ಯೂರಿ ಗಗಾರಿನ್
ಯೂರಿ ಅಲೆಕ್ಸೇಯವಿಚ್ ಗಗಾರಿನ್ (ಮಾರ್ಚ್ ೯, ೧೯೩೪ – ಮಾರ್ಚ್ ೨೭, ೧೯೬೮) ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಕೀರ್ತಿ ಪಡೆದ ಸೋವಿಯತ್ ಅಂತರಿಕ್ಷಯಾನಿ.
ಯೂರಿ ಗಗಾರಿನ್ Yuri Gagarin | |
---|---|
![]() 1964 ರಲ್ಲಿ ಗಗಾರಿನ್ ಸ್ವೀಡನ್ ಭೇಟಿ | |
![]() ಸೋವಿಯತ್ ಗಗನಯಾತ್ರಿ | |
Nationality | ಸೋವಿಯತ್ |
Born | 9 ಮಾರ್ಚ್ 1934 ಕ್ಲುಶಿನೋ, ರಶಿಯನ್ ಸ್ಫಸ್ರ್, ಸೋವಿಯೆತ್ ಯೂನಿಯನ್ |
Died | 27 ಮಾರ್ಚ್ 1968 ನೋವೋಸ್ಯೊಲೊವೊ, ರಶಿಯನ್ ಸ್ಫಸ್ರ್, ಸೋವಿಯೆತ್ ಯೂನಿಯನ್ | (ವಯಸ್ಸು 34)
Other occupation | ಪೈಲಟ್ |
Rank | ಸೋವಿಯೆಟ್ ವಾಯುಪಡೆಗಳ ಕರ್ನಲ್ (Polkovnik) |
Time in space | 1 ಗಂಟೆ, 48 ನಿಮಿಷ |
Selection | ಸೋವಿಯೆಟ್ ವಾಯುಪಡೆಯ ಗ್ರೂಪ್ 1 |
Missions | ವೊಸ್ಟೋಕ್ -1 |
ಜೀವನ
ಯೂರಿ ಗಗಾರಿನ್ ಜನ್ಮ ಮಾರ್ಚ್ ೯, ೧೯೩೪ರಂದು ಮಾಸ್ಕೊ ಪಶ್ಚಿಮದಲ್ಲಿರುವ ಕ್ಲುಶಿನೊ ಗ್ರಾಮದಲ್ಲಿ ಕೃಷಿ ಕಾರ್ಮಿಕರ ಪರಿವಾರದಲ್ಲಾಯಿತು. ಉನ್ನತ ವಿದ್ಯಾಭ್ಯಾಸದ ಸಮಯದಲ್ಲಿ ವಿಮಾನ ಉಡಾವಣೆಯ ಗೀಳು ಬೆಳಸಿಕೊಂಡ ಗಗಾರಿನ್ ತದನಂತರ ಸೇನಾ ವೈಮಾನಿಕ ಶಿಕ್ಷಣವನ್ನು ಒರೆನ್ಬರ್ಗ್ ಪೈಲಟ್ ಶಾಲೆಯಿಂದ ೧೯೫೫ರಲ್ಲಿ ಪಡೆದರು. ೧೯೬೦ರಲ್ಲಿ ಅಂತರಿಕ್ಷಯಾನಕ್ಕಾಗಿ ಸೋವಿಯತ್ ಅಂತರಿಕ್ಷ ಸಂಸ್ಥೆ ಆಯ್ಕೆ ಪ್ರಕ್ರಿಯೆ ಶುರುಮಾಡಿತು. ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಗಗಾರಿನ್ ಸೇರಿದಂತೆ ೨೦ ಅಂತರಿಕ್ಷಯಾನಿಗಳು ಕೊನೆಹಂತಕ್ಕೆ ತಲುಪಿದರು. ಅಂತಿಮವಾಗಿ ೫ ಅಡಿ ೨ ಅಂಗುಲದ ಗಗಾರಿನ್ ಸರ್ವಾನುಮತದಿಂದ ಆಯ್ಕೆಯಾದರು. ಏಪ್ರಿಲ್ ೧೨, ೧೯೬೧ ರೊಂದು ಗಗಾರಿನ್ ವೋಸ್ಟಾಕ್ ೩ಕೆಎ (ವೋಸ್ಟಾಕ್ ೧)ಅಂತರಿಕ್ಷ ನೌಕೆಯಲ್ಲಿ ಪ್ರಯಾಣಿಸಿ ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು. "ಇಲ್ಲಿ ಯಾವ ದೇವರೂ ಇಲ್ಲ" ಎಂದು ಅಂತರಿಕ್ಷ ಕಕ್ಷೆಯಿಂದ ಗಗಾರಿನ್ ಉದ್ಗರಿಸಿದರೆಂದು ಪತ್ರಿಕೆಗಳು ಪ್ರಕಟಿಸಿದ್ದವು. ಅಂತರಿಕ್ಷಯಾನದ ಮಧ್ಯದಲ್ಲಿಯೆ ಸೋವಿಯತ್ ಸರ್ಕಾರದಿಂದ ಸೀನಿಯರ್ ಲೆಫ್ಟನೆಂಟ್ ಪದವಿಯಿಂದ ಮೇಜರ್ ಪದವಿಗೆ ಗಗಾರಿನ್ ಬಡ್ತಿ ಪಡೆದರು. ಗಗಾರಿನ್ ಸುರಕ್ಷಿತವಾಗಿ ಮರಳುವುದು ಬಹುತೇಕ ಅಸಂಭವವೆಂದು ಸೋವಿಯತ್ ಅಧಿಕಾರಿ ವರ್ಗ ನಂಬಿತ್ತು ಆದರೆ ಯಶಸ್ವಿಯಾಗಿ ಯಾನದಿಂದ ಮರಳಿದ ಗಗಾರಿನ್ ತದನಂತರ ವಿಶ್ವವಿಖ್ಯಾತರಾಗಿ ಪ್ರಪಂಚದ ಹಲವೆಡೆ ಸನ್ಮಾನಿತರಾದರು. ಮಾರ್ಚ್ ೨೭, ೧೯೬೮ರೊಂದು ನಿಯತ್ಕಾಲಿಕ ಮಿಗ್ ೧೫ ವಿಮಾನ ಚಾಲನೆ ಅಭ್ಯಾಸ ನಡೆಸುವಾಗಾದ ಒಂದು ದುರಂತ ಅಪಘಾತದಲ್ಲಿ ಗಗಾರಿನ್ ಮೃತಪಟ್ಟರು.