ಮಾಲತಿ ಪಟ್ಟಣಶೆಟ್ಟಿ

ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ ಇವರು ಕನ್ನಡ ಸಾಹಿತ್ಯಕ್ಕೆ ಬಹುಮುಖ ಸೇವೆ ಸಲ್ಲಿಸುತ್ತಿರುವ ಲೇಖಕಿ. ೧೯೪೦ ಡಿಸೆಂಬರ ೨೬ರಂದು ಇವರು ಮಹಾರಾಷ್ಟ್ರಕೊಲ್ಲಾಪುರದಲ್ಲಿ ಜನಿಸಿದರು. ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಾಲತಿಯವರು ಬೆಳಗಾವಿರಾಣಿ ಪಾರ್ವತಿದೇವಿ ಕಾಲೇಜಿನಲ್ಲಿ ಮೂರು ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ,ಆನಂತರ ಧಾರವಾಡಜನತಾ ಶಿಕ್ಷಣ ಸಮಿತಿಯ ಕಾಲೇಜಿನಲ್ಲಿ ೩೧ ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ಹಾಗು ವಿಭಾಗ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ[1].

ಮಾಲತಿ ಪಟ್ಟಣಶೆಟ್ಟಿ
ಜನನ
ಮಾಲತಿ

೧೯೪೦ ಡಿಸೆಂಬರ ೨೬ರಂದು ಜನಿಸಿದರು.
ಮಹಾರಾಷ್ಟ್ರದ ಕೊಲ್ಲಾಪುರ
ವೃತ್ತಿಲೇಖಕಿ, ಪ್ರಾಧ್ಯಾಪಕಿ, ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ನಂತರ,ಬೆಳಗಾವಿಯ ರಾಣಿ ಪಾರ್ವತಿದೇವಿ ಕಾಲೇಜಿನಲ್ಲಿ ಮೂರು ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರು. ತದನಂತರ ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾಲೇಜಿನಲ್ಲಿ ೩೧ ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ಹಾಗು ವಿಭಾಗ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
Years activeಇಲ್ಲಿಯವರೆವಿಗೂ
ಪ್ರಶಸ್ತಿಗಳು(ಮುಖ್ಯವಾದವುಗಳು) * ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ೨೦೦೦ ಇಸವಿಯ ಗೌರವ ಪ್ರಶಸ್ತಿ ಲಭಿಸಿದೆ.
  • ೨೦೦೫ ನೆಯ ಸಾಲಿನ ಡಾ.ಡಿ.ಎಸ್.ಕರ್ಕಿ ಪ್ರಶಸ್ತಿ ಲಭಿಸಿದೆ.

ಸಾಹಿತ್ಯ

ಕವಿತಾ ಸಂಕಲನ

  • ಬಾ ಪರೀಕ್ಷೆಗೆ
  • ಗರಿಗೆದರಿ ತಂದೆ ಬದುಕು
  • ಗುಲಾಬಿ
  • ದಾಹ ತೀರ
  • ಮೌನ ಕರಗುವ ಹೊತ್ತು
  • ಇತ್ತೀಚಿನ ಕವಿತೆಗಳು
  • ಹೂದಂಡಿ (ಆಯ್ದ ಕವಿತಾ ಸಂಗ್ರಹ)

ಕಥಾ ಸಂಕಲನ

  • ಇಂದು ನಿನ್ನಿನ ಕತೆಗಳು
  • ಸೂರ್ಯ ಮುಳುಗುವದಿಲ್ಲ

ವಿಮರ್ಶೆ

  • ಬಸವರಾಜ ಕಟ್ಟೀಮನಿ-ಬದುಕು ಬರಹ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಣೆ)

ಸಂಪಾದನೆ

  • ಕಾವ್ಯ ೯೬ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆ)
  • ಪ್ರಶಾಂತ (ಶ್ರೀಮತಿ ಶಾಂತಾದೇವಿ ಮಾಳವಾಡ ಇವರ ಷಷ್ಟ್ಯಬ್ದಿ ಸಮಾರೋಹ ಅಭಿನಂದನ ಗ್ರಂಥ)
  • ಸಮತಾ (ಸಮುದಾಯ ಸಂಸ್ಥೆಯ ಪ್ರಕಟಣೆ)

ಸಾರ ಸಂಗ್ರಹ

  • ‘ಮಾಡಿ ಮಡಿದವರು’ (ಲೇಖಕರು: ಬಸವರಾಜ ಕಟ್ಟೀಮನಿ; ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ)

ಆಕಾಶವಾಣಿ/ದೂರದರ್ಶನ

ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರು ಚಿಂತನ, ಭಾಷಣ, ನಾಟಕರಚನೆ, ರೂಪಕರಚನೆ, ಪಾತ್ರನಿರ್ವಹಣೆ,ಚರ್ಚೆ, ಕಥಾವಾಚನ, ಮುಂತಾದ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಸುಮಾರು ೧೯೭೦ರಿಂದಲೇ ಭಾಗವಹಿಸುತ್ತಿದ್ದಾರೆ. ಆಕಾಶವಾಣಿಯಂತೆಯೆ ದೂರದರ್ಶನದಲ್ಲಿ ಸಹ ಇವರ ಸಂದರ್ಶನ, ಕಾವ್ಯವಾಚನ ಹಾಗು ಕವಿಗೋಷ್ಠಿ ಕಾರ್ಯಕ್ರಮ ಜರುಗಿವೆ.

ಸಾಂಸ್ಕೃತಿಕ ಚಟುವಟಿಕೆಗಳು

ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದೈವ ನಿರತರಾಗಿರುತ್ತಾರೆ.

  • ಗೋರೆಗಾಂವ, ಮುಂಬಯಿಯ ಲೇಖಕಿಯರ ಪ್ರಥಮ ಸಮ್ಮೇಳನದ ಪ್ರಥಮ ಅಧ್ಯಕ್ಷೆ (೧೯೯೪)ಯಾಗಿದ್ದರು.
  • ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಆಖಿಲ ಭಾರತ ಮಹಿಳಾ ಸಮ್ಮೇಳನಗಳಲ್ಲಿ ಮೂರು ಸಲ ಕವಿಗೋಷ್ಠಿಯ ಅಧ್ಯಕ್ಷೆಯಾಗಿದ್ದರು.
  • ಕರ್ನಾಟಕ ಲೇಖಕಿಯರ ಸಂಘ ಹಾಗು ಉತ್ತರ ಕರ್ನಾಟಕ ಲೇಖಕಿಯರ ಸಂಘದ ವಿಶೇಷ ಸಾಹಿತ್ಯ ಸಮ್ಮೇಳನಗಳಲ್ಲಿ ಎರಡು ಬಾರಿ ಕವಿಗೋಷ್ಠಿಯ ಅಧ್ಯಕ್ಷೆಯಾಗಿದ್ದರು.

ಇದಲ್ಲದೆ ಕೆಳಗಿನ ಕವಿಗೋಷ್ಠಿಗಳಲ್ಲಿ ಕಾವ್ಯವಾಚನ ಮಾಡಿದ್ದಾರೆ.

ರಾಜ್ಯ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಗೋಷ್ಠಿಗಳಲ್ಲಿ, ವಿಶ್ವವಿದ್ಯಾಲಯಗಳ ವಿಶೇಷ ಗೋಷ್ಠಿಗಳಲ್ಲಿ ಹಾಗು ರಾಜ್ಯ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ ಮತ್ತು ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಸದಸ್ಯತ್ವ

ಪ್ರಶಸ್ತಿ

ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರ ಕೃತಿಗಳಿಗೆ ಪ್ರಶಸ್ತಿಗಳ ಸುರಿಮಳೆಯೆ ಸಂದಿದೆ.

ಪ್ರಶಸ್ತಿ ಹಾಗು ಸನ್ಮಾನಗಳಲ್ಲದೆ ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರ ಕೆಲವು ಕವಿತೆಗಳು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಕನ್ನಡ ಪಠ್ಯಗಳಲ್ಲಿ ಆಯ್ಕೆಯಾಗಿವೆ. ಮಹಾರಾಷ್ಟ್ರ ರಾಜ್ಯದ ಹನ್ನೆರಡನೆಯ ತರಗತಿಯ ಕನ್ನಡ ಪಠ್ಯಗಳಲ್ಲಿ ಸಹ ಇವರ ಕವಿತೆ ಆಯ್ಕೆಯಾಗಿದೆ.

ಉಲ್ಲೇಖಗಳು

  1. http://karnatakasahithyaacademy.org/?page_id=9
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.