ಪೂರ್ವ ಏಷ್ಯಾ
ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ಎಶಿಯಾ ಖಂಡದ ಪೂರ್ವ ಭಾಗವನ್ನು ಪೂರ್ವ ಎಶಿಯಾ ಎಂದು ವಿಂಗಡಿಸಬಹುದು. ಭೌಗೋಳಿಕವಾಗಿ ಇದು ,೬೪೦,೦೦೦ ಚದರ ಕಿಲೋ ಮೀಟರು ಅಥವಾ ಎಶಿಯಾ ಖಂಡದ ಶೇಕಡಾ ೧೫ರಷ್ಟು ವಿಶಾಲವಾಗಿದೆ. ಸಾಂಸೃತಿಕವಾಗಿ, ಚೀನಾ ಪ್ರದೇಶದ ಸಂಸ್ಕೃತಿ ಮತ್ತು ಭಾಷೆಯ ಪ್ರಭಾವಕ್ಕೆ ಒಳಗಾದ ಹಲವು ರಾಜ್ಯ/ಸಮಾಜಗಳನ್ನು ಒಳಗೊಂಡಿದೆ. ಕನ್‍ಫ್ಯೂಶಿಯನಿಸಂ, ಮಹಾಯಾನ ಬೌಧ್ಧ ಪರಂಪರೆ, ಮತ್ತು ದಾವೋ ಪಂಥಗಳು ಈ ಭಾಗದಲ್ಲಿ ಪ್ರಭಾವಶಾಲಿಯಾಗಿವೆ.

ಪೂರ್ವ ಎಶಿಯಾದ ಭೌಗೋಳಿಕ ಚಿತ್ರ
ಭೌಗೋಳಿಕವಾಗಿ ಈ ಕೆಳಗಿನ ದೇಶಗಳು ಪೂರ್ವ ಎಶಿಯಾದ ಭಾಗಗಳಾಗಿವೆ:
- ಚೀನಿ ಜನ ಗಣರಾಜ್ಯ
- ತೈವಾನ್ (ಚೀನಿ ಗಣರಾಜ್ಯ)
- ಉತ್ತರ ಕೊರಿಯಾ
- ದಕ್ಷಿಣ ಕೊರಿಯಾ
- ಜಪಾನ್
- ಮಂಗೋಲಿಯಾ
೧.೫ ಬಿಲಿಯಕ್ಕೂ ಹೆಚ್ಚು ಜನಸಂಖ್ಯೆಯನ್ನು (ಪ್ರಪಂಚದ ೧/೪ ಭಾಗ ಅಥವಾ ಎಶಿಯಾದ ೪೦%) ಈ ಪ್ರದೇಶ ಹೊಂದಿದೆ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.