ರೋಜರ್ ಫೆಡರರ್
ರೋಜರ್ ಫೆಡರರ್ ಇವರು ಸ್ವಿಟ್ಜರ್ಲ್ಯಾಂಡ್ ದೇಶದ ಟೆನ್ನಿಸ್ ಆಟಗಾರರು, ಸಧ್ಯಕ್ಕೆ ಇವರು ವಿಶ್ವದ ೨ನೇಯ ಶ್ರೇಯಾಂಕದ ಆಟಗಾರರು.

ಬಾಲ್ಯ
ಫೆಡರರ್ ಅವರು ೮ ಆಗಸ್ಟ್, ೧೯೮೧ ರಂದು, ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ಎಂಬ ಊರಿನಲ್ಲಿ ಜನಿಸಿದರು. ತಮ್ಮ ಬಾಲ್ಯದಲ್ಲಿ ಆಗಿನ ಪ್ರಖ್ಯಾತ ಟೆನ್ನಿಸಿಗ ಬೆಕರ್ ಅವರನ್ನು ತಮ್ಮ ಆದರ್ಶವೆಂದೆಣಿಸಿದರು. ತಮ್ಮ ೮ನೇ ವಯಸ್ಸಿಗೆ ಟೆನ್ನಿಸ್ ಆಡಲು ಪ್ರಾರಂಭಿಸಿದರು.

ಟೆನ್ನಿಸ್
೧೯೯೮ರಲ್ಲಿ ಜಾಗತಿಕ ಟೆನ್ನಿಸ್ ಬಾಳ್ವೆಯನ್ನು ಪ್ರಾರಂಭಿಸಿದರು. ಇವರು ಆ ಸಮಯದಲ್ಲಿ ಬಾಲಕರ ವಿಶ್ವ ಟೆನ್ನಿಸ್ ರಾಂಕಿಂಗ್ ನಲ್ಲಿ ೧ನೇ ಸ್ಥಾನಿಯಾಗಿದ್ದರು. ೨೦೦೫ರಲ್ಲಿ ಪ್ರಪ್ರಥಮ ಬಾರಿಗೆ ವಿಂಬಲ್ಡನ್ ಮುಕ್ತ ಟೆನ್ನಿಸ್ ಚಾಂಪಿಯನ್ ಆಗುವುದರೊಂದಿಗೆ ತಮ್ಮ ಸಾಧನೆಯನ್ನು ಪ್ರಾರಂಭಿಸಿದರು. ೧೯೯೮ ರಲ್ಲಿ ತಮ್ಮ ೧೮ನೇ ವಯಸ್ಸಿಗೆ ವಿಶ್ವದ ಅತಿ ಕಿರಿಯ ೧೦೦ರ ಒಳಗಿನ ಆಗ್ರಮಾನ್ಯ ಆಟಗಾರರಾದರು.ಇವರು ಫೆಬ್ರವರಿ ೨, ೨೦೦೪ ರಿಂದ ಅಗಸ್ಟ್ ೧೭, ೨೦೦೮ರ ವರೆಗೆ ದಾಖಲೆಯ ೨೩೭ ವಾರಗಳ ಕಾಲ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರರಾಗಿದ್ದರು. ಇವರ ಇಂಥ ಸಾಧನೆಯನ್ನು ಕಂಡು ಅನೇಕ ಟೆನ್ನಿಸ್ ವಿಷ್ಲೇಶಕರು ಮತ್ತು ಹಳೆಯ ಟೆನ್ನಿಸ್ ಹುರಿಯಾಳುಗಳು ಇವರನ್ನು ಇತಿಹಾಸದ ಅತ್ಯುತ್ತಮ ಟೆನ್ನಿಸ್ ಪಟುವೆಂದು ಕರೆಯುತ್ತಿದ್ದಾರೆ[1].
ದಾಖಲೆಗಳು
ಇವರು ಈ ವರೆಗೆ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಅದರಲ್ಲಿ 6 ಆಸ್ಟ್ರೇಲಿಯನ್, ೧ ಫ್ರೆಂಚ್, 8 ವಿಂಬಲ್ಡನ್ ಹಾಗೂ ೫ ಯು.ಎಸ್ ಮುಕ್ತ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳಿವೆ. ಇವರು ಒಟ್ಟಾಗಿ ೩೦೨ ವಾರಗಳ ಕಾಲ ವಿಶ್ಚದ ಆಗ್ರಮಾನ್ಯ ಆಟಗಾರರಾಗಿದ್ದರು.
ಕುಟುಂಬ
ಇವರ ತಂದೆ ರಾಬರ್ಟ್ ಫೆಡರರ್, ತಾಯಿ ಲಿನೆಟ್ ಫೆಡರರ್ ಹಾಗೂ ತಂಗಿ ಡಯಾನ ಫೆಡರರ್. ೨೦೧೦ರಲ್ಲಿ ಮಿರ್ಕಾ ಅವರನ್ನು ವಿವಾಹವಾದರು. ಮೈಲಾ ರೋಸ್ ಹಾಗು ಚಾರ್ಲಿನ್ ರೀವಾ ಎಂಬ ಇಬ್ಬರು ಮಕ್ಕಳು ಇದ್ದಾರೆ.
ಪ್ರಸಿಧ್ದಿ
ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಅವರ ಪಂದ್ಯಾಟವು ಬಹಳ ಪ್ರಸಿಧ್ದವಾಗಿದೆ. ನಡಾಲ್ ಅವರು ಫೆಡರರ್ ಅವರಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದ್ದು, ಇವರಿಬ್ಬರ ನಡುವಿನ ಪಂದ್ಯಾಟವು ರೋಚಕವಾಗಿರುತ್ತದೆ.(Federer–Nadal rivalry) ನಡಾಲ್ ಆವೆಮಣ್ಣಿನ ದೊರೆ ಎಂದು ಪ್ರಸಿಧ್ದಿ ಹೊಂದಿದ್ದಾರೆ.