ನೋಲಿ ದ ಕ್ಯಾಷ್ಟ್ರೊ
ನೋಲಿ ದ ಕ್ಯಾಷ್ಟ್ರೊ ೨೦೦೪-೨೦೧೦ರ ಅವಧಿಗೆ ಫಿಲಿಪ್ಪೀನ್ಸ್ ದೇಶದ ಉಪ ಅಧ್ಯಕ್ಷ ಆಗಿ ಸೇವೆ ಸಲ್ಲಿಸಿದ ರಾಜಕಾರಣಿ.
ಜನನ
ನೋಲಿ ದ ಕ್ಯಾಷ್ಟ್ರೊ ಜುಲೈ ೬, ೧೯೪೯ರಂದು ಪೋಲಾ ಗ್ರಾಮದಲ್ಲಿ ಜನಿಸಿದರು. ೧೯೭೧ರಲ್ಲಿ ಈಸ್ಟ್ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದ ನೋಲಿ ದ ಕ್ಯಾಷ್ಟ್ರೊ, ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯದಲ್ಲಿ ಉನ್ನತ ಅಧ್ಯಯನ ನಡೆಸಿ ಡಾಕ್ಟರೇಟ್ ಪಡೆದರು.
ವೃತ್ತಿ
ಮಾರ್ಕೋಸ್ ಫಿಲಿಪ್ಪೀನ್ಸ್ ದೇಶದ ಸರ್ವಾಧಿಕಾರಿ ಆಗಿದ್ದಾಗ, ನೋಲಿ ದ ಕ್ಯಾಷ್ಟ್ರೊ ಪತ್ರಕರ್ತ ಆಗಿ ತಮ್ಮ ವೃತ್ತಿ ಶುರು ಮಾಡಿದರು. ಜಾನಿ ಡಿಲಿಯೋನ್ ಎಂಬ ರೇಡಿಯೋ ದಲ್ಲಿ ತಲಮಟ್ಟದ ಪತ್ರಕರ್ತನಾಗಿ ಕೆಲಸ ಮಾಡಿ, ತದ್ನಂತರ ಬಾತ್ಮೀದಾರ ಹುದ್ದೆಗೆ ಬಡ್ತಿ ಪಡೆದರು. ೧೯೮೨-೮೬ರ ಅವಧಿಯಲ್ಲಿ ಆರ್ ಪಿ ಎನ್ ಬಾನುಲಿ ಕೇಂದ್ರದ ಬಾತ್ಮೀದಾರ ಆಗಿ ಕಾರ್ಯ ನಿರ್ವಹಿಸಿದರು. ೧೯೮೬ರಲ್ಲಿ ಟಿವಿಗೆ ತೆರಳಿದ ನೋಲಿ, ಎಬಿಎಸ್ ಸಂಸ್ತೆಯಲ್ಲಿ ಕೆಲಸ ಪಡೆದರು. ಕಬಯನ್ ನೊಲಿ ಎಂಬ ಅಡ್ಡಹೆಸರಿನಿಂದ ಜನಪ್ರಿಯತೆ ಪಡೆದ ನೊಲಿ, ೧೯೮೭ರಲ್ಲಿ ಶುಭಸಂಜೆ ಫಿಲಿಪ್ಪೀನ್ಸ್ ಕಾರ್ಯಕ್ರಮ ನಡೆಸಿ ಬಲು ಜನಮನ್ನಣೆ ಪಡೆದರು.