ನಗದು

ನಗದು ಎಂಬುದು ಹಣದ ಒಂದು ರೂಪ. ನಗದು ಬ್ಯಾಂಕ್‍ನೋಟ್‍ಗಳು ಮತ್ತು ನಾಣ್ಯಗಳಂತಹ ಚಲಾವಣೆಯ ಭೌತಿಕ ರೂಪದಲ್ಲಿ ಹಣವನ್ನು ನಿರ್ದೇಶಿಸುತ್ತದೆ. ವ್ಯಾಪಾರ - ವಹಿವಾಟುಗಳಲ್ಲಿ ಮೌಲ್ಯವನ್ನು ನಿರ್ಧರಿಸಲು ಉಪಯೋಗಿಸಲಾಗುವ ಮಾಪನ. ಪ್ರಪಂಚದ ಬಹುತೇಕ ದೇಶಗಳು ತಮ್ಮದೇ ಆದ ನಗದು ವ್ಯವಸ್ಥೆಯನ್ನು ಹೊಂದಿರುತ್ತವೆ.

ಪ್ರಪಂಚದ ವಿವಿಧ ನಗದು ವ್ಯವಸ್ಥೆಗಳು

ಲೆಕ್ಕಾಚಾರ ಮತ್ತು ಹಣಕಾಸಿನಲ್ಲಿ, ನಗದು ತಕ್ಷಣ ಅಥವಾ ಸ್ವಲ್ಪ ತಕ್ಷಣ ಪಡೆಯಬಹುದಾದ ಚಲಾವಣೆ ಅಥವಾ ಚಲಾವಣೆಗೆ ಸಮಾನವಾದ ವಸ್ತುಗಳನ್ನು ಒಳಗೊಂಡ ಪ್ರಸ್ತುತ ಆಸ್ತಿಗಳನ್ನು ಸೂಚಿಸುತ್ತದೆ (ವಿತ್ತ ಮಾರುಕಟ್ಟೆ ಖಾತೆಗಳ ಸಂದರ್ಭದಲ್ಲಿದ್ದಂತೆ). ನಗದನ್ನು ರಾಚನಿಕ ಅಥವಾ ಪ್ರಾಸಂಗಿಕ ಋಣಾತ್ಮಕ ನಗದು ಹರಿವಿನ ಸಂದರ್ಭದಲ್ಲಿ ಪಾವತಿಗಳಿಗಾಗಿ ಮೀಸಲು ನಿಧಿಯಾಗಿ ಕಾಣಲಾಗುತ್ತದೆ, ಅಥವಾ ಹಣಕಾಸು ಮಾರುಕಟ್ಟೆಗಳಲ್ಲಿನ ಇಳಿತವನ್ನು ತಪ್ಪಿಸುವ ಒಂದು ರೀತಿಯಾಗಿ ಕಾಣಲಾಗುತ್ತದೆ.

ಇವನ್ನೂ ನೋಡಿ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.