ನಂಜನಗೂಡು ತಿರುಮಲಾಂಬಾ

ತಿರುಮಲಾಂಬಾ (೧೮೮೭ ಮಾರ್ಚಿ ೨೫, ೧೯೮೨ ಅಗಸ್ಟ ೩೧) ಕನ್ನಡದ ಸಾಹಿತಿಗಳಲ್ಲೊಬ್ಬರು. ಇವರೂರು ನಂಜನಗೂಡು.

ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ತಿರುಮಲಾಂಬ ಪುಟದಲ್ಲಿ ಹೆಚ್ಚು ಮಾಹಿತಿ ಇದ್ದು , ಅಲ್ಲಿಲ್ಲದ ಇಲ್ಲಿನ ಮಾಹಿತಿಯನ್ನು ಅಲ್ಲಿ ಸೇರಿಸಿದೆ

ಜೀವನ

೧೦ ನೆಯ ವಯಸ್ಸಿಗೆ ಇವರ ಮದುವೆಯಾಯಿತು. ೧೪ನೆಯ ವಯಸ್ಸಿನಲ್ಲಿ ವಿಧವೆಯಾದರು. ಆದರೆ ಇದರಿಂದ ಧೃತಿಗೆಡದ ತಿರುಮಲಾಂಬಾ, ತಂದೆಯ ಉತ್ತೇಜನದಿಂದ ಬರವಣಿಗೆಯಲ್ಲಿ ತೊಡಗಿಕೊಂಡರು. ೧೯೧೩ ರಲ್ಲಿ 'ಸತಿ ಹಿತೈಷಿಣೀ ಗ್ರಂಥಮಾಲೆ'ಯನ್ನು ಪ್ರಾರಂಭಿಸಿದರು. ಆ ಮಾಲೆಯಲ್ಲಿ ಪ್ರಕಟಗೊಂಡ ಇವರ ಮೊದಲ ಕಾದಂಬರಿ ಸುಶೀಲೆ.

ಕೃತಿಗಳು

ತಿರುಮಲಾಂಬಾ ಪದ್ಯ, ನಾಟಕ, ಪ್ರಬಂಧ, ಸಣ್ಣ ಕತೆ, ಸಾಮಾಜಿಕ ಹಾಗು ಪತ್ತೇದಾರಿ ಕಾದಂಬರಿಗಳನ್ನೂ ಸಹ ಬರೆದಿದ್ದಾರೆ.ಇವರ ಪೂರ್ಣಕಲಾಗ್ರಂಥ, ದಕ್ಷಕನ್ಯಾ, ಮತ್ತು ವಿದ್ಯುಲ್ಲತಾ ಕೃತಿಗಳು ಮೈಸೂರು ವಿಶ್ವವಿದ್ಯಾಲಯದ ಇಂಟರಮೀಡಿಯೆಟ್ ಹಾಗು ಬಿ.ಎಸ್.ಸಿ. ತರಗತಿಗಳಿಗೆ ಪಠ್ಯಪುಸ್ತಕಗಳಾಗಿದ್ದವು.

ಕರ್ನಾಟಕ ನಂದಿನಿ ಹಾಗು ಸನ್ಮಾರ್ಗದರ್ಶಿನಿ ಎನ್ನುವ ಮಾಸಪತ್ರಿಕೆಗಳನ್ನು ೧೯೧೭ ರಿಂದ ೩,೪ ವರ್ಷಗಳ ಕಾಲ ನಡೆಯಿಸಿದರು.

ನಾಟಕಗಳು

  1. ಚಂದ್ರವದನಾ,
  2. ರಮಾನಂದ,

ತಿರುಮಲಾಂಬಾ ಪ್ರಶಸ್ತಿ

ತಿರುಮಲಾಂಬಾ ಅವರ ಜನ್ಮಶತಾಬ್ದಿಯ ಅಂಗವಾಗಿ ಮಾರ್ಚಿ ೨೫ ೧೯೮೭ ರಂದು ನಡೆದ ಸಮಾರಂಭದ ಸಂದರ್ಭದಲ್ಲಿ 'ಶಾಶ್ವತಿ' ಸಂಸ್ಥೆಯು 'ಶ್ರೀಮತಿ ನಂಜನಗೂಡು ತಿರುಮಲಾಂಬಾ ಪ್ರಶಸ್ತಿ'ಯನ್ನು ಸ್ಥಾಪಿಸಿತು. ರಾಷ್ಟ್ರಮಟ್ಟದಲ್ಲಿ ಮಹಿಳೆಯರು ಬರೆದ ಅತ್ಯುತ್ತಮ ಕೃತಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.