ಮಂಜುಗಡ್ಡೆ

ಮಂಜುಗಡ್ಡೆಯು (ನೀರ್ಗಲ್ಲು) ಘನ ಸ್ಥಿತಿಯಾಗಿ ಪರಿವರ್ತಿತವಾಗಿರುವ ನೀರು.[1][2] ಮಣ್ಣಿನ ಕಣಗಳು ಅಥವಾ ಗಾಳಿಯ ಗುಳ್ಳೆಗಳಂತಹ ಕಲ್ಮಶಗಳು ಇರುವುದನ್ನು ಆಧರಿಸಿ, ಇದು ಪಾರದರ್ಶಕವಾಗಿ ಅಥವಾ ಹೆಚ್ಚುಕಡಿಮೆ ನೀಲಿ ಮಿಶ್ರಿತ ಬಿಳಿ ಬಣ್ಣದ್ದಾಗಿ ಕಾಣಬಹುದು.

ಮಂಜುಗಡ್ಡೆಯು ಭೂಮಿಯ ಮೇಲ್ಮೈ ಮೇಲೆ ಹೇರಳವಾಗಿದೆ  ವಿಶೇಷವಾಗಿ ಧ್ರುವ ಪ್ರದೇಶಗಳಲ್ಲಿ ಮತ್ತು ಹಿಮರೇಖೆಯ ಮೇಲೆ[3]  ಮತ್ತು ಅವಕ್ಷೇಪನ ಹಾಗೂ ಶೇಖರಣೆಯ ಸಾಮಾನ್ಯ ರೂಪವಾಗಿ ಭೂಮಿಯ ಜಲ ಚಕ್ರ ಹಾಗೂ ವಾಯುಗುಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಹಿಮಹಲ್ಲೆ ಹಾಗೂ ಆಲಿಕಲ್ಲಾಗಿ ಬೀಳುತ್ತದೆ ಅಥವಾ ಘನ ಇಬ್ಬನಿ, ಹಿಮಬಿಳಲುಗಳು ಅಥವಾ ಮಂಜುಗಡ್ಡೆ ಮೊನೆಗಳಾಗಿ ದೊರಕುತ್ತದೆ.

ಉಲ್ಲೇಖಗಳು

  1. "Definition of ICE". www.merriam-webster.com (in ಇಂಗ್ಲಿಷ್). Retrieved 2018-06-19.
  2. "the definition of ice". www.dictionary.com (in ಇಂಗ್ಲಿಷ್). Retrieved 2018-06-19.
  3. Prockter, Louise M. (2005). "Ice in the Solar System" (PDF). Johns Hopkins APL Technical Digest. 26 (2): 175. Archived from the original (PDF) on 19 March 2015.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.