ಯು. ಜಿ. ಕೃಷ್ಣಮೂರ್ತಿ
ಯು. ಜಿ. ಕೃಷ್ಣಮೂರ್ತಿ ಎಂದು ಪರಿಚಿತರಾಗಿದ್ದ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ (೯ ಜುಲೈ ೧೯೧೮ - ೨೨ ಮಾರ್ಚ್ ೨೦೦೭) ಜ್ಞಾನೋದಯವನ್ನು ಪ್ರಶ್ನಿಸಿದ ಒಬ್ಬ ಭಾರತೀಯ ಚಿಂತಕರಾಗಿದ್ದರು. ವ್ಯಕ್ತಿಯ ದೈನಂದಿನ ಕಾರ್ಯನಿರ್ವಹಣೆಗೆ ಅಗತ್ಯವಾದರೂ, ಪರಮಸತ್ಯ ಅಥವಾ ಸತ್ಯದ ದೃಷ್ಟಿಯಿಂದ, ಅವರು "ಚಿಂತನೆ"ಯ ವಾಸ್ತವ ಆಧಾರವನ್ನು ತಿರಸ್ಕರಿಸಿದರು ಮತ್ತು ಹಾಗೆ ಮಾಡುವಾಗ ಅದರ ಉಲ್ಲೇಖದಲ್ಲಿ ಚಿಂತನೆಯ ಎಲ್ಲ ವ್ಯವಸ್ಥೆಗಳು ಮತ್ತು ಜ್ಞಾನವನ್ನು ಅಲ್ಲಗಳೆದರು. ಅನೇಕರು ಅವರನ್ನು ಜ್ಞಾನೋದಯ ಹೊಂದಿದ ವ್ಯಕ್ತಿಯೆಂದು ಪರಿಗಣಿಸಿದರೂ, ಕೃಷ್ಣಮೂರ್ತಿ ಹಲವುವೇಳೆ ತಮ್ಮ ಇರುವಿನ ಸ್ಥಿತಿಯನ್ನು ಸಹಜ ಸ್ಥಿತಿಯೆಂದು ಉಲ್ಲೇಖಿಸುತ್ತಿದ್ದರು.

ಆರಂಭಿಕ ಜೀವನ
ಕೃಷ್ಣಮೂರ್ತಿ ಅವರು ೧೯೧೮ ಜುಲೈ ೯ ರಂದು ಆಂಧ್ರ ಪ್ರದೇಶದ, ಮಚಲೀಪಟ್ಟಣಂನಲ್ಲಿ ಜನಿಸಿದರು.ಇವರು ೭ ದಿನಕ್ಕೆ ತಮ್ಮ ತಾಯಿಯನ್ನು ಕಳೆದುಕೊಂಡರು.ನಂತರ ಇವರ ಅಜ್ಜ ಇಅವರನ್ನು ನೋಡಿಕೊಂಡಿದ್ದರು.ಕೆಲವು ದಿನಗಳ ನಂತರ ಇವರು ತಮ್ಮ ಕಟುಂಬದಿಂದ ದೂರ ಬಂದು ಲಂಡನಿಗೆ ಹೋದರು.ಇವರು ೨೦೦೭ ಮಾರ್ಚ್ ೨೨ ರಂದು ಇಟಲಿಯ ವೆಲ್ಲೆಕ್ರೋಸಿಯದಲ್ಲಿ ಮರಣಹೊಂದರು.