ಪ್ರಾಣಿಶಾಸ್ತ್ರ

ಪ್ರಾಣಿಶಾಸ್ತ್ರ ಜೀವಶಾಸ್ತ್ರದಲ್ಲಿ ಪ್ರಾಣಿಗಳನ್ನು ಅಧ್ಯಯನ ಮಾಡುವ ವಿಧಾನ.

ಇತಿಹಾಸ

೧೮೫೯ರಲ್ಲಿ ಪ್ರಕಟವಾದ ಚಾರ್ಲ್ಸ್ ಡಾರ್ವಿನ್ಆನ್ ದ ಆರಿಜಿನ್ ಆಫ್ ಸ್ಪೀಷೀಸ್ ಪುಸ್ತಕದ ಮುಖಪುಟ

ಇತಿಹಾಸ ಪೂರ್ವದಿಂದಲೂ ಮನುಜರು ಪ್ರಾಯಶಃ ಪ್ರಾಣಿಗಳ ಬಗ್ಗೆ ಅನೌಪಚಾರಿಕವಾಗಿ ಅಧ್ಯಯನದಲ್ಲಿ ತೊಡಗಿದ್ದರು. ಪ್ರಾಣಿಗಳು ಮನೆ ಮತ್ತು ಕಾಯಕಗಳಲ್ಲಿ ಉಪಯೋಗಿಸಲ್ಪಡುತ್ತಿದ್ದವು, ಆಹಾರಕ್ಕಾಗಿ ಬಳಸಲ್ಪಡುತ್ತಿದ್ದವು, ಹಾಗು ಅನೇಕ ರೋಗ-ರುಜಿನಗಳ ಕಾರಣೀಭೂತವಾಗಿದ್ದವು. ಇವೆಲ್ಲದರಿಂದ ಪ್ರಾಣಿಗಳ ಬಗ್ಗೆ ತಿಳಿಯುವುದು ಅವಶ್ಯಕವಾಗಿತ್ತು. ಈ ರೀತಿ ಪಡೆದ ಜ್ಞಾನ ಅನೇಕ ಸಂಸ್ಕೃತಿಗಳಲ್ಲಿ ಸಾಂಪ್ರದಾಯಿಕವಾಗಿ ಮುಂದಿನ ಜನಾಂಗಗಳಿಗೆ ನೀಡಲಾಗುತ್ತಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನವು ಬೆಳೆದಂತೆ ಅವುಗಳ ವಿಧಾನಕ್ರಮಗಳು ಪ್ರಾಣಿಶಾಸ್ತ್ರದಲ್ಲೂ ಬಳಕೆಗೆ ಬರತೊಡಗಿತು. ಮೊದಮೊದಲು ಪ್ರಾಣಿಗಳ ರಚನೆಗಳನ್ನು ವಿವರವಾಗಿ ಅಧ್ಯಯನ ಮಾಡಲಾಗುತ್ತಿತ್ತು. ೧೮೫೯ರಲ್ಲಿ ಚಾರ್ಲ್ಸ್ ಡಾರ್ವಿನ್ ತನ್ನ್ ಜೀವವಿಕಾಸವಾದವನ್ನು ಮಂಡಿಸಿದ್ದು ಇಡೀ ಜೀವಶಾಸ್ತ್ರದಲ್ಲಿ ದೊಡ್ಡ ಕ್ರಾಂತಿಯನ್ನು ತಂದಿತು. ತದನಂತರ ಪ್ರಾಣಿಶಾಸ್ತ್ರದ ಅಧ್ಯಯನ ಈ ವಾದವು ಸೃಷ್ಟಿಸಿದ ರೂಪುರೇಖೆಗಳಡಿಯಲ್ಲಿ ಸಂಯೋಜಿಸಲ್ಪಡತೊಡಗಿತು.

ಉಪವಿಭಾಗಗಳು

  • ಜೀವರಚನಶಾಸ್ತ್ರದಲ್ಲಿ (Anatomy) ಪ್ರಾಣಿಗಳ ಅಂಗಗಳ ಮತ್ತು ದೇಹಗಳ ರಚನೆಯನ್ನು ಅಧ್ಯಯನಿಸಲಾಗುತ್ತದೆ.
  • ಜೀವವಿಕಾಸಶಾಸ್ತ್ರದಲ್ಲಿ (Evolutionary biology) ಪ್ರಾಣಿಗಳ ಐತಿಹಾಸಿಕ ವಿಕಾಸವನ್ನು ಅಧ್ಯಯನಿಸಲಾಗುತ್ತದೆ.
  • ಪುರಾತನಜೀವಶಾಸ್ತ್ರದಲ್ಲಿ (Paleontology) ಇತಿಹಾಸದಲ್ಲಿ ಅಳಿದುಹೋದ ಪ್ರಾಣಿ ಪ್ರಬೇಧಗಳನ್ನು ಅಧ್ಯಯನಿಸಲಾಗುತ್ತದೆ.
  • ಜೀವವಿಂಗಡಣಾಶಾಸ್ತ್ರದಲ್ಲಿ (Taxonomy) ಪ್ರಸಕ್ತ ಮತ್ತು ಅಳಿದುಹೋದ ಪ್ರಾಣಿಗಳನ್ನು ಕ್ರಮವಾಗಿ ಸಂಯೋಜಿಸಲಾಗುತ್ತದೆ.
  • ಪ್ರಾಣಿವರ್ತನಾಶಾಸ್ತ್ರದಲ್ಲಿ (Ethology) ಪ್ರಾಣಿಗಳ ನಡವಳಕೆ, ವರ್ತನೆಗಳನ್ನು ಅಧ್ಯಯನಿಸಲಾಗುತ್ತದೆ.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.