ಪಿಯಾನೋ

ಈ ಲೇಖನವು ಪಿಯಾನೋ ಸಂಗೀತವಾದ್ಯದ ಬಗ್ಗೆ ಮಾಹಿತಿ ನೀಡುತ್ತದೆ, ಪಿಯಾನೋ ಸಂಗೀತಶೈಲಿಯ ಮಾಹಿತಿಗೆ - ಪಿಯಾನೋ ಸಂಗೀತಶೈಲಿಗೆ ಭೇಟಿಕೊಡಿ

ಪಿಯಾನೋ

ಪಿಯಾನೋ ಕೀಲಿಮಣೆಗಳನ್ನು ಹೊಂದಿದ ದೊಡ್ಡ ಸಂಗೀತವಾದ್ಯ. ಪಿಯಾನೋ ಎಂದರೆ, ಪಿಯಾನೋ ಫೋರ್ಟೆ ಎಂಬ ಇಟಾಲಿಯನ್ಪದದ ಮೃದು ಶಬ್ದ ಎಂಬರ್ಥ ಕೊಡುವ ಪದ. ಭಾರತದಲ್ಲಿ ಪ್ರಸಿದ್ಧವಾದ ಹಾರ್ಮೋನಿಯಂನಂತೆ ಇದರ ಕೀಲಿಗಳನ್ನು ಲಯಬದ್ದವಾಗಿ ಒತ್ತುವ ಮೂಲಕ ಸಂಗೀತ ರಚನೆ ಮಾಡಬಹುದು.

ಪಿಯಾನೋವನ್ನು ಇಟಲಿದೇಶದ ಫ್ಲಾರೆನ್ಸ್ ನಗರದ ಬಾರ್ತಲೋಮ್ಯು ಕ್ರಿಸ್ಟೋಫರಿಯವರು ಕಂಡು ಹಿಡಿದರು. ನಿಖರವಾದ ಸಮಯವು ತಿಳಿದಿಲ್ಲವಾದರೂ ೧೭೦೦ ನೆಯ ಸುಮಾರಿಗೆ ಇದರ ಅವಿಷ್ಕಾರವಾಯಿತೆಂದು ಇತಿಹಾಸಕಾರರು ಹೇಳುತ್ತಾರೆ.

ಬಾಹ್ಯ ಸಂಪರ್ಕಗಳು


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.