ಭಾರತೀಯ ಅಂಚೆ ಸೇವೆ
![]() | |
ಪ್ರಕಾರ | ಭಾರತ ಸರಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ |
---|---|
ಸ್ಥಾಪನೆ | ೧೯೬೪ |
ಮುಖ್ಯ ಕಾರ್ಯಾಲಯ | ಹೊಸ ದೆಹಲಿ, ಭಾರತ |
ಪ್ರಮುಖ ವ್ಯಕ್ತಿ(ಗಳು) | • ರವಿ ಶಂಕರ್ ಪ್ರಸಾದ್ (ಸಚಿವರು) • ಪ್ರದೀಪ್ತಾ ಕುಮಾರ್ ಬಿಸೋಯ್ (ಅಂಚೆ ವಿಭಾಗದ ಕಾರ್ಯದರ್ಶಿ) |
ಉದ್ಯಮ | ಅಂಚೆ ವ್ಯವಸ್ಥೆ |
ಉತ್ಪನ | ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ, ಮನಿ ಆರ್ಡರ್, ಮ್ಯುಚುಯಲ್ ಫಂಡ್, ಹಣ ವರ್ಗಾವಣೆ, ರಾಷ್ಟ್ರೀಯ ಉಳಿತಾಯ ಪತ್ರ , ಕಿಸಾನ್ ವಿಕಾಸ್ ಪತ್ರ, ಆವರ್ತಿತ ಠೇವಣಿ ,ನಿಶ್ಚಿತ ಠೇವಣಿ |
ಉದ್ಯೋಗಿಗಳು | ೫೨೦,೧೯೧ |
ಅಂತರಜಾಲ ತಾಣ | www.indiapost.gov.in |
ಅಂಚೆ ಸೇವೆ
[ತೋರಿಸು]ಆರ್ಥಿಕ ಸಾಧನೆ ಭಾರತೀಯ ಅಂಚೆ ಸೇವೆ |
---|
ಭಾರತೀಯ ಅಂಚೆ ಸೇವೆಯು (ಹಿಂದಿ:भारतीय डाक विभाग) ಭಾರತ ಸರಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ. ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಮತ್ತು ಇದರ ೧,೫೫,೦೦೦ ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ.
ಸರ್ಕಾರ ಮತ್ತು ಸಂಸ್ಥೆ
ಭಾರತೀಯ ಅಂಚೆ ಸೇವೆ ವಿವಿಧ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದ್ದು ಅದರಲ್ಲಿ ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ (EMS-SPEED POST) ಇನ್ನಿತರ ಸೇವೆಗಳು ಸೇರಿವೆ. ಇದರ ಜೊತೆಗೆ ಹಣದ ವ್ಯವಾಹಾರದಲ್ಲಿ ಮನಿ ಆರ್ಡರ್, ಮ್ಯುಚುಯಲ್ ಫಂಡ್, ಹಣ ವರ್ಗಾವಣೆ ಸೇರಿವೆ. ಮತ್ತು ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ (NSC), ಕಿಸಾನ್ ವಿಕಾಸ್ ಪತ್ರ, ಆವರ್ತಿತ ಠೇವಣಿ ಮತ್ತು ನಿಶ್ಚಿತ ಠೇವಣಿಗಳನ್ನು ಒದಗಿಸುತ್ತಿದೆ. ಸಾಮಾನ್ಯವಾಗಿ ಅಂಚೆ ಡಬ್ಬಗಳು ಕೆಂಪು (ಅಂತಾರಾಪ್ಟ್ರೀಯ ಪತ್ರಗಳಿಗೆ), ಹಸಿರು (ಸ್ಥಳೀಯ, ಮಹಾನಗರ ಮತ್ತು ಪ್ರಮುಖ ನಗರಗಳ ಪತ್ರಗಳಿಗೆ) ಮತ್ತು ಹಳದಿ (ಶೀಘ್ರ ಅಂಚೆ ಸೇವೆಗಾಗಿ) ಬಣ್ಣ ಹೊಂದಿವೆ. ಅಂಚೆ ಕಛೇರಿಗಳು ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುವುದು. ಭಾನುವಾರ ರಜಾದಿನವಾಗಿದ್ದು, ಶನಿವಾರ ಮಧ್ಯಾಹ್ನದವರೆಗೆ ಮಾತ್ರ ತೆರೆದಿರುವುದು. ಯಾರಾದರು ಪತ್ರವ್ಯವಹಾರ ಮಾಡಬೇಕಾದಲ್ಲಿ ಅಂಚೆಚೀಟಿಯನ್ನು ಅಂಟಿಸುವುದು ಕಡ್ಡಾಯ. ಅಂತಾರಾಪ್ಟ್ರೀಯ ಪಾರ್ಸೆಲ್ ಇಪ್ಪತ್ತು ಕೆ.ಜಿ.ಯನ್ನು ಮೀರಿರಬಾರದು. ಬುಕ್ ಪೋಸ್ಟ್ ಸೇವೆ ಅತಿ ಕಡಿಮೆ ದರದ ಸೇವೆಯಾಗಿದ್ದು ಪುಸ್ತಕಗಳು, ಕಡತಗಳು, ಮುದ್ರಣ ಪತ್ರಗಳು ಇತರೆ ಐದು ಕೆ.ಜಿ. ಮೀರಿರಬಾರದು.