ಪರೀಕ್ಷೆ

ಪರೀಕ್ಷೆ ಅದನ್ನು ತೆಗೆದುಕೊಂಡವನ ಜ್ಞಾನ, ಕೌಶಲ, ಸಾಮರ್ಥ್ಯ, ದೈಹಿಕ ಅರ್ಹತೆ, ಅಥವಾ ಇತರ ಅನೇಕ ವಿಷಯಗಳಲ್ಲಿ (ಉದಾ. ನಂಬಿಕೆಗಳು) ವರ್ಗೀಕರಣವನ್ನು ಅಳೆಯಲು ಉದ್ದೇಶಿಸುವ ಒಂದು ಮೌಲ್ಯಮಾಪನ. ಪರೀಕ್ಷೆಯನ್ನು ಮಾತಿನ ಮೂಲಕ, ಕಾಗದದ ಮೇಲೆ, ಗಣಕಯಂತ್ರದ ಮೇಲೆ, ಅಥವಾ ಪರೀಕ್ಷೆ ತೆಗೆದುಕೊಳ್ಳುವವನು ದೈಹಿಕವಾಗಿ ಒಂದು ಕೌಶಲಗಳ ಸಮೂಹವನ್ನು ನಿರ್ವಹಿಸಬೇಕಾಗುವ ಒಂದು ಸೀಮಿತ ಪ್ರದೇಶದಲ್ಲಿ ನಡೆಸಬಹುದು. ಪರೀಕ್ಷೆಗಳು ಶೈಲಿ, ಕಾಠಿನ್ಯ ಮತ್ತು ಅಗತ್ಯಗಳಲ್ಲಿ ಬದಲಾಗುತ್ತವೆ. ಉದಾಹರಣೆಗೆ, ಮುಚ್ಚು ಪುಸ್ತಕ ಪರೀಕ್ಷೆಯಲ್ಲಿ, ಪರೀಕ್ಷೆ ತೆಗೆದುಕೊಳ್ಳುವವನು ನಿರ್ದಿಷ್ಟ ವಿವರಗಳಿಗೆ ಪ್ರತಿಕ್ರಿಯಿಸಲು ಹಲವುವೇಳೆ ಸ್ಮರಣಶಕ್ತಿಯ ಮೇಲೆ ಅವಲಂಬಿಸಬೇಕಿರುತ್ತದೆ, ಮತ್ತು ತೆರೆದ ಪುಸ್ತಕ ಪರೀಕ್ಷೆಯಲ್ಲಿ, ಪರೀಕ್ಷೆ ತೆಗೆದುಕೊಳ್ಳುವವನು ಒಂದು ವಿಷಯಕ್ಕೆ ಪ್ರತಿಕ್ರಿಯಿಸುವಾಗ ಉಲ್ಲೇಖದ ಪುಸ್ತಕ ಅಥವಾ ಲೆಕ್ಕರಣೆಯಂತಹ ಒಂದು ಅಥವಾ ಹೆಚ್ಚು ಪೂರಕ ಉಪಕರಣಗಳನ್ನು ಬಳಸಬಹುದು. ಪರೀಕ್ಷೆಯನ್ನು ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ನಡೆಸಬಹುದು. ತಂದೆ ಅಥವಾ ತಾಯಿ ಮಗುವಿನ ಮೇಲೆ ನಡೆಸುವ ಓದುವ ಪರೀಕ್ಷೆ ಅನೌಪಚಾರಿಕ ಪರೀಕ್ಷೆಯ ಉದಾಹರಣೆ. ಶಿಕ್ಷಕ ತರಗತಿಯಲ್ಲಿ ನಡೆಸುವ ಅಂತಿಮ ಪರೀಕ್ಷೆ ಅಥವಾ ಚಿಕಿತ್ಸಾಲಯದಲ್ಲಿ ಮನಃಶಾಸ್ತ್ರಜ್ಞನು ನಡೆಸುವ ಬುದ್ಧಿಮತ್ತೆ ಪ್ರಮಾಣದ ಪರೀಕ್ಷೆ ಒಂದು ಔಪಚಾರಿಕೆ ಪರೀಕ್ಷೆಯ ಉದಾಹರಣೆ. ಔಪಚಾರಿಕ ಪರೀಕ್ಷೆ ಹಲವುವೇಳೆ ಗುಣಾಂಕ ಅಥವಾ ಪರೀಕ್ಷಾ ಅಂಕವಾಗಿ ಪರಿಣಮಿಸುತ್ತದೆ.[1]

ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವುದು

ಉಲ್ಲೇಖಗಳು

  1. Thissen, D., & Wainer, H. (2001). Test Scoring. Mahwah, NJ: Erlbaum. Page 1, sentence 1.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.