ಬೃಹದರ್ಥಶಾಸ್ತ್ರ

ಬೃಹದರ್ಥಶಾಸ್ತ್ರ ವು (ಗ್ರೀಕ್‌ನ ಪೂರ್ವಪ್ರತ್ಯಯವಾದ "ಮ್ಯಾಕ್ರೊ" ಅಂದರೆ "ಬೃಹತ್‌" ಎಂಬುದರಿಂದ ಬಂದದ್ದು; "ಬೃಹತ್‌‌" + "ಅರ್ಥಶಾಸ್ತ್ರ") ಅರ್ಥಶಾಸ್ತ್ರದ ಒಂದು ಶಾಖೆಯಾಗಿದ್ದು, ಸಮಗ್ರ ಆರ್ಥಿಕತೆಯ ನಿರ್ವಹಣೆ, ಸ್ವರೂಪ, ವರ್ತನೆ ಹಾಗೂ ತೀರ್ಮಾನ-ತಳೆಯುವಿಕೆಯೊಂದಿಗೆ ಅದು ವ್ಯವಹರಿಸುತ್ತದೆ. ಇಲ್ಲಿ ತಿಳಿಸಿರುವ ಸಮಗ್ರ ಆರ್ಥಿಕತೆಯು ಒಂದು ರಾಷ್ಟ್ರೀಯ, ಪ್ರಾದೇಶಿಕ, ಅಥವಾ ಜಾಗತಿಕ ಆರ್ಥಿಕತೆಯ ಸ್ವರೂಪದಲ್ಲಿರಬಹುದು.[1][2] ವ್ಯಷ್ಟಿ ಅರ್ಥಶಾಸ್ತ್ರದ ಜೊತೆಯಲ್ಲಿ ಸೇರಿಕೊಂಡು ಬೃಹದರ್ಥಶಾಸ್ತ್ರವು ಅರ್ಥಶಾಸ್ತ್ರದಲ್ಲಿನ ಎರಡು ಅತ್ಯಂತ ಸಾರ್ವತ್ರಿಕ ಕ್ಷೇತ್ರಗಳ ಪೈಕಿ ಒಂದೆನಿಸಿಕೊಂಡಿದೆ.

ಬೃಹದರ್ಥಶಾಸ್ತ್ರದಲ್ಲಿನ ಪ್ರಸರಣ
ಅರ್ಥಶಾಸ್ತ್ರ
ವಿಷಯಗಳ ರೂಪರೇಖೆ
ಸಾಮಾನ್ಯ ವರ್ಗೀಕರಣಗಳು

ಸೂಕ್ಷ್ಮ ಅರ್ಥಶಾಸ್ತ್ರ · ಸ್ಥೂಲ ಅರ್ಥಶಾಸ್ತ್ರ
ಆರ್ಥಿಕ ಚಿಂತನೆಯ ಇತಿಹಾಸ
ಕ್ರಮಶಾಸ್ತ್ರ · ಅಸಾಂಪ್ರದಾಯಿಕ ವಿಧಾನಗಳು

ಕಾರ್ಯವಿಧಾನಗಳು

ಗಣಿತ · ಅರ್ಥಶಾಸ್ತ್ರ ಮಾಪನ ಪದ್ಧತಿ
ಪ್ರಾಯೋಗಿಕ · ರಾಷ್ಟ್ರೀಯ ಹಣಕಾಸು ಲೆಕ್ಕ ವ್ಯವಸ್ಥೆ

ಕ್ಷೇತ್ರ ಮತ್ತು ಉಪಕ್ಷೇತ್ರಗಳು

ವರ್ತನೆ · ಸಾಂಸ್ಕೃತಿಕ · ವಿಕಾಸವಾದಿ
ಬೆಳವಣಿಗೆ · ಅಭಿವೃದ್ಧಿ · ಇತಿಹಾಸ
ಅಂತರರಾಷ್ಟ್ರೀಯ · ಆರ್ಥಿಕ ವ್ಯವಸ್ಥೆಗಳು
ವಿತ್ತ ಮತ್ತು ಹಣಕಾಸು
ಸಾರ್ವಜನಿಕ ಮತ್ತು ಸಮಾಜಕಲ್ಯಾಣ ಅರ್ಥಶಾಸ್ತ್ರ
ಆರೋಗ್ಯ · ದುಡಿಮೆ · ನಿರ್ವಾಹಕ
ವ್ಯಾಪಾರ · ಮಾಹಿತಿ · ಕೌಶಲಯುತ ಸಂವಹನ ಸಿದ್ಧಾಂತ
ಔದ್ಯೋಗಿಕ ಸಂಯೋಜನೆ  · ಕಾನೂನು
ಕೃಷಿ · ಪ್ರಾಕೃತಿಕ ಸಂಪತ್ತು
ಪರಿಸರ · ಜೀವಿ ಪರಿಸ್ಥಿತಿ ವಿಜ್ಞಾನ
ನಗರ ಪ್ರದೇಶದ · ಗ್ರಾಮೀಣ · ಪ್ರಾದೇಶಿಕ

ಪಟ್ಟಿಗಳು

ನಿಯತಕಾಲಿಕಗಳು · ಪ್ರಕಟಣೆಗಳು
ವರ್ಗಗಳು · ವಿಷಯಗಳು · ಅರ್ಥಶಾಸ್ತ್ರಜ್ಞರು

ಸಮಗ್ರ ಆರ್ಥಿಕತೆಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, GDP, ನಿರುದ್ಯೋಗದ ಪ್ರಮಾಣಗಳು, ಮತ್ತು ಬೆಲೆ ಸೂಚಿಗಳಂಥ ಒಟ್ಟುಗೂಡಿಸಿದ ಸೂಚಕಗಳನ್ನು ಬೃಹದರ್ಥಶಾಸ್ತ್ರಜ್ಞರು ಅಧ್ಯಯನ ಮಾಡುತ್ತಾರೆ. ಇಂಥ ಅಂಶಗಳ ನಡುವಿನ ಸಂಬಂಧವನ್ನು ವಿವರಿಸುವ ಮಾದರಿಗಳನ್ನು ಬೃಹದರ್ಥಶಾಸ್ತ್ರಜ್ಞರು ಅಭಿವೃದ್ಧಿಪಡಿಸುತ್ತಾರೆ. ಅವುಗಳೆಂದರೆ: ರಾಷ್ಟ್ರೀಯ ಆದಾಯ, ಉತ್ಪನ್ನದ ಪ್ರಮಾಣ, ಬಳಕೆ, ನಿರುದ್ಯೋಗ, ಹಣದುಬ್ಬರ, ಉಳಿತಾಯಗಳು, ಹೂಡಿಕೆ, ಅಂತರಾಷ್ಟ್ರೀಯ ವ್ಯಾಪಾರ ಮತ್ತು ಅಂತರಾಷ್ಟ್ರೀಯ ಹಣಕಾಸು. ಇದಕ್ಕೆ ಪ್ರತಿಯಾಗಿ, ಸಂಸ್ಥೆಗಳು ಮತ್ತು ಬಳಕೆದಾರರಂಥ ಪ್ರತ್ಯೇಕ ಮಧ್ಯವರ್ತಿಗಳ ಕಾರ್ಯವಿಧಾನಗಳ ಮೇಲೆ ವ್ಯಷ್ಟಿ ಅರ್ಥಶಾಸ್ತ್ರವು ಪ್ರಧಾನವಾಗಿ ಗಮನಹರಿಸುತ್ತದೆ, ಮತ್ತು ನಿರ್ದಿಷ್ಟ ಮಾರುಕಟ್ಟೆಗಳಲ್ಲಿನ ಬೆಲೆಗಳು ಮತ್ತು ಪ್ರಮಾಣಗಳನ್ನು ಅವರ ವರ್ತನೆಯು ಹೇಗೆ ನಿರ್ಣಯಿಸುತ್ತದೆ ಎಂಬುದರ ಕಡೆ ಅದು ಗಮನ ಹರಿಸುತ್ತದೆ.

ಬೃಹದರ್ಥಶಾಸ್ತ್ರವು ಒಂದು ಬೃಹತ್‌ ಅಧ್ಯಯನ ಕ್ಷೇತ್ರವಾಗಿದ್ದು, ಸದರಿ ಬೋಧನಾ ಶಾಖೆಯ ಅಥವಾ ಅಧ್ಯಯನ ಕ್ಷೇತ್ರದ ಸಾಂಕೇತಿಕ ಸ್ವರೂಪದಲ್ಲಿರುವ ಎರಡು ಸಂಶೋಧನಾ ವಲಯಗಳು ಅಲ್ಲಿ ಅಸ್ತಿತ್ವದಲ್ಲಿವೆ: ರಾಷ್ಟ್ರೀಯ ಆದಾಯದಲ್ಲಿನ (ವ್ಯಾಪಾರ ಚಕ್ರ) ಅಲ್ಪ-ಕಾಲದ ಏರಿಳಿತಗಳ ಕಾರಣಗಳು ಮತ್ತು ಪರಿಣಾಮಗಳನ್ನು ಅರ್ಥೈಸಿಕೊಳ್ಳುವಲ್ಲಿನ ಪ್ರಯತ್ನ, ಮತ್ತು ದೀರ್ಘ-ಕಾಲದ ಆರ್ಥಿಕ ಬೆಳವಣಿಗೆಯ (ರಾಷ್ಟ್ರೀಯ ಆದಾಯದಲ್ಲಿನ ಹೆಚ್ಚಳಗಳು) ನಿರ್ಣಾಯಕ ಅಂಶಗಳನ್ನು ಅರ್ಥೈಸಿಕೊಳ್ಳುವಲ್ಲಿನ ಪ್ರಯತ್ನ.

ಆರ್ಥಿಕ ನೀತಿ ಮತ್ತು ವ್ಯವಹಾರ ಕಾರ್ಯತಂತ್ರದ ಅಭಿವೃದ್ಧಿ ಹಾಗೂ ಮೌಲ್ಯಮಾಪನದಲ್ಲಿ ನೆರವಾಗಲು ಸರ್ಕಾರಗಳು ಮತ್ತು ಬೃಹತ್‌‌ ಸಂಸ್ಥೆಗಳೆರಡೂ ಬೃಹದಾರ್ಥಿಕ ಮಾದರಿಗಳು ಮತ್ತು ಅವುಗಳ ಮುನ್ಸೂಚನೆಗಳನ್ನು ಬಳಸಿಕೊಳ್ಳುತ್ತವೆ.

ಬೃಹದಾರ್ಥಿಕ ಸಿದ್ಧಾಂತದ ಅಭಿವೃದ್ಧಿ

ನಾರ್ವೆ ದೇಶದ ಅರ್ಥಶಾಸ್ತ್ರಜ್ಞನಾದ ರಾಗ್ನಾರ್‌ ಫ್ರಿಸ್ಕ್‌ ಎಂಬಾತನಿಂದ ೧೯೩೩ರಲ್ಲಿ[3] ಮಾಡಲ್ಪಟ್ಟ "ಬೃಹತ್‌ ವ್ಯವಸ್ಥೆ" ಎಂಬ ಪದದ ಒಂದು ಸದೃಶ ಬಳಕೆಯಿಂದ "ಬೃಹದರ್ಥಶಾಸ್ತ್ರ" ಎಂಬ ಪದವು ಹೊರಹೊಮ್ಮಿದೆ. ಅಷ್ಟೇ ಅಲ್ಲ ಈ ಕ್ಷೇತ್ರದ ವ್ಯಾಪಕ ಅಂಶಗಳ ಪೈಕಿಯ ಅನೇಕ ಅಂಶಗಳನ್ನು ಅರ್ಥೈಸಿಕೊಳ್ಳುವಲ್ಲಿನ ಒಂದು ಪ್ರಯತ್ನವು ಬಹಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ವ್ಯವಹಾರ ಏರಿಳಿತಗಳು ಮತ್ತು ಹಣಕಾಸಿನ ಅರ್ಥಶಾಸ್ತ್ರದ ಮುಂಚಿನ ಅಧ್ಯಯನವನ್ನು ಇದು ಬೆಸೆಯಿತು ಮತ್ತು ವಿಸ್ತರಿಸಿತು.

ಆರ್ಥಿಕ ಚಿಂತನೆಯ ಕುರಿತಾದ ಓರ್ವ ಗಮನಾರ್ಹ ಇತಿಹಾಸಕಾರನಾದ ಮಾರ್ಕ್‌ ಬ್ಲೌಗ್ ಎಂಬಾತ, ತನ್ನ "ಗ್ರೇಟ್‌ ಇಕನಾಮಿಸ್ಟ್ಸ್‌ ಬಿಫೋರ್‌ ಕೇನ್ಸ್‌‌‌: ೧೯೮೬ " ಎಂಬ ಕೃತಿಯಲ್ಲಿ ಈ ಕುರಿತು ವಿಷಯ ಮಂಡಿಸುತ್ತಾ, ಸ್ವೀಡಿಷ್‌ ಅರ್ಥಶಾಸ್ತ್ರಜ್ಞನಾದ ನಟ್‌ ವಿಕ್ಸೆಲ್‌ "ಆಧುನಿಕ ಬೃಹದರ್ಥಶಾಸ್ತ್ರವನ್ನು ಹೆಚ್ಚೂ-ಕಮ್ಮಿ ಸಂಸ್ಥಾಪಿಸಿದ" ಎಂದು ಪ್ರಕಟಪಡಿಸಿದ.

ಸಮಗ್ರ ಅರ್ಥಶಾಸ್ತ್ರ

ಬೃಹದಾರ್ಥಿಕ ಚಿಂತನೆಯ ಪಂಥಗಳು

ಅರ್ಥಶಾಸ್ತ್ರಕ್ಕಿರುವ ಮೂರು ವಿಭಿನ್ನ ಮಾರ್ಗಗಳ ನಡುವೆ ಸಾಂಪ್ರದಾಯಿಕ ವೈಲಕ್ಷಣ್ಯವು ಕಂಡುಬರುತ್ತದೆ: ಕೇನ್ಸೀಯ ಅರ್ಥಶಾಸ್ತ್ರವು ಬೇಡಿಕೆಯ ಮೇಲೆ ಗಮನ ಹರಿಸುತ್ತದೆ; ನವ ಸಾಂಪ್ರದಾಯಿಕ ಅರ್ಥಶಾಸ್ತ್ರವು ವಿವೇಚನಾಶೀಲ ನಿರೀಕ್ಷೆಗಳು ಹಾಗೂ ಪರಿಣಾಮಕಾರಿ ಮಾರುಕಟ್ಟೆಗಳನ್ನು ಆಧರಿಸಿದೆ, ಮತ್ತು ಹೊಸ ಕಲ್ಪನೆಯ ಅರ್ಥಶಾಸ್ತ್ರವು ಹೊಸ ಕಲ್ಪನೆಯ ಮೂಲಕವಿರುವ ದೀರ್ಘ-ಕಾಲದ ಬೆಳವಣಿಗೆಯ ಮೇಲೆ ಗಮನ ಹರಿಸುತ್ತದೆ. ಬೆಲೆಗಳು ಮತ್ತು ವೇತನಗಳು ಆರ್ಥಿಕ ಆಘಾತಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುವುದಿಲ್ಲ ಎಂಬುದನ್ನು ಸಾಮಾನ್ಯವಾಗಿ ವಾದಿಸುವ ಮೂಲಕ, ಸಂಪೂರ್ಣವಾಗಿ ಪರಿಣಾಮಕಾರಿಯಾಗಿರುವುದರ ಕುರಿತಾದ ಮಾರುಕಟ್ಟೆಗಳ ಸಾಮರ್ಥ್ಯಕ್ಕೆ ಕೇನ್ಸೀಯ ಪಂಥದ ಚಿಂತಕರು ಸವಾಲೆಸೆಯುತ್ತಾರೆ. ಇವುಗಳ ಪೈಕಿ ಯಾವುದೇ ದೃಷ್ಟಿಕೋನವೂ ಇತರರ ಅಭಿಪ್ರಾಯವನ್ನು ಸಂಪೂರ್ಣವಾಗಿ ಹೊರಗಿಡಬಲ್ಲಷ್ಟು ವಿಶಿಷ್ಟವಾಗಿ ಪ್ರಮಾಣೀಕರಿಸಲ್ಪಟ್ಟಿಲ್ಲ. ಆದರೆ ಬಹುತೇಕ ಪಂಥಗಳು ಒಂದು ಸೈದ್ಧಾಂತಿಕ ಬುನಾದಿಯಾಗಿ ಒಂದಲ್ಲಾ ಒಂದು ಮಾರ್ಗದ ಮೇಲೆ ಒತ್ತುನೀಡುತ್ತವೆ.

ಕೇನ್ಸೀಯ ಪಂಥದ ಸಂಪ್ರದಾಯ

ಕೇನ್ಸೀಯ ಅರ್ಥಶಾಸ್ತ್ರವು ಜಾನ್‌ ಮೇನಾರ್ಡ್‌ ಕೇನ್ಸ್‌‌‌ ಎಂಬ ಅರ್ಥಶಾಸ್ತ್ರಜ್ಞನಿಂದ ಅತೀವವಾಗಿ ಪ್ರಭಾವಿಸಲ್ಪಟ್ಟ ಒಂದು ವಿದ್ವತ್ಪೂರ್ಣ ಸಿದ್ಧಾಂತವಾಗಿತ್ತು. ನಿರುದ್ಯೋಗ ಮತ್ತು ವ್ಯಾಪಾರ ಚಕ್ರದ ಮಟ್ಟವನ್ನು ವಿವರಿಸಲು ಈ ಅವಧಿಯು ಒಗ್ಗೂಡಿಸಿದ ಬೇಡಿಕೆಯ ಮೇಲೆ ಗಮನಹರಿಸಿತು. ಅಂದರೆ, ವ್ಯಾಪಾರ ಚಕ್ರದ ಏರಿಳಿತಗಳನ್ನು ವಿತ್ತನೀತಿ (ಸನ್ನಿವೇಶದ ಮೇಲೆ ಅವಲಂಬಿಸಿ ಸರ್ಕಾರವು ಹೆಚ್ಚು ಅಥವಾ ಕಡಿಮೆ ಖರ್ಚುಮಾಡುತ್ತದೆ) ಹಾಗೂ ಹಣಕಾಸಿನ ಕಾರ್ಯನೀತಿಯ ಮೂಲಕ ತಗ್ಗಿಸಬೇಕು ಎಂಬುದು ಇದರರ್ಥವಾಗಿತ್ತು. ಮುಂಚಿನ ಕೇನ್ಸೀಯ ಬೃಹದರ್ಥಶಾಸ್ತ್ರವು "ಸಕ್ರಿಯವಾದಿ"ಯಾಗಿದ್ದು, ಬಂಡವಾಳಷಾಹಿ ಆರ್ಥಿಕತೆಯನ್ನು ಸ್ಥಿರಗೊಳಿಸಲು ಕಾರ್ಯನೀತಿಯ ಕ್ರಮಬದ್ಧವಾದ ಬಳಕೆಗೆ ಕರೆಯಿತ್ತರೆ, ಕೇನ್ಸೀಯ ಪಂಥದ ಇನ್ನು ಕೆಲವು ಅನುಯಾಯಿಗಳು ಆದಾಯಗಳ ಕಾರ್ಯನೀತಿಗಳ ಬಳಕೆ ಮಾಡುವುದಕ್ಕೆ ಕರೆನೀಡಿದರು.

ನವ-ಕೇನ್ಸೀಯ ಪಂಥದವರು ಕೇನ್ಸ್‌ನ ಚಿಂತನೆಗಳನ್ನು ನವ ಸಾಂಪ್ರದಾಯಿಕ ಸಂಶ್ಲೇಷಣೆಯಲ್ಲಿನ ನವ ಸಾಂಪ್ರದಾಯಿಕ ಅಂಶಗಳೊಂದಿಗೆ ಸಂಯೋಜಿಸಿದರು. ನವ-ಕೇನ್ಸೀಯ ಪದ್ಧತಿಯ ಪ್ರಭಾವ ತಗ್ಗಿತು ಮತ್ತು ಹೊಸ ಕೇನ್ಸೀಯ ಅರ್ಥಶಾಸ್ತ್ರವನ್ನು ರೂಪಿಸಿದ ಒಂದು ಹೊಸ ಪೀಳಿಗೆಯ ಮಾದರಿಗಳಿಂದ ಅದು ಪಲ್ಲಟಗೊಂಡಿತು. ಹೊಸ ಕೇನ್ಸೀಯ ಅರ್ಥಶಾಸ್ತ್ರವು, ಹೊಸ ಸಾಂಪ್ರದಾಯಿಕ ಅರ್ಥಶಾಸ್ತ್ರಕ್ಕೆ ಭಾಗಶಃ ಪ್ರತಿಕ್ರಿಯೆಯಾಗಿ ಅಭಿವೃದ್ಧಿಗೊಂಡಿತು. ಅಸಂಪೂರ್ಣವಾಗಿರುವ ಮಾರುಕಟ್ಟೆಗಳು ಬೇಡಿಕೆಯ ನಿರ್ವಹಣೆಯನ್ನು ಹೇಗೆ ಸಮರ್ಥಿಸಬಲ್ಲವು ಎಂಬುದನ್ನು ತೋರಿಸುವ ಮೂಲಕ, ಹೊಸ ಕೇನ್ಸೀಯ ತತ್ತ್ವವು ಕೇನ್ಸೀಯ ಅರ್ಥಶಾಸ್ತ್ರಕ್ಕೆ ವ್ಯಷ್ಟಿ ಆರ್ಥಿಕ ತಳಹದಿಗಳನ್ನು ಒದಗಿಸಲು ಶ್ರಮಿಸುತ್ತದೆ.

ಕೇನ್ಸೀಯ ಪಂಥದ ನಂತರದ ಅರ್ಥಶಾಸ್ತ್ರವು ಮುಖ್ಯವಾಹಿನಿಯ ಕೇನ್ಸೀಯ ಅರ್ಥಶಾಸ್ತ್ರಕ್ಕೆ ಸೇರಿದ ಒಂದು ಅಸಮ್ಮತಿಯನ್ನು ಪ್ರತಿನಿಧಿಸುತ್ತದೆ. ದೀರ್ಘಾವಧಿಯದ್ದು ಮಾತ್ರವೇ ಅಲ್ಲದೇ ಅಲ್ಪಾವಧಿಯಲ್ಲಿನ ಬೇಡಿಕೆಯ ಪ್ರಾಮುಖ್ಯತೆಯ ಕಡೆಗೆ, ಮತ್ತು ಬೃಹದರ್ಥಶಾಸ್ತ್ರದಲ್ಲಿನ ಅನಿಶ್ಚಿತತೆ, ನಗದಾಗಿ ಮಾರ್ಪಡಿಸುವಿಕೆಯ ಆದ್ಯತೆ ಮತ್ತು ಐತಿಹಾಸಿಕ ಪ್ರಕ್ರಿಯೆಯ ಪಾತ್ರದ ಕುರಿತು ಇದು ಒತ್ತು ನೀಡುತ್ತದೆ.

ನವ-ಸಾಂಪ್ರದಾಯಿಕ ಸಂಪ್ರದಾಯ

ದಶಕಗಳವರೆಗೆ ಕೇನ್ಸೀಯ ಪಂಥೀಯರು ಹಾಗೂ ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರು ಸ್ವಾಯತ್ತ ಕ್ಷೇತ್ರಗಳಾಗಿ ಒಡೆದುಹೋದರು. ಕೇನ್ಸೀಯ ಪಂಥೀಯರು ಬೃಹದರ್ಥಶಾಸ್ತ್ರದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರು ವ್ಯಷ್ಟಿ ಅರ್ಥಶಾಸ್ತ್ರದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೭೦ರ ದಶಕದಲ್ಲಿ ಹೊಸ ಸಾಂಪ್ರದಾಯಿಕ ಬೃಹದರ್ಥಶಾಸ್ತ್ರವು ವ್ಯಷ್ಟಿ ಅರ್ಥಶಾಸ್ತ್ರದಲ್ಲಿ ತಮ್ಮ ಬೃಹದಾರ್ಥಿಕ ಸಿದ್ಧಾಂತವನ್ನು ಪ್ರತಿಷ್ಠಾಪಿಸಲು ಕೇನ್ಸೀಯ ಪಂಥದ ಅನುಯಾಯಿಗಳಿಗೆ ಸವಾಲೆಸೆಯಿತು. ಬೃಹದರ್ಥಶಾಸ್ತ್ರದ ಈ ಎರಡನೇ ಹಂತದಲ್ಲಿರುವ ಕಾರ್ಯನೀತಿಯ ಪ್ರಮುಖ ವ್ಯತ್ಯಾಸವೇನೆಂದರೆ, ಬಡ್ಡಿದರಗಳು ಮತ್ತು ಹಣದ ಪೂರೈಕೆಯಂಥ ಹಣಕಾಸಿನ ಕಾರ್ಯನೀತಿಯ ಮೇಲಿನ ಒಂದು ಹೆಚ್ಚಳಗೊಂಡ ಗಮನ. ಲ್ಯೂಕಾಸ್‌ ವಿಶ್ಲೇಷಣೆಯೊಂದಿಗೆ ಈ ಪಂಥವು ೧೯೭೦ರ ದಶಕದ ಅವಧಿಯಲ್ಲಿ ಹೊರಹೊಮ್ಮಿತು. ವಿವೇಚನಾಶೀಲ ನಿರೀಕ್ಷೆಗಳನ್ನು ಹೊಸ ಸಾಂಪ್ರದಾಯಿಕ ಬೃಹದರ್ಥಶಾಸ್ತ್ರವು ಆಧರಿಸಿದ್ದು, ಸಮಯ ಮತ್ತು ಅನಿಶ್ಚಿತತೆಯನ್ನು ಪರಿಗಣಿಸುವ ಮೂಲಕ, ಹಾಗೂ ಎಲ್ಲಾ ಮಾರುಕಟ್ಟೆಗಳೂ ಸ್ಫುಟಗೊಳ್ಳುತ್ತಿವೆ ಎಂದು ಪರಿಗಣಿಸುವ ಮೂಲಕ ಆಯ್ಕೆಗಳನ್ನು ಅತ್ಯಂತ ಅನುಕೂಲಕರವಾಗಿ ಅಥವಾ ಪ್ರಶಸ್ತವಾಗಿ ಮಾಡಲಾಗುತ್ತದೆ ಎಂಬುದು ಇದರರ್ಥ. ಹೊಸ ಸಾಂಪ್ರದಾಯಿಕ ಬೃಹದರ್ಥಶಾಸ್ತ್ರವು ಸಾಮಾನ್ಯವಾಗಿ ವಾಸ್ತವಿಕ ವ್ಯಾಪಾರ ಚಕ್ರ ಮಾದರಿಗಳನ್ನು ಆಧರಿಸಿದೆ.

ಮಿಲ್ಟನ್‌ ಫ್ರೀಡ್‌ಮನ್‌ ನೇತೃತ್ವದ ಹಣ ನಿಯಂತ್ರಣ ವಾದವು ಸಮರ್ಥಿಸುವ ಪ್ರಕಾರ ಹಣದುಬ್ಬರವು ಎಲ್ಲ ಸಮಯಗಳಲ್ಲೂ ಮತ್ತು ಎಲ್ಲ ಕಡೆಗಳಲ್ಲೂ ಒಂದು ಹಣಕಾಸಿನ ವಿದ್ಯಮಾನವಾಗಿದೆ. ವಿತ್ತನೀತಿಯು ಖಾಸಗಿ ವಲಯದ "ತುಂಬಿ ದೂಡುವಿಕೆಗೆ" ಕಾರಣವಾಗುತ್ತದೆ ಎಂಬ ಕಾರಣಕ್ಕೆ ಇದು ವಿತ್ತನೀತಿಯನ್ನು ತಿರಸ್ಕರಿಸುತ್ತದೆ. ಇದರ ಜೊತೆಗೆ, ಕೇನ್ಸೀಯ ಅರ್ಥಶಾಸ್ತ್ರದಲ್ಲಿರುವಂತೆ ಸಕ್ರಿಯವಾದ ಬೇಡಿಕೆಯ ನಿರ್ವಹಣೆಯ ವಿಧಾನದಿಂದ ಹಣದುಬ್ಬರವನ್ನಾಗಲೀ ಅಥವಾ ಹಣದುಬ್ಬರವಿಳಿತವನ್ನಾಗಲೀ ಎದುರಿಸಲು ಇದು ಬಯಸುವುದಿಲ್ಲ. ಆದರೆ ಕಾಲಾನಂತರದಲ್ಲಿ ಹಣ ಪೂರೈಕೆಯ ಬೆಳವಣಿಗೆಯ ಪ್ರಮಾಣವನ್ನು ಸ್ಥಿರಗೊಳಿಸುವಂಥ ಹಣಕಾಸಿನ ಕಾರ್ಯನೀತಿಯ ನಿಯಮಗಳ ವಿಧಾನದಿಂದ ಸದರಿ ಸನ್ನಿವೇಶವನ್ನು ಎದುರಿಸಲು ಅದು ಬಯಸುತ್ತದೆ.

ಬೃಹದಾರ್ಥಿಕ ಕಾರ್ಯನೀತಿಗಳು

ಮಹಾನ್‌ ಆರ್ಥಿಕ ಕುಸಿತ ಮತ್ತು ಕೈಗಾರಿಕಾ ಕುಸಿತದಂಥ ಪ್ರಮುಖ ಆರ್ಥಿಕ ಆಘಾತಗಳನ್ನು ತಪ್ಪಿಸುವುದಕ್ಕಾಗಿ ಪ್ರಯತ್ನಿಸಲು, ಆರ್ಥಿಕತೆಯನ್ನು ಸ್ಥಿರಗೊಳಿಸುತ್ತದೆ ಎಂದು ತಾವು ಭರವಸೆಯಿಟ್ಟಿರುವ ಕಾರ್ಯನೀತಿಯ ಬದಲಾವಣೆಗಳ ಮೂಲಕ ಸರ್ಕಾರಗಳು ಹೊಂದಾಣಿಕೆಗಳನ್ನು ಮಾಡುತ್ತವೆ. ಸ್ಥಿರತೆಯನ್ನು ಕಾಪಾಡಿಕೊಂಡು ಬರಲು ಹಾಗೂ ಬೆಳವಣಿಗೆಯನ್ನು ಮುಂದುವರಿಸಿಕೊಂಡು ಹೋಗಲು ಈ ಹೊಂದಾಣಿಕೆಗಳು ಯಶಸ್ವಿಯಾಗುವುದು ಅತ್ಯಗತ್ಯ ಎಂದು ಸರ್ಕಾರಗಳು ನಂಬುತ್ತವೆ. ಈ ಆರ್ಥಿಕ ನಿರ್ವಹಣೆಯು ಎರಡು ಬಗೆಯ ಕಾರ್ಯತಂತ್ರಗಳ ಮೂಲಕ ಸಾಧಿಸಲ್ಪಡುತ್ತದೆ. ಅವೆಂದರೆ:

  • ವಿತ್ತನೀತಿ
  • ಹಣಕಾಸಿನ ಕಾರ್ಯನೀತಿ

ಇವನ್ನೂ ಗಮನಿಸಿ

  • ವ್ಯಷ್ಟಿ ಅರ್ಥಶಾಸ್ತ್ರ
  • ಹಣಕಾಸಿನ ಕಾರ್ಯನೀತಿ
  • ಕೇನ್ಸೀಯ ಅರ್ಥಶಾಸ್ತ್ರ
  • ಆರ್ಥಿಕ ಬೆಳವಣಿಗೆ
  • ವಿತ್ತನೀತಿ
  • ಕ್ರಿಯಾತ್ಮಕ ಸಂಭವನೀಯ ಸಾರ್ವತ್ರಿಕ ಸಮತೋಲನ
  • ಮಾದರಿ (ಬೃಹದರ್ಥಶಾಸ್ತ್ರ)
  • AP ಬೃಹದರ್ಥಶಾಸ್ತ್ರ
  • ಹೊಸ ಕಲ್ಪನೆಯ ಅರ್ಥಶಾಸ್ತ್ರ

ಬೃಹದಾರ್ಥಿಕ ಸಿದ್ಧಾಂತದ ಅಭಿವೃದ್ಧಿಮುಖ್ಯ ಲೇಖನ: History of modern macroeconomic thought ನಾರ್ವೆ ದೇಶದ ಅರ್ಥಶಾಸ್ತ್ರಜ್ಞನಾದ ರಾಗ್ನಾರ್‌ ಫ್ರಿಸ್ಕ್‌ ಎಂಬಾತನಿಂದ ೧೯೩೩ರಲ್ಲಿ[೩] ಮಾಡಲ್ಪಟ್ಟ "ಬೃಹತ್‌ ವ್ಯವಸ್ಥೆ" ಎಂಬ ಪದದ ಒಂದು ಸದೃಶ ಬಳಕೆಯಿಂದ "ಬೃಹದರ್ಥಶಾಸ್ತ್ರ" ಎಂಬ ಪದವು ಹೊರಹೊಮ್ಮಿದೆ. ಅಷ್ಟೇ ಅಲ್ಲ ಈ ಕ್ಷೇತ್ರದ ವ್ಯಾಪಕ ಅಂಶಗಳ ಪೈಕಿಯ ಅನೇಕ ಅಂಶಗಳನ್ನು ಅರ್ಥೈಸಿಕೊಳ್ಳುವಲ್ಲಿನ ಒಂದು ಪ್ರಯತ್ನವು ಬಹಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ವ್ಯವಹಾರ ಏರಿಳಿತಗಳು ಮತ್ತು ಹಣಕಾಸಿನ ಅರ್ಥಶಾಸ್ತ್ರದ ಮುಂಚಿನ ಅಧ್ಯಯನವನ್ನು ಇದು ಬೆಸೆಯಿತು ಮತ್ತು ವಿಸ್ತರಿಸಿತು.

ಆರ್ಥಿಕ ಚಿಂತನೆಯ ಕುರಿತಾದ ಓರ್ವ ಗಮನಾರ್ಹ ಇತಿಹಾಸಕಾರನಾದ ಮಾರ್ಕ್‌ ಬ್ಲೌಗ್ ಎಂಬಾತ, ತನ್ನ "ಗ್ರೇಟ್‌ ಇಕನಾಮಿಸ್ಟ್ಸ್‌ ಬಿಫೋರ್‌ ಕೇನ್ಸ್‌‌‌: ೧೯೮೬ " ಎಂಬ ಕೃತಿಯಲ್ಲಿ ಈ ಕುರಿತು ವಿಷಯ ಮಂಡಿಸುತ್ತಾ, ಸ್ವೀಡಿಷ್‌ ಅರ್ಥಶಾಸ್ತ್ರಜ್ಞನಾದ ನಟ್‌ ವಿಕ್ಸೆಲ್‌ "ಆಧುನಿಕ ಬೃಹದರ್ಥಶಾಸ್ತ್ರವನ್ನು ಹೆಚ್ಚೂ-ಕಮ್ಮಿ ಸಂಸ್ಥಾಪಿಸಿದ" ಎಂದು ಪ್ರಕಟಪಡಿಸಿದ.

ಸಮಗ್ರ ಅರ್ಥಶಾಸ್ತ್ರ

[ಬದಲಾಯಿಸಿ] ಬೃಹದಾರ್ಥಿಕ ಚಿಂತನೆಯ ಪಂಥಗಳುಅರ್ಥಶಾಸ್ತ್ರಕ್ಕಿರುವ ಮೂರು ವಿಭಿನ್ನ ಮಾರ್ಗಗಳ ನಡುವೆ ಸಾಂಪ್ರದಾಯಿಕ ವೈಲಕ್ಷಣ್ಯವು ಕಂಡುಬರುತ್ತದೆ: ಕೇನ್ಸೀಯ ಅರ್ಥಶಾಸ್ತ್ರವು ಬೇಡಿಕೆಯ ಮೇಲೆ ಗಮನ ಹರಿಸುತ್ತದೆ; ನವ ಸಾಂಪ್ರದಾಯಿಕ ಅರ್ಥಶಾಸ್ತ್ರವು ವಿವೇಚನಾಶೀಲ ನಿರೀಕ್ಷೆಗಳು ಹಾಗೂ ಪರಿಣಾಮಕಾರಿ ಮಾರುಕಟ್ಟೆಗಳನ್ನು ಆಧರಿಸಿದೆ, ಮತ್ತು ಹೊಸ ಕಲ್ಪನೆಯ ಅರ್ಥಶಾಸ್ತ್ರವು ಹೊಸ ಕಲ್ಪನೆಯ ಮೂಲಕವಿರುವ ದೀರ್ಘ-ಕಾಲದ ಬೆಳವಣಿಗೆಯ ಮೇಲೆ ಗಮನ ಹರಿಸುತ್ತದೆ. ಬೆಲೆಗಳು ಮತ್ತು ವೇತನಗಳು ಆರ್ಥಿಕ ಆಘಾತಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುವುದಿಲ್ಲ ಎಂಬುದನ್ನು ಸಾಮಾನ್ಯವಾಗಿ ವಾದಿಸುವ ಮೂಲಕ, ಸಂಪೂರ್ಣವಾಗಿ ಪರಿಣಾಮಕಾರಿಯಾಗಿರುವುದರ ಕುರಿತಾದ ಮಾರುಕಟ್ಟೆಗಳ ಸಾಮರ್ಥ್ಯಕ್ಕೆ ಕೇನ್ಸೀಯ ಪಂಥದ ಚಿಂತಕರು ಸವಾಲೆಸೆಯುತ್ತಾರೆ. ಇವುಗಳ ಪೈಕಿ ಯಾವುದೇ ದೃಷ್ಟಿಕೋನವೂ ಇತರರ ಅಭಿಪ್ರಾಯವನ್ನು ಸಂಪೂರ್ಣವಾಗಿ ಹೊರಗಿಡಬಲ್ಲಷ್ಟು ವಿಶಿಷ್ಟವಾಗಿ ಪ್ರಮಾಣೀಕರಿಸಲ್ಪಟ್ಟಿಲ್ಲ. ಆದರೆ ಬಹುತೇಕ ಪಂಥಗಳು ಒಂದು ಸೈದ್ಧಾಂತಿಕ ಬುನಾದಿಯಾಗಿ ಒಂದಲ್ಲಾ ಒಂದು ಮಾರ್ಗದ ಮೇಲೆ ಒತ್ತುನೀಡುತ್ತವೆ.

[ಬದಲಾಯಿಸಿ] ಕೇನ್ಸೀಯ ಪಂಥದ ಸಂಪ್ರದಾಯಕೇನ್ಸೀಯ ಅರ್ಥಶಾಸ್ತ್ರವು ಜಾನ್‌ ಮೇನಾರ್ಡ್‌ ಕೇನ್ಸ್‌‌‌ ಎಂಬ ಅರ್ಥಶಾಸ್ತ್ರಜ್ಞನಿಂದ ಅತೀವವಾಗಿ ಪ್ರಭಾವಿಸಲ್ಪಟ್ಟ ಒಂದು ವಿದ್ವತ್ಪೂರ್ಣ ಸಿದ್ಧಾಂತವಾಗಿತ್ತು. ನಿರುದ್ಯೋಗ ಮತ್ತು ವ್ಯಾಪಾರ ಚಕ್ರದ ಮಟ್ಟವನ್ನು ವಿವರಿಸಲು ಈ ಅವಧಿಯು ಒಗ್ಗೂಡಿಸಿದ ಬೇಡಿಕೆಯ ಮೇಲೆ ಗಮನಹರಿಸಿತು. ಅಂದರೆ, ವ್ಯಾಪಾರ ಚಕ್ರದ ಏರಿಳಿತಗಳನ್ನು ವಿತ್ತನೀತಿ (ಸನ್ನಿವೇಶದ ಮೇಲೆ ಅವಲಂಬಿಸಿ ಸರ್ಕಾರವು ಹೆಚ್ಚು ಅಥವಾ ಕಡಿಮೆ ಖರ್ಚುಮಾಡುತ್ತದೆ) ಹಾಗೂ ಹಣಕಾಸಿನ ಕಾರ್ಯನೀತಿಯ ಮೂಲಕ ತಗ್ಗಿಸಬೇಕು ಎಂಬುದು ಇದರರ್ಥವಾಗಿತ್ತು. ಮುಂಚಿನ ಕೇನ್ಸೀಯ ಬೃಹದರ್ಥಶಾಸ್ತ್ರವು "ಸಕ್ರಿಯವಾದಿ"ಯಾಗಿದ್ದು, ಬಂಡವಾಳಷಾಹಿ ಆರ್ಥಿಕತೆಯನ್ನು ಸ್ಥಿರಗೊಳಿಸಲು ಕಾರ್ಯನೀತಿಯ ಕ್ರಮಬದ್ಧವಾದ ಬಳಕೆಗೆ ಕರೆಯಿತ್ತರೆ, ಕೇನ್ಸೀಯ ಪಂಥದ ಇನ್ನು ಕೆಲವು ಅನುಯಾಯಿಗಳು ಆದಾಯಗಳ ಕಾರ್ಯನೀತಿಗಳ ಬಳಕೆ ಮಾಡುವುದಕ್ಕೆ ಕರೆನೀಡಿದರು.

ನವ-ಕೇನ್ಸೀಯ ಪಂಥದವರು ಕೇನ್ಸ್‌ನ ಚಿಂತನೆಗಳನ್ನು ನವ ಸಾಂಪ್ರದಾಯಿಕ ಸಂಶ್ಲೇಷಣೆಯಲ್ಲಿನ ನವ ಸಾಂಪ್ರದಾಯಿಕ ಅಂಶಗಳೊಂದಿಗೆ ಸಂಯೋಜಿಸಿದರು. ನವ-ಕೇನ್ಸೀಯ ಪದ್ಧತಿಯ ಪ್ರಭಾವ ತಗ್ಗಿತು ಮತ್ತು ಹೊಸ ಕೇನ್ಸೀಯ ಅರ್ಥಶಾಸ್ತ್ರವನ್ನು ರೂಪಿಸಿದ ಒಂದು ಹೊಸ ಪೀಳಿಗೆಯ ಮಾದರಿಗಳಿಂದ ಅದು ಪಲ್ಲಟಗೊಂಡಿತು. ಹೊಸ ಕೇನ್ಸೀಯ ಅರ್ಥಶಾಸ್ತ್ರವು, ಹೊಸ ಸಾಂಪ್ರದಾಯಿಕ ಅರ್ಥಶಾಸ್ತ್ರಕ್ಕೆ ಭಾಗಶಃ ಪ್ರತಿಕ್ರಿಯೆಯಾಗಿ ಅಭಿವೃದ್ಧಿಗೊಂಡಿತು. ಅಸಂಪೂರ್ಣವಾಗಿರುವ ಮಾರುಕಟ್ಟೆಗಳು ಬೇಡಿಕೆಯ ನಿರ್ವಹಣೆಯನ್ನು ಹೇಗೆ ಸಮರ್ಥಿಸಬಲ್ಲವು ಎಂಬುದನ್ನು ತೋರಿಸುವ ಮೂಲಕ, ಹೊಸ ಕೇನ್ಸೀಯ ತತ್ತ್ವವು ಕೇನ್ಸೀಯ ಅರ್ಥಶಾಸ್ತ್ರಕ್ಕೆ ವ್ಯಷ್ಟಿ ಆರ್ಥಿಕ ತಳಹದಿಗಳನ್ನು ಒದಗಿಸಲು ಶ್ರಮಿಸುತ್ತದೆ.

ಕೇನ್ಸೀಯ ಪಂಥದ ನಂತರದ ಅರ್ಥಶಾಸ್ತ್ರವು ಮುಖ್ಯವಾಹಿನಿಯ ಕೇನ್ಸೀಯ ಅರ್ಥಶಾಸ್ತ್ರಕ್ಕೆ ಸೇರಿದ ಒಂದು ಅಸಮ್ಮತಿಯನ್ನು ಪ್ರತಿನಿಧಿಸುತ್ತದೆ. ದೀರ್ಘಾವಧಿಯದ್ದು ಮಾತ್ರವೇ ಅಲ್ಲದೇ ಅಲ್ಪಾವಧಿಯಲ್ಲಿನ ಬೇಡಿಕೆಯ ಪ್ರಾಮುಖ್ಯತೆಯ ಕಡೆಗೆ, ಮತ್ತು ಬೃಹದರ್ಥಶಾಸ್ತ್ರದಲ್ಲಿನ ಅನಿಶ್ಚಿತತೆ, ನಗದಾಗಿ ಮಾರ್ಪಡಿಸುವಿಕೆಯ ಆದ್ಯತೆ ಮತ್ತು ಐತಿಹಾಸಿಕ ಪ್ರಕ್ರಿಯೆಯ ಪಾತ್ರದ ಕುರಿತು ಇದು ಒತ್ತು ನೀಡುತ್ತದೆ.

[ಬದಲಾಯಿಸಿ] ನವ-ಸಾಂಪ್ರದಾಯಿಕ ಸಂಪ್ರದಾಯದಶಕಗಳವರೆಗೆ ಕೇನ್ಸೀಯ ಪಂಥೀಯರು ಹಾಗೂ ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರು ಸ್ವಾಯತ್ತ ಕ್ಷೇತ್ರಗಳಾಗಿ ಒಡೆದುಹೋದರು. ಕೇನ್ಸೀಯ ಪಂಥೀಯರು ಬೃಹದರ್ಥಶಾಸ್ತ್ರದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರು ವ್ಯಷ್ಟಿ ಅರ್ಥಶಾಸ್ತ್ರದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೭೦ರ ದಶಕದಲ್ಲಿ ಹೊಸ ಸಾಂಪ್ರದಾಯಿಕ ಬೃಹದರ್ಥಶಾಸ್ತ್ರವು ವ್ಯಷ್ಟಿ ಅರ್ಥಶಾಸ್ತ್ರದಲ್ಲಿ ತಮ್ಮ ಬೃಹದಾರ್ಥಿಕ ಸಿದ್ಧಾಂತವನ್ನು ಪ್ರತಿಷ್ಠಾಪಿಸಲು ಕೇನ್ಸೀಯ ಪಂಥದ ಅನುಯಾಯಿಗಳಿಗೆ ಸವಾಲೆಸೆಯಿತು. ಬೃಹದರ್ಥಶಾಸ್ತ್ರದ ಈ ಎರಡನೇ ಹಂತದಲ್ಲಿರುವ ಕಾರ್ಯನೀತಿಯ ಪ್ರಮುಖ ವ್ಯತ್ಯಾಸವೇನೆಂದರೆ, ಬಡ್ಡಿದರಗಳು ಮತ್ತು ಹಣದ ಪೂರೈಕೆಯಂಥ ಹಣಕಾಸಿನ ಕಾರ್ಯನೀತಿಯ ಮೇಲಿನ ಒಂದು ಹೆಚ್ಚಳಗೊಂಡ ಗಮನ. ಲ್ಯೂಕಾಸ್‌ ವಿಶ್ಲೇಷಣೆಯೊಂದಿಗೆ ಈ ಪಂಥವು ೧೯೭೦ರ ದಶಕದ ಅವಧಿಯಲ್ಲಿ ಹೊರಹೊಮ್ಮಿತು. ವಿವೇಚನಾಶೀಲ ನಿರೀಕ್ಷೆಗಳನ್ನು ಹೊಸ ಸಾಂಪ್ರದಾಯಿಕ ಬೃಹದರ್ಥಶಾಸ್ತ್ರವು ಆಧರಿಸಿದ್ದು, ಸಮಯ ಮತ್ತು ಅನಿಶ್ಚಿತತೆಯನ್ನು ಪರಿಗಣಿಸುವ ಮೂಲಕ, ಹಾಗೂ ಎಲ್ಲಾ ಮಾರುಕಟ್ಟೆಗಳೂ ಸ್ಫುಟಗೊಳ್ಳುತ್ತಿವೆ ಎಂದು ಪರಿಗಣಿಸುವ ಮೂಲಕ ಆಯ್ಕೆಗಳನ್ನು ಅತ್ಯಂತ ಅನುಕೂಲಕರವಾಗಿ ಅಥವಾ ಪ್ರಶಸ್ತವಾಗಿ ಮಾಡಲಾಗುತ್ತದೆ ಎಂಬುದು ಇದರರ್ಥ. ಹೊಸ ಸಾಂಪ್ರದಾಯಿಕ ಬೃಹದರ್ಥಶಾಸ್ತ್ರವು ಸಾಮಾನ್ಯವಾಗಿ ವಾಸ್ತವಿಕ ವ್ಯಾಪಾರ ಚಕ್ರ ಮಾದರಿಗಳನ್ನು ಆಧರಿಸಿದೆ.

ಮಿಲ್ಟನ್‌ ಫ್ರೀಡ್‌ಮನ್‌ ನೇತೃತ್ವದ ಹಣ ನಿಯಂತ್ರಣ ವಾದವು ಸಮರ್ಥಿಸುವ ಪ್ರಕಾರ ಹಣದುಬ್ಬರವು ಎಲ್ಲ ಸಮಯಗಳಲ್ಲೂ ಮತ್ತು ಎಲ್ಲ ಕಡೆಗಳಲ್ಲೂ ಒಂದು ಹಣಕಾಸಿನ ವಿದ್ಯಮಾನವಾಗಿದೆ. ವಿತ್ತನೀತಿಯು ಖಾಸಗಿ ವಲಯದ "ತುಂಬಿ ದೂಡುವಿಕೆಗೆ" ಕಾರಣವಾಗುತ್ತದೆ ಎಂಬ ಕಾರಣಕ್ಕೆ ಇದು ವಿತ್ತನೀತಿಯನ್ನು ತಿರಸ್ಕರಿಸುತ್ತದೆ. ಇದರ ಜೊತೆಗೆ, ಕೇನ್ಸೀಯ ಅರ್ಥಶಾಸ್ತ್ರದಲ್ಲಿರುವಂತೆ ಸಕ್ರಿಯವಾದ ಬೇಡಿಕೆಯ ನಿರ್ವಹಣೆಯ ವಿಧಾನದಿಂದ ಹಣದುಬ್ಬರವನ್ನಾಗಲೀ ಅಥವಾ ಹಣದುಬ್ಬರವಿಳಿತವನ್ನಾಗಲೀ ಎದುರಿಸಲು ಇದು ಬಯಸುವುದಿಲ್ಲ. ಆದರೆ ಕಾಲಾನಂತರದಲ್ಲಿ ಹಣ ಪೂರೈಕೆಯ ಬೆಳವಣಿಗೆಯ ಪ್ರಮಾಣವನ್ನು ಸ್ಥಿರಗೊಳಿಸುವಂಥ ಹಣಕಾಸಿನ ಕಾರ್ಯನೀತಿಯ ನಿಯಮಗಳ ವಿಧಾನದಿಂದ ಸದರಿ ಸನ್ನಿವೇಶವನ್ನು ಎದುರಿಸಲು ಅದು ಬಯಸುತ್ತದೆ.

[ಬದಲಾಯಿಸಿ] ಬೃಹದಾರ್ಥಿಕ ಕಾರ್ಯನೀತಿಗಳುಮಹಾನ್‌ ಆರ್ಥಿಕ ಕುಸಿತ ಮತ್ತು ಕೈಗಾರಿಕಾ ಕುಸಿತದಂಥ ಪ್ರಮುಖ ಆರ್ಥಿಕ ಆಘಾತಗಳನ್ನು ತಪ್ಪಿಸುವುದಕ್ಕಾಗಿ ಪ್ರಯತ್ನಿಸಲು, ಆರ್ಥಿಕತೆಯನ್ನು ಸ್ಥಿರಗೊಳಿಸುತ್ತದೆ ಎಂದು ತಾವು ಭರವಸೆಯಿಟ್ಟಿರುವ ಕಾರ್ಯನೀತಿಯ ಬದಲಾವಣೆಗಳ ಮೂಲಕ ಸರ್ಕಾರಗಳು ಹೊಂದಾಣಿಕೆಗಳನ್ನು ಮಾಡುತ್ತವೆ. ಸ್ಥಿರತೆಯನ್ನು ಕಾಪಾಡಿಕೊಂಡು ಬರಲು ಹಾಗೂ ಬೆಳವಣಿಗೆಯನ್ನು ಮುಂದುವರಿಸಿಕೊಂಡು ಹೋಗಲು ಈ ಹೊಂದಾಣಿಕೆಗಳು ಯಶಸ್ವಿಯಾಗುವುದು ಅತ್ಯಗತ್ಯ ಎಂದು ಸರ್ಕಾರಗಳು ನಂಬುತ್ತವೆ. ಈ ಆರ್ಥಿಕ ನಿರ್ವಹಣೆಯು ಎರಡು ಬಗೆಯ ಕಾರ್ಯತಂತ್ರಗಳ ಮೂಲಕ ಸಾಧಿಸಲ್ಪಡುತ್ತದೆ. ಅವೆಂದರೆ:

ಟಿಪ್ಪಣಿಗಳು

  1. Blaug, Mark (1985). Economic theory in retrospect. Cambridge, UK: Cambridge University Press. ISBN 0-521-31644-8.
  2. Sullivan, Arthur (2003). Economics: Principles in action. Upper Saddle River, New Jersey 07458: Pearson Prentice Hall. p. 57. ISBN 0-13-063085-3. Unknown parameter |coauthors= ignored (|author= suggested) (help)
  3. Frisch, Ragnar (1933). Propagation Problems and Impulse Problems in Dynamic Economics. London: Allen & Unwin.

ಆಕರಗಳು

  • [9].
  • ಬ್ಲೌಗ್‌‌, ಮಾರ್ಕ್‌ (೧೯೮೬), ಗ್ರೇಟ್‌ ಇಕನಾಮಿಸ್ಟ್ಸ್‌ ಬಿಫೋರ್‌ ಕೇನ್ಸ್‌‌‌ , ಬ್ರೈಟನ್‌: ವೀಟ್‌ಶೀಫ್‌.
  • [10].
  • Heijdra, B. J. (2002), Foundations of Modern Macroeconomics, Oxford University Press, ISBN 0-19-877617-9 Unknown parameter |coauthors= ignored (|author= suggested) (help).
  • Mishkin, Frederic S. (2004), The Economics of Money, Banking, and Financial Markets, Boston: Addison-Wesley, p. 517
  • Snowdon, Brian (2005), Modern Macroeconomics: Its Origins, Development And Current State, Edward Elgar Publishing, ISBN 1-84376-394-X Unknown parameter |coauthors= ignored (|author= suggested) (help).
  • Gärtner, Manfred (2006), Macroeconomics, Pearson Education Limited, ISBN 978-0-273-70460-7.
  • [15].
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.