ಮೇಲ್ವಿಚಾರಣೆ
ಮೇಲ್ವಿಚಾರಣೆ ಎಂದರೆ ನಡೆಸುವ, ನಿರ್ವಹಿಸುವ, ಅಥವಾ ಉಪೇಕ್ಷೆಯ ಕ್ರಿಯೆ ಅಥವಾ ನಿದರ್ಶನ. ಮೇಲ್ವಿಚಾರಣೆ ಎಂದರೆ ಏನನ್ನಾದರೂ ಅಥವಾ ಯಾರನ್ನಾದರೂ ಪಾರುಪತ್ಯ ಮಾಡುವ ಕ್ರಿಯೆ ಅಥವಾ ಕಾರ್ಯ. ಮೇಲ್ವಿಚಾರಣೆ ಮಾಡುವ ವ್ಯಕ್ತಿಯನ್ನು "ಮೇಲ್ವಿಚಾರಕ" ಎಂದು ಕರೆಯಲಾಗುತ್ತದೆ, ಆದರೆ ಇವನು ಯಾವಾಗಲೂ ಮೇಲ್ವಿಚಾರಕ ಎಂಬ ವಿಧ್ಯುಕ್ತ ಪದವಿಯನ್ನು ಹೊಂದಿರುವುದಿಲ್ಲ. ಸಾಮಾನ್ಯವಾಗಿ, ಮೇಲ್ವಿಚಾರಣೆಯಲ್ಲಿ ಜ್ಞಾನವನ್ನು ಒದಗಿಸುವ, ಕಾರ್ಯಗಳನ್ನು ಸಂಘಟಿಸಲು ನೆರವಾಗುವ, ಪ್ರೇರಣೆಯನ್ನು ಹೆಚ್ಚಿಸುವ, ಮತ್ತು ಚಟುವಟಿಕೆ ಹಾಗೂ ಫಲಿತಾಂಶಗಳ ಉಸ್ತುವಾರಿ ಮಾಡುವ ಅಂಶಗಳು ಇರುತ್ತವೆ; ಪ್ರತಿಯೊಂದು ಅಂಶದ ಪ್ರಮಾಣವು ವಿಭಿನ್ನ ಸಂದರ್ಭಗಳಲ್ಲಿ ಬದಲಾಗುತ್ತಿರುತ್ತದೆ.
ಶೈಕ್ಷಣಿಕ ಸಮುದಾಯದಲ್ಲಿ, ಮೇಲ್ವಿಚಾರಣೆ ಎಂದರೆ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿ, ಸ್ನಾತಕ ವಿದ್ಯಾರ್ಥಿ, ಅಥವಾ ಸ್ನಾತಕಪೂರ್ವ ವಿದ್ಯಾರ್ಥಿಗೆ ಅವನ ಸಂಶೋಧನಾ ವಿಷಯದಲ್ಲಿ ನೆರವಾಗುವುದು ಮತ್ತು ಮಾರ್ಗದರ್ಶನ ನೀಡುವುದು; ನೈತಿಕ ಬೆಂಬಲ ಮತ್ತು ವೈಜ್ಞಾನಿಕ ಒಳನೋಟ ಹಾಗೂ ಮಾರ್ಗದರ್ಶನ ಎರಡನ್ನೂ ನೀಡುವುದು.[1] ಹಲವುವೇಳೆ ಮೇಲ್ವಿಚಾರಕನು ಹಿರಿಯ ವಿಜ್ಞಾನಿ ಅಥವಾ ವಿದ್ವಾಂಸನಾಗಿರುತ್ತಾನೆ. ಕೆಲವು ದೇಶಗಳಲ್ಲಿ ಇವನನ್ನು ಡಾಕ್ಟರೇಟ್ ಸಲಹೆಗಾರ ಎಂದು ಕರೆಯಲಾಗುತ್ತದೆ. ವ್ಯವಹಾರದಲ್ಲಿ, ಮೇಲ್ವಿಚಾರಣೆ ಎಂದರೆ ಸಿಬ್ಬಂದಿಯ ಕೆಲಸದ ಪಾರುಪತ್ಯ ಮಾಡುವುದು. ಮೇಲ್ವಿಚಾರಣೆ ಮಾಡುವ ವ್ಯಕ್ತಿಯು ವಿಧ್ಯುಕ್ತ ಪದವಿಯನ್ನು ಹೊಂದದೇ ಇರಬಹುದು ಅಥವಾ ಮೇಲ್ವಿಚಾರಕ ಅಥವಾ ವ್ಯವಸ್ಥಾಪಕ ಎಂಬ ಪದವಿಯನ್ನು ಹೊಂದಿರಬಹುದು. ವ್ಯವಸ್ಥಾಪಕನು ಹೆಚ್ಚು ವಿಶಾಲ ಅಧಿಕಾರ ಹೊಂದಿರುತ್ತಾನೆ.
ವೈದ್ಯಕೀಯ ಮೇಲ್ವಿಚಾರಣೆಯಲ್ಲಿ, ಮನಃಶಾಸ್ತ್ರಜ್ಞ ಅಥವಾ ಮನೋರೋಗ ಚಿಕಿತ್ಸಕನು ಸೂಕ್ಷ್ಮವಾಗಿ ಪ್ರಶ್ನಿಸಲು ಮತ್ತು ರೋಗಿ ಕಾರ್ಯವನ್ನು ಮಾನಸಿಕವಾಗಿ ಪರಿಶೀಲಿಸಲು ಆ ಕ್ಷೇತ್ರದಲ್ಲಿನ ಮತ್ತೊಬ್ಬ ವೃತ್ತಿಪರನೊಂದಿಗೆ ಮಾತುಕತೆಯ ಅವಧಿಗಳನ್ನು ನಡೆಸುತ್ತಾನೆ. ಸಮಾಜದಲ್ಲಿ, ತನ್ನ ನಾಗರಿಕರ ಪಾರುಪತ್ಯ ನಡೆಸಲು ಮತ್ತು ಅವರನ್ನು ನಿಯಂತ್ರಿಸಲು ಮೇಲ್ವಿಚಾರಣೆಯನ್ನು ಸರ್ಕಾರ ಅಥವಾ ಕಾರ್ಪೊರೇಟ್ ಅಂಗಗಳು ನಡೆಸಬಹುದು. ಹಲವುವೇಳೆ ಸಾರ್ವಜನಿಕ ಘಟಕಗಳು ದೇಶದಲ್ಲಿನ ವಿಭಿನ್ನ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸುತ್ತವೆ, ಉದಾಹರಣೆಗೆ ಬ್ಯಾಂಕ್ ಮೇಲ್ವಿಚಾರಣೆ.
ಉಲ್ಲೇಖಗಳು
- 1944-, Remenyi, D., (2004). Research supervision for supervisors and their students. Money, Arthur H., 1941-. Kidmore End: Academic Conferences International. ISBN 0954709608. OCLC 55889551.CS1 maint: extra punctuation (link)