ಪ್ರಾಕೃತ

ಪ್ರಾಕೃತವು ಸಂಸ್ಕೃತದ ಮೊದಲಿನ ರೂಪ ಎಂದೂ ಶುದ್ಧ ರೂಪ ಹೊಂದಿ ಸಂಸ್ಕಾರ ಪಡೆದು ಸಂಸ್ಕೃತವಾಯಿತೆಂದು ಒಂದು ಅಭಿಪ್ರಾಯವಾದರೆ ಪ್ರಾಕೃತವು ಸಂಸ್ಕೃತದ ಪ್ರಾಂತೀಯ ರೂಪ ಎಂದು ಹೇಳುತ್ತಾರೆ. ಆರ್ಯಾವರ್ತದ ಅಂದಿನ ಭಾಗಗಳಾದ ಶೂರಸೇನ ( ದಿಲ್ಲಿ, ಆಗ್ರಾ, ಮಥುರಾ ಸುತ್ತುಮುತ್ತಲಿನ ಪ್ರದೇಶ) , ಪಿಶಾಚ ( ಪಂಜಾಬದ ಉತ್ತರ ಭಾಗ ಮತ್ತು ವಾಯುವ್ಯ ಗಡಿನಾಡು ಪ್ರಾಂತ) , ಮಗಧ ( ಬಿಹಾರ ಮತ್ತು ಬಂಗಾಲ) ಮತ್ತು ಮಹಾರಾಷ್ಟ್ರ (ನರ್ಮದಾ ನದಿಯ ದಕ್ಷಿಣ ಭಾಗ) ಗಳಲ್ಲಿನ ಪ್ರಾಂತೀಯ ಭೇದಗಳೇ ಶೌರಸೇನೀ , ಪೈಶಾಚೀ, ಮಾಗಧೀ ಮತ್ತು ಮಹಾರಾಷ್ಟ್ರೀಯ ಪ್ರಾಕೃತ ಭಾಷೆಗಳು. ಇವು ನಾಲ್ಕು ಮುಖ್ಯ ಪ್ರಾಕೃತ ಭೇದಗಳು. ಅರ್ಧಮಾಗಧಿಯು ಮಾಗಧೀ ಭಾಷೆಯ ಅರ್ಧದಷ್ಟು ಲಕ್ಷಣಗಳನ್ನು ಹೊಂದಿದೆ. ಅದರ ಮೇಲೆ ಮಹಾರಾಷ್ಟ್ರೀಯ ಪ್ರಾಕೃತಭಾಷೆಯ ಪ್ರಭಾವ ಹೆಚ್ಚಾಗಿ ಇದೆ. ಇದಕ್ಕೆ ಮಗಧದ ಚಕ್ರವರ್ತಿಯಾದ ಮೌರ್ಯ ಚಂದ್ರಗುಪ್ತನು ತನ್ನ ಕೊನೆಗಾಲಕ್ಕೆ ಜೈನಸಾಧುಗಳೊಂದಿಗೆ ಜೈನಧರ್ಮಪ್ರಚಾರಕ್ಕೆಂದು ದಕ್ಷಿಣದ ಶ್ರವಣಬೆಳಗೊಳಕ್ಕೆ ಬಂದುದು ಕಾರಣ ಇರಬಹುದು.

ಈ ಪ್ರಾಕೃತ ಭಾಷೆಗಳು ಸುಮಾರು ೨೦೦೦ ವರ್ಷಗಳ ಹಿಂದೆ ರೂಪಗೊಂಡವು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.