ರವಿ ಬೆಳಗೆರೆ
ರವಿ ಬೆಳಗೆರೆ ಕನ್ನಡದ ಪ್ರಸಿದ್ಧ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿ. ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ಜೊತೆಗೆ ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆ ಯ ಸಂಸ್ಥಾಪಕ. ರವಿ 'ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.

ರವಿ ಬೆಳಗೆರೆ | |
---|---|
ಜನನ | 15 ಮಾರ್ಚ್ 1958 ಬಳ್ಳಾರಿ |
ವೃತ್ತಿ | ಪತ್ರಿಕೋದ್ಯಮಿ, ಬರಹಗಾರ, ಕಾದಂಬರಿಕಾರ, ಪತ್ರಿಕೆ ಸಂಪಾದಕ, ನಟ ಮತ್ತು ಟಿವಿ ಕಾರ್ಯಕ್ರಮ ನಿರೂಪಕ. |
ಪ್ರಕಾರ/ಶೈಲಿ | Fiction, Non Fiction |
ಪ್ರಮುಖ ಕೆಲಸ(ಗಳು) | ಹಿಮಾಲಯನ್ ಬ್ಲಂಡರ್, ಭೀಮಾ ತೀರದ ಹಂತಕರು, ನೀ ಹಿಂಗ ನೋಡಬ್ಯಾಡ ನನ್ನ, ಡಿ ಕಂಪನಿ, ಇಂದಿರೆಯ ಮಗ ಸಂಜಯ, ಕಲ್ಪನಾ ವಿಲಾಸ |
www |
ಜನನ, ಶಿಕ್ಷಣ, ವೃತ್ತಿಜೀವನ
ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಮಾಡಿದರು.
ಕೃತಿಗಳು
ಕಥಾ ಸಂಕಲನ
- ದಾರಿ, 1980
- ಪಾ.ವೆಂ. ಹೇಳಿದ ಕಥೆ, 1995
- ಒಟ್ಟಾರೆ ಕಥೆಗಳು, 2001
ಕಾದಂಬರಿ
- ಗೋಲಿಬಾರ್, 1983
- ಅರ್ತಿ, 1990
- ಮಾಂಡೋವಿ, ಸೆಪ್ಟಂಬರ್ 1996
- ಮಾಟಗಾತಿ, 1998
- ಒಮರ್ಟಾ, ಜನವರಿ 1999
- ಸರ್ಪ ಸಂಬಂಧ, ಜೂನ್ 2000
- ಹೇಳಿ ಹೋಗು ಕಾರಣ, ಸೆಪ್ಟಂಬರ್ 2003
- ನೀ ಹಿಂಗ ನೋಡಬ್ಯಾಡ ನನ್ನ, ಸೆಪ್ಟಂಬರ್ 2003
- ಗಾಡ್‌ಫಾದರ್ , ಮಾರ್ಚ್ 2005
- ಕಾಮರಾಜ ಮಾರ್ಗ, ನವೆಂಬರ್ 2010
- ಹಿಮಾಗ್ನಿ, ೨೦೧೨
ಅನುವಾದ
- ವಿವಾಹ, 1983
- ನಕ್ಷತ್ರ ಜಾರಿದಾಗ, 1984
- ಹಿಮಾಲಯನ್ ಬ್ಲಂಡರ್, ಸೆಪ್ಟಂಬರ್1999
- ಕಂಪನಿ ಆಫ್ ವಿಮೆನ್, ಜನವರಿ 2000
- ಟೈಂಪಾಸ್, ಜನವರಿ 2001
- ರಾಜ ರಹಸ್ಯ, ನವೆಂಬರ್ 2002
- ಹಂತಕಿ ಐ ಲವ್ ಯೂ, ಜನವರಿ 2007
- ದಂಗೆಯ ದಿನಗಳು, ಮಾರ್ಚ್ 2008
ದೇಶ-ಇತಿಹಾಸ-ಯುದ್ಧ
- ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಸೆಪ್ಟಂಬರ್ 1999
- ಬ್ಲ್ಯಾಕ್ ಫ್ರೈಡೆ (ಅನುವಾದ) ಆಗಸ್ಟ್ 2005
- ರೇಷ್ಮೆ ರುಮಾಲು (ಅನುವಾದ) ಆಗಸ್ಟ್ 2007
- ಇಂದಿರೆಯ ಮಗ ಸಂಜಯ, ಸೆಪ್ಟಂಬರ್ 2002
- ಗಾಂಧೀ ಹತ್ಯೆ ಮತ್ತು ಗೋಡ್ಸೆ, ಸೆಪ್ಟಂಬರ್ 2003
- ಡಯಾನಾ, ಜನವರಿ 2007
- ನೀನಾ ಪಾಕಿಸ್ತಾನ
- ಅವನೊಬ್ಬನಿದ್ದ ಗೋಡ್ಸೆ
- ಮೇಜರ್ ಸಂದೀಪ್ ಹತ್ಯೆ
- ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು
- ಮುಸ್ಲಿಂ
ಜೀವನ ಕಥನ
- ಪ್ಯಾಸಾ, 1991
- ಪಾಪದ ಹೂವು ಫೂಲನ್, ಆಗಸ್ಟ್2001
- ಸಂಜಯ, 2000
- ಚಲಂ (ಅನುವಾದ) ಮಾರ್ಚ್ 2008
ಕ್ರೈಂ
ಹತ್ಯಾಕಥನ
- ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991
- ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998
- ರಂಗವಿಲಾಸ್ ಬಂಗಲೆಯ ಕೊಲೆಗಳು
- ಬಾಬಾ ಬೆಡ್‌ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007
- ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012
ಭೂಗತ ಇತಿಹಾಸ
- ಪಾಪಿಗಳ ಲೋಕದಲ್ಲಿ ಭಾಗ -1, 1995
- ಪಾಪಿಗಳ ಲೋಕದಲ್ಲಿ ಭಾಗ 2, ಸೆಪ್ಟಂಬರ್ 1997
- ಭೀಮಾ ತೀರದ ಹಂತಕರು, ಮೇ 2001
- ಪಾಪಿಗಳ ಲೋಕದಲ್ಲಿ, 2005
- ಡಿ ಕಂಪನಿ, 2008
ಬದುಕು
- ಖಾಸ್‌ಬಾತ್ 96, 1997
- ಖಾಸ್‌ಬಾತ್ 97, ಸೆಪ್ಟಂಬರ್ 1997
- ಖಾಸ್‌ಬಾತ್ 98, ಸೆಪ್ಟಂಬರ್ 1998
- ಖಾಸ್‌ಬಾತ್ 99, ಅಕ್ಟೋಬರ್ 2003
- ಖಾಸ್‌ಬಾತ್ 2000, ಅಕ್ಟೋಬರ್ 2003
- ಖಾಸ್‌ಬಾತ್ 2001, ಜನವರಿ 2007
- ಖಾಸ್‌ಬಾತ್ 2002, ಜನವರಿ 2008
- ಖಾಸ್‌ಬಾತ್ 2003
ಅಂಕಣ ಬರೆಹಗಳ ಸಂಗ್ರಹ
ಜೀವನ ಪಾಠ
- ಬಾಟಮ್ ಐಟಮ್ ಭಾಗ 1, ಫೆಬ್ರವರಿ2002
- ಬಾಟಮ್ ಐಟಮ್ 2, ಅಕ್ಟೋಬರ್2003
- ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006
- ಬಾಟಂ ಐಟಮ್ 4
- ಬಾಟಂ ಐಟಮ್ 5
ಪ್ರೀತಿ ಪತ್ರಗಳು
- ಲವಲವಿಕೆ -1, ಡಿಸೆಂಬರ್ 1998
- ಲವಲವಿಕೆ -2, ಸೆಪ್ಟಂಬರ್ 2004
- ಲವಲವಿಕೆ -3
- ಲವಲವಿಕೆ -4
ಕವನ ಸಂಕಲನ
- ಅಗ್ನಿಕಾವ್ಯ, 1983
ಇತರೆ
- ಕೇಳಿ, ಜೂನ್ 2001
- ಮನಸೇ ಆಡಿಯೋ ಸಿಡಿ ಜನವರಿ 2007
- ಫಸ್ಟ್ ಹಾಫ್
- ಅಮ್ಮ ಸಿಕ್ಕಿದ್ಲು, ೨೦೧೨
- ಇದು ಜೀವ: ಇದುವೇ ಜೀವನ, ೨೦೧೨
- ಏನಾಯ್ತು ಮಗಳೇ, ಡಿಸೆಂಬರ್ 2013
ಪ್ರಶಸ್ತಿಗಳು
1984 | ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | ವಿವಾಹ | (ಸೃಜನೇತರ) | |
1990 | ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ | ವಂಧ್ಯ | (ಕತೆ) | |
1997 | ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | ಪಾ.ವೆಂ. ಹೇಳಿದ ಕತೆ | (ಸಣ್ಣ ಕತೆ) | |
2004 | ಶಿವರಾಮ ಕಾರಂತ ಪುರಸ್ಕಾರ | ನೀ ಹಿಂಗ ನೋಡಬ್ಯಾಡ ನನ್ನ | (ಕಾದಂಬರಿ) | |
2005 | ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ | ಪ್ರಾರ್ಥನಾ ಶಾಲೆ | (ಕೇಂದ್ರ ಸರ್ಕಾರ) | |
2008 | ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ[1] | ಜೀವಮಾನದ ಸಾಧನೆ | ||
2011 | ರಾಜ್ಯೋತ್ಸವ ಪ್ರಶಸ್ತಿ[2] | ಕರ್ನಾಟಕ ಸರ್ಕಾರ |
ಬಾಹ್ಯ ಸಂಪರ್ಕ ಕೊಂಡಿಗಳು
ಉಲ್ಲೇಖ
- ವೆಬ್ ದುನಿಯಾ ಸುದ್ದಿ
- ರಾಜ್ಯೋತ್ಸವ ಪ್ರಶಸ್ತಿ ಘೋಷಣೆ, ಒನ್ ಇಂಡಿಯಾ ಕನ್ನಡ