ದೃಶ್ಯ ಗ್ರಹಿಕೆ

ದೃಶ್ಯ ಗ್ರಹಿಕೆ ಎಂದರೆ ಪರಿಸರದಲ್ಲಿನ ವಸ್ತುಗಳಿಂದ ಪ್ರತಿಫಲಿತವಾದ ದೃಗ್ಗೋಚರ ರೋಹಿತದಲ್ಲಿನ ಬೆಳಕನ್ನು ಬಳಸಿ ಆವರಿಸಿರುವ ಪರಿಸರವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ.

ಉಂಟಾಗುವ ಗ್ರಹಿಕೆಯನ್ನು ದೃಶ್ಯ ಗ್ರಹಿಕೆ, ದೃಷ್ಟಿ, ಅಥವಾ ನೋಟ ಎಂದೂ ಕರೆಯಲಾಗುತ್ತದೆ. ನೋಟದಲ್ಲಿ ಒಳಗಾದ ವಿವಿಧ ಶಾರೀರಿಕ ಘಟಕಗಳನ್ನು ಒಟ್ಟಾಗಿ ದೃಶ್ಯ ವ್ಯವಸ್ಥೆ ಎಂದು ಸೂಚಿಸಲಾಗುತ್ತದೆ, ಮತ್ತು ಒಟ್ಟಾರೆಯಾಗಿ ದರ್ಶನ ವಿಜ್ಞಾನ ಎಂದು ಸೂಚಿಸಲ್ಪಡುವ, ಭಾಷಾ ವಿಜ್ಞಾನ, ಮನೋಶಾಸ್ತ್ರ, ಗ್ರಹಣ ವಿಜ್ಞಾನ, ನರವಿಜ್ಞಾನ, ಮತ್ತು ಆಣ್ವಿಕ ಜೀವಶಾಸ್ತ್ರದಲ್ಲಿ ಸಾಕಷ್ಟು ಸಂಶೋಧನೆಯ ಕೇಂದ್ರಬಿಂದುವಾಗಿವೆ.

ಪ್ರಾಣಿಗಳಲ್ಲಿನ ದೃಶ್ಯ ವ್ಯವಸ್ಥೆಯು ಜೀವಿಗಳಿಗೆ ತಮ್ಮ ಸುತ್ತಮುತ್ತಲಿನಿಂದ ಮಾಹಿತಿಯನ್ನು ತಿಳಿದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಕಾರ್ನಿಯಾ ಮತ್ತು ನಂತರ ಕಣ್ಣಿನ ಮಸೂರವು ಸುತ್ತಮುತ್ತಲಿನ ಬೆಳಕನ್ನು ಕಣ್ಣಿನ ಹಿಂಬದಿಯಲ್ಲಿರುವ, ಅಕ್ಷಿಪಟಲ ಎಂದು ಕರೆಯಲ್ಪಡುವ, ಬೆಳಕು-ಸಂವೇದಿ ಪೊರೆಯ ಮೇಲೆ ಕೆಂದ್ರೀಕರಿಸಿದಾಗ ನೋಡುವ ಕ್ರಿಯೆ ಆರಂಭವಾಗುತ್ತದೆ. ವಾಸ್ತವವಾಗಿ ಅಕ್ಷಿಪಟಲವು ಮಿದುಳಿನ ಭಾಗವಾಗಿದೆ ಮತ್ತು ಬೆಳಕನ್ನು ನರತಂತುವಿನ ಸಂಜ್ಞೆಗಳಾಗಿ ಪರಿವರ್ತಿಸುವ ಸಲುವಾಗಿ ಸಂಜ್ಞಾಪರಿವರ್ತಕವಾಗಿ ಕಾರ್ಯನಿರ್ವಹಿಸಲು ಪ್ರತ್ಯೇಕಿಸಲ್ಪಟ್ಟಿದೆ. ದೃಶ್ಯ ವ್ಯವಸ್ಥೆಯಿಂದ ಬರುವ ಮರುಮಾಹಿತಿಯನ್ನು ಆಧರಿಸಿ, ಅಕ್ಷಿಪಟಲದ ದ್ಯುತಿಗ್ರಾಹಿ ಕೋಶಗಳ ಮೇಲೆ ಬೆಳಕನ್ನು ಕೇಂದ್ರೀಕರಿಸಲು ಕಣ್ಣಿನ ಮಸೂರವು ತನ್ನ ದಪ್ಪವನ್ನು ಮಾರ್ಪಡಿಸಿಕೊಳ್ಳುತ್ತದೆ. ಈ ಕೋಶಗಳನ್ನು ಕೋಲಾಕಾರದ ಮತ್ತು ಶಂಕುವಿನಾಕಾರದ ಕೋಶಗಳು ಎಂದೂ ಕರೆಯಲಾಗುತ್ತದೆ ಮತ್ತು ಇವು ಬೆಳಕಿನ ಫೋಟಾನ್‍ಗಳನ್ನು ಪತ್ತೆಹಚ್ಚಿ ನರ ಪ್ರಚೋದನೆಗಳನ್ನು ಉತ್ಪತ್ತಿಮಾಡುವ ಮೂಲಕ ಪ್ರತಿಕ್ರಿಯಿಸುತ್ತವೆ. ಈ ಸಂಜ್ಞೆಗಳನ್ನು ಮಿದುಳಿನ ಭಿನ್ನ ಭಾಗಗಳಿಂದ, ಮೇಲಿನ ಅಕ್ಷಿಪಟಲದಿಂದ ಹಿಡಿದು ಮಿದುಳಿನಲ್ಲಿನ ಕೇಂದ್ರ ನರಗ್ರಂಥಿಗಳವರೆಗೆ, ಸಂಕೀರ್ಣ ಮುಮ್ಮಾಹಿತಿ ಮತ್ತು ಮರುಮಾಹಿತಿ ಪ್ರಕ್ರಿಯೆಗಳ ಮೂಲಕ ಸಂಸ್ಕರಿಸಲಾಗುತ್ತದೆ.

ಮೇಲೆ ತಿಳಿಸಲಾದ ವಿಷಯವು ಆಕ್ಟೊಪಸ್‍ಗಳು, ಮೃದ್ವಂಗಿಗಳು, ಹುಳುಗಳು, ಕೀಟಗಳು ಮತ್ತು ಹೆಚ್ಚು ಪ್ರಾಚೀನವಾದ ಜೀವಿಗಳಿಗೂ ಅನ್ವಯಿಸಬಹುದು; ಲೋಳೆ ಮೀನುಗಳಿಗಿಂತ ಹೆಚ್ಚು ಸಂಕೀರ್ಣ ನರಮಂಡಲ ಮತ್ತು ಹೆಚ್ಚು ಉತ್ತಮವಾದ ಕಣ್ಣುಗಳನ್ನು ಹೊಂದಿರುವ ಯಾವ ಜೀವಿಯಾದರೂ. ಆದರೆ, ಮುಂದೆ ಹೇಳಿರುವುದು ಸಾಮಾನ್ಯವಾಗಿ ಸಸ್ತನಿಗಳು ಮತ್ತು ಪಕ್ಷಿಗಳಿಗೆ ಅನ್ವಯಿಸುತ್ತದೆ: ಈ ಹೆಚ್ಚು ಸಂಕೀರ್ಣ ಪ್ರಾಣಿಗಳಲ್ಲಿನ ಅಕ್ಷಿಪಟಲವು ತಂತುಗಳನ್ನು ಪಾರ್ಶ್ವದ ಬಾಗಿರುವ ಕೋಶಬೀಜಕ್ಕೆ, ಮಿದುಳಿನ ಪ್ರಧಾನ ಮತ್ತು ದ್ವಿತೀಯಕ ದೃಶ್ಯ ಕವಚಕ್ಕೆ ಕಳುಹಿಸುತ್ತದೆ. ಅಕ್ಷಿಪಟಲದಿಂದ ಬರುವ ಸಂಜ್ಞೆಗಳು ನೇರವಾಗಿ ಮೇಲಿನ ಕಲಿಕ್ಯೋಲಸ್‍ಗೆ ಪ್ರಯಾಣಿಸಲೂಬಹುದು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.