ವಾಷಿಂಗ್ಟನ್, ಡಿ.ಸಿ.

ವಾಷಿಂಗ್ಟನ್, ಡಿ.ಸಿ. (ಅಧಿಕೃತವಾಗಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ) ಜುಲೈ ೧೬, ೧೭೯೦ರಲ್ಲಿ ಸ್ಥಾಪನೆಗೊಂದ ಅಮೇರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ. ಮೆರಿಕದ ಈಶಾನ್ಯ ಭಾಗದಲ್ಲಿ ಅಟ್ಲಾಂಟಿಕ್ ಸಾಗರದ ಸಮೀಪ ಪೊಟೊಮ್ಯಾಕ್ ನದಿಯ ಪೂರ್ವದಂಡೆಯಲ್ಲಿರುವ ಈ ಪಟ್ಟಣವನ್ನು ಮೇರಿಲ್ಯಾಂಡ್ ಮತ್ತು ವರ್ಜೀನಿಯ ರಾಜ್ಯಗಳು ಸುತ್ತುವರೆದಿವೆ.

{{#if:|

District of Columbia
ಎಡ ಮೇಲೆ: ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯ; ಬಲ ಮೇಲೆ: ಅಮೇರಿಕ ದೇಶದ ಕ್ಯಾಪಿಟೊಲ್; ಮಧ್ಯ: ವಾಷಿಂಗ್ಟನ್ ಸ್ಮಾರಕ; ಎಡ ಕೆಳಗೆ: ಆಫ್ರಿಕನ್ ಅಮೇರಿಕನ್ ಸ್ಮಾರಕ; ಬಲ ಕೆಳಗೆ: ರಾಷ್ಟ್ರೀಯ ದೇಗುಲ
ಎಡ ಮೇಲೆ: ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯ; ಬಲ ಮೇಲೆ: ಅಮೇರಿಕ ದೇಶದ ಕ್ಯಾಪಿಟೊಲ್; ಮಧ್ಯ: ವಾಷಿಂಗ್ಟನ್ ಸ್ಮಾರಕ; ಎಡ ಕೆಳಗೆ: ಆಫ್ರಿಕನ್ ಅಮೇರಿಕನ್ ಸ್ಮಾರಕ; ಬಲ ಕೆಳಗೆ: ರಾಷ್ಟ್ರೀಯ ದೇಗುಲ

ಬಾವುಟ

ಮುದ್ರೆ
ಧ್ಯೇಯಸೂತ್ರ: Justitia Omnibus  ("ಎಲ್ಲರಿಗೂ ನ್ಯಾಯ")
ಮೇರಿಲ್ಯಾಂಡ್ ಮತ್ತು ವರ್ಜೀನಿಯಗಳ ಮಧ್ಯ ವಾಷಿಂಗ್ಟನ್, ಡಿ.ಸಿ.
ಮೇರಿಲ್ಯಾಂಡ್ ಮತ್ತು ವರ್ಜೀನಿಯಗಳ ಮಧ್ಯ ವಾಷಿಂಗ್ಟನ್, ಡಿ.ಸಿ.
ರೇಖಾಂಶ: 38°53′42.4″N 77°02′12.0″W
ದೇಶ ಅಮೇರಿಕ ಸಂಯುಕ್ತ ಸಂಸ್ಥಾನ
ಜಿಲ್ಲೆ ಕೊಲಂಬಿಯ ಜಿಲ್ಲೆ
ಸರ್ಕಾರ
 - Mayor Adrian Fenty (D)
 - D.C. Council Chairperson: Vincent Gray (D)
ವಿಸ್ತೀರ್ಣ
 - ಒಟ್ಟು ೧೭೭.೦ ಚದರ ಕಿಮಿ (೬೮.೩ ಚದರ ಮೈಲಿ)
 - ಭೂಭಾಗ ೧೫೯.೦ ಚದರ ಕಿಮಿ (೬೧.೪ ಚದರ ಮೈಲಿ)
 - ಜಲಪ್ರದೇಶ ೧೮.೦ ಚದರ ಕಿಮಿ (೬.೯ ಚದರ ಮೈಲಿ)
ಎತ್ತರ  ಮೀ (೦ ಅಡಿ)
ಜನಸಂಖ್ಯೆ (2007)[1][2]
 - ಒಟ್ಟು ೫೮೮
 - ಸಾಂದ್ರತೆ ೩,೬೯೯.೯/ಚದರ ಕಿಮಿ (೯,೫೮೧.೩/ಚದರ ಮೈಲಿ)
 - ಮಹಾನಗರ ೫.೩
{{{language}}} {{{ಭಾಷೆ}}}
ಕಾಲಮಾನ EST (UTC-5)
 - ಬೇಸಿಗೆ (DST) EDT (UTC-4)
ಅಂತರ್ಜಾಲ ತಾಣ: www.dc.gov

ಇದರ ವಿಸ್ತೀರ್ಣ 24,807 ಚ.ಕಿಮೀಗಳು. ಜನಸಂಖ್ಯೆ 67,27,050.

ಈ ನಗರ ಸಮುದ್ರಮಟ್ಟದಿಂದ 7.6 ಮೀ ಎತ್ತರದಲ್ಲಿದೆ. ಬೇಸಗೆಯಲ್ಲಿ ಗರಿಷ್ಠ ಉಷ್ಣಾಂಶ 260 ಸೆ. ಇದ್ದರೆ ಚಳಿಗಾಲದಲ್ಲಿ 30 ಸೆ. ಗೆ ಇಳಿಯುತ್ತದೆ. ಇಲ್ಲಿಯ ಸರಾಸರಿ ವಾರ್ಷಿಕ ಮಳೆ 127 ಸೆಂಮೀ.

ಈ ನಗರ ಕೇಂದ್ರ ಸರ್ಕಾರ ಅಂದರೆ ಫೆಡರಲ್ ಸರ್ಕಾರದ ಅಧೀನದಲ್ಲಿದ್ದು ಅದರ ನಿರ್ವಹಣೆಗೆ ಮಹಾನಗರ ಸಭೆ ಇದೆ. ಮೇಯರ್ ಇದರ ಅಧ್ಯಕ್ಷರು.

ಈ ಶಹರದಲ್ಲಿ ವಾಸಿಸುವವರಲ್ಲಿ ಸೇ. 66 ರಷ್ಟು ಕರಿಯರಿದ್ದಾರೆ. ಇಲ್ಲಿ ಮಾನ್ಯತೆ ಪಡೆದ 16 ವಿಶ್ವವಿದ್ಯಾಲಯಗಳಿವೆ. ನದಿ ದಡದಲ್ಲಿರುವ ಈ ನಗರದ ಜನರಿಗೆ ದೋಣಿ ಸಂಚಾರ ಮುಖ್ಯ ಹವ್ಯಾಸಗಳಲ್ಲೊಂದಾ ಗಿದೆ. ಪ್ರಪಂಚದ ಅತ್ಯಂತ ಪ್ರಬಲ ರಾಷ್ಟ್ರದ ರಾಜಧಾನಿಯಾಗಿರುವ ಈ ನಗರ ಆಧುನಿಕ ಸೌಲಭ್ಯಗಳಿಂದ, ಉತ್ತಮ ಜೀವನಮಟ್ಟದಿಂದ, ಉನ್ನತ ಶಿಕ್ಷಣದಿಂದ ಕಂಗೊಳಿಸುತ್ತಿದೆ.

ಇತಿಹಾಸ

ರಾಜಧಾನಿಗಾಗಿಯೇ ಆಯ್ಕೆಯಾದ ಸ್ಥಳದಲ್ಲಿ ಹೊಸದಾಗಿ ಸ್ಥಾಪಿತವಾದ ಪ್ರಪಂಚದ ಕೆಲವೇ ರಾಜಧಾನಿಗಳಲ್ಲಿ ಇದೂ ಒಂದು. ಮೇರಿಲೆಂಡ್ ಮತ್ತು ವರ್ಜೀನಿಯ ರಾಜ್ಯಗಳ ಭಾಗಗಳಿಗೆ ಸೇರಿದ ಪ್ರದೇಶವನ್ನು ಈ ನಗರ ವ್ಯಾಪಿಸಿದೆ. ಈ ನಗರದ ರೂಪರೇಖೆಗಳು ಸಿದ್ಧವಾದ ಬಳಿಕ 1800 ರಲ್ಲಿ ಫಿಲಿಡೆಲ್ಫಿಯದಿಂದ ಇಲ್ಲಿಗೆ ರಾಜಧಾನಿಯನ್ನು ವರ್ಗಾಯಿಸಲಾಯಿತು. ಆಗ ಈ ರಾಜಧಾನಿಯ ಜನಸಂಖ್ಯೆ 8,000. ಅಂತರ್‍ಯುದ್ಧದ ಕಾಲದಲ್ಲಿ (1861-65) ಈ ನಗರ ತೀವ್ರ ಬೆಳೆವಣಿಗೆ ಕಂಡಿತು. ಆಗ 60,000ವಿದ್ದ ಜನಸಂಖ್ಯೆ 1,20,000 ಕ್ಕೆ ಏರಿತು. ವಿಮೋಚನೆ ಹೊಂದಿದ ಗುಲಾಮರು, ಭದ್ರತಾ ಕಾರ್ಯದಲ್ಲಿ ನಿರತರಾದ ಸೈನಿಕರು, ವರ್ತಕರು ಈ ನಗರದಲ್ಲಿ ನೆಲಸಿ ಅದಕ್ಕೆ ನಗರ ಸ್ವರೂಪ ತಂದುಕೊಟ್ಟರು. 1871ರಲ್ಲಿ ಈ ನಗರದ ಆಡಳಿತಕ್ಕೆ ಪ್ರತ್ಯೇಕ ಗವರ್ನರ್ ನೇಮಕವಾದುದಲ್ಲದೆ ಮೂವರು ಕಮಿಷನರುಗಳುಳ್ಳ ಸ್ಥಳೀಯ ಸರ್ಕಾರ ಸ್ಥಾಪಿತವಾಯಿತು. ಒಂದು ಚುನಾಯಿತ ನಗರಸಭೆಯೂ ಅಸ್ತಿತ್ವಕ್ಕೆ ಬಂದಿತು. 1930ರ ದಶಕದಲ್ಲಿ ನಗರದ ಜನಸಂಖ್ಯೆ ಏಳು ಲಕ್ಷಗಳಿಗೆ ಹೆಚ್ಚಿತು. ಕ್ರಮೇಣ ಈ ನಗರ ತೀವ್ರವಾಗಿ ಬೆಳೆವಣಿಗೆ ಕಂಡಿತು. ವಾಷಿಂಗ್‍ಟನ್ ಇಂದು ದೂರದ ಉಪನಗರಗಳಲ್ಲಿ ವಿಸ್ತರಿಸಿದೆ.

ಪ್ರವಾಸಿಗರ ಆಕರ್ಷಣೆಗಳು

ಸರ್ಕಾರಿ ಕಟ್ಟಡಗಳು, ಪ್ರಸಿದ್ಧ ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲ ಯಗಳು, ಇತರ ಪ್ರವಾಸಿ ಆಕರ್ಷಣೀಯ ಕೇಂದ್ರಗಳು ನಗರದ ಪಶ್ಚಿಮ ಹಾಗೂ ಮಧ್ಯ ಭಾಗದಲ್ಲಿವೆ. ಈ ಪ್ರದೇಶ ಕ್ಯಾಪಿಟಾಲ್ ಹಿಲ್‍ನಿಂದ ಪೊತೊಮಿಕ್ ನದಿಯವರೆಗೂ ಇದೆ. ಈ ನಗರದ ವೈಟ್‍ಹೌಸ್ ಅಮೆರಿಕದ ಅಧ್ಯಕ್ಷರ ನಿವಾಸ ಮತ್ತು ಕಚೇರಿ. ಅಮೆರಿಕದ ಅಧ್ಯಕ್ಷರಿಗೆ ಇರುವ ಅಗಾಧ ಅಧಿಕಾರ ಮತ್ತು ಪ್ರಪಂಚದ ರಾಜಕೀಯದಲ್ಲಿ ಅಧ್ಯಕ್ಷರ ಪ್ರಭಾವಿ ಪಾತ್ರದಿಂದಾಗಿ ಇದು ಪ್ರಪಂಚದ ಮಹತ್ತ್ವದ ಅಧಿಕಾರ ಸ್ಥಾನಗಳಲ್ಲಿ ಮುಖ್ಯವಾದುದಾಗಿದೆ. ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಇಲ್ಲಿ ಕೈಗೊಳ್ಳಲಾಗಿದೆ. ಅಮೆರಿಕ ಕಾಂಗ್ರೆಸ್‍ನ ಸದಸ್ಯರು ಅಧಿವೇಶನ ನಡೆಸಿ ಉದ್ದೇಶಿತ ಶಾಸನಗಳಿಗೆ ಅನುಮೋದನೆ ನೀಡುವ ಭವನದ ಹೆಸರು ಯುನೈಟೆಡ್ ಸ್ಟೇಟ್ಸ್ ಕ್ಯಾಪಿಟಾಲ್. ಇದು ವಾಷಿಂಗ್‍ಟನ್‍ನ ಭವ್ಯ ಭವನಗಳಲ್ಲೊಂದೆನಿಸಿದೆ. ಕಾರ್ಯಾಂಗದ ಕಚೇರಿ ಕಟ್ಟಡ ವೈಟ್‍ಹೌಸ್‍ನ ಪೂರ್ವಕ್ಕಿದೆ. ಕಾಂಗ್ರೆಸ್ ಸದಸ್ಯರಿಗೆ ಕಚೇರಿಗಳನ್ನು ಒದಗಿಸಿರುವ ಕಟ್ಟಡ ಕಾಂಗ್ರೆಸ್‍ಹಾಲ್ ಆಫೀಸ್ ಬಿಲ್ಡಿಂಗ್ಸ್. ಸರ್ವೋಚ್ಚ ನ್ಯಾಯಾಲಯದ ಕಟ್ಟಡ ಇನ್ನೊಂದು ಗಮನಾರ್ಹ ಭವನ.

ಇಲ್ಲಿನ ಪ್ರಪಂಚದ ಅತ್ಯಂತ ಬೃಹತ್ ಗ್ರಂಥಾಲಯವೆಂದು ಭಾವಿಸ ಲಾಗಿರುವ ಲೈಬ್ರರಿ ಆಫ್ ಕಾಂಗ್ರೆಸ್ ಕಟ್ಟಡಸಮುಚ್ಚಯ ಇನ್ನೊಂದು ಆಕರ್ಷಕ ನಿರ್ಮಾಣ. ಇದಕ್ಕೆ ಹೊಂದಿಕೊಂಡಂತೆ ಪ್ರಪಂಚದ ಮುಖ್ಯ ಕೃತಿಗಳ ಸಂಗ್ರಹವಿರುವ ಗ್ರಂಥಾಲಯ ವಿಲಿಯಮ್ ಷೇಕ್ಸ್‍ಪಿಯರನ ಹೆಸರಿನಲ್ಲಿದೆ.

ವಾಷಿಂಗ್‍ಟನ್ ವಸ್ತುಸಂಗ್ರಹಾಲಯಗಳ ಕೇಂದ್ರವೆನಿಸಿದೆ. ಅಲ್ಲಿಯ ನ್ಯಾಷನಲ್ ಆರ್ಟ್ ಗ್ಯಾಲರಿ, ಸ್ಮಿತ್‍ಸೋನಿಯನ್ ಮ್ಯೂಸಿಯಮ್, ನ್ಯಾಷನಲ್ ಏರ್ ಅಂಡ್ ಸ್ಪೇಸ್ ಮ್ಯೂಸಿಯಮ್, ಅಮೆರಿಕ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯ, ರಾಷ್ಟ್ರೀಯ ಪತ್ರಾಗಾರ, ಪ್ರಾಕೃತಿಕ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯ, ಸ್ಮಿತ್‍ಸೋನಿಯನ್ ಆಟ್ರ್ಸ್ ಅಂಡ್ ಇಂಡಸ್ಟ್ರಿಯಲ್ ಬಿಲ್ಡಿಂಗ್, ಮಾಲ್‍ನಲ್ಲಿರುವ ಕಲಾ ಮ್ಯೂಸಿಯಮ್‍ಗಳು-ಇವೆಲ್ಲ ಈ ನಗರದ ಸಾಂಸ್ಕøತಿಕ ಮಹತ್ತವನ್ನು ಹೆಚ್ಚಿಸಿವೆ. ಅಮೆರಿಕದ ಅಧ್ಯಕ್ಷರುಗಳಾಗಿದ್ದ ಲಿಂಕನ್, ವಾಷಿಂಗ್‍ಟನ್, ಜಫರ್‍ಸನ್ ಮತ್ತು ರೂಸ್‍ವೆಲ್ಟರ ಸ್ಮಾರಕಗಳು ಪ್ರೇಕ್ಷಣೀಯವಾಗಿವೆ. ಲಿಂಕನ್ ಗುಂಡೇಟಿನಿಂದ ಸಾವಿಗೀಡಾದ ಫೋರ್ಡ್ ಥಿಯೇಟರ್‍ನಲ್ಲಿ ಆತನಿಗೆ ಸಂಬಂಧಿಸಿದ ವಸ್ತುಗಳನ್ನು ಇಡಲಾಗಿದೆ. ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದಂತೆ ಜಾನ್ ಎಫ್.ಕೆನಡಿ ಕೇಂದ್ರವಿದೆ.

ವಾಷಿಂಗ್‍ಟನ್ ಇಂದು ಪ್ರಪಂಚಪ್ರಸಿದ್ಧ ನಗರ. ಇಲ್ಲಿ ಅಸಂಖ್ಯ ಪ್ರೇಕ್ಷಣೀಯ ಸ್ಥಳಗಳಿವೆ. ನ್ಯಾಷನಲ್ ಜû್ಯೂಆಲಾಜಿಕಲ್ ಪಾರ್ಕ್, ಪೆಂಟಗನ್ ಕಟ್ಟಡ, ಶರ್ಲಿಂಗ್‍ಟನ್ ನ್ಯಾಷನಲ್ ಸಿಮೆಟ್ರಿ, ಮೆರಿನ್ ಕಾಪ್ಸ್ ವಾರ್ ಮೆಮೊರಿಯಲ್, 200 ವರ್ಷಗಳ ಹಳೆಯ ಕಟ್ಟಡಗಳಿದ್ದು ಜಾರ್ಜ್ ಟೌನ್ ಮೊದಲಾದವು ಪ್ರವಾಸಿಗರನ್ನು ಸೆಳೆಯುತ್ತವೆ.

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.