಮ್ಯಾನೇಜರ್
- ಚಾರ್ಲ್ಸ್ ಪೆಪೈಸ್, ಕಾಟನ್ ಹ್ಯಾಮ್ ನ ಮೊದಲನೆಯ ಎರ್ಲ್ - ಲಾರ್ಡ್ ಚಾನ್ಸೆಲರ್.
- ಆಗಸ್ಟಸ್ ಪೋರ್ಟರ್ - ಮೆರ್ಟನ್ ಪ್ರದೇಶದಲ್ಲಿದ್ದ ಹೆಸರುವಾಸಿಯಾದ ಸಮಾಜವಾದಿ.
- ಸ್ಟೀವ್ ಪಂಟ್ - ವಿದೂಷಕ
- ಒಲಿವರ್ ರೀಡ್ - ನಟ
- ಲಾರಾ ರಾಬ್ಸನ್ - ಜೂನಿಯರ್ ವಿಂಬಲ್ಡನ್ ಟೆನಿಸ್ ಚಾಂಪಿಯನ್
- ಮಾರ್ಗರೇಟ್ ರದರ್ಫೋರ್ಡ್ - ನಟಿ. ೪ ಬರ್ಕ್ಲೀ ಪ್ಲೇಸ್ ನಲ್ಲಿ ನೀಲಿ ಪದಕ[29]
- ಆರ್ಥರ್ ಸ್ಕೋಪೆನ್ಹಾಯರ್ - ತತ್ವಜ್ಞಾನಿ, ೧೮೦೩ ರಲ್ಲಿ ಅವರು ವಾಸಿಸಿದ್ದ ಈಗಲ್ ಹೌಸ್ ನಲ್ಲಿ ನೀಲಿ ಪದಕ[30]
- ಜೇ ಸೀನ್ - UK R&B ಗಾಯಕ
- ಬ್ರಿಯಾನ್ ಸ್ಯುಯೆಲ್ - ಆಂಗ್ಲ ಕಲಾವಿಮರ್ಶಕ ಮತ್ತು ಮಾಧ್ಯಮದ ವ್ಯಕ್ತಿ.
- ಜ್ಯಾಕ್ ಸ್ಟ್ಯಾನ್ಲೀ - ನಟ
- ಜೇಮೀ. ಟಿ - ಹಾಡುಗಾರ/ಗೀತರಚನಕಾರ ಮತ್ತು ಸಂಗೀತಗಾರ
- ಜೋಸೆಫ್ ಟಾಯ್ನ್ ಬೀ - ಶಸ್ತ್ರಚಿಕಿತ್ಸಾತಜ್ಞ. ೪೯ ವಿಂಬಲ್ಡನ್ ಪಾರ್ಕ್ ಸೈಡ್ ನಲ್ಲಿ ನೀಲಿ ಪದಕ[31]
- ಆರ್ನಾಲ್ಡ್ ಟಾಯ್ನ್ ಬೀ - ಆರ್ಥಿಕ ಇತಿಹಾಸತಜ್ಞ. ೪೯ ವಿಂಬಲ್ಡನ್ ಪಾರ್ಕ್ ಸೈಡ್ ನಲ್ಲಿ ನೀಲಿ ಪದಕ[31]
- ಸ್ಟೀವ್ -O - ಜ್ಯಾಕಾಸ್ ಕಲಾವಿದ
- ರಾಲ್ಫ್ ಟಬ್ಸ್ - ಕಟ್ಟಡ ವಿನ್ಯಾಸಕಾರ; ಅವರು ವಿನ್ಯಾಸಗೊಳಿಸಿದ ಕಟ್ಟಡಗಳ ಪೈಕಿ ಡೂಮ್ ಆಫ್ ಡಿಸ್ಕವರಿ ಮತ್ತು ಚಾರಿಂಗ್ ಕ್ರಾಸ್ ಆಸ್ಪತ್ರೆಗಳೂ ಸೇರಿವೆ.
- ಸ್ಲಿಕ್ ರಿಕ್ (ರಿಚರ್ಡ್ ವಾಲ್ಟರ್ಸ್) - ನುರಿತ ಹಿಪ್-ಹಾಪ್ ಕಲಾವಿದ, ವಿಂಬಲ್ಡನ್ ನಲ್ಲಿ ಹುಟ್ಟಿ ದ ಬ್ರಾಂಕ್ಸ್ ಗೆ ವಲಸೆ ಹೋದರು; ಇವರನ್ನು MC ರಿಕ್ಕಿ D ಹಾಗೂ ದ ರೂಲರ್ ಎಂದೂ ಕರೆಯುತ್ತಾರೆ.
- ಯಂಗ್ ಎಂಸಿ - (ಮಾರ್ವಿನ್ ಯಂಗ್) ಬಸ್ಟ್-ಎ-ಮೂವ್ ಹಾಡಿನಿಂದ ಖ್ಯಾತರಾದ, ವಿಂಬಲ್ಡನ್ ನಲ್ಲಿ ಜನಿಸಿದ ಹಿಪ್-ಹಾಪ್ ಕಲಾವಿದ.
- ಚಾರ್ಲ್ಸ್ ವ್ಯಾಟ್ಸನ್-ವೆಂಟ್ವರ್ತ್, ರಾಕಿಂಗ್ ಹ್ಯಾಂ ನ ಎರಡನೆಯ ಮಾರ್ಕ್ವಿಸ್ - ಎರಡು ಬಾರಿ ಪ್ರದಾನಿಯಾಗಿದ್ದರು
- ವಿಲಿಯಮ್ ವಿಲ್ಬರ್ಫೋರ್ಸ್ - ೧೯ ನೆಯ ಶತಮಾನದ ಗುಲಾಮಗಿರಿ-ವಿರೋಧಿ ಚಳುವಳಿಕಾರರು
- ಟೋನಿ ಮೆಕ್ ಗಿನ್ನೆಸ್ - ಎಬೋವ್ ಎಂಡ್ ಬಿಯಾಂಡ್ ನ ಸದಸ್ಯರಯ, ರೆಕಾರ್ಡ್ ಕಂಪನಿಯ ಮಾಲಿಕರು.
- ಟೆರಿ ವಾಕರ್ R&B ಮತ್ತು ಸೌಲ್ ಗಾಯಕ
- ಗಿಲಿಯನ್ ಮರ್ಫಿ ಅಮೆರಿಕನ್ ಬ್ಯಾಲೇ ರಂಗದ ಪ್ರಧಾನ ನರ್ತಕ
- ಗಾರ್ಜಿಯಸ್ ಜಾರ್ಜ್ - ಬಾಲ್ಕನ್ ಗೀಝರ್ ತಂಡ
ಸೌಕರ್ಯಗಳು
ಪ್ರಮುಖ ಸಾರ್ವಜನಿಕ ಮೈದಾನಗಳು
- ಕಾರ್ನಿಝಾರೋ ಉದ್ಯಾನವನ
- ರಿಚ್ಮಂಡ್ ಪಾರ್ಕ್
- ವಿಂಬಲ್ಡನ್ ಕಾಮನ್
- ವಿಂಬಲ್ಡನ್ ಉದ್ಯಾನವನ
ಶಾಲೆಗಳು
- ಡಾನ್ ಹೆಡ್ ಲಾಡ್ಜ್ (ಬಾಲಕರ ಶಾಲೆ),ಎಡ್ಜ್ ಹಿಲ್, ವಿಂಬಲ್ಡನ್
- ವಿಂಬಲ್ಡನ್ ಚೇಸ್ ಪ್ರಾಥಮಿಕ ಶಾಲೆ, ಮೆರ್ಟನ್ ಹಾಲ್ ರಸ್ತೆ, ವಿಂಬಲ್ಡನ್
- ಕಿಂಗ್ಸ್ ಕಾಲೇಜ್ ಶಾಲೆ, ದಕ್ಷಿಣಭಾಗ, ವಿಂಬಲ್ಡನ್
- ರಟ್ಲಿಷ್ ಶಾಲೆ, ವಾಟರಿ ಲೇನ್, ಮೆರ್ಟನ್ ಪಾರ್ಕ್
- ಉರ್ಸುಲೈನ್ ಪ್ರೌಢಶಾಲೆ, ಕ್ರೆಸೆಂಟ್ ರಸ್ತೆ, ವಿಂಬಲ್ಡನ್.
- ವಿಂಬಲ್ಡನ್ ಕಾಲೇಜ್, ಎಡ್ಜ್ ಹಿಲ್, ವಿಂಬಲ್ಡನ್
- ವಿಂಬಲ್ಡನ್ ಪ್ರೌಢಶಾಲೆ (ಬಾಲಕಿಯರ ಶಾಲೆ), ಮಾನ್ಸೆಲ್ ರಸ್ತೆ, ವಿಂಬಲ್ಡನ್.
- ದ ನಾರ್ವೇಯನ್ ಸ್ಕೂಲ್ ಇನ್ ಲಂಡನ್ (ನಾರ್ವೇಯನ್ ಶಾಲೆ), ಆರ್ಟ್ ಬೆರಿ ರಸ್ತೆ, ವಿಂಬಲ್ಡನ್.
- ಹಾಲ್ ಸ್ಕೂಲ್ ವಿಂಬಲ್ಡನ್ (ಮಿಶ್ರ ಶಾಲೆ), ದ ಡೌನ್ಸ್, ವಿಂಬಲ್ಡನ್.
- ರಿಕರ್ಡ್ಸ್ ಲಾಡ್ಜ್ ಪ್ರೌಢಶಾಲೆ (ಬಾಲಕಿಯರ ಶಾಲೆ), ಕೆರೆ ರಸ್ತೆ, ವಿಂಬಲ್ಡನ್.
- ಸೇಂಟ್ ಮೇರೀಸ್ ಪ್ರಾಥಮಿಕ ಶಾಲೆ, ರಸಲ್ ರಸ್ತೆ, ವಿಂಬಲ್ಡನ್.
- ಹಾಲಿಮೌಂಟ್ ಪ್ರಾಥಮಿಕ ಶಾಲೆ, ಕೇಂಬ್ರಿಡ್ಜ್ ರಸ್ತೆ, ಪಶ್ಚಿಮ ವಿಂಬಲ್ಡನ್.
- ಡಂಡೋಲ್ಯಾಂಡ್ ಪ್ರಾಥಮಿಕ ಶಾಲೆ
- ಹೋಲಿ ಟ್ರಿನಿಟಿ ಪ್ರಾಥಮಿಕ ಶಾಲೆ, ಚರ್ಚ್ ಆಫ್ ಇಂಗ್ಲೆಂಡ್, ಎಫ್ರಾ ರಸ್ತೆ, ವಿಂಬಲ್ಡನ್
ಧಾರ್ಮಿಕ ತಾಣಗಳು
- ಶ್ರೀ ಗಣಪತಿ ದೇವಸ್ಥಾನ
- ಎಮ್ಯಾನುಯೆಲ್ ಚರ್ಚ್
- ಕ್ವೀನ್ಸ್ ರಸ್ತೆಯ ಚರ್ಚ್, ವಿಂಬಲ್ಡನ್
- ಸೇಕ್ರೆಡ್ ಹಾರ್ಟ್ ಚರ್ಚ್
- ಸಂತ ಆಂಡ್ರೂಸ್ ಚರ್ಚ್, ಹರ್ಬರ್ಟ್ ರಸ್ತೆ, ವಿಂಬಲ್ಡನ್
- ಸಂತ ಜಾನ್ ಬ್ಯಾಫ್ಟಿಸ್ಟ್, ಸ್ಪೆನ್ಸರ್ ಬೆಟ್ಟ, ವಿಂಬಲ್ಡನ್
- ಸಂತ ಮೇರಿಯ ಚರ್ಚ್
- ಕ್ರೈಸ್ತ್ ಚರ್ಚ್, ಪಶ್ಚಿಮ ವಿಂಬಲ್ಡನ್
- ಟ್ರಿನಿಟಿ ಯುನೈಟೆಡ್ ರಿಫಾರ್ಮ್ಡ್ ಚರ್ಚ್, ಮಾನ್ಸೆಲ್ ರಸ್ತೆ.
ಉಲ್ಲೇಖಗಳು
- Edward Kemp. The parks, gardens, etc., of London and its suburbs, described and illustrated, for the guidance of strangers. John Weale, 1851. p. 29. Retrieved 20 February 2011.
- ಸ್ಟೀಫನ್ ಹ್ಯಾಮಂಡ್ MP
- {0/ರೂಮ್, ಆಡ್ರಿಯನ್: “ಡಿಕ್ಷ್ ನರಿ ಆಫ್ ಪ್ಲೇಸ್-ನೇಮ್ಸ್ ಇನ್ ದ ಬ್ರಿಟಿಷ್ ಐಲ್ಸ್", ಬ್ಲೂಮ್ಸ್ ಬರಿ, 1988
- "Wimbledon". www.british-history.ac.uk. Retrieved 21 February 2011. Text " British History Online " ignored (help)
- The London Gazette: no. 22915. pp. 5834–5835. 25 November 1864.
- The London Gazette: no. 23682. pp. 5244–5245. 25 November 1870.
- The London Gazette: no. 23768. p. 3643. 18 August 1871.
- "Short Term Property To Rent". www.primelocation.com. Retrieved 21 February 2011. Text "Wimbledon, Cowes, Sandbanks, & St Andrews " ignored (help); Text " Primelocation " ignored (help)
- "Primary Residential Areas in London". www.kipb.ae. Retrieved 21 February 2011.
- Christopher Hibbert, Ben Weinreb. [[The London Encyclopaedia]]. Pan Macmillan, 2008. p. 1026. Retrieved 20 February 2011. URL–wikilink conflict (help)
- Mayor of London (2008). "London Plan (Consolidated with Alterations since 2004)" (PDF). Greater London Authority. Unknown parameter
|month=
ignored (help) - "Location Report". www.nsdatabase.co.uk. Retrieved 21 February 2011.
- "Wimbledon Museum". www.wimbledonmuseum.org.uk. Retrieved 21 February 2011.
- Richard John Milward. New Short History of Wimbledon. Wimbledon Society, 1989. Retrieved 21 February 2011.
- "ಬಳಸಲು ಅನುಸರಿಸಬೇಕಾದ ಷರತ್ತುಗಳು." ಸ್ಕ್ವೇರ್ ಎನಿಕ್ಸ್ ಯೂರೋಪ್. ದಿನಾಂಕ ೨೧ ಜನವರಿ ೨೦೦೭ರಂದು ಪುನಶ್ಚೇತನಗೊಳಿಸಿದ್ದು. "ಈ ಜಾಲತಾಣ/ನಿವೇಶನವು ಸ್ಕ್ವೇರ್ ಎನಿಕ್ಸ್ ಲಿಮಿಟೆಡ್ ಮಾಲಿಕತ್ವದಲ್ಲಿದೆ ಹಾಗೂ ಅವರಿಂದಲೇ ಕಾರ್ಯಗತಗೊಳಿಸಲಾಗುತ್ತಿದೆ ("ಸ್ಕ್ವೇರ್ ಎನಿಕ್ಸ್" "ನಮ್ಮ", "ನಾವು", ಅಥವಾ "ನಾವುಗಳು"), ಈ ಕಂಪನಿಯು ಇಂಗ್ಲೆಂಡ್ & ವೇಲ್ಸ್ ನಲ್ಲಿ ನೋಂದಾಯಿತವಾಗಿದೆ (ಕಂಪನಿ ಸಂಖ್ಯೆ ೦೧೮೦೪೧೮೬). ಸ್ಕ್ವೇರ್ ಎನಿಕ್ಸ್ VAT ಗೂ ನೋಂದಣಿಗೊಂಡಿದೆ ಹಾಗೂ ಆ ನೋಂದಣಿ ಸಂಖ್ಯೆ GB ೫೨೧೫೦೦೬೦೦. ಸ್ಕ್ವೇರ್ ಎನಿಕ್ಸ್ ನ ನೋಂದಾಯಿತ ಕಚೇರಿಯ ವಿಳಾಸ ವಿಂಬಲ್ಡನ್ ಬ್ರಿಡ್ಜ್ ಹೌಸ್, ೧ ಹಾರ್ಟ್ ಫೀಲ್ಡ್ ರಸ್ತೆ, ಲಂಡನ್ SW೧೯ ೩RU."
- "ಕಾರ್ಪೊರೇಟ್ ಮಾಹಿತಿ." ಈಡೋಸ್ ಇಂಟರ್ ಆಕ್ಟಿವ್. ೧೧ ಫೆಬ್ರುವರಿ ೧೯೯೮. ಪುನಶ್ಚೇತನ ೩೦ ಜನವರಿ ೨೦೧೧. "ಈಡೋಸ್ ಇಂಟರ್ ಆಕ್ಟಿವ್ UK ವಿಂಬಲ್ಡನ್ ಬ್ರಿಡ್ಜ್ ಹೌಸ್ ೧ ಹಾರ್ಟ್ ಫೀಲ್ಡ್ ರಸ್ತೆ, ವಿಂಬಲ್ಡನ್, ಲಂಡನ್ SW೧೯ ೩RU."
- "ವರ್ಲ್ಡ್ ವೈಡ್ ಕಾಂಟಾಕ್ಟ್ಸ್." ಎಲ್ಡೋಸ್ ಇಂಟರ್ ಆಕ್ಟಿವ್. ೨೭ ಜನವರಿ ೨೦೦೫. ದಿನಾಂಕ ೩೦ ಜನವರಿ ೨೦೧೧ರಂದು ಪುಶ್ಚೇತನಗೊಂಡಿತು. "ಈಡೋಸ್ ಪಿಕ್. ನೋಂದಾಯಿತ ಕಚೇರಿ ವಿಂಬಲ್ಡನ್ ಬ್ರಿಡ್ಜ್ ಹೌಸ್ ೧ ಹಾರ್ಟ್ ಫೀಲ್ಡ್ ರಸ್ತೆ, ವಿಂಬಲ್ಡನ್, ಲಂಡನ್ SW೧೯ ೩೨RU."
- "Boss Terry Brown hails AFC Wimbledon 'fan power'". BBC News. Retrieved 24 May 2011.
- "New Wimbledon Theatre - architecture - Merton Council". www.merton.gov.uk. Retrieved 14 January 2011.
- "The New Wimbledon Theatre". www.arthurlloyd.co.uk. Retrieved 14 January 2011.
- Christopher Hibbert, Ben Weinreb. The London encyclopaedia. Pan Macmillan, 2008. p. 1026. Retrieved 14 January 2011.
- "New Wimbledon Theatre Centenary - find fun things to do in London & Surrey with Time & Leisure". www.timeandleisure.co.uk. Retrieved 14 January 2011.
- ಇಂಗ್ಲಿಷ್ ಹೆರಿಟೇಜ್ - ನೀಲಿ ಫಲಕಗಳ ಪಟ್ಟಿ, B
- ಫೈಂಡ್ ಗ್ರೇವ್.com
- ಕ್ಯಾನ್ನೀಝಾರೋ ಪಾರ್ಕ್ ನ ಸ್ನೇಹಿತರು - ಇತಿಹಾಸ
- ಇಂಗ್ಲಿಷ್ ಹೆರಿಟೇಜ್ - ನೀಲಿ ಫಲಕಗಳ ಪಟ್ಟಿ, D
- ಕ್ಯಾನ್ನೀಝಾರೋ ಪಾರ್ಕ್ ನ ಸ್ನೇಹಿತರು - ಏಯ್ಲೆ ಸೆಲಾಸ್ಸೀಯ ಪ್ರತಿಮೆ
- ಲಂಡನ್ ಬರೋ ಆಫ್ ಮೆರ್ಟನ್, ನೆಲ್ಸನ್
- ಇಂಗ್ಲಿಷ್ ಹೆರಿಟೇಜ್ - ನೀಲಿ ಫಲಕಗಳ ಪಟ್ಟಿ, R
- ಇಂಗ್ಲಿಷ್ ಹೆರಿಟೇಜ್ - ನೀಲಿ ಫಲಕಗಳ ಪಟ್ಟಿ, S
- ಇಂಗ್ಲಿಷ್ ಹೆರಿಟೇಜ್ - ನೀಲಿ ಫಲಕಗಳ ಪಟ್ಟಿ, T
- ಗ್ರಂಥಸೂಚಿ
- ಬಾರ್ಟ್ಲೆಟ್, ವಿಲಿಯಮ್ A., ಹಿಸ್ಟರಿ ಆಫ್ ಆಂಟಿಕ್ವಿಟೀಸ್ ಆಫ್ ದ ಪ್ಯಾರಿಷ್ ಆಫ್ ವಿಂಬಲ್ಡನ್ , ಸಿಂಪ್ಕಿನ್, ಮಾರ್ಷಲ್, & ಕಂ., ೧೮೬೫
- ಬ್ರೌನ್, ಜಾನ್ W., ಲೈಸನ್ಸ್ ಹಿಸ್ಟರಿ ಆಫ್ ವಿಂಬಲ್ಡನ್ , ಲೋಕಲ್ ಹಿಸ್ಟರಿ ರೀಪ್ರಿಂಟ್ಸ್, ೧೯೯೧, ISBN ೧-೮೫೬೯೯-೦೨೧-೪
- ಮಿಲ್ವಾರ್ಡ್, ರಿಚರ್ಡ್, ಹಿಸ್ಟಾರಿಕ್ ವಿಂಬಲ್ಡನ್, ಸೀಸರ್ಸ್ ಕ್ಯಾಂಪ್ ಟು ಸೆಂಟರ್ ಕೋರ್ಟ್ , ದ ವಂಡ್ ರಷ್ ಪ್ರೆಸ್ ಎಂಡ್ ದ ಫೀಲ್ಡರ್ಸ್ ಆಫ್ ವಿಂಬಲ್ಡನ್, ೧೯೮೯, ISBN ೦-೯೦೦೦೭೫-೧೬-೩
- ಮಿಲ್ವಾರ್ಡ್, ರಿಚರ್ಡ್, ನ್ಯೂ ಷಾರ್ಟ್ ಹಿಸ್ಟರಿ ಆಫ್ ವಿಂಬಲ್ಡನ್ , ವಿಂಬಲ್ಡನ್ ಸೊಸೈಟಿ, ೧೯೮೯
ಬಾಹ್ಯ ಕೊಂಡಿಗಳು
![]() |
ವಿಕಿಮೀಡಿಯ ಕಣಜದಲ್ಲಿ Wimbledon ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- ಸ್ಥಳೀಯ ಅಧಿಕಾರ ವ್ಯಾಪ್ತಿಗಳು
- ಸಮುದಾಯ
- ಇತಿಹಾಸ
- ಬ್ರಿಟಿಷ್-ಹಿಸ್ಟರಿ.ac.uk ದ ಎನ್ವಿರಾನ್ಸ್ ಆಫ್ ಲಂಡನ್: ಸಂಪುಟ ೧: ಕೌಂಟಿ ಆಫ್ ಸರ್ರೆ, ೧೭೯೨, "ವಿಂಬಲ್ಡನ್", ಪುಟಗಳು.. ೫೧೯–೫೪೦, ಡೇನಿಯಲ್ ಲೈಸನ್ಸ್
- ಬ್ರಿಟಿಷ್-ಹಿಸ್ಟರಿ.ac.ukಎ ಹಿಸ್ಟರಿ ಆಫ್ ದ ಕೌಂಟಿ ಆಫ್ ಸರ್ರೇ: ಸಂಪುಟ ೪, ೧೯೧೨, "ಪ್ಯಾರಿಷಸ್ "ವಿಂಬಲ್ಡನ್", ಪುಟಗಳು. ೧೨೦–೧೨೫, ಹೆಚ್.ಇ. ಮಾಲ್ಡೆನ್ (ಸಂಪಾದಕ)