ಧಾರ್ಮಿಕ ಗ್ರಂಥಗಳು

ಬಹುತೇಕ ಧರ್ಮಗಳಲ್ಲಿ ಕೆಲವು ಗ್ರಂಥಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಗ್ರಂಥಗಳನ್ನು ಕೆಲವು ಧರ್ಮಗಳು ದೈವಪ್ರೇರಿತವೆಂದು ಭಾವಿಸಿದೆರೆ, ಇನ್ನು ಕೆಲವು ಏಕೀಶ್ವರಾವಾದಿ ಧರ್ಮಗಳು ಈ ಗ್ರಂಥಗಳು ಸ್ವತಃ ಭಗವಂತನ ಮಾತುಗಳೇ ಎಂದು ಭಾವಿಸುತ್ತವೆ.

ಸಿಖ್ ಧರ್ಮದ ಪವಿತ್ರ ಗ್ರಂಥ ಗುರು ಗ್ರಂಥ ಸಾಹೀಬ್ನ ಒಂದು ಪುಟ

ಹಿಂದೂ ಧರ್ಮಋಗ್ವೇದ ಕ್ರಿ.ಪೂ. ೧೫೦೦ರಿಂದ ಕ್ರಿ.ಪೂ. ೧೩೦೦ರ ಮಧ್ಯ ರಚಿತವಾಗಿರಬಹುದೆಂದು ನಂಬಲಾಗಿದೆ. ಆದ್ದರಿಂದ ಇದು ಜಗತ್ತಿನ ಅತೀ ಪುರಾತನ ಧಾರ್ಮಿಕ ಗ್ರಂಥಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಜೊರಾಸ್ಟರ ಧರ್ಮದ ಲಿಖಿತ ಸ್ವರೂಪವು ಕ್ರಿ.ಪೂ. ೧೧ನೇ ಶತಮಾನದಲ್ಲಿ ರಚಿತವಾಗಿರಬಹುದೆಂದು ನಂಬಲಾಗಿದೆ. ಆದರೆ ಸಾರ್ವಜನಿಕ ಪ್ರಸಾರಣೆಗೆ ಮೊದಲು ತಯಾರಲ್ಪಟ್ಟ ಗ್ರಂಥವೆಂದರೆ ಕ್ರಿ.ಶ. ೮೬೮ರಲ್ಲಿ ಮುದ್ರಿತವಾದ ಬೌದ್ಧ ಧರ್ಮವಜ್ರ ಸೂತ್ರ.

ಪ್ರಮುಖ ಧರ್ಮ ಗ್ರಂಥಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.